ಇಂದಿನಿಂದ ಎರಡು ದಿನಗಳ ನೆಟ್‌ಫ್ಲಿಕ್ಸ್‌ ಇಂಡಿಯಾ ಸ್ಟ್ರೀಮ್‌ಫೆಸ್ಟ್ ಶುರು!

|

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ OTT ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅದರಲ್ಲೂ ಅಮೆಜಾನ್‌ ಪ್ರೈಮ್, ನೆಟ್‌ಫ್ಲಿಕ್ಸ್‌ ಹೆಚ್ಚಿನ ಪ್ರಸಿದ್ದಿಯನ್ನು ಪಡೆದುಕೊಂಡಿವೆ. ಸದ್ಯ ಅಮೆಜಾನ್‌ ಫ್ರೈಮ್‌ ಗೆ ನೇರ ಸ್ಪರ್ಧಿ ಯಾಗಿ ನೆಟ್‌ಫ್ಲಿಕ್ಸ್‌ ತಾಣ ಬಿಂಬಿತವಾಗಿದೆ. ಇನ್ನು ಈ ನೆಟ್‌ಫ್ಲಿಕ್ಸ್‌ ತಾಣವು ಚಂದಾದಾರರಿಗೆ ವೆಬ್‌ ಸರಣಿ ಹಾಗೂ ಚಲನಚಿತ್ರಗಳ ಕಂಟೆಂಟ್‌ ಅನ್ನು ಒದಗಿಸುತ್ತದೆ. ತಿಂಗಳ ಹಾಗೂ ವಾರ್ಷಿಕ ಚಂದಾದಾರಿಕೆ ಯೋಜನೆಗಳ ಆಯ್ಕೆ ಹೊಂದಿದೆ. ಸದ್ಯ ನೆಟ್‌ಫ್ಲಿಕ್ಸ್‌ ಇಂಡಿಯಾ ಎರಡು ದಿನಗಳ ಸ್ಟ್ರೀಮ್‌ ಫೆಸ್ಟ್‌ ಅನ್ನು ಪ್ರಾರಂಭಿಸಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ತನ್ನ ಗ್ರಾಹಕರಿಗೆ ನೆಟ್‌ಫ್ಲಿಕ್ಸ್‌ ಸ್ಟ್ರೀಮ್ ಫೆಸ್ಟ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಇದೇ ಡಿಸೆಂಬರ್ 5 ಮತ್ತು 6 ರ ಶನಿವಾರ ಮತ್ತು ಭಾನುವಾರ ಭಾರತದಲ್ಲಿ ನೆಟ್‌ಫ್ಲಿಕ್ಸ್‌ ಉಚಿತವಾಗಿದೆ. ಭಾರತದಲ್ಲಿ ಮಾತ್ರ ನೆಟ್‌ಫ್ಲಿಕ್ಸ್ ಸ್ಟ್ರೀಮ್‌ಫೆಸ್ಟ್ ಈಗ ಪ್ರಾರಂಭವಾಗಿದ್ದೂ, ಫುಲ್‌ ನೆಟ್‌ಫ್ಲಿಕ್ಸ್ ಲೈಬ್ರರಿಯನ್ನು 48 ಗಂಟೆಗಳ ಕಾಲ ಉಚಿತವಾಗಿ ಪ್ರವೇಶಿಸಲು ನೀವು ಸೈನ್ ಅಪ್ ಮಾಡಬಹುದಾಗಿದೆ. ಆದಾಗ್ಯೂ, ನಿಮ್ಮ ಉಚಿತ ಪ್ರವೇಶವು ಒಂದು ಸಮಯದಲ್ಲಿ ಒಂದು ಪ್ರಮಾಣಿತ-ವ್ಯಾಖ್ಯಾನ ಸ್ಟ್ರೀಮ್‌ಗೆ ಸೀಮಿತವಾಗಿರುತ್ತದೆ. ಸದ್ಯ ನೆಟ್‌ಫ್ಲಿಕ್ಸ್ 499 ರೂ. ‘ಮೂಲ ಚಂದಾದಾರಿಕೆ' ಪ್ಯಾಕ್ ಎರಡು ದಿನಗಳವರೆಗೆ ಉಚಿತವಾಗಿದೆ. ಹಾಗಾದ್ರೆ ಈ ಸ್ಟ್ರೀಮ್‌ ಫೆಸ್ಟ್‌ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್

ಸದ್ಯ ಇಂದಿನಿಂದ ಭಾರತದಲ್ಲಿ ಎಲ್ಲಾ ಹೊಸ ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಉಚಿತವಾಗಿದೆ. Netflix.com/StreamFest ಗೆ ಭೇಟಿ ನೀಡುವ ಮೂಲಕ ನೀವು ಇಂಟರ್‌ನೆಟ್ ಬ್ರೌಸರ್‌ನೊಂದಿಗೆ ಉಚಿತ ನೆಟ್‌ಫ್ಲಿಕ್ಸ್‌ಗಾಗಿ ಸೈನ್ ಅಪ್ ಮಾಡಿದ ನಂತರ, ನಿಮ್ಮ ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಿಂದ ನಿಮ್ಮ ಸ್ಮಾರ್ಟ್ ಟಿವಿ ಮತ್ತು ಗೇಮಿಂಗ್ ಕನ್ಸೋಲ್‌ಗಳವರೆಗೆ ನೀವು ಅದನ್ನು ಎಲ್ಲಿ ಬೇಕಾದರೂ ವೀಕ್ಷಿಸಬಹುದಾಗಿದೆ. ಇನ್ನು ಕ್ರೋಮ್‌ಕಾಸ್ಟ್ ಅಥವಾ ಅಮೆಜಾನ್ ಫೈರ್ ಟಿವಿ ಸ್ಟಿಕ್‌ನಂತಹ ಸ್ಟ್ರೀಮಿಂಗ್ ಸಾಧನವನ್ನು ಹೊಂದಿರುವ ಯಾವುದೇ ಟಿವಿಯಲ್ಲಿ ಮತ್ತು ಯಾವುದೇ ಇಂಟರ್‌ನೆಟ್‌ ಬ್ರೌಸರ್‌ನಲ್ಲಿ ಸಹ ನೀವು ಇದನ್ನು ವೀಕ್ಷಿಸಬಹುದು.

ನೆಟ್‌ಫ್ಲಿಕ್ಸ್‌

ಇನ್ನು ಸ್ಟ್ರೀಮ್‌ಫೆಸ್ಟ್ ಸಮಯದಲ್ಲಿ ಉಚಿತ ನೆಟ್‌ಫ್ಲಿಕ್ಸ್‌ಗಾಗಿ ಸೈನ್ ಅಪ್ ಮಾಡುವುದಕ್ಕೆ ನೀವು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆಯಂತಹ ಯಾವುದೇ ಪಾವತಿ ವಿವರಗಳನ್ನು ಒದಗಿಸಬೇಕಾಗಿಲ್ಲ. ನಿಮ್ಮ ಹೆಸರು, ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಮಾತ್ರ ನಮೂದಿಸಿದರೆ ಸಾಕು. ಇದಲ್ಲದೆ ನೀವು ಚಂದಾದಾರರಾಗಲು ನಿರ್ಧರಿಸುವ ಮೊದಲು ನೆಟ್‌ಫ್ಲಿಕ್ಸ್‌ನ ಸಂಪೂರ್ಣ ಲೈಬ್ರರಿಗೆ ಎರಡು ದಿನಗಳ ಉಚಿತ ಪ್ರವೇಶವನ್ನು ಪಡೆಯಬೇಕಿರುತ್ತೆ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ತನ್ನ ಕೆಲವು ಪ್ರದರ್ಶನಗಳು ಮತ್ತು ಚಲನಚಿತ್ರಗಳಿಗೆ ಸ್ಟ್ರೇಂಜರ್ ಥಿಂಗ್ಸ್, ಬರ್ಡ್ ಬಾಕ್ಸ್, ದಿ ಟು ಪೋಪ್ಸ್, ಅವರ್ ಪ್ಲಾನೆಟ್, ವೆನ್ ದೆ ಸೀ, ಮತ್ತು ಬಾಸ್ ಬೇಬಿ: ಬ್ಯಾಕ್ ಇನ್ ಬಿಸಿನೆಸ್ ಸೇರಿದಂತೆ ಉಚಿತ ಪ್ರವೇಶವನ್ನು ಸಹ ನೀಡುತ್ತಿದೆ. ಇದು ಒಂದು ಹೈ-ಡೆಫಿನಿಷನ್ ಸ್ಟ್ರೀಮ್‌ನೊಂದಿಗೆ ಬರುತ್ತದೆ ಮತ್ತು ಇದಕ್ಕಾಗಿ ನೀವು ಖಾತೆಯನ್ನು ರಚಿಸುವ ಅಗತ್ಯವಿಲ್ಲ. ಆದರೆ ನೆಟ್‌ಫ್ಲಿಕ್ಸ್‌ನಲ್ಲಿ ಉಚಿತ ವಿಷಯ ಸೀಮಿತವಾಗಿದೆ ಮತ್ತು ಆಂಡ್ರಾಯ್ಡ್, ವಿಂಡೋಸ್ ಪಿಸಿಗಳು ಮತ್ತು ಮ್ಯಾಕ್ ಸಾಧನಗಳಲ್ಲಿ ಮಾತ್ರ ಬ್ರೌಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ನೆಟ್‌ಫ್ಲಿಕ್ಸ್

ಸದ್ಯ ಭಾರತದಲ್ಲಿನ ನೆಟ್‌ಫ್ಲಿಕ್ಸ್ ಸ್ಟ್ರೀಮ್‌ಫೆಸ್ಟ್‌ ಈ ಎರಡು ದಿನಗಳು, ಆಸಕ್ತ ವೀಕ್ಷಕರಿಗೆ ನೆಟ್‌ಫ್ಲಿಕ್ಸ್ ಸ್ಟ್ರೇಂಜರ್ ಥಿಂಗ್ಸ್, ಅಥವಾ ದಿ ವಿಚರ್, ಅಥವಾ ನೆಟ್‌ಫ್ಲಿಕ್ಸ್‌ನ ಪರವಾನಗಿ ಪಡೆದ ಕ್ಯಾಟಲಾಗ್, ಅನ್ನು ನೀಡಲಿದೆ. ಅಲ್ಲದೆ ಒಂದು ಸಮಯದಲ್ಲಿ ಒಂದೇ ಮೊಬೈಲ್-ಮಾತ್ರ ಎಸ್‌ಡಿ ಸ್ಟ್ರೀಮ್‌ಗೆ ನೆಟ್‌ಫ್ಲಿಕ್ಸ್ ಬೆಲೆ 199 ರೂ ಆಗಿದೆ. ಜೊತೆಗೆ ಇತರ ಸಾಧನಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಒದಗಿಸುವ ಇದರ ಮೂಲ ಯೋಜನೆಯ ಬೆಲೆ 499. ರೂ. ಆಗಿದ್ದು, 649 ರೂ ಗಳ ಸ್ಟ್ಯಾಂಡರ್ಡ್ ಪ್ಲಾನ್ ನಿಮಗೆ ಏಕಕಾಲದಲ್ಲಿ ಎರಡು ಸಾಧನಗಳಲ್ಲಿ ಹೆಚ್‌ಡಿ ಸ್ಟ್ರೀಮಿಂಗ್ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
Netflix is free in India on Saturday and Sunday, December 5 and 6, for an event called Netflix StreamFest.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X