ಮಂಗಳನಿಂದ ಸೂರ್ಯನ ಚಿತ್ರಣ ಸೆರೆ: ಅಪರೂಪದ ಚಿತ್ರಗಳು

Written By:

ಸೌರವ್ಯೂಹದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಗ್ರಹ ಅಂದ್ರೆ ಮಂಗಳ ಗ್ರಹ. ಮಂಗಳ ಗ್ರಹ ಯಾವ ಕಾರಣಕ್ಕೆ ಅಷ್ಟೊಂದು ಫೇಮಸ್‌ ಅಂದ್ರೆ ಒಂದು ರೀತಿಯಲ್ಲಿ ನಾಸಾ ವಿಜ್ಞಾನಿಗಳು ಅಲ್ಲಿ ವಾಸಿಸಲು ಯೋಗ್ಯವಾಗಿರುವುದರ ಬಗ್ಗೆ ಸಂಶೋಧನೆ ಕೈಗೊಂಡಿರುವುದರಿಂದ. ಹಾಗೂ ಏಲಿಯನ್‌ಗಳು ಮಂಗಳ ಗ್ರಹದಲ್ಲಿ ಪತ್ತೆಯಾಗಿರುವುದರ ಪಿತೂರಿ ಸಿದ್ದಾಂತಗಳಿಂದ. ಆದ್ರೆ ವಾಸ್ತವವಾಗಿ ಮಂಗಳ ಗ್ರಹ ವಿಜ್ಞಾನಿಗಳಿಗೆ ಎಲ್ಲಾ ಸೌರವ್ಯೂಹದ ಅಧ್ಯಯನಕ್ಕೆ ಈಗ ಅತಿ ಹೆಚ್ಚು ಸಹಾಯ ಮಾಡುವ ಗ್ರಹವಾಗಿದೆ. ಪ್ರಸ್ತುತದ ಹೊಸ ವಿಷಯ ಅಂದ್ರೆ ಮಂಗಳ ಗ್ರಹದಿಂದ ಸೂರ್ಯನ ಮೇಲ್ಮೈನ ಅದ್ಭುತ ಫೋಟೋಗಳನ್ನು ತೆಗೆಯಲಾಗಿದೆ. ಅವು ಹೇಗಿವೆ, ವಿಶೇಷತೆ ಏನು ಎಂಬಿತ್ಯಾದಿ ಮಾಹಿತಿಯನ್ನು ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕ್ಯೂರಿಯಾಸಿಟಿ ರೋವರ್‌

1

ಕ್ಯೂರಿಯಾಷಿಟಿ ರೋವರ್‌ ಪ್ರಸ್ತುತದಲ್ಲಿ ಅದನ್ನು Aeolis Mons (ಮೌಂಟ್‌ ಶಾರ್ಪ್‌) ಎಂದು ಕರೆಯಲಾಗುತ್ತದೆ. ಕ್ಯೂರಿಯಾಷಿಟಿ ರೋವರ್‌ ಮಂಗಳ ಗ್ರಹದಲ್ಲಿದ್ದು ಕೇವಲ ಮಂಗಳ ಗ್ರಹದ ಅಧ್ಯಯನಕ್ಕೆ ಮಾತ್ರವಲ್ಲದೇ ಭೂಮಿಗೆ ಕಾಣದ ಸೂರ್ಯನ ಇತರ ಭಾಗವನ್ನು ಸೆರೆಹಿಡಿಯುತ್ತಿದೆ.

ಮಾಸ್ಟ್‌ ಕ್ಯಾಮೆರಾ

2

ನಾಸಾ ಮಂಗಳ ಗ್ರಹವನ್ನು ಉತ್ತಮವಾಗಿ ಅಧ್ಯಯನಕ್ಕೆ ಬಳಸಿಕೊಳ್ಳುವುದರ ಜೊತೆಗೆ ಅಲ್ಲಿ ಮಾಸ್ಟ್‌ ಕ್ಯಾಮೆರಾ (Mastcam) ಅನ್ನು ಸೂರ್ಯನ ದಿಕ್ಕಿಗೆ ಫೋಟೋಗಳನ್ನು ಸೆರೆಹಿಡಿಯಲು ಇರಿಸಿದೆ. ಈ ಕ್ಯಾಮೆರಾ 100mm ಟೆಲಿಫೋಟೋ ಲೆನ್ಸ್‌ ಹೊಂದಿದೆ. ಮಾಸ್ಟ್‌ಕ್ಯಾಮ್‌ ತೆಗೆದು ಫೊಟೋಗಳು ಇವು.
ಚಿತ್ರ ಕೃಪೆ: ನಾಸಾ

 ಸೂರ್ಯನ ಮೇಲಿನ ಕಪ್ಪು ಪ್ರದೇಶಗಳು

3

ಸೂರ್ಯನ ಮೇಲ್ಮೈನಲ್ಲಿ ಪ್ರಯಾಣ ಮಾಡುತ್ತಿರುವ ಕಪ್ಪು ಕಲೆಗಳು ಸೂರ್ಯನ ತಂಪು ಪ್ರದೇಶದ ಸೌರಕಲೆಗಳಾಗಿವೆ. ಇದು ಸಾಮಾನ್ಯವಾಗಿ 5,500 c ಗೆ ಹೋಲಿಸಿದರೆ 2,700-4,200c ಆಗಿದೆ.
ಚಿತ್ರ ಕೃಪೆ: ನಾಸಾ

ಸೂರ್ಯನ ಒಂದು ಸುತ್ತಿಗೆ ಒಂದು ತಿಂಗಳು

4

ಸೂರ್ಯ ಸ್ವತಃ ಒಂದು ಸುತ್ತನ್ನು ಸುತ್ತಲು 1 ತಿಂಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಕ್ಯೂರಿಯಾಸಿಟಿ ರೋವರ್ ತೆಗೆದ ಸೂರ್ಯನ ಚಿತ್ರಗಳು ಮಂಗಳ ಗ್ರಹದ ಮೇಲಿಂದ ತೆಗೆದ ರೀತಿಯಲ್ಲಿ ಕಾಣುತ್ತಿಲ್ಲ ಎನ್ನಲಾಗಿದೆ.
ಚಿತ್ರ ಕೃಪೆ: ನಾಸಾ

ಮಂಗಳ ಗ್ರಹದ ಅತ್ಯಧಿಕ ರೆಸಲ್ಯೂಷನ್‌ ಫೋಟೋಗಳು

5

2012, ಆಗಸ್ಟ್‌ನಿಂದ ರೋವರ್‌ ಹೈ-ರೆಸಲ್ಯೂಶನ್‌ ಪನೋರಮಾಗಳನ್ನು ವಿಜ್ಞಾನಿಗಳಿಗೆ ನೀಡುತ್ತಿದೆ. ಇದು ಕೆಮಿಕಲ್ ಮತ್ತು ಜಿಯೋಲಾಜಿಕಲ್‌ ಮಾಹಿತಿಯನ್ನು ತಿಳಿಯಲು ಸಹಾಯಕವಾಗುತ್ತಿದೆ.
ಚಿತ್ರ ಕೃಪೆ: ನಾಸಾ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಮಂಗಳ ಗ್ರಹದಲ್ಲಿ ಇಲಿ ಪತ್ತೆ !

ಮಂಗಳ ಗ್ರಹದಲ್ಲಿ ಜೀವಿಸಲು ಸಾಧ್ಯವಿಲ್ಲ!

1

2

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These Never Seen Before Images Of The Sun Were Actually Taken From Mars!Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot