ನೆಟ್‌ಫ್ಲಿಕ್ಸ್‌ನಲ್ಲಿ ಪ್ಲೇ ಸಮ್ಥಿಂಗ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ OTT ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಸದ್ಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲ ಮುಂಚೂಣಿಯಲ್ಲಿರುವ ಅಮೆಜಾನ್‌ ಪ್ರೈಮ್ ಗೆ ನೇರ ಸ್ಪರ್ಧಿ ಎಂದೇ ಬಿಂಬಿತವಾಗಿರುವ ತಾಣವೆಂದರೇ ಅದು ನೆಟ್‌ಫ್ಲಿಕ್ಸ್‌. ನೆಟ್‌ಫ್ಲಿಕ್ಸ್‌ ತಾಣವು ಚಂದಾದಾರರಿಗೆ ವೆಬ್‌ ಸರಣಿ ಹಾಗೂ ಚಲನಚಿತ್ರಗಳ ಕಂಟೆಂಟ್‌ ಅನ್ನು ಒದಗಿಸುತ್ತದೆ. ತಿಂಗಳ ಹಾಗೂ ವಾರ್ಷಿಕ ಚಂದಾದಾರಿಕೆ ಯೋಜನೆಗಳ ಆಯ್ಕೆ ಹೊಂದಿದೆ. ಬಳಕೆದಾರರಿಎಗ ಅನುಕೂಲವಾಗುವ ಹಲವು ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ.

ನೆಟ್‌ಫ್ಲಿಕ್‌

ಹೌದು, ನೆಟ್‌ಫ್ಲಿಕ್‌ ಜನಪ್ರಿಯ ಒಟಿಟಿ ವೀಡಿಯೊ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇನ್ನು ನೆಟ್ಫ್ಲಿಕ್ಸ್ ಕಳೆದ ವಾರ "ಪ್ಲೇ ಸಮ್ಥಿಂಗ್" ಎಂಬ ಹೊಸ ಫಿಚರ್ಸ್‌ ಅನ್ನು ಬಿಡುಗಡೆ ಮಾಡಿದೆ. ಇದು ಏನು ನೋಡಬೇಕೆಂದು ನಿರ್ಧರಿಸಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಫೀಚರ್ಸ್‌ ನಿಮ್ಮ ಅಭಿರುಚಿಯನ್ನು ಆಧರಿಸಿ ಚಲನಚಿತ್ರ ಅಥವಾ ಡಿಸ್‌ಪ್ಲೇಯನ್ನು ಪ್ಲೇ ಮಾಡುತ್ತದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ಲೇ ಸಮ್ಥಿಂಗ್ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌ನಲ್ಲಿ

ನೆಟ್‌ಫ್ಲಿಕ್ಸ್‌ನಲ್ಲಿ ನೀವು ಪ್ಲೇ ಸಮ್ಥಿಂಗ್ ಅನ್ನು ಆಯ್ಕೆ ಮಾಡಿದಾಗ, ನೆಟ್‌ಫ್ಲಿಕ್ಸ್ ಹೊಸ ಸರಣಿ ಅಥವಾ ಚಲನಚಿತ್ರ ಅಥವಾ ನೀವು ಈಗಾಗಲೇ ವೀಕ್ಷಿಸುತ್ತಿರುವ ಯಾವುದನ್ನಾದರೂ ಪ್ಲೇ ಮಾಡುತ್ತದೆ. ಆದರೆ ನೀವು ಈಗಾಗಲೇ ಪೂರ್ಣಗೊಳಿಸಿದ ಸರಣಿ ಅಥವಾ ಚಲನಚಿತ್ರವನ್ನು ಇದು ಪ್ಲೇ ಮಾಡುವುದಿಲ್ಲ. ನೀವು ನೋಡುವ ಅಭ್ಯಾಸವನ್ನು ಆಧರಿಸಿ ನೀವು ಇಷ್ಟಪಡುತ್ತೀರಿ ಎಂದು ಭಾವಿಸುವ ವಿಷಯವನ್ನು ಇದು ನಿಮಗೆ ತೋರಿಸುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಏನು ನೋಡಬೇಕೆಂದು ನಿಮಗೆ ತಿಳಿಯದೇ ಹೋದಾಗ ಈ ಫೀಚರ್ಸ್‌ ನಿಮಗೆ ಸೂಕ್ತವಾಗಿರುತ್ತದೆ.

ಫೀಚರ್ಸ್‌

ಈ ಫೀಚರ್ಸ್‌ ನೀವು ನೋಡುವದಕ್ಕಿಂತ ಭಿನ್ನವಾದದ್ದನ್ನು ಪ್ಲೇ ಮಾಡುವುದಿಲ್ಲ ಆದರೆ ಬದಲಾಗಿ ನಿಮಗೆ ಒಂದೇ ರೀತಿಯ ವಿಷಯವನ್ನು ತೋರಿಸುತ್ತದೆ. ಇದರಿಂದ ನಿಮ್ಮ ಮನಸ್ಸಿಗೆ ಅತಿ ಹೆಚ್ಚು ಇಷ್ಟವಾದ ವಿಷಯವನ್ನು ಪ್ಲೇ ಮಾಡಲು ಪ್ರಯತ್ನಿಸುತ್ತದೆ. ಇನ್ನು ಪ್ಲೇ ಸಮ್ಥಿಂಗ್ ನೆಟ್‌ಫ್ಲಿಕ್ಸ್ ಟಿವಿ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದೆ. ಕಂಪನಿಯು ಇದನ್ನು ಈ ವರ್ಷ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಪರೀಕ್ಷಿಸಲು ಯೋಜಿಸಿದೆ. ನಿಮ್ಮ ಟಿವಿಯಲ್ಲಿ ನೀವು ನೆಟ್‌ಫ್ಲಿಕ್ಸ್ ಹೊಂದಿದ್ದರೆ ಮತ್ತು ಪ್ಲೇ ಸಮ್ಥಿಂಗ್ ಅನ್ನು ಪ್ರಯತ್ನಿಸಲು ಬಯಸಿದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ಲೇ ಸಮ್ಥಿಂಗ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಪ್ಲೇ ಸಮ್ಥಿಂಗ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ಹಂತ:1 ನಿಮ್ಮ ಟಿವಿಯಲ್ಲಿ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ.

ಹಂತ:2 ನಿಮ್ಮ ಪ್ರೊಫೈಲ್‌ನ ಅಡಿಯಲ್ಲಿರುವ ಪ್ಲೇ ಸಮ್ಥಿಂಗ್ ಬಟನ್ ಒತ್ತಿರಿ.

ಹಂತ:3 ಇದು ಹೊಸ ಸರಣಿ ಅಥವಾ ಚಲನಚಿತ್ರವನ್ನು ಪ್ಲೇ ಮಾಡಲು ಪ್ರಾರಂಭಿಸುತ್ತದೆ.

ಹಂತ:4 ಮುಂದಿನ ಪ್ರದರ್ಶನಕ್ಕೆ ತೆರಳಲು ನೀವು ‘Play Something Else' ಬಟನ್ ಒತ್ತಿರಿ.

ಹಂತ:5 ಈ ಫೀಚರ್ಸ್‌ ಅನ್ನು ಆಫ್ ಮಾಡಲು, ಸ್ಕ್ರೀನ್‌ ಮೇಲಿನ ಎಡ ಮೂಲೆಯಲ್ಲಿರುವ ಎಕ್ಸಿಟ್‌ ಬಟನ್ ಒತ್ತಿರಿ.

Best Mobiles in India

Read more about:
English summary
Netflix recently launched a new feature called “Play Something”: Here's how to use it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X