ರಿಪೇರಿಗೆಂದು ಅಂಗಡಿಗೆ ಫೋನ್‌ ಕೊಡ್ತಿದಿರಾ..? ಆಗಿದ್ರೆ ಎಚ್ಚರ..!

  |

  ನಿಮ್ಮ ಸ್ಮಾರ್ಟ್‌ಫೋನ್‌ ಕೆಟ್ಟಿದಿಯಾ..? ಸರ್ವೀಸ್‌ ಸೆಂಟರ್‌ಗೆ ಕೊಡುವ ಅಗತ್ಯವಿದೆಯೇ..? ಆಗಿದ್ರೆ, ನಿಮ್ಮ ಮೊಬೈಲ್‌ನ್ನು ಮೊಬೈಲ್‌ ಸೇವಾ ಕೇಂದ್ರಕ್ಕೆ ಕೊಡುವ ಮೊದಲು ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್‌ ಪೇ, ಪೇಟಿಎಂ, ಫೋನ್‌ಪೇನಂತಹ ಮೊಬೈಲ್‌ ವ್ಯಾಲೆಟ್‌ ಆಪ್‌ಗಳನ್ನು ಅನ್‌ಇನ್ಸ್ಟಾಲ್‌ ಮಾಡಲು ಮರೆಯದಿರಿ. ಏಕೆಂದರೆ, ಈಗ ನಾವೇಳುವ ಸುದ್ದಿ ಕೇಳಿದರೆ ಏಕೆ ಎನ್ನುವುದು ಅರಿವಾಗುತ್ತದೆ.

  ರಿಪೇರಿಗೆಂದು ಅಂಗಡಿಗೆ ಫೋನ್‌ ಕೊಡ್ತಿದಿರಾ..? ಆಗಿದ್ರೆ ಎಚ್ಚರ..!

  ಹೌದು, ಆಗ್ನೇಯ ದೆಹಲಿಯ ಕಲ್ಕಜಿಯ ನಿವಾಸಿಯಾಗಿರುವ 28 ವರ್ಷದ ಯೂಸುಫ್‌ ಕರಿಂ ಮೊಬೈಲ್‌ ದುರಸ್ಥಿಗೆಂದು ಕೊಟ್ಟಾಗ ಬರೋಬ್ಬರಿ ರೂ.91,000 ಗಳನ್ನು ತಮ್ಮ ಪೇಟಿಎಂ ಅಕೌಂಟ್‌ನಿಂದ ಕಳೆದುಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಇಮೇಲ್‌ನಿಂದ ಪ್ರಕರಣ ಬೆಳಕಿಗೆ

  ಒಖ್ಲಾ ಪೊಲೀಸ್‌ ಠಾಣೆಯಲ್ಲಿ ಯೂಸುಫ್ ಕರಿಂ ಕೊಟ್ಟ ದೂರಿನಲ್ಲಿ "ಕರಿಂ ಮೊಬೈಲ್‌ ಸೇವಾ ಕೇಂದ್ರದಿಂದ ವಾಪಸ್‌ ಮೊಬೈಲ್‌ನ್ನು ಪಡೆದಾಗ ಪೇಟಿಎಂನಿಂದ ಇಮೇಲ್‌ ಒಂದು ಬಂದಿದ್ದು, ಆ ಮೇಲ್‌ನಲ್ಲಿ ಪೇಟಿಎಂ ಅಕೌಂಟ್‌ಗೆ ಬೇರೆ ಯಾರೋ ಲಾಗಿನ್‌ ಆಗಿದ್ದಾರೆ ಎಂದಿತ್ತು." ಎಂದು ಪೊಲೀಸರು ತಿಳಿಸಿದ್ದಾರೆ.

  ಇಮೇಲ್‌ ಬದಲು

  ನಂತರ ಇನ್ನೊಂದು ಸಂದೇಶ ಸ್ವೀಕರಿಸಿದ ಕರಿಂ ಪೇಟಿಎಂ ಅಕೌಂಟ್‌ನ ನೊಂದಾಯಿತ ಇಮೇಲ್‌ ಬದಲಾಗಿರುವುದನ್ನು ನೋಡಿ ಹೌಹಾರಿದ್ದಾರೆ. ಅದರ ಜತೆ ರೂ. 19,999ಗಳನ್ನು ಅಪರಿಚಿತ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅಪರಿಚಿತ ಖಾತೆಯು ಕೂಡ ಕರಿಂ ಹೆಸರಿನಲ್ಲಿ ನಕಲಿಯಾಗಿ ಸೃಷ್ಟಿಸಲಾಗದೆ ಎಂದು ಪೊಲೀಸರು ವಿವರ ಬಹಿರಂಗ ಪಡಿಸಿದ್ದಾರೆ.

  ನೋಡ ನೋಡುತ್ತಿದ್ದಂತೆ ಹಣ ಖಾಲಿ

  ನೊಂದಾಯಿತ ಇಮೇಲ್‌ ಬದಲಾಗಿ ಮೊದಲಿಗೆ ರೂ.19,999 ವರ್ಗಾವಣೆಯಾದ ನಂತರ ಏಳು ವರ್ಗಾವಣೆಗಳಲ್ಲಿ ಖಾತೆಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿದೆ. ವಂಚಕರು ಈ 7 ಬಾರಿ ಒಟ್ಟು ರೂ.80.498ಗಳನ್ನು ಅವರ ಅಕೌಂಟ್‌ನಿಂದ ಡ್ರಾ ಮಾಡಿದ್ದರಂತೆ.

  ಯಾರ ಮೇಲೆ ಆರೋಪ..?

  ಯೂಸುಫ್ ಕರಿಂ ನೇರವಾಗಿ ಮೊಬೈಲ್‌ ಸೇವಾ ಕೇಂದ್ರದ ಇಂಜಿನಿಯರ್‌ಗಳ ಮೇಲೆ ಆರೋಪ ಮಾಡಿದ್ದು, ತನ್ನ ಫೋನ್‌ ದುರಸ್ಥಿ ಮಾಡಿದ ಇಂಜಿನಿಯರ್‌ ಈ ವಂಚನೆಯನ್ನು ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ.

  ಪೇಟಿಎಂನಿಂದ ನೋ ರೆಸ್ಪಾನ್ಸ್‌

  ಹಣ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗುತ್ತಿರುವ ಕುರಿತು ಪೇಟಿಎಂಗೆ ತಿಳಿಸಿದ್ದ ಕರಿಂ ತಮ್ಮ ಅಕೌಂಟ್‌ನ್ನು ಬ್ಲಾಕ್‌ ಮಾಡುವಂತೆ ಹಲವು ಬಾರಿ ವಿನಂತಿಸಿದ್ದರಂತೆ. ಆದರೆ, ಪೇಟಿಎಂ ಅಕೌಂಟ್‌ನ್ನು ಬ್ಲಾಕ್‌ ಮಾಡುವ ಗೋಜಿಗೆ ಹೋಗಿಲ್ಲ ಎಂದು ಕರಿಂ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಪೇಟಿಎಂ ಇನ್ನು ಪ್ರತಿಕ್ರಿಯಿಸಿಲ್ಲ, ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.

  ಫೋನ್‌ ಬುಕ್‌ ಮಾಡಿದ್ರೇ ಸೋಪ್‌ ಬಂತು..! ಅಮೆಜಾನ್‌ ಮೇಲೆ FIR..!

  ನಾವು ಏನೋ ಬುಕ್‌ ಮಾಡಿದ್ರೇ ಆನ್‌ಲೈನ್‌ನಲ್ಲಿ ಮತ್ತೇನೋ ಬರುತ್ತೆ ಎಂಬುದನ್ನು ನೀವು ಎಷ್ಟೋ ಬಾರಿ ಕೇಳಿರ್ತಿರಿ ಅಥವಾ ನೋಡಿರ್ತಿರಿ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಸ್ಮಾರ್ಟ್‌ಫೋನ್‌ ಬುಕ್‌ ಮಾಡಿದ ಗ್ರಾಹಕನಿಗೆ ಸೋಪ್‌ ಬಂದಿದೆ. ಈ ಪ್ರಮಾದವನ್ನು ಎಸಗಿರುವುದು ಪ್ರಮುಖ ಇ-ಕಾಮರ್ಸ್‌ ತಾಣ ಅಮೆಜಾನ್‌ ಎಂಬುದನ್ನು ನಂಬಲೇಬೇಕು.

  ಹೌದು, ಈಗ ಫೋನ್‌ ಬುಕ್‌ ಮಾಡಿದ ಗ್ರಾಹಕ ಅಮೆಜಾನ್‌ ಮೇಲೆ ದೂರು ಸಲ್ಲಿಸಿದ್ದು, ಗ್ರೇಟರ್‌ ನೋಯ್ಡಾದ ಬಿಸ್ರಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರ ಮೇಲೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಆಗಿದ್ರೇ ಏನೀದು ಪ್ರಕರಣ ಎಂಬುದನ್ನು ಮುಂದೆ ನೋಡಿ..!

  ಯಾವಾಗ ಘಟನೆ..?

  ಗ್ರೇಟರ್‌ ನೋಯ್ಡಾದಲ್ಲಿ ಬಿಸ್ರಕ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ವರದಿಯಾಗಿದ್ದು, ದೂರು ಸಲ್ಲಿಸಿದ ಗ್ರಾಹಕ ಅಮೆಜಾನ್‌ನಲ್ಲಿ ಮೊಬೈಲ್‌ ಫೋನ್‌ನ್ನು ಆರ್ಡರ್‌ ಮಾಡಿದ್ದರು. ಆ ಫೋನ್‌ನ ಡೆಲಿವರಿ ಅಕ್ಟೋಬರ್‌ 27ರಂದು ಆಯಿತು. ಪಾರ್ಸಲ್‌ ತೆರೆದರೆ ಅದರಲ್ಲಿ ಫೋನ್‌ ಬದಲಾಗಿ ಸೋಪ್‌ ಬಂದಿದೆ ಎಂದಿದ್ದಾರೆ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಬಿಸ್ರಕ್‌ ನಿಶಾಂಕ್‌ ಶರ್ಮಾ ಪ್ರಕರಣವನ್ನು ವಿವರಿಸಿದ್ದಾರೆ.

  ಯಾರ ಮೇಲೆ ಪ್ರಕರಣ..?

  ಗ್ರಾಹಕ ದೂರು ಸಲ್ಲಿಸಿದ ಮೇಲೆ ಪೊಲೀಸರು FIR ದಾಖಲಿಸಿಕೊಂಡಿದ್ದು, ಅಮೆಜಾನ್‌ನ ಭಾರತದ ಮುಖ್ಯಸ್ಥ ಅಮಿತ್‌ ಅಗರ್‌ವಾಲ್‌, ಲಾಜಿಸ್ಟಿಕ್‌ ಸಂಸ್ಥೆ ದರ್ಶಿತಾ ಪ್ರೈವೆಟ್‌ ಲಿಮಿಟೆಡ್‌ನ ನಿರ್ದೇಶಕರಾದ ಪ್ರದೀಪ್‌ ಕುಮಾರ್‌ ಮತ್ತು ರವೀಶ್‌ ಅಗರ್‌ವಾಲ್‌ ಹಾಗೂ ಡೆಲಿವರಿ ಬಾಯ್‌ ಅನಿಲ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  ಯಾವ್ಯಾವ ಸೆಕ್ಷನ್‌ನಲ್ಲಿ ಪ್ರಕರಣ..?

  ಭಾರತೀಯ ದಂಡ ಸಂಹಿತೆ 420 (ಮೋಸ ಮತ್ತು ವಂಚನೆ), 406 (ಅಪನಂಬಿಕೆಯ ಕ್ರಿಮಿನಲ್‌ ಅಪರಾಧ) ಮತ್ತು 120B (ಕ್ರಿಮಿನಲ್‌ ಪಿತೂರಿ) ಎಂಬ IPC ಸೆಕ್ಷನ್‌ಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದು, ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ.

  ಅಮೆಜಾನ್‌ನಿಂದ ರೀಫಂಡ್‌

  ಪ್ರಕರಣದ ಬಗ್ಗೆ ಅಮೆಜಾನ್‌ ಪ್ರತಿಕ್ರಿಯಿಸಿದ್ದು, ಘಟನೆ ನಡೆದಿರುವ ಬಗ್ಗೆ ಖಚಿತ ಪಡಿಸಿದೆ. ಅದಲ್ಲದೇ ದೂರುದಾರ ಗ್ರಾಹಕನಿಗೆ ರೀಫಂಡ್‌ ಪ್ರಕ್ರಿಯೆಯನ್ನು ಹೀಗಾಗಲೇ ಪ್ರಾರಂಭಿಸಿದ್ದು, ಸದ್ಯದಲ್ಲಿಯೇ ಗ್ರಾಹಕ ರೀಫಂಡ್‌ ಪಡೆಯಲಿದ್ದಾರೆ ಎಂದು ಅಮೆಜಾನ್‌ ಹೇಳಿದೆ.

  ಅಮೆಜಾನ್‌ನಿಂದ ಗಂಭೀರ ನಿಲುವು

  ಭಾರತದ ಅತಿ ನಂಬಿಕಸ್ಥ ಆನ್‌ಲೈನ್‌ ಮಾರುಕಟ್ಟೆ ತಾಣ ಆಗಿರುವ ಅಮೆಜಾನ್‌ ವಂಚನೆ ಪ್ರಕರಣದ ವಿರುದ್ಧ ಗಂಭೀರ ನಿಲುವನ್ನು ತಾಳಿದೆ. ಹೀಗಾಗಲೇ ಸ್ಥಳೀಯ ಪೊಲೀಸರು ಈ ಬಗ್ಗೆ ವಿಚಾರಣೆಯನ್ನು ಆರಂಭಿಸಿದ್ದಾರೆ. ಅದಲ್ಲದೇ ಅಮೆಜಾನ್‌ ಕೂಡ ಆಂತರಿಕ ತನಿಖೆಯನ್ನು ಮುಂದುವರೆಸಿದೆ. ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅಮೆಜಾನ್‌ ಹೇಳಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Nearly Rs 91,000 withdrawn from man's mobile wallet by 'service centre staff'. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more