ಇಂದಿನಿಂದ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಪ್ಲಾನ್‌ಗಳ ಬೆಲೆ ಕಡಿತ!

|

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಅಮೆಜಾನ್‌ ಪ್ರೈಮ್‌, ನೆಟ್‌ಪ್ಲಿಕ್ಸ್‌ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸದ್ಯ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ತನ್ನ ಚಂದಾದಾರಿಕೆ ಬೆಲೆಯಲ್ಲಿ ಕಡಿತ ಮಾಡಿದೆ. ಅಮೆಜಾನ್‌ ಪ್ರೈಮ್‌ ತನ್ನ ಚಂದಾದಾರಿಕೆ ಶುಲ್ಕವನ್ನು ಹೆಚ್ಚಳ ಮಾಡಿದ ದಿನವೇ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಶುಲ್ಕವನ್ನು ಇಳಿಸಿರುವುದು ಇಂಟ್ರೆಸ್ಟಿಂಗ್‌ ಆಗಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಭಾರತದಲ್ಲಿ ತನ್ನ ಚಂದಾದಾರಿಕೆ ಬೆಲೆಯನ್ನು 18 ರಿಂದ 60% ತನಕ ಕಡಿತಗೊಳಿಸಿದೆ. ಈ ಹಿಂದೆ ತಿಂಗಳಿಗೆ 199ರೂ.ಬೆಲೆ ಹೊಂದಿದ್ದ ನೆಟ್‌ಫ್ಲಿಕ್ಸ್ "ಮೊಬೈಲ್"ಪ್ಲಾನ್‌ ಇದೀಗ 25% ಬೆಲೆ ಕಡಿತ ಹೊಂದಿದ್ದು, ತಿಂಗಳಿಗೆ 149 ರೂ.ಬೆಲೆಯಲ್ಲಿ ಇದೀಗ ಲಭ್ಯವಾಗಲಿದೆ. ಬೇಸಿಕ್ ಪ್ಲಾನ್‌ಗಳು ಮಾತ್ರವಲ್ಲದೆ ನೆಟ್‌ಫ್ಲಿಕ್ಸ್‌ನ ಹಲವು ಪ್ಲಾನ್‌ಗಳು ಬೆಲೆಕಡಿತವನ್ನು ಪಡೆದುಕೊಂಡಿವೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಯಾವೆಲ್ಲಾ ಪ್ಲಾನ್‌ಗಳ ಬೆಲೆ ಕಡಿತಗೊಳಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಪ್ಲಾನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ತನ್ನ ಚಂದಾದಾರಿಕೆಗಳ ಬೆಲೆಯನ್ನು 18 ರಿಂದ 60% ಕಡಿಮೆ ಮಾಡಿದೆ. ಈ ಮೂಲಕ ತನ್ನ ಚಂದಾದಾರಿಗೆ ಗುಡ್‌ ನ್ಯೂಸ್‌ ನೀಡಿದೆ. ಅದರಂತೆ ಈ ಹಿಂದೆ ತಿಂಗಳಿಗೆ 499ರೂ ಬೆಲೆ ಪಡೆದಿದ್ದ ಚಂದಾದಾರಿಗೆ ಇದೀಗ ಕೇವಲ 199ರೂ.ಬೆಲೆಯನ್ನು ಪಡೆದುಕೊಂಡಿದೆ. ಅಲ್ಲದೆ ತನ್ನ "ಸ್ಟ್ಯಾಂಡರ್ಡ್" ನೆಟ್‌ಫ್ಲಿಕ್ಸ್ ಯೋಜನೆಯಲ್ಲಿಯೂ ಸಹ ಬೆಲೆ ಕಡಿತವನ್ನು ಘೋಷಣೆ ಮಾಡಿದೆ. ಇದರಲ್ಲಿ ತಿಂಗಳಿಗೆ 649 ರೂ. ಬೆಲೆ ಹೊಂದಿದ್ದ ಪ್ಲಾನ್‌ ಇದೀಗ ನಿಮಗೆ ಕೇವಲ 499.ರೂ.ಗಳಿಗೆ ಲಭ್ಯವಾಗಲಿದೆ. ಇದರಿಂದ 23%ರಷ್ಟು ಬೆಲೆ ಕಡಿತವನ್ನು ಕಾಣಬಹುದಾಗಿದೆ. ಇನ್ನು ನೆಟ್‌ಫ್ಲಿಕ್ಸ್‌ ತನ್ನ "ಪ್ರೀಮಿಯಂ" ಪ್ಲಾನ್‌ನಲ್ಲಿಯೂ ಕೂಡ ಬೆಲೆ ಕಡಿತವನ್ನು ಮಾಡಲಾಗಿದೆ. ಇದರಲ್ಲಿ ತಿಂಗಳಿಗೆ 799ರೂ. ಬೆಲೆ ಹೊಂದಿದ್ದ ಪ್ಲಾನ್‌ ಇದೀಗ ತಿಂಗಳಿಗೆ ಕೇವಲ 649.ರೂ.ಬೆಲೆಯನ್ನು ಪಡೆದಿದೆ.

ನೆಟ್‌ಫ್ಲಿಕ್ಸ್‌

ಸದ್ಯ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಲಭ್ಯವಿರುವ ನಾಲ್ಕು ನೆಟ್‌ಫ್ಲಿಕ್ಸ್ ಪ್ಲಾನ್‌ಗಳಲ್ಲಿಯೂ ಕೂಡ ಬೆಲೆ ಇಳಿಕೆಯನ್ನು ಮಾಡಿದೆ. ಇನ್ನು ನೀವು ಈಗಾಗಲೇ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ಹೊಂದಿದ್ದರೆ, ಇಂದಿನಿಂದ ಪ್ರಾರಂಭವಾಗುವ ಅಪ್‌ಗ್ರೇಡ್‌ ಪ್ಲಾನ್‌ಗೆ ನಿಮ್ಮನ್ನು ಅಪ್‌ಗ್ರೇಡ್ ಮಾಡಲಾಗುತ್ತದೆ. ಮುಂದಿನ ಬಾರಿ ನೀವು ಲಾಗಿನ್ ಮಾಡಿದಾಗ, ಹೊಸ ಪ್ಲಾನ್‌ಗಳ ನೋಟಿಫಿಕೇಶನ್‌ ಅನ್ನು ಕಾಣಬಹುದಾಗಿದ್ದು, ಅಪ್‌ಗ್ರೇಡ್ ಅನ್ನು ಖಚಿತಪಡಿಸಲು ಕೇಳಲಿದೆ. ಇದಲ್ಲದೆ ಟಾಪ್ ನೆಟ್‌ಫ್ಲಿಕ್ಸ್ "ಪ್ರೀಮಿಯಂ" ಪ್ಲಾನ್‌ ಹೊಂದಿರುವವರಿಗೆ, ಬೆಲೆಯಲ್ಲಿನ ಹೊಸ ಬದಲಾವಣೆಯು ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ ಜಾರಿಗೆ ಬರಲಿದೆ. ಅವರ ಪ್ರಸ್ತುತ ಬೆಲೆಗಿಂತ ಪ್ರಸ್ತುತ ಯೋಜನೆಗೆ ಆಯ್ಕೆಮಾಡಲು ಬಯಸುವವರಿಗೆ ಇದು ಅನ್ವಯಿಸುತ್ತದೆ.

ನೆಟ್‌ಫ್ಲಿಕ್ಸ್

ಇನ್ನು ನೆಟ್‌ಫ್ಲಿಕ್ಸ್ "ಮೊಬೈಲ್" ಪ್ಲಾನ್‌ಗಳು ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಪ್ರಮಾಣಿತ-ರೆಸಲ್ಯೂಶನ್ (SD) 480p ವಿಷಯವನ್ನು ನೀಡುತ್ತದೆ. ಹಾಗೆಯೇ ಬೇಸಿಕ್‌ ಪ್ಲಾನ್‌ ನಿಮಗೆ ಯಾವುದೇ ಡಿವೈಸ್‌ನಲ್ಲಿ ಕಡಿಮೆ 480p ರೆಸಲ್ಯೂಶನ್‌ಗೆ ನಿರ್ಬಂಧಿಸಿದ್ದರೂ ವೀಕ್ಷಿಸಲು ಅನುಮತಿಸುತ್ತದೆ. "ಸ್ಟ್ಯಾಂಡರ್ಡ್" ನೆಟ್‌ಫ್ಲಿಕ್ಸ್ ಪ್ಲಾನ್‌ ನಿಮಗೆ ಹೆಚ್ಚಿನ ರೆಸಲ್ಯೂಶನ್ (HD) 1080p ವೀಡಿಯೊಗೆ ಅಪ್‌ಗ್ರೇಡ್ ಮಾಡಲು ಅವಕಾಶ ನೀಡಲಿದೆ. ಅಲ್ಲದೆ ನೆಟ್‌ಫ್ಲಿಕ್ಸ್‌ "ಪ್ರೀಮಿಯಂ" ಪ್ಲಾನ್‌ ನಿಮಗೆ 4K ರೆಸಲ್ಯೂಶನ್ ಮತ್ತು ಹೈ-ಡೈನಾಮಿಕ್-ರೇಂಜ್ (HDR) ವೀಡಿಯೊಗೆ ಪ್ರವೇಶವನ್ನು ನೀಡುತ್ತದೆ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಭಾರತದಲ್ಲಿ ತನ್ನ ಬೆಲೆ ಕಡಿತದ ಮೂಲಕ ಅಮೆಜಾನ್‌ ಪ್ರೈಮ್‌ಗೆ ಭರ್ಜರಿ ಸೆಡ್ಡು ಹೊಡೆದಿದೆ. ಏಕೆಂದರೆ ಅಮೆಜಾನ್ ಪ್ರೈಮ್ ವೀಡಿಯೊ ಇಂದಿನಿಂದ ಚಂದಾದಾರಿಕೆ ಬೆಲೆಯನ್ನು ಹೆಚ್ಚಳ ಮಾಡಿದೆ. ಅಮೆಜಾನ್ ಚಂದಾದಾರಿಕೆ ಬೆಲೆಗಳನ್ನು ಹೆಚ್ಚಿಸಿದರೂ ಸಹ ಅಮೆಜಾನ್ ಪ್ರೈಮ್ ಚಂದಾದಾರಿಕೆ ಪ್ರಯೋಜನಗಳು ಒಂದೇ ಆಗಿರುಲಿವೆ. ಅಮೆಜಾನ್ ಪ್ರೈಮ್ ಭಾರತದಲ್ಲಿ ಆರಂಭದಿಂದಲೂ ಬಳಕೆದಾರರಿಗೆ ಉತ್ತಮ ಸೇವೆಗಳನ್ನು ನೀಡಿದೆ. ಈ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಿದೆ.

ಅಮೆಜಾನ್ ಪ್ರೈಮ್

ಅಮೆಜಾನ್ ಪ್ರೈಮ್ ಭಾರತದಲ್ಲಿ ಶುರುವಾದಾಗಿನಿಂದ ಕಂಪನಿಯು ಬಳಕೆದಾರರಿಗೆ ನೀಡುವ ಮೌಲ್ಯವನ್ನು ಮಾತ್ರ ಹೆಚ್ಚಿಸಿದೆ. ಹಾಗೆಯೇ ಗಮನಿಸಬೇಕಾದ ಸಂಗತಿ ಯೆಂದರೆ ಕೆಲವು ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಆದರೆ ಇತ್ತೀಚಿಗೆ ಜಿಯೋ, ಏರ್‌ಟೆಲ್, ವಿ ಟೆಲಿಕಾಂಗಳು ತಮ್ಮ ಪ್ರೀಪೇಯ್ಡ್‌ ಯೋಜನೆಗಳ ದರ ಹೆಚ್ಚಳ ಮಾಡಿದ್ದು, ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಪ್ರಯೋಜನದಲ್ಲಿ ಬದಲಾವಣೆ ಆಗಿವೆ.

Best Mobiles in India

English summary
Netflix just got a lot more affordable in India: Price starts at Rs. 149 per month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X