Home
ಸುದ್ದಿಜಾಲ

Netflix: ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಬಿಗ್‌ ಶಾಕ್‌!..ಇವರಿಗೆ ಇನ್ಮುಂದೆ ಓಟಿಟಿ ವೀಕ್ಷಣೆ ಸುಲಭವಲ್ಲ!

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಭಾರತೀಯರಿಗೆ ಬಿಗ್‌ ಶಾಕ್‌ ನೀಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಭಿನ್ನ ವೆಬ್‌ಸೀರಿಸ್‌, ಚಲನಚಿತ್ರಗಳು ಹಾಗೂ ಶೋ ಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನೆಟ್‌ಫ್ಲಿಕ್ಸ್‌ ಇದೀಗ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.

ಹೌದು, ನೆಟ್‌ಫ್ಲಿಕ್ಸ್‌ ಕುಸಿಯುತ್ತಿರುವ ತನ್ನ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಈಗಾಗಲೇ ನಾನಾ ರೀತಿಯ ಟ್ರಿಕ್ಸ್‌ಗಳನ್ನು ಪ್ರಯೋಗಿಸಿದೆ. ಇದೀಗ ಭಾರತದಲ್ಲಿ ಪಾಸ್‌ವರ್ಡ್‌ ಶೇರ್‌ ಆಯ್ಕೆಯನ್ನು ಎಂಡ್‌ ಮಾಡುವ ಮೂಲಕ ಬಿಗ್‌ ಶಾಕ್‌ ನೀಡಿದೆ. ಇನ್ಮುಂದೆ ನೀವು ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಅನ್ನು ಯಾರಿಗೂ ಶೇರ್‌ ಮಾಡಲು ಸಾಧ್ಯವಾಗುವುದಿಲ್ಲ. ಮನೆಯ ಒಬ್ಬ ಸದಸ್ಯರು ಮಾತ್ರ ಒಂದು ಅಕೌಂಟ್‌ ಅನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಹಾಗಾದ್ರೆ ಪಾಸ್‌ವರ್ಡ್‌ ಶೇರ್‌ ಆಯ್ಕೆಯನ್ನು ನೆಟ್‌ಫ್ಲಿಕ್ಸ್‌ ಎಂಡ್‌ ಮಾಡಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Netflix: ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಬಿಗ್‌ ಶಾಕ್‌!

ನೆಟ್‌ಫ್ಲಿಕ್ಸ್‌ ಸಂಸ್ಥೆ ಇಂದಿನಿಂದ ಭಾರತದಲ್ಲಿ ಪಾಸ್‌ವರ್ಡ್‌ ಶೇರ್‌ ಆಯ್ಕೆಯನ್ನು ಎಂಡ್‌ ಮಾಡಿರುವುದಾಗಿ ಘೋಷಿಸಿದೆ. ಈ ಮೂಲಕ ಸ್ನೇಹಿತರ, ಕುಟುಂಬ ಸದಸ್ಯರ ನೆಟ್‌ಫ್ಲಿಕ್ಸ್‌ ಅಕೌಂಟ್‌ ಬಳಸುತ್ತಿದ್ದವರಿಗೆ ಬಿಗ್‌ ಶಾಕ್‌ ನೀಡಿದೆ. ಇನ್ಮುಂದೆ ನೀವು ಬೇರೆಯವರ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಬಳಸಿಕೊಂಡು ನೆಟ್‌ಫ್ಲಿಕ್ಸ್‌ ಪ್ರವೇಶಿಸಲು ಸಾದ್ಯವಾಗುವುದಿಲ್ಲ. ಬದಲಿಗೆ ನೀವು ನೆಟ್‌ಫ್ಲಿಕ್ಸ್‌ ಬಳಸಬೇಕಾದರೆ ನಿಮ್ಮದೇ ಆದ ಚಂದಾದಾರಿಕೆ ಪ್ಲಾನ್‌ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಮೂಲಕ ನೆಟ್‌ಫ್ಲಿಕ್ಸ್‌ ತನ್ನ ಚಂದದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಮನೆಯ ಸದಸ್ಯರು ಮಾತ್ರ ಒಂದು ಅಕೌಂಟ್‌ ಅನ್ನು ಪ್ರವೇಶಿಸಲು ಸಾದ್ಯವಿದೆ. ನಿಮ್ಮ ಕುಟುಂಬವನ್ನು ಮೀರಿದ ಜನರೊಂದಿಗೆ ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡುವುದನ್ನು ನಿಲ್ಲಿಸಿ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಅವರು ಎಲ್ಲಿದ್ದರೂ ನೆಟ್‌ಫ್ಲಿಕ್ಸ್ ಅನ್ನು ಬಳಸಬಹುದು. ಅಲ್ಲದೆ ಮನೆಯಲ್ಲಿ, ಪ್ರಯಾಣದಲ್ಲಿರುವಾಗ, ರಜಾದಿನಗಳಲ್ಲಿ ಮತ್ತು ಪ್ರೊಫೈಲ್ ಅನ್ನು ವರ್ಗಾಯಿಸಿ ನಿರ್ವಹಿಸುವಂತಹ ಹೊಸ ಫೀಚರ್ಸ್‌ಗಳ ಲಾಭ ಪಡೆದುಕೊಳ್ಳಬಹುದು ಎಂದು ನೆಟ್‌ಫ್ಲಿಕ್ಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ ನಮ್ಮ ಸದಸ್ಯರಿಗೆ ಅನೇಕ ಮನರಂಜನಾ ಆಯ್ಕೆಗಳಿವೆ, ಇದಕ್ಕಾಗಿಯೇ ನಾವು ವಿವಿಧ ರೀತಿಯ ಹೊಸ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸುತ್ತಿದ್ದೇವೆ ಎಂದು ಹೇಳಿದೆ. ಜೊತೆಗೆ ನಿಮ್ಮ ಅಭಿರುಚಿ, ಮನಸ್ಥಿತಿ ಅಥವಾ ಭಾಷೆ ಮತ್ತು ನೀವು ಯಾರೊಂದಿಗೆ ವೀಕ್ಷಿಸುತ್ತಿದ್ದರೂ, ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಲು ಯಾವಾಗಲೂ ತೃಪ್ತಿಕರವಾದ ಭಾವನೆ ಇರಲಿದೆ ಎಂದು ಕಂಪೆನಿ ಹೇಳಿದೆ.

Netflix: ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಬಿಗ್‌ ಶಾಕ್‌!

ಇನ್ನು ಪಾಸ್‌ವರ್ಡ್‌ ಶೇರ್‌ ಆಯ್ಕೆಯನ್ನು ಎಂಡ್‌ ಮಾಡಿರುವುದು ಭಾರತದಲ್ಲಿ ಮಾತ್ರವೇ ಮೊದಲೇನಲ್ಲ. ಈಗಾಗಲೇ ನೆಟ್‌ಫ್ಲಿಕ್ಸ್‌ ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ್, ಮೆಕ್ಸಿಕೋ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರ್‌ ಮೇಲೆ ಕಳೆದ ಮೇ ತಿಂಗಳಲ್ಲಿ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ನೆಟ್‌ಫ್ಲಿಕ್ಸ್‌ ಕಂಪೆನಿ ಜಾಗತಿಕವಾಗಿ ಸುಮಾರು 6 ಮಿಲಿಯನ್ ಚಂದಾದಾರರನ್ನು ಪಡೆದುಕೊಳ್ಳಲು ಸಾದ್ಯವಾಗಿದೆ ಎಂದು ಹೇಳಲಾಗಿದೆ.

ಇದಲ್ಲದೆ ನೆಟ್‌ಫ್ಲಿಕ್ಸ್‌ ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 238 ಮಿಲಿಯನ್ ಚಂದಾದಾರರೊಂದಿಗೆ $1.5 ಶತಕೋಟಿ ಲಾಭ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಇದೆಲ್ಲದರ ಪರಿಣಾಮ ನೆಟ್‌ಫ್ಲಿಕ್ಸ್‌ ತನ್ನ ಪಾಸ್‌ವರ್ಡ್‌ ಶೇರ್‌ ಆಯ್ಕೆಯನ್ನು ಎಂಡ್‌ ಮಾಡಿದೆ. ಅಲ್ಲದೆ ಈ ನೀತಿಯು ಪ್ರಪಂಚದಾದ್ಯಂತ ತನ್ನ ಎಲ್ಲಾ ಮಾರುಕಟ್ಟೆಗಳಿಗೆ ವಿಸ್ತರಿಸುತ್ತದೆ ಎಂದು ಹೇಳಿದೆ. ಒಟ್ಟಾರೆ ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೇ ಈ ನೀತಿಯ ಮೂಲ ಉದ್ದೇಶವಾಗಿದೆ.

Best Mobiles in India

English summary
Netflix: Netflix announced that it has ended password sharing in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+