Home
ಸುದ್ದಿಜಾಲ

ರಷ್ಯಾ-ಉಕ್ರೇನ್‌ ವಾರ್‌: ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ ನೆಟ್‌ಫ್ಲಿಕ್ಸ್‌!

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಸೈನಿಕರ ದಾಳಿಗೆ ಉಕ್ರೇನ್‌ ನಲುಗಿ ಹೋಗಿದೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ಇದಕ್ಕೆ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಹೊರತಾಗಿಲ್ಲ. ಉಕ್ರೇನ್‌ ಮೇಲಿನ ರಷ್ಯಾ ದಾಳಿ ಖಂಡಿಸಿ ಈಗಾಗಲೇ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಇದೀಗ ಜನಪ್ರಿಯ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿದೆ. ರಷ್ಯಾದ ಮೇಲೆ ಈಗಾಗಲೇ ಹಲವು ದೇಶಗಳು ಅನೇಕ ನಿರ್ಭಂಧಗಳನ್ನು ವಿಧಿಸಿವೆ. ಇದೀಗ ನೆಟ್‌ಫ್ಲಿಕ್ಸ್ ಮತ್ತು ಟಿಕ್‌ಟಾಕ್ ರಷ್ಯಾದಲ್ಲಿ ತಮ್ಮ ಮನರಂಜನಾ ಸೇವೆಗಳು ಸೇರಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿವೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ರಷ್ಯಾದಲ್ಲಿ ಸ್ಥಗಿತಗೊಳಿಸುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಇಂಕ್ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ರಷ್ಯಾ ಉಕ್ರೇನ್‌ ನಡುವಿನ ಯುದ್ಧದ ಸಂದರ್ಭದಲ್ಲಿ ಈ ನಿರ್ಣಯ ಕೈಗೊಂಡಿದೆ. ಸದ್ಯ ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ತನ್ನ ಎಲ್ಲಾ ಭವಿಷ್ಯದ ಯೋಜನೆಗಳು ಮತ್ತು ಸ್ವಾಧೀನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಲ್ಲದೆ ನೆಟ್‌ಫ್ಲಿಕ್ಸ್ ಈ ಹಿಂದೆ ತನ್ನ ರಷ್ಯಾದ ಸೇವೆಗೆ ರಾಜ್ಯ-ಚಾನೆಲ್‌ಗಳನ್ನು ಸೇರಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿತ್ತು.

ಪಾಶ್ಚಿಮಾತ್ಯ

ಈಗಾಗಲೇ ರಷ್ಯಾದ ವಿರುದ್ದ ಪಾಶ್ಚಿಮಾತ್ಯ ಆರ್ಥಿಕ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಬಹುರಾಷ್ಟ್ರೀಯ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿವೆ. ರಷ್ಯಾವನ್ನು ಪ್ರಮುಖ ಹಣಕಾಸು ಸೇವೆಗಳು, ತಂತ್ರಜ್ಞಾನ ಮತ್ತು ವಿವಿಧ ಗ್ರಾಹಕ ಉತ್ಪನ್ನಗಳಿಂದ ಕಡಿತಗೊಳಿಸಿವೆ. ಇದೀಗ ಆನ್‌ಲೈನ್ ಮನರಂಜನೆ ಮತ್ತು ಮಾಹಿತಿಯ ಮೇಲೆ ನಿರ್ಬಂಧ ಹೇರುವ ಮೂಲಕ ರಷ್ಯಾ ಜನರು ಮನರಂಜನೆಯಿಂದ ದೂರು ಇರುವಂತೆ ಮಾಡುವುದಕ್ಕೆ ಪ್ಲಾನ್‌ ನಡೆಸಲಾಗಿದೆ. ಈಗಾಗಲೇ ಜಾಗತಿಕವಾಗಿ ಆಕ್ರೋಶ ಎದುರಿಸುತ್ತರುವ ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಿದರೂ ಆಶ್ಚರ್ಯವೇನಿಲ್ಲ.

ಈಗಾಗಲೇ

ಈಗಾಗಲೇ ಟಕ್‌ ವಲಯದ ಅನೇಕ ಕಂಪೆನಿಗಳು ಕೂಡ ರಷ್ಯಾದಲ್ಲಿ ನಿರ್ಬಂದ ಹೇರಿವೆ. ಅದರಲ್ಲಿ US ಕ್ರೆಡಿಟ್ ಕಾರ್ಡ್ ಕಂಪನಿಗಳು Visa, Mastercard, ಮತ್ತು American Express ಎಲ್ಲಾ ಕಾರ್ಡ್‌ ಸೇವೆಗಳು ರಷ್ಯಾದಲ್ಲಿ ಸೇವೆಯನ್ನು ಕಡಿತಗೊಳಿಸಿವೆ. ಇನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟರ್ ಚಿಪ್‌ಗಳ ಎರಡರ ಪ್ರಮುಖ ಪೂರೈಕೆದಾರ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್, ರಷ್ಯಾ ದೇಶಕ್ಕೆ ಉತ್ಪನ್ನ ಸಾಗಣೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಈಗಾಗಲೇ ಆಪಲ್, ಮೈಕ್ರೋಸಾಫ್ಟ್, ಇಂಟೆಲ್ ಮತ್ತು ಡೆಲ್‌ನಂತಹ ಇತರ ದೊಡ್ಡ ಟೆಕ್ ಕಂಪನಿಗಳನ್ನು ಕೂಡ ಇದೇ ಹಾದಿಯನ್ನು ಅನುಸರಿಸಿವೆ.

ನೆಟ್‌ಫ್ಲಿಕ್ಸ್

ಇನ್ನು ನೆಟ್‌ಫ್ಲಿಕ್ಸ್ ಭಾನುವಾರದಿಂದ ತನ್ನ ಸೇವೆಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಹೇಳಿಲ್ಲ. ಬದಲಿಗೆ "ನೆಲದಲ್ಲಿನ ಪರಿಸ್ಥಿತಿಗಳನ್ನು" ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆಯನ್ನು ನೀಡಿದೆ. ಇದಲ್ಲದೆ ಚೀನಾ ಮೂಲದ ಟಿಕ್‌ಟಾಕ್ ಕೂಡ ರಷ್ಯಾದ ಬಳಕೆದಾರರು ಇನ್ನು ಮುಂದೆ ಹೊಸ ವೀಡಿಯೊಗಳು ಅಥವಾ ಲೈವ್‌ಸ್ಟ್ರೀಮ್‌ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪ್ರಪಂಚದ ಬೇರೆಡೆಯಿಂದ ಶೇರ್‌ ಮಾಡಲಾದ ವೀಡಿಯೋಗಳನ್ನು ಟಿಕ್‌ಟಾಕ್‌ನಲ್ಲಿ ನೋಡಲು ಸಾಧ್ಯವಾಗದಂತೆ ರಷ್ಯಾದಲ್ಲಿ ಕ್ರಮ ಕೈಗೊಂಡಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಈಗಾಗಲೇ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ರಷ್ಯಾ ಉಕ್ರೇನ್‌ ನಡುವಿನ ಯುದ್ಧದ ಸಂಧರ್ಭದಲ್ಲಿ ತನ್ನ ಹೀಟ್‌ ಮ್ಯಾಪ್‌ ಫೀಚರ್ಸ್‌ ಅನ್ನು ಆಪ್‌ ಮಾಡುವುದಾಗಿ ಹೇಳಿದೆ. ಇದರಿಂದ ಉಕ್ರೇನ್‌ನ ನಿರ್ದಿಷ್ಟ ಸ್ಥಳಗಳಲ್ಲಿ ಎಷ್ಟು ಸ್ನ್ಯಾಪ್‌ಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಕ್ರಮವು "ಸುರಕ್ಷತಾ ಮುನ್ನೆಚ್ಚರಿಕೆ" ಎಂದು ಸ್ನ್ಯಾಪ್‌ಚಾಟ್ ಹೇಳಿದೆ. ಉಕ್ರೇನಿಯನ್ನರು ಸಲ್ಲಿಸಿದ ಸ್ನ್ಯಾಪ್‌ಗಳ ಕ್ಯುರೇಟೆಡ್ ಸಾರ್ವಜನಿಕ ಫೀಡ್ ಇನ್ನೂ ಪ್ಲಾಟ್‌ಫಾರ್ಮ್‌ನಲ್ಲಿ ಇರುತ್ತದೆ ಎಂದು ವರದಿಯಾಗಿದೆ.

Best Mobiles in India

English summary
Netflix Suspended its services in Russia due to the ongoing war
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+