Home
ಸುದ್ದಿಜಾಲ

ಇನ್ಮುಂದೆ ಅಗ್ಗವಾಗಿ ನಿಮಗೆ ಸಿಗಲಿದೆ ನೆಟ್‌ಫ್ಲಿಕ್ಸ್‌..!

By Gizbot Bureau

ಪ್ರಸಿದ್ಧ ವಿಡಿಯೋ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಕುಸಿಯುತ್ತಿರುವ ತನ್ನ ಚಂದಾದಾರರ ಬೆಳವಣಿಗೆಯ ಬಗ್ಗೆ ತಲೆಕೆಡಸಿಕೊಂಡಿದೆ. ಹೌದು, ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ನೆಟ್‌ಫ್ಲಿಕ್‌ ಚಂದಾದಾರಿಕೆ ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತಿರುವುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ, ಭಾರತದಲ್ಲಿ ಕಡಿಮೆ ಬೆಲೆಯ ಚಂದಾದಾರಿಕೆ ಯೋಜನೆಯನ್ನು ತರಲು ನೆಟ್‌ಫ್ಲಿಕ್ಸ್‌ ಯೋಚಿಸುತ್ತಿದೆ.

ಇನ್ಮುಂದೆ ಅಗ್ಗವಾಗಿ ನಿಮಗೆ ಸಿಗಲಿದೆ ನೆಟ್‌ಫ್ಲಿಕ್ಸ್‌..!

ಈ ಮೂಲಕ ಸೂಕ್ಷ್ಮ ಮಾರುಕಟ್ಟೆಗೆ ತಕ್ಕಂತೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವನ್ನು ನೆಟ್‌ಫ್ಲಿಕ್ಸ್‌ ಹೊಂದಿದೆ. ಭಾರತದಲ್ಲಿ ಹಲವು ತಿಂಗಳುಗಳಿಂದ ಮೊಬೈಲ್‌ಗೆ ಮಾತ್ರ ಎನ್ನುವಂತೆ ಅಗ್ಗದ ಸಬ್‌ಸ್ಕ್ರಿಪ್ಷನ್‌ ಯೋಜನೆಗಳನ್ನು ಈಗಾಗಲೇ ನೆಟ್‌ಫ್ಲಿಕ್ಸ್‌ ಪರಿಚಯಿಸಿದೆ.

ಮಾಸಿಕ 250 ರೂ. ಪ್ಲಾನ್‌

ಮಾಸಿಕ 250 ರೂ. ಪ್ಲಾನ್‌

ಭಾರತದಲ್ಲಿ ನೆಟ್‌ಫ್ಲಿಕ್ಸ್‌ ಮಾಸಿಕ 250 ರೂ.ಗಳ ಸಬ್‌ಸ್ಕ್ರಿಪ್ಷನ್‌ ಯೋಜನೆಯನ್ನು ಪರೀಕ್ಷಿಸುತ್ತಿದ್ದು, ಇದು ಕೇವಲ ಮೊಬೈಲ್‌ಗಳ ಮೂಲಕ ಮಾತ್ರ ವಿಡಿಯೋ ಸ್ಟ್ರೀಮ್‌ ಮಾಡಲು ಅವಕಾಶ ನೀಡುತ್ತದೆ. ಇದರಿಂದ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಇತರೆ ಇಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಾದ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ವಿಡಿಯೋ, ಅಲ್ಟ್‌ ಬಾಲಾಜಿ ಮತ್ತು ಜೀ5 ಎದುರು ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಇವುಗಳೆಲ್ಲಾ ಅಗ್ಗದ ದರದಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದು, ಈ ಸಾಲಿಗೆ ಸೇರಲು ನೆಟ್‌ಫ್ಲಿಕ್ಸ್ ಚಿಂತನೆ ನಡೆಸಿದೆ.

ವಾರದ 65 ರೂ. ಪ್ಲಾನ್‌

ವಾರದ 65 ರೂ. ಪ್ಲಾನ್‌

ಇನ್ನು, ಏಪ್ರಿಲ್‌ನಲ್ಲಿ ನೆಟ್‌ಫ್ಲಿಕ್ಸ್‌ ವಾರಕ್ಕೆ 65 ರೂ. ಮೊಬೈಲ್‌ಗೆ ಮಾತ್ರ ಎಂಬ ಸಬ್‌ಸ್ಕ್ರಿಪ್ಷನ್‌ ಪ್ಲಾನ್‌ ಪರೀಕ್ಷಿಸಲು ಪ್ರಾರಂಭಿಸಿತ್ತು. ಆದರೆ, ಕಂಪನಿ ಈಗ 250 ರೂ. ಮತ್ತು 65 ರೂ. ಎರಡು ಯೋಜನೆಯನ್ನು ಪ್ರಾರಂಭಿಸಲಿದೆಯೇ ಅಥವಾ ಒಂದೇ ಯೋಜನೆಯನ್ನು ಮುಂದುವರೆಸುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಹಲವು ತಿಂಗಳುಗಳ ಪರೀಕ್ಷೆ ನಂತರ, ಅಸ್ತಿತ್ವದಲ್ಲಿರುವ ನಮ್ಮ ಯೋಜನೆಗಳಿಗೆ ಪೂರಕವಾಗಿ ಭಾರತದಲ್ಲಿ ಕಡಿಮೆ ಬೆಲೆಯ ಮೊಬೈಲ್-ಸ್ಕ್ರೀನ್ ಸಬ್‌ಸ್ಕ್ರಿಪ್ಷನ್‌ ಯೋಜನೆ ರೂಪಿಸಲು ನಾವು ನಿರ್ಧರಿಸಿದ್ದೇವೆ ಎಂದು ನೆಟ್‌ಫ್ಲಿಕ್ಸ್‌ ತನ್ನ ಗಳಿಕೆಯ ವರದಿಯಲ್ಲಿ ತಿಳಿಸಿದೆ.

ತೃತೀಯ ತ್ರೈಮಾಸಿಕದಲ್ಲಿ ಪ್ರಾರಂಭವಾಗಲಿರುವ ಈ ಯೋಜನೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ನೆಟ್‌ಫ್ಲಿಕ್ಸ್‌ನ್ನು ಪರಿಚಯಿಸಲು ನೆರವಾಗುತ್ತದೆ ಮತ್ತು Pay TV ARPU ಕಡಿಮೆ ಇರುವ ಮಾರುಕಟ್ಟೆಯಲ್ಲಿ ನಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಪರಿಣಾಮಕಾರಿಯಾದ ಮಾರ್ಗವಾಗಿದೆ ಎಂದು ನಂಬುತ್ತೇವೆ. ಹಾಗೂ ಈ ಯೋಜನೆ ಪ್ರಾರಂಭದ ನಂತರ ನಾವು ಇನ್ನಷ್ಟು ಕಲಿಯುತ್ತೇವೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ಬೇರೆ ಪ್ಲಾಟ್‌ಫಾರ್ಮ್‌ಗಿಂತ ಹೆಚ್ಚಿನ ದರ

ಬೇರೆ ಪ್ಲಾಟ್‌ಫಾರ್ಮ್‌ಗಿಂತ ಹೆಚ್ಚಿನ ದರ

ಸದ್ಯ, ಭಾರತದಲ್ಲಿ ನೆಟ್‌ಫ್ಲಿಕ್ಸ್‌ ಮಾಸಿಕ ಮೂರು ರೀತಿಯ ಸಬ್‌ಸ್ಕ್ರಿಪ್ಷನ್‌ ಯೋಜನೆಗಳನ್ನು 500 ರೂ.ಗಳಿಂದ 800 ರೂ.ಗಳವರೆಗೆ ನೀಡುತ್ತಿದೆ. ಇದು ಭಾರತದಲ್ಲಿ ಬೇರೆ ವಿಡಿಯೋ ಪ್ಲಾಟ್‌ಫಾರ್ಮ್‌ಗಳು ನೀಡುತ್ತಿರುವ ದರಕ್ಕಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಉದಾಹರಣೆಗೆ, ಹಾಟ್‌ಸ್ಟಾರ್‌ ಮಾಸಿಕ 299 ರೂ. ಮತ್ತು ವಾರ್ಷಿಕ 999 ರೂ. ಪ್ಲಾನ್‌ ನೀಡುತ್ತದೆ. ಇದರ ಜೊತೆ ಈ ವರ್ಷದ ಆರಂಭದಲ್ಲಿ ಕೆಲವು ಕ್ರೀಡಾ ಚಾನೆಲ್‌ ಹಾಗೂ ಹಿಂದಿ ಮನರಂಜನಾ ಚಾನೆಲ್‌ಗಳಿಗೆ ಪ್ರವೇಶ ನೀಡುವ ವಿಐಪಿ ಪ್ಲಾನ್‌ನ್ನು ಹಾಟ್‌ಸ್ಟಾರ್ ವಾರ್ಷಿಕ 365 ರೂ.ಗೆ ನೀಡುತ್ತಿದೆ. ಏತನ್ಮಧ್ಯೆ, ಅಮೆಜಾನ್ ಇಂಡಿಯಾ ತನ್ನ ಪ್ರೈಮ್ ವಿಡಿಯೋ ಸೇವೆಯನ್ನು ಪ್ರೈಮ್ ಸದಸ್ಯತ್ವ ಪ್ಯಾಕೇಜ್‌ನಲ್ಲಿ ವಾರ್ಷಿಕ ಕೇವಲ 999 ರೂ.ಗೆ ನೀಡುತ್ತಿರುವುದು ಗಮನಾರ್ಹ ಸಂಗತಿ.

ವಿಮರ್ಷಕರ ಮೆಚ್ಚುಗೆ

ವಿಮರ್ಷಕರ ಮೆಚ್ಚುಗೆ

ನೆಟ್‌ಫ್ಲಿಕ್ಸ್‌ ಭಾರತದಲ್ಲಿ ನೈಜ ವಿಷಯಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದೆ. ಸೇಕ್ರೆಡ್ ಗೇಮ್ಸ್, ಲೀಲಾ, ದೆಲ್ಲಿ ಕ್ರೈಮ್‌ಗಳಂತಹ ಶೋಗಳನ್ನು ನೆಟ್‌ಫ್ಲಿಕ್ಸ್‌ ಸೃಷ್ಟಿಸಿದ್ದು, ವಿಮರ್ಷಕರ ಭಾರೀ ಮೆಚ್ಚುಗೆಯನ್ನು ಗಳಿಸಿದೆ.

Best Mobiles in India

English summary
Netflix Confirmed To Launch Cheaper Subscription Plans In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+