UPI ಆಟೋಪೇ ಪಾವತಿ ಫೀಚರ್ಸ್ ಪರಿಚಯಿಸಿದ ನೆಟ್‌ಫ್ಲಿಕ್ಸ್!
ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ದಿನದಿಂದ ದಿನಕ್ಕೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಇವುಗಳಲ್ಲಿ ನೆಟ್‌ಫ್ಲಿಕ್ಸ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇನ್ನ ನೆಟ್‌ಫ್ಲಿಕ್ಸ್ ತನ್ನ ಚಂದಾದಾರಿಕೆ ಹಲವು ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್ ಭಾರತದಲ್ಲಿ UPI ಆಟೋಪೇ ಪಾವತಿಗಳಿಗೆ ಬೆಂಬಲವನ್ನು ನೀಡುತ್ತಿದೆ. ಹೊಸ UPI ಆಟೋಪೇ ವೈಶಿಷ್ಟ್ಯವು ಬಳಕೆದಾರರು ತಮ್ಮ ಮಾಸಿಕ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಸ್ವಯಂಚಾಲಿತವಾಗಿ ಪಾವತಿಸಲು ಅನುವು ಮಾಡಿಕೊಡುತ್ತದೆ.

ಹೌದು, ನೆಟ್‌ಫ್ಲಿಕ್ಸ್ ಇನ್ಮುಂದೆ UPI ಆಟೋಪೇ ಪಾವತಿಯನ್ನು ಬೆಂಬಲಿಸಲಿದೆ. ಇದರಿಂದಾಗಿ ನೀವು ಹಸ್ತಚಾಲಿತವಾಗಿ ಪಾವತಿ ಮಾಡಬೇಕಾಗಿಲ್ಲ, ನೀವು ಆಟೋಪೇಗೆ ಬದಲಾಯಿಸಿದರೆ, ನಿಮ್ಮ ಯುಪಿಐ ಖಾತೆಯಿಂದ ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಆಟೋಪೇ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತು netflix.com ನಲ್ಲಿ ಲಭ್ಯವಿರುತ್ತದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರು ಈ ವೈಶಿಷ್ಟ್ಯವನ್ನು ಪಡೆಯಬಹುದು. ಹಾಗಾದ್ರೆ ನೆಟ್‌ಫ್ಲಿಕ್ಸ್‌ನಲ್ಲಿ UPI ಆಟೋಪೇ ಪಾವತಿ ಫೀಚರ್ಸ್ ಅನ್ನು ಆಕ್ಟಿವ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಯುಪಿಐ ಆಟೋಪೇ ಪಾವತಿ ಫೀಚರ್ಸ್ ಬಳಕೆದಾರರಿಗೆ ಹಸ್ತಚಾಲಿತವಾಗಿ ಹಣ ಪಾವತಿ ಮಾಡುವ ಶ್ರಮವನ್ನು ತಪ್ಪಿಸಲಿದೆ. ಇಂದಿನಿಂದ, ಭಾರತದಲ್ಲಿ ನೆಟ್ಫ್ಲಿಕ್ಸ್ ಖಾತೆಗೆ ಸೈನ್ ಅಪ್ ಮಾಡುವ ಯಾರಾದರೂ ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಆಟೋಪೇ ಬಳಸಿ ತಮ್ಮ ಮಾಸಿಕ ಚಂದಾದಾರಿಕೆಯನ್ನು ಪಾವತಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಸದಸ್ಯರು ತಮ್ಮ ಖಾತೆ ವಿಭಾಗದಲ್ಲಿ (ಬ್ರೌಸರ್‌ನಲ್ಲಿ ಅಥವಾ ಆಂಡ್ರಾಯ್ಡ್ ಆಪ್ ಮೂಲಕ) "ಬಿಲ್ಲಿಂಗ್ ವಿವರಗಳಿಗೆ" ಹೋಗುವ ಮೂಲಕ UPI ಆಟೋಪೇಗೆ ಬದಲಾಯಿಸಬಹುದು ಅನ್ನೊ ಮಾತನ್ನು ನೆಟ್ಫ್ಲಿಕ್ಸ್ ಇಂಡಿಯಾದ ಪಾವತಿಗಳ ಮುಖ್ಯಸ್ಥ ಗುಂಜನ್ ಪ್ರಧಾನ್ ಹೇಳಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಯುಪಿಐ ಆಟೋಪೇ ಪಾವತಿಗೆ ಸೈನ್ ಅಪ್ ಮಾಡುವುದು ಹೇಗೆ?
ಹಂತ:1 ಇಮೇಲ್ ಐಡಿ ಬಳಸಿ ನಿಮ್ಮ ನೆಟ್ಫ್ಲಿಕ್ಸ್ ಖಾತೆಯನ್ನು ಕ್ರಿಯೆಟ್ ಮಾಡಿ.
ಹಂತ:2 ನಂತರ, ನೀವು ನಿಮ್ಮ ವೆಬ್ ಬ್ರೌಸರ್‌ನಿಂದ ಸೈನ್ ಅಪ್ ಮಾಡುತ್ತಿದ್ದರೆ 499ರೂ, 699 ಮತ್ತು 799 ರೂಗಳ ನಡುವಿನ ಚಂದಾದಾರಿಕೆ ಪ್ಲ್ಯಾನ್ ಆಯ್ಕೆ ಮಾಡಬಹುದು.
ಹಂತ:3 ನೀವು ಆಂಡ್ರಾಯ್ಡ್ ಮೊಬೈಲ್ ಆಪ್ ಬಳಸಿ ಸಹಿ ಮಾಡುತ್ತಿದ್ದರೆ, 199ರೂ,ಗೆ ಲಭ್ಯವಿರುವ ಮೊಬೈಲ್ ಪ್ಲಾನ್ ಅನ್ನು ನೀವು ಆಯ್ಕೆ ಮಾಡಬಹುದು.
ಹಂತ:4 ನಿಮ್ಮ ಯೋಜನೆಯನ್ನು ನೀವು ಆಯ್ಕೆ ಮಾಡಿದ ನಂತರ, ಪಾವತಿ ವಿಧಾನವನ್ನು ಸೆಟ್ ಮಾಡಲು ಕೇಳಲಾಗುತ್ತದೆ.
ಹಂತ:5 ಪಾವತಿ ಮಾಡಲು ಅಥವಾ ನಿಮ್ಮ UPI ಖಾತೆಯ ವಿವರಗಳನ್ನು ನಮೂದಿಸಲು ನೀವು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಬಹುದು.
ಹಂತ:6 ನೀವು UPI ಆಟೋಪೇ ಆಯ್ಕೆಯನ್ನು ಆರಿಸಿದಾಗ, ನಿಮ್ಮ Paytm ಅಥವಾ UPI ಐಡಿಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. UPI ಆಟೋಪೇ ಯುಪಿಐನೊಂದಿಗೆ ಪಾವತಿಸಲು ಹೊಸ ಮಾರ್ಗವಾಗಿದ್ದು ಅದು ನಿಮಗೆ ಪ್ರತಿ ತಿಂಗಳು ಸ್ವಯಂಚಾಲಿತವಾಗಿ ಶುಲ್ಕ ವಿಧಿಸುತ್ತದೆ.

ಈ ಹೊಸ ಪಾವತಿ ವಿಧಾನವು ನೆಟ್‌ಫ್ಲಿಕ್ಸ್‌ಗೆ ಸಂಪರ್ಕದಲ್ಲಿರಲು ಬಳಕೆದಾರರಿಗೆ ಅನುಕೂಲಕರವಾಗಿಸುತ್ತದೆ. ಅವರು ಹಸ್ತಚಾಲಿತವಾಗಿ ಪಾವತಿ ಮಾಡಬೇಕಾಗಿಲ್ಲ. ಜನರು ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ಮರೆಯುತ್ತಾರೆ ಮತ್ತು ಇದರಿಂದಾಗಿ ಅವರ ನೆಟ್‌ಫ್ಲಿಕ್ಸ್ ಖಾತೆಗೆ ಪ್ರವೇಶವನ್ನು ಕಳೆದುಕೊಳ್ಳುತ್ತಾರೆ. ಆದರೆ ಬಳಕೆದಾರರು ನೆಟ್‌ಫ್ಲಿಕ್ಸ್ ಯುಪಿಐ ಆಟೋಪೇಗೆ ಬದಲಾದರೆ, ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುವುದರಿಂದ ಅವರು ಎಂದಿಗೂ ಮಾಸಿಕ ಪಾವತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.


Click it and Unblock the Notifications








