ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಬ್ಯಾನ್‌..? ನವೆಂಬರ್ 14ರತ್ತ ಎಲ್ಲರ ಕಣ್ಣು..!

|

ಕಳೆದ ಒಂದು ವರ್ಷದಿಂದ ಭಾರತದಲ್ಲಿ ವಿಡಿಯೋ ಪ್ರಿಯರ ಮನಗೆದ್ದಿದ್ದ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ನಂತಹ ಆನ್‌ ಡಿಮಾಂಡ್ ವಿಡಿಯೋ ಸ್ಟ್ರೀಮಿಂಗ್‌ ವೇದಿಕೆಗಳು ಶೀಘ್ರದಲ್ಲಿಯೇ ಭಾರತದಿಂದ ಕಾಲ್ಕಿತ್ತುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. Sacred Games, Maniacನಂತಹ ವೆಬ್‌ ಶೋಗಳ ಪ್ರಿಯರಿಗೆ ಬಹಳ ದೊಡ್ಡ ಶಾಕಿಂಗ್‌ ನ್ಯೂಸ್‌ ಕಾದಿದ್ದು, ಮುಂದೆ ಅಂತಹ ಶೋಗಳು ಭಾರತದಲ್ಲಿ ಪ್ರಸಾರವಾಗುವ ಸಾಧ್ಯತೆ ಬಲು ಕಡಿಮೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಬ್ಯಾನ್‌..?

ಹೌದು, ದೆಹಲಿ ಹೈಕೋರ್ಟ್‌ನಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಆ ಅರ್ಜಿಯನ್ನೇನಾದರೂ ಕೋರ್ಟ್‌ ಮಾನ್ಯ ಮಾಡಿದರೆ ಖಂಡಿತ ಅಮೆಜಾನ್‌ ಪ್ರೈಮ್‌ ಮತ್ತು ನೆಟ್‌ಫ್ಲಿಕ್ಸ್‌ನಂತಹ ವಿಡಿಯೋ ಸ್ಟ್ರೀಮಿಂಗ್‌ ತಾಣಗಳಿಗೆ ಭಾರೀ ಹೊಡೆತ ಬೀಳಲಿದ್ದು, ಭಾರತದಲ್ಲಿ ನಿಷೇಧಕ್ಕೊಳಗಾಗುವ ಸಾಧ್ಯತೆಯೂ ಇದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಸಾರ್ವಜನಿಕ ಹಿತಾಸಕ್ತಿ ಅರ್ಜಿ

ದೆಹಲಿ ಹೈಕೋರ್ಟ್‌ನಲ್ಲಿ ಜಸ್ಟೀಸ್‌ ಫಾರ್‌ ರೈಟ್ಸ್‌ ಫೌಂಡೇಶನ್‌ ಎಂಬ ಎನ್‌ಜಿಒ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಫೈಲ್‌ ಮಾಡಿದ್ದು, ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ನಂತಹ ಆನ್‌ಡಿಮಾಂಡ್‌ ಮನರಂಜನೆ ಆಪ್‌ಗಳಲ್ಲಿ ಪ್ರಸಾರವಾಗುವ ಶೋಗಳಲ್ಲಿ ಅಶ್ಲೀಲ ಅಂಶವನ್ನು ನಿಷೇಧಿಸಬೇಕು ಎಂದು PIL ಸಲ್ಲಿಸಿದೆ.

ಕಾನೂನು ನಿರ್ಬಂಧಿತ ವಿಷಯಗಳು

ಕಾನೂನು ನಿರ್ಬಂಧಿತ ವಿಷಯಗಳು

PILನಲ್ಲಿ ಹೇಳಿರುವಂತೆ ಆನ್‌ಡಿಮಾಂಡ್‌ ವಿಡಿಯೋ ಸ್ಟ್ರೀಮಿಂಗ್‌ ತಾಣಗಳಲ್ಲಿನ ವಿಷಯ ವಸ್ತು ಸೂಕ್ತವಾಗಿರುವುದಿಲ್ಲ, ಸ್ಪಷ್ಟ ಲೈಂಗಿಕ ಅಂಶಗಳನ್ನು ಹೊಂದಿರುತ್ತದೆ, ಧಾರ್ಮಿಕವಾಗಿ ನಿಷೇಧಿಸಲಾದ ಅಂಶಗಳನ್ನು ಹೊಂದಿರುತ್ತವೆ ಮತ್ತು ಕಾನೂನು ಉಲ್ಲಂಘಿತ ಅಂಶಗಳನ್ನು ಈ ಶೋಗಳು ಹೊಂದಿರುತ್ತವೆ ಎಂದು NGO ಹೇಳಿದೆ.

ಸಚಿವಾಲಯಕ್ಕೆ ಆಗಸ್ಟ್‌ನಲ್ಲಿಯೇ ದೂರು..!

ಸಚಿವಾಲಯಕ್ಕೆ ಆಗಸ್ಟ್‌ನಲ್ಲಿಯೇ ದೂರು..!

NGO ಪರ ವಕೀಲ ಹರ್‌ಪ್ರೀತ್‌ ಸಿಂಗ್‌ ಹೋರಾ ಹೇಳುವಂತೆ, Sacred Games, Game of Thrones, Spartacusನಂತಹ ಶೋಗಳನ್ನು ಭಾರತದಿಂದ ಬ್ಯಾನ್‌ ಮಾಡುವ ಅವಶ್ಯಕತೆ ಬಹಳಷ್ಟಿದೆ ಎಂದಿದ್ದಾರೆ. ಆಗಸ್ಟ್‌ 2018ರಲ್ಲಿ ಇಂತಹ ಶೋಗಳನ್ನು ನಿಷೇಧಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸಚಿವಾಲಯ IPC ಸೆಕ್ಷನ್‌ 79ರಡಿಯಲ್ಲಿ ಹಕ್ಕುಗಳನ್ನು ಚಲಾಯಿಸಲು ಸಮಿತಿಯ ಅವಶ್ಯಕತೆ ಇದೆ ಎಂದು ಪರೋಕ್ಷವಾಗಿ ಹೇಳಿತ್ತು.

ಸ್ಪಷ್ಟ ಕಾನೂನು ಉಲ್ಲಂಘನೆ

ಸ್ಪಷ್ಟ ಕಾನೂನು ಉಲ್ಲಂಘನೆ

PIL ಹೇಳುವಂತೆ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ಮತ್ತೀತರ ಆಪ್‌ಗಳು ಸ್ಪಷ್ಟವಾಗಿ ಕಾನೂನು ಉಲ್ಲಂಘಿಸಿವೆಯಂತೆ. IPC, ಮಾಹಿತಿ ತಂತ್ರಜ್ಞಾನ ಕಾಯಿದೆ-2000, The Indecent Representation of Women (Prohibition)Act, 1986 ಮತ್ತೀತರ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು PILನಲ್ಲಿ ಹೇಳಲಾಗಿದೆ.

ಬ್ಯಾನ್‌ ಆಗುತ್ತಾ..?

ಬ್ಯಾನ್‌ ಆಗುತ್ತಾ..?

PILನಲ್ಲಿ ನಮೂದಾಗಿರುವ ಪ್ರಮುಖ ಅಂಶವೆಂದರೆ ಆನ್‌ಡಿಮಾಂಡ್‌ ವೆಬ್‌ ಶೋಗಳಲ್ಲಿ ಅಕ್ರಮ ಮತ್ತು ಅನೈತಿಕವಾದ, ಅಸಮಂಜಸ ಅಂಶಗಳನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನು ಬ್ಯಾನ್‌ ಮಾಡಬೇಕೆಂದು ಕೇಳಿಕೊಂಡಿದೆ. ಆದರೆ, ಅರ್ಜಿದಾರರು ಹೇಳುವಂತೆ ಹೈಕೋರ್ಟ್‌ ಶೋಗಳನ್ನು ಬ್ಯಾನ್‌ ಮಾಡಬಹುದು. ಅಥವಾ ಅಮೆಜಾನ್‌ ಪ್ರೈಮ್‌ ಮತ್ತು ನೆಟ್‌ಫ್ಲಿಕ್ಸ್‌ಗಳನ್ನು ಭಾರತದಲ್ಲಿ ಬ್ಯಾನ್‌ ಮಾಡುವ ಆದೇಶ ಹೊರಡಿಸಬಹುದು ಎಂದು ಹೇಳಿದ್ದಾರೆ.

ಹೊಸ ನೀತಿ ರಚನೆವರೆಗೂ ನಿಷೇಧ..?

ಹೊಸ ನೀತಿ ರಚನೆವರೆಗೂ ನಿಷೇಧ..?

ಅದಲ್ಲದೇ, ಅರ್ಜಿದಾರರು PILನಲ್ಲಿ ಈ ಕುರಿತು ಹೊಸ ನೀತಿ ಸಂಹಿತೆ ರಚನೆಯಾಗುವವರೆಗೂ ಈ ಆಪ್‌ಗಳನ್ನು ಬ್ಯಾನ್‌ ಮಾಡಬೇಕೆಂದು ಕೇಳಿಕೊಂಡಿದೆ. ಈ ಕುರಿತು ಮುಂದಿನ ವಿಚಾರಣೆ ನವೆಂಬರ್‌ 14ರಂದು ಇದ್ದು, ಎಲ್ಲರ ಕಣ್ಣು ಅಂದಿಗೆ ಹೋಗಿದೆ.

ಮುಂಬೈ ಹೈಕೋರ್ಟ್‌ನಲ್ಲೂ PIL

ಮುಂಬೈ ಹೈಕೋರ್ಟ್‌ನಲ್ಲೂ PIL

ಮುಂಬೈ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ದಿವ್ಯಾ ಗೋಂಟಿಯಾ ಎನ್ನುವವರು AltBalajiಯಲ್ಲಿ ಪ್ರಸಾರವಾದ Gandi baat ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ Sacred Games ವಿರುದ್ಧವಾಗಿ PIL ಸಲ್ಲಿಸಿದ್ದರು. ಈ ಕುರಿತು ಮುಂಬೈ ಹೈಕೋರ್ಟ್‌ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಜಾರಿ ಮಾಡಿತ್ತು.

ದಿವ್ಯಾ ಗೋಂಟಿಯಾ ಸಲ್ಲಿಸಿದ PILನಲ್ಲಿ ಏನೀದೆ..?

ದಿವ್ಯಾ ಗೋಂಟಿಯಾ ಸಲ್ಲಿಸಿದ PILನಲ್ಲಿ ಏನೀದೆ..?

ದಿವ್ಯಾ ಗೋಂಟಿಯಾ ಸಲ್ಲಿಸಿದ PILನಲ್ಲಿ ಈ ಶೋಗಳು ಅಶ್ಲೀಲ, ನಗ್ನ ಮತ್ತು ಅಸಭ್ಯ ದೃಶ್ಯಗಳನ್ನು ಹೊಂದಿದ್ದು, ಸಿನಿಮಾಟೋಗ್ರಾಫ್‌ ಕಾಯಿದೆ, ಭಾರತೀಯ ದಂಡ ಸಂಹಿತೆ,Indecent Representation of Women (Prohibition) Act ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಉಲ್ಲಂಘಿಸಿವೆ ಎಂದು ವಾದ ಮಾಡಿದ್ದಾರೆ.

ನವೆಂಬರ್‌ 14ರತ್ತ ಎಲ್ಲರ ಕಣ್ಣು..!

ನವೆಂಬರ್‌ 14ರತ್ತ ಎಲ್ಲರ ಕಣ್ಣು..!

ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮುಂದಿನ ವಿಚಾರಣೆಯನ್ನು ನವೆಂಬರ್‌ 14ಕ್ಕೆ ಮುಂದೂಡಲಾಗಿದ್ದು, ಎರಡು ಒಟ್ಟಿಗೆ ವಿಚಾರಣೆಗೆ ಬರುವ ಸಾಧ್ಯತೆಯೂ ಇದ್ದು, ಎಲ್ಲರೂ ನವೆಂಬರ್‌ 14ರತ್ತ ತಮ್ಮ ಕಣ್ಣನ್ನು ನೆಟ್ಟಿದ್ದಾರೆ.

Best Mobiles in India

English summary
Netflix, Amazon Prime Face Ban In India – Delhi HC Will Hear PIL Against Vulgar Content!. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X