ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿಲು ನೆಟ್‌ಫ್ಲಿಕ್ಸ್‌ ಸಿದ್ಧತೆ!

|

ಜನಪ್ರಿಯ ವೀಡಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಕೂಡ ಒಂದಾಗಿದೆ. ಈಗಾಗಲೇ ತನ್ನ ಹಲವು ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿದೆ. ಇದೀಗ ನೆಟ್‌ಫ್ಲಿಕ್ಸ್ ಷಫಲ್ ಪ್ಲೇ ಫೀಚರ್ಸ್‌ ಅನ್ನು 2021 ರ ಮೊದಲಾರ್ಧದಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ತಲುಪಿಸಲು ಪ್ಲ್ಯಾನ್‌ ರೂಪಿಸುತ್ತಿದೆ. ಕಳೆದ ವರ್ಷ ಆಗಸ್ಟ್‌ನಿಂದ, ನೆಟ್‌ಫ್ಲಿಕ್ಸ್ ಈ ಫೀಚರ್ಸ್‌ ಅನ್ನು ಶೀರ್ಷಿಕೆಗಳ ಆಧಾರದ ಮೇಲೆ ವೀಕ್ಷಕರಿಗೆ ಚಲನಚಿತ್ರ ಅಥವಾ ಟಿವಿ ಸರಣಿಯನ್ನು ಪ್ಲೇ ಮಾಡುವ ಬಟನ್ ಮೂಲಕ ಪರೀಕ್ಷಿಸುತ್ತಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಸಂಸ್ಥೆ ತನ್ನ ಹೊಸ ಷಫಲ್‌ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದು ಬ್ರೌಸ್ ಮತ್ತು ವರ್ಸಸ್‌ಗಾಗಿ ಆಯ್ಕೆಮಾಡಿದ ಶೀರ್ಷಿಕೆಯನ್ನು ತ್ವರಿತವಾಗಿ ನೋಡುವ ಆಯ್ಕೆಯನ್ನು ಸದಸ್ಯರಿಗೆ ನೀಡುತ್ತದೆ. ಅಲ್ಲದೆ ವೀಕ್ಷಕರು ತಾವು ಬ್ರೌಸಿಂಗ್ ಅನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಬಯಸುವ ಪ್ಲಾಟ್‌ಫಾರ್ಮ್‌ಗೆ ಸೂಚಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನ ‍ಷಫಲ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಕಳೆದ ಆಗಸ್ಟ್ 2020 ರಿಂದ ಪರೀಕ್ಷಿಸಲಾಗುತ್ತಿರುವ ಷಫಲ್ ಪ್ಲೇ ಫೀಚರ್ಸ್‌ ಅನ್ನು ಎಲ್ಲರಿಗೂ ಪರಿಚಯಿಸಲು ಮುಂದಾಗಿದೆ. ಇದು ಕೆಲವು ಬಳಕೆದಾರರಿಗೆ ಪ್ರೊಫೈಲ್ ಐಕಾನ್ ಕೆಳಗೆ ನೆಟ್‌ಫ್ಲಿಕ್ಸ್ ಹೋಮ್ ಸ್ಕ್ರೀನ್‌ನಲ್ಲಿ ದೊಡ್ಡ ಗುಂಡಿಯಾಗಿ ಲಭ್ಯವಿದೆ. ಇದು ಟಿವಿ ಅಪ್ಲಿಕೇಶನ್‌ನ ಸೈಡ್‌ಬಾರ್ ನ್ಯಾವಿಗೇಷನ್‌ನಲ್ಲಿಯೂ ಲಭ್ಯವಿದೆ. ಅಲ್ಲದೆ ಇದನ್ನು ಟಿವಿ ಡಿವೈಸ್‌ಗಳಲ್ಲಿ ಮಾತ್ರ ಪರೀಕ್ಷಿಸುತ್ತಿದೆ. ಷಫಲ್ ಪ್ಲೇ, ಮೂಲಕ ವೀಕ್ಷಕರು ವೀಕ್ಷಿಸಲು ಶೀರ್ಷಿಕೆಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ, ಇದು ನೆಟ್‌ಫ್ಲಿಕ್ಸ್‌ನ ವೈಯಕ್ತೀಕರಣ ಅಲ್ಗಾರಿದಮ್ ಆಗಿದೆ.

ಷಫಲ್

ಇನ್ನು ಈ ಫೀಚರ್ಸ್‌ನ ವಿಶೇಷತೆ ಎಂದರೆ ವೀಕ್ಷಕರು ಏನು ನೋಡಬೇಕು ಎಂದು ಕೊಳ್ಳುತ್ತಾರೋ ಅದನ್ನು ಷಫಲ್ ಪ್ಲೇ ಮೂಲಕ ಪ್ರಯತ್ನಿಸಬಹುದು. ನಾವು ನೆಟ್‌ಫ್ಲಿಕ್ಸ್‌ನಲ್ಲಿ ಎಲ್ಲವನ್ನೂ ಕಲೆಸುತ್ತೇವೆ ಮತ್ತು ನಿಮ್ಮ ಅಭಿರುಚಿಯ ಆಧಾರದ ಮೇಲೆ ನೀವು ನೋಡಬೇಕಾದ ವಸ್ತುಗಳನ್ನು ಹುಡುಕುತ್ತೇವೆ. "ಈಗ ಪ್ರಯತ್ನಿಸಿ" ಎಂಬ ಪದಗಳೊಂದಿಗೆ ಷಫಲ್ ಬಟನ್ ಗೋಚರಿಸುತ್ತದೆ. ಸದ್ಯ ಈ ಫೀಚರ್ಸ್‌ಗೆ ಬಳಕೆದಾರರ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ ಎಂದು ಕಂಪನಿ ಹೇಳಿದೆ, ಆದರೂ ಇದುವರೆಗೆ ಎಷ್ಟು ಬಳಕೆದಾರರನ್ನು ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ ಎಂದು ನಮೂದಿಸಿಲ್ಲ.

ನೆಟ್ಫ್ಲಿಕ್ಸ್

ನೆಟ್ಫ್ಲಿಕ್ಸ್ ಇಂತಹ ಫೀಚರ್ಸ್‌ ಅನ್ನು ಪ್ರಯೋಗಿಸುತ್ತಿರುವುದು ಇದೇ ಮೊದಲಲ್ಲ. ಸದ್ಯ ಇದರಲ್ಲಿ ಯಶಸ್ವಿ ಆಗುವ ಸಾದ್ಯತೆ ಇದೆ. ಇದಲ್ಲದೆ, 2020 ರ ಕೊನೆಯಲ್ಲಿ ತನ್ನ ಜಾಗತಿಕ ಚಂದಾದಾರರ ಪಟ್ಟಿ 200 ಮಿಲಿಯನ್ ದಾಟಿದೆ ಎಂದು ನೆಟ್ಫ್ಲಿಕ್ಸ್ ತನ್ನ ಗಳಿಕೆಯ ವರದಿಯಲ್ಲಿ ಉಲ್ಲೇಖಿಸಿದೆ. ಇದು ತ್ರೈಮಾಸಿಕದಲ್ಲಿ ಸುಮಾರು 8.5 ಮಿಲಿಯನ್ ಗ್ರಾಹಕರನ್ನು ಸೇರಿಸಿದೆ.

Most Read Articles
Best Mobiles in India

English summary
Netflix Shuffle Play feature is planned to roll out to all users globally in the first half of 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X