12 ವರ್ಷದ ಹುಡುಗಿಯಿಂದ ನೀರು ಉಳಿಸಲು ಹೊಸ ಟೆಕ್ನಾಲಜಿ

By Suneel
|

ಮುಂದಿನ ಯುದ್ಧ ನಡೆಯುವುದಾದರೆ ಅದು ನೀರಿಗೆ ಎಂಬ ವಿಷಯ ಸೂಕ್ಷ್ಮ ಚಿಂತಕರಿಗೆ ಈಗಾಗಲೇ ತಿಳಿದಿದೆ. ಕಾರಣ ನೀರು ಅಮೂಲ್ಯ ವಸ್ತು. ಒಮ್ಮೆ ಪ್ರಶ್ನಿಸಿ ಕೊಳ್ಳಿ. ಎಷ್ಟು ಜನ ನೀರನ್ನು ಸ್ನಾನದ ಮನೆಯಲ್ಲಿದ್ದಾಗ ಮಿತವಾಗಿ ಬಳಸಲು ಎಚ್ಚರವಹಿಸಿದ್ದೀರಿ ? ನೀರಿನ ಬಗ್ಗೆ ಹೀಗೆ ಮಾತನಾಡಲು ಒಂದು ಕಾರಣವಿದೆ. ಅದು ಎಲ್ಲರಿಗೂ ಆಶ್ಚರ್ಯಕರ ವಿಷಯ. ನಾಸಿಕ್‌ನ 12 ವರ್ಷದ ಹುಡುಗಿಯೊಬ್ಬಳು ಶವರ್‌ ಒಂದನ್ನು ಆವಿಷ್ಕರಿಸಿದ್ದಾಳೆ. ಅದು ಶೇಕಡ 80 ರಷ್ಟು ನೀರನ್ನು ಉಳಿಸುವುದಲ್ಲದೇ ನೀರಿನ ಸಮಸ್ಯೆಗೆ ಪರಿಹಾರಗಳನ್ನು ನೀಡುತ್ತದೆ. ಹಾಗಾದರೆ ಈ ವಿಶೇಷ ಟೆಕ್ನಾಲಜಿ ಏನು ಎಂಬುದನ್ನು ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ:ನೀರು ಕುಡಿಯಲು ನೆನಪಿಸುವ ವಾಟರ್‌ ಬಾಟಲ್‌

ಸ್ಮಾರ್ಟ್‌ ಶವರ್‌

ಸ್ಮಾರ್ಟ್‌ ಶವರ್‌

ಸೃಷ್ಟಿ ನರ್ಕರ್‌ ಎಂಬ 6ನೇ ತರಗತಿಯ ನಾಸಿಕ್‌ನ ರಚ್ನಾ ವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಸ್ಮಾರ್ಟ್‌ ಶವರ್ ಅನ್ನು ಆವಿಷ್ಕರಿಸಿದ್ದಾಳೆ. ಇದು ವಿಶೇಷ ನಾಜಲ್‌ಗಳನ್ನು ಒಳಗೊಂಡಿದೆ.

 ಸ್ಮಾರ್ಟ್‌ ಶವರ್‌

ಸ್ಮಾರ್ಟ್‌ ಶವರ್‌

ಸೃಷ್ಟಿ ನರ್ಕರ್‌ ಪ್ರಕಾರ ಈ ಹೊಸ ಸ್ಮಾರ್ಟ್‌ ಶವರ್‌ ಟೆಕ್ನಾಲಜಿಯಿಂದ ಸ್ಥಳ ಒಂದರಲ್ಲಿ, ನೀರನ್ನು 17 ಲಕ್ಷ ಜನರಿಗೆ ನಿರಂತರವಾಗಿ 34 ದಿನಗಳು ಸರಬರಾಜು ಮಾಡಬಹುದು ಎನ್ನಲಾಗಿದೆ.

ಸ್ಮಾರ್ಟ್‌ ಶವರ್‌

ಸ್ಮಾರ್ಟ್‌ ಶವರ್‌

ಸೃಷ್ಟಿ ನರ್ಕರ್‌ ಆವಿಷ್ಕಾರವನ್ನು ಜಿಲ್ಲಾಧಿಕಾರಿ ದಿಪೇಂಧರ್‌ ಸಿಂಗ್‌ ಕುಷ್‌ವಾಹ್‌ ಗುರುತಿಸಿ, ಆಕೆಯನ್ನು ಕಛೇರಿಗೆ ಆಹ್ವಾನಿಸಿ ಹೊಸ ನಾವೀನ್ಯತೆಯನ್ನು ಪ್ರದರ್ಶಿಸಲು ಹೇಳಿದ್ದರು.

 ಸ್ಮಾರ್ಟ್‌ ಶವರ್‌

ಸ್ಮಾರ್ಟ್‌ ಶವರ್‌

ಸೃಷ್ಟಿಯು ಈ ಸ್ಮಾರ್ಟ್‌ ಯೋಜನೆಯನ್ನು ಕಾರ್‌ ವಾಷಿಂಗ್‌ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಪಡೆದಿರುವುದಾಗಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಇಲೆಕ್ಟ್ರಾನಿಕ್‌ ಪ್ರೊಫೆಸರ್‌ರೊಂದಿಗೆ ಹೇಳಿದ್ದಾರೆ.

ಸ್ಮಾರ್ಟ್‌ ಶವರ್‌

ಸ್ಮಾರ್ಟ್‌ ಶವರ್‌

ಈಕೆಯ ಪ್ರಕಾರ ಒಬ್ಬರು ಸಾಮಾನ್ಯವಾಗಿ 80 ಲೀಟರ್‌ ನೀರನ್ನು ಬಳಕೆಮಾಡುತ್ತಾರೆ. ಆದರೆ ಸೃಷ್ಟಿ ಆವಿಷ್ಕರಿಸಿರುವ ಸ್ಮಾರ್ಟ್‌ ಶವರ್‌ ಬಳಸಿದ್ದಲ್ಲಿ ಒಬ್ಬರು ಕೇವಲ 15 ಲೀಟರ್‌ ನೀರನ್ನು ಬಳಸಿಕೊಳ್ಳುತ್ತಾರೆ. ಇನ್ನು 65 ಲೀಟರ್ ನೀರು ಉಳಿಯುತ್ತದೆ ಎನ್ನಲಾಗಿದೆ. ಈಕೆಯ ಸ್ವಾರ್ಟ್‌ ಶವರ್ ಟೆಕ್ನಾಲಜಿಯನ್ನು ಇಲೆಕ್ಟ್ರಿಕ್‌ ವೈರ್‌ ಪೈಪ್‌ ಮತ್ತು ಪಿವಿಸಿ ಪೈಪ್‌ ಬಳಸಿ ಫೋಲ್ಡ್‌ ಮಾಡಬಹುದಾದಂತಹ ಪೈಪ್‌ ಆಗಿ ವಿನ್ಯಾಸ ಮಾಡಲಾಗಿದೆ.

Best Mobiles in India

English summary
With the new smart shower technique in place, water could be supplied to the population of 17 lakh people for continuous 34 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X