ಜಿಯೋ ಮತ್ತು ಏರ್‌ಟೆಲ್‌ಗೆ ನಡುಕ ಹುಟ್ಟಿಸಿದ ಹೊಸ ಸುದ್ದಿ!!
ಭಾರತಿಯ ಟೆಲಿಕಾಂ ಕ್ಷೇತ್ರದ ಮಹಾ ಸಮ್ಮಿಲನ ಎಂದೇ ಖ್ಯಾತಿಯಾಗಿರುವ ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾ ಕಂಪೆನಿಗಳ ವಿಲೀನವನ್ನು ನ್ಯಾಷನಲ್ ಕಂಪನಿ ಲಾ ಕೋರ್ಟ್ (ಎನ್‌ಸಿಎಲ್‌ಟಿ) ಅನುಮೋದಿಸಿದೆ. ಈ ಮೂಲಕ ಚಂದಾದಾರರು ಮತ್ತು ಆದಾಯದ ಪಾಲುದಾರಿಕೆಯಲ್ಲಿ 15 ವರ್ಷಗಳ ಕಾಲ ಟೆಲಿಕಾಂ ದಿಗ್ಗಜನಾಗಿದ್ದ ಏರ್‌ಟೆಲ್ ಅನ್ನು ವೊಡಾಫೋನ್ ಐಡಿಯಾ ಕಂಪೆನಿ ಹಿಂದಿಕ್ಕಿದೆ.
ಒಟ್ಟಾರೆ 34 ಕೋಟಿಯಷ್ಟು ಚಂದಾದಾರರನ್ನು ಹೊಂದಿದ ಏರ್‌ಟೆಲ್ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದ್ದು, ವೊಡಾಫೋನ್ ಮತ್ತು ಐಡಿಯಾ ವಿಲೀನ ಕಂಪೆನಿಯು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಶೇ. 74 ರಷ್ಟು ನಿವ್ವಳ ಲಾಭ ಕಳೆದುಕೊಂಡು ಕೇವಲ 97 ಕೋಟಿ ರೂ.ಆದಾಯವನ್ನು ಘೋಷಿಸಿಕೊಂಡಿದ್ದ ಏರ್‌ಟೆಲ್ ಈಗ ನಂಬರ್ ಒನ್ ಟೆಲಿಕಾಂ ಕಂಪೆನಿ ಪಟ್ಟವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕಂಪೆನಿಗೂ ಸವಾಲಾಗಿರುವ ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾ ಕಂಪೆನಿಗಳ ವಿಲೀನದಿಂದ ಟೆಲಿಕಾಂನಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಿವೆ. ಹಾಗಾದರೆ, ಐಡಿಯಾ ಮತ್ತು ವೊಡಾಫೋನ್ ಕಂಪೆನಿಗಳಿಂದ ಆಗುತ್ತಿರುವ ಬದಲಾವಣೆಗಳು ಯಾವುವು? ಮೊಬೈಲ್ ಗ್ರಾಹಕರಿಗೆ ಈ ವಿಲೀನದಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮಹತ್ತರ ಬದಲಾವಣೆಗಳು!
ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾ ಕಂಪೆನಿಗಳ ವಿಲೀನದಿಂದಾಗಿ, ಭಾರತದಲ್ಲಿ ಒಟ್ಟು 440 ಮಿಲಿಯನ್ ಚಂದಾದಾರರನ್ನು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪೆನಿ ಪಡೆದುಕೊಂಡು ಮೊದಲ ಸ್ಥಾನಕ್ಕೇರಿದೆ. ಮಾರುಕಟ್ಟೆಯ 37.7 ಪರ್ಸೆಂಟ್ ಶೇರನ್ನು ಹೊಂದುವ ಈ ಕಂಪೆನಿಯ ನೆಟ್‌ವರ್ಕ್ ಕೂಡ ಹೆಚ್ಚು ವಿಸ್ತಾರ ಕಂಡಿದೆ. ಈ ಮೂಲಕ ದೇಶದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಕಂಪೆನಿ ಎಂಬ ಹೆಗ್ಗಳಿಕೆಯನ್ನು ವೊಡಾಫೋನ್ ಐಡಿಯಾ ಕಂಪೆನಿ ಪಡೆದುಕೊಂಡಿದೆ.

ಸವಾಲು ಸ್ವೀಕರಿಸಲು ರೆಡಿ.
ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾ ಕಂಪೆನಿಗಳ ವಿಲೀನದಿಂದಾಗಿ ಭಾರತೀಯ ಟೆಲಿಕಾಂ ಪ್ರಪಂಚ ಸವಾಲು ಸ್ವೀಕರಿಸಲು ರೆಡಿಯಾಗಿದೆ. ಏರ್‌ಟೆಲ್ ಮತ್ತು ಜಿಯೋ ಪೈಪೋಟಿಗೆ ಒಳಗಾಗಿದ್ದ ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಮತ್ತೊಂದು ದೈತ್ಯ ಕಂಪೆನಿಯ ಪೈಪೋಟಿ ಎದುರಾಗಲಿದೆ. 4G ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿರುವ ಜಿಯೋ ಅನ್ನು ಕೂಡ ಹಿಂದಿಕ್ಕುವ ಸವಾಲನ್ನು ವೊಡಾಫೋನ್ ಐಡಿಯಾ ಕಂಪೆನಿ ತೆಗೆದುಕೊಂಡಿದೆ.

ಷೇರು ಹಂಚಿಕೆ ಹೇಗಿರುತ್ತದೆ?
ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾ ಕಂಪೆನಿಗಳ ವಿಲೀನದಿಂದಾಗಿ ವೊಡಾಫೋನ್‌ಗೆ 82,800 ಕೋಟಿ ಮತ್ತು ಐಡಿಯಾಗೆ 72,200 ಕೋಟಿ ಮೌಲ್ಯ ಸಿಗಲಿದೆ. ವಿಲೀನವಾದ ಕಂಪನಿಯಲ್ಲಿ ವೊಡಾಫೋನ್ ಶೇ.45.1, ಆದಿತ್ಯ ಬಿರ್ಲಾ ಶೇ.26 ಮತ್ತು ಐಡಿಯಾ ಷೇರುದಾರರು ಶೇ.28.1 ಷೇರುಗಳನ್ನು ಹೊಂದಲಿದ್ದಾರೆ ಎಂದು ವೊಡಾಫೋನ್ ಕಂಪೆನಿಯ ಅಧಿಕೃತ ಮೂಲಗಳಿಂದ ಮಾಧ್ಯಮಗಳಿಗೆ ತಿಳಿದುಬಂದಿದೆ.

ನೂತನ ಸಿಇಒ ಯಾರು?
ಭಾರತೀಯ ಟೆಲಿಕಾಂ ಪ್ರಪಂಚದಲ್ಲಿಯೇ ಮೊದಲ ಬಾರಿಗೆ 23,000 ಕೋಟಿ ಡಾಲರ್ ಮೌಲ್ಯದ, ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಹೊರಹೊಮ್ಮಿದೆ. ಶೇ.35ರಷ್ಟು ಷೇರು ಮಾರುಕಟ್ಟೆಯನ್ನು ಹೊಂದಲಿದೆ. ಈ ನೂತನ ಟೆಲಿಕಾಂ ಕಂಪೆನಿಗೆ ನೂತನ ಸಿಇಒ ಆಗಿ ಬಾಲೇಶ್ ಶರ್ಮಾ ನೇಮಕವಾಗಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಅವರು ಕಾರ್ಯಕಾರಿಯೇತರ ಅಧ್ಯಕ್ಷರಾಗಿದ್ದಾರೆ.

ಟೆಲಿಕಾಂನಲ್ಲಿ ಭಾರೀ ಪೈಪೋಟಿ!
ವೊಡಾಫೋನ್ ಐಡಿಯಾ' ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಲಿರುವುದರಿಂದ, ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಉಂಟಾಗಲಿದೆ. ದೇಶದಲ್ಲಿ ಏರ್‌ಟೆಲ್‌ಗಿಂತಲೂ ಹೆಚ್ಚು ನೆಟ್‌ವರ್ಕ್ ಪಡೆಯುವ ಈ ಕಂಪೆನಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಬಹುದು ಎಂಬ ನಿರೀಕ್ಷೆನ್ನು ಹೊಂದಲಾಗಿದೆ. ಇದು ಜಿಯೋ ಮತ್ತು ಏರ್‌ಟೆಲ್‌ಗೆ ನಡುಕ ಹುಟ್ಟಿಸಿದೆ.

ಕಡಿಮೆ ಬೆಲೆಗೆ ಆಫರ್ಸ್!
ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಹುಟ್ಟುವುದರಿಂದ ಟೆಲಿಕಾಂ ಸೇವೆಯ ದರವೂ ಕಡಿಮೆಯಾಗಲಿದೆ ಎನ್ನಲಾಗಿದೆ. ಜಿಯೋ ನೀಡುತ್ತಿರುವ ಆಫರ್‌ಗಳಿಗಿಂತ ಕಡಿಮೆ ಬೆಲೆಗೆ ಸೇವೆಯನ್ನು ನೀಡುವ ಗುರಿಯನ್ನು 'ವೊಡಾಫೋನ್ ಐಡಿಯಾ' ಕಂಪೆನಿ ಸಿಇಒ ಬಾಲೇಶ್ ಶರ್ಮಾ ಹೊಂದಿದ್ದಾರಂತೆ. ಹಾಗಾದರೆ, ಮಾರುಕಟ್ಟೆಯಲ್ಲಿ ಮತ್ತೆ ಪೈಪೋಟಿ ಶುರುವಾಗುವುದು ಖಂಡಿತ.!

ಟೆಲಿಕಾಂ ಆದಾಯದಲ್ಲಿ ವೊಡಾಫೋನ್ ಹಿಂದಿಕ್ಕಿದ ಜಿಯೋ..!
2016ರ ನಂತರ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಕ್ರಾಂತಿ ಎಬ್ಬಿಸಿದೆ. ಭಾರತೀಯ ಟೆಲಿಕಾಂ ಲೋಕವನ್ನು ಜಿಯೋ ರಹಿತವಾಗಿ ಊಹಿಸಿಕೊಳ್ಳಲು ಅಸಾಧ್ಯ. ಗ್ರಾಹಕ ಸ್ನೇಹಿಯಾಗಿ ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಾ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದ್ದ ಜಿಯೋ ಅಲ್ಪಾವಧಿಯಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ.
ಹೌದು, ಆದಾಯದಲ್ಲಿ ವೊಡಾಫೋನ್ ನೆಟ್‌ವರ್ಕ್‌ನ್ನು ಹಿಂದಿಕ್ಕಿರುವ ಜಿಯೋ ಆದಾಯದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು, ಮಾರುಕಟ್ಟೆಯ ಆದಾಯದಲ್ಲಿ ಮೊದಲ ಸ್ಥಾನದಲ್ಲಿರುವ ಏರ್‌ಟೆಲ್ ಜತೆ ಅಲ್ಪ ಮಟ್ಟದ ಅಂತರ ಕಾಯ್ದುಕೊಂಡಿದೆ. ಟ್ರಾಯ್ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ವೊಡಾಫೋನ್ ಆದಾಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಎರಡೇ ವರ್ಷ, ಎರಡನೇ ಸ್ಥಾನ
ಮುಖೇಶ್ ಅಂಬಾನಿ ಒಡೆತನದ ಜಿಯೋ 4G ಸೇವೆಗಳನ್ನು ನೀಡಲು ಪ್ರಾರಂಭಿಸಿ ಸರಿಯಾಗಿ ಎರಡು ವರ್ಷ ಕಳೆದಿಲ್ಲ. ಆದರೂ, 253(bps) ಪಡೆದಿರುವ ಜಿಯೋ ಜೂನ್ ಅಂತ್ಯಕ್ಕೆ ಟೆಲಿಕಾಂ ಮಾರುಕಟ್ಟೆಯ ಒಟ್ಟು ಆದಾಯದಲ್ಲಿ ಶೇ.22.4 ಪಾಲನ್ನು ಹೊಂದಿದೆ ಎಂದು ಟ್ರಾಯ್ ನೀಡಿರುವ ಹಣಕಾಸು ವರದಿಯಲ್ಲಿ ಹೇಳಿದೆ.

ಏರ್‌ಟೆಲ್ ಫಸ್ಟ್
ಟ್ರಾಯ್ ಬಿಡುಗಡೆ ಮಾಡಿರುವ ಹಣಕಾಸು ವರದಿಯಲ್ಲಿ ಏರ್‌ಟೆಲ್ ಮೊದಲ ಸ್ಥಾನ ಕಾಯ್ದುಕೊಂಡಿದೆ. ಟೆಲಿಕಾಂ ಮಾರುಕಟ್ಟೆಯ ಒಟ್ಟು ಮಾರುಕಟ್ಟೆಯಲ್ಲಿ ಶೇ.31.7 ರಷ್ಟು ಪಾಲನ್ನು ಹೊಂದಿರುವ ಏರ್‌ಟೆಲ್ ಮತ್ತೆ ತನ್ನ ಅಧಿಪತ್ಯವನ್ನು ಸಾಬೀತು ಪಡಿಸಿದೆ. ಆದರೆ, ಜಿಯೋ ಏರ್‌ಟೆಲ್‌ಗಿಂತ ದೂರವಿಲ್ಲದಿರುವುದು ಏರ್‌ಟೆಲ್ ತಲೆಬಿಸಿಗೆ ಕಾರಣವಾಗಿದೆ.

ಜಿಯೋ ಆದಾಯದಲ್ಲಿ ದ್ವಿಗುಣ
ಟ್ರಾಯ್ ವರದಿಯಲ್ಲಿ ಮತ್ತೊಂದು ಅಂಶ ಬಹಿರಂಗವಾಗಿದ್ದು, 2018ರ ಮೊದಲ ತ್ರೈಮಾಸಿಕದಲ್ಲಿ ಜಿಯೋ ಆದಾಯ ಶೇ.11.6ರಷ್ಟಿತ್ತು. ಆದರೆ, ದ್ವಿತೀಯ ತ್ರೈಮಾಸಿಕ ಅಂತ್ಯಕ್ಕೆ ಶೇ.22.4ಕ್ಕೆರಿರುವುದು ಅಚ್ಚರಿ ತಂದಿದೆ ಎಂದು ಐಸಿಐಸಿಐ ಸೆಕ್ಯೂರಿಟಿಸ್ ವಿಶ್ಲೇಷಣೆ ಮಾಡಿದೆ.

ಐಡಿಯಾವನ್ನು ಮಾರ್ಚ್‌ನಲ್ಲಿಯೇ ಹಿಂದಿಕ್ಕಿದ್ದ ಜಿಯೋ
ಕುಮಾರ್ ಮಂಗಳಂ ಬಿರ್ಲಾ ನೇತೃತ್ವದ ಐಡಿಯಾವನ್ನು ಮಾರುಕಟ್ಟೆ ಆದಾಯದಲ್ಲಿ ಮಾರ್ಚ್‌ನಲ್ಲಿಯೇ ಜಿಯೋ ಹಿಂದಕ್ಕೆ ಹಾಕಿತ್ತು. ಸದ್ಯ ಐಡಿಯಾ ಶೇ.15.4ರಷ್ಟು ಮಾರುಕಟ್ಟೆಯ ಆದಾಯದಲ್ಲಿ ಪಾಲನ್ನು ಹೊಂದಿದೆ.

ಮೂರನೇ ಸ್ಥಾನಕ್ಕೆ ವೊಡಾಫೋನ್
ಜಿಯೋ ಎಫೆಕ್ಟ್‌ನಿಂದ ವೊಡಾಫೋನ್‌ಗೆ ಬಹಳಷ್ಟು ನಕಾರಾತ್ಮಕ ಪರಿಣಾಮಗಳಾಗಿದ್ದು, ಈಗ ಜಿಯೋದಿಂದ ದೇಶದ ಟೆಲಿಕಾಂ ಆದಾಯದ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ವೊಡಾಫೋನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಸದ್ಯ ಶೇ.19.3ರಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಐಡಿಯಾ ವೊಡಾಫೋನ್ ಒಂದಾದರೆ ಅವರೇ ಮೊದಲು
ಈಗ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಹೊಂದಿರುವ ವೊಡಾಫೋನ್ ಮತ್ತು ಐಡಿಯಾ ಎರಡು ಕಂಪನಿಗಳು ಸಮ್ಮಿಲನಗೊಂಡರೆ ಟೆಲಿಕಾಂ ಆದಾಯದಲ್ಲಿ ಮೊದಲನೇ ಸ್ಥಾನಗಳಿಸಲಿವೆ. ಶೇ.35ರಷ್ಟು ಆದಾಯ ಹೊಂದುವ ಮೂಲಕ ಎರಡು ಕಂಪನಿಗಳು ಏರ್‌ಟೆಲ್, ಜಿಯೋವನ್ನು ಹಿಂದಾಕಲಿವೆ. ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡು ಕಂಪನಿಗಳು ಸಂಪೂರ್ಣವಾಗಿ ಸಮ್ಮಿಲನಗೊಳ್ಳುತ್ತವೆ.

4ನೇ ಸ್ಥಾನದಲ್ಲಿ ಜಿಯೋ
ಟ್ರಾಯ್‌ನ ವರದಿಯಂತೆ ಗ್ರಾಹಕರ ಆಧಾರದಲ್ಲಿ ಜಿಯೋ ಸದ್ಯ ಭಾರತದಲ್ಲಿ 4ನೇ ಸ್ಥಾನವನ್ನು ಹೊಂದಿದ್ದು, 215 ಮಿಲಿಯನ್ ಬಳಕೆದಾರರನ್ನು ಜೂನ್ ಅಂತ್ಯಕ್ಕೆ ಹೊಂದಿದ್ದು, ಬಹಳ ವೇಗವಾಗಿ ಬೆಳೆಯುತ್ತಿದೆ.

ದ್ವಿತೀಯ ತ್ರೈಮಾಸಿಕದಲ್ಲಿ ಎಡವಿದ ವೊಡಾ-ಐಡಿಯಾ
ಭಾರತೀಯ ಟೆಲಿಕಾಂ ಕ್ಷೇತ್ರದ ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್ ಮತ್ತು ಐಡಿಯಾಗಳು ಎಡವಿವೆ. ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು 32,200 ಕೋಟಿ ರೂ. ವಹಿವಾಟು ನಡೆದಿದ್ದು, ವೊಡಾಫೋನ್ ಕೇವಲ 6,200 ಕೋಟಿ ರೂ. ಆದಾಯ ಹೊಂದಿದೆ. ಐಡಿಯಾ 5,000 ಕೋಟಿ ರೂ. ಆದಾಯ ಹೊಂದಿದ್ದು, ಜಿಯೋ 7,200 ಕೋಟಿ ರೂ. ಹಾಗೂ ಏರ್‌ಟೆಲ್ 10,200 ಕೋಟಿ ರೂ. ಆದಾಯವನ್ನು ಹೊಂದಿವೆ.


Click it and Unblock the Notifications