Just In
- 36 min ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
- 16 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 17 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 17 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
Don't Miss
- Lifestyle
ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- News
Breaking; ಬೆಂಗಳೂರಿನ ಚಿನ್ನದ ಅಂಗಡಿಗಳ ಮೇಲೆ ಐಟಿ ದಾಳಿ
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ಲೀಗ್ ಕ್ರಿಕೆಟ್ನಲ್ಲಿ ಆರ್ಭಟಿಸುತ್ತಿದ್ದಾರೆ ಈ 5 ಕ್ರಿಕೆಟಿಗರು!
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Automobiles
ಅತಿಹೆಚ್ಚು ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ಜಿ ಲಾಂಚ್
- Movies
ಕೆಜಿಎಫ್ to ಕಾಂತಾರ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ಕ್ಲಬ್ ಸೇರಿರುವ 7 ಚಿತ್ರಗಳಿವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಾವುದೇ ಕಾರಣಕ್ಕೂ ಹಾಸಿಗೆ ಮೇಲೆ ಫೋನ್ ಚಾರ್ಜ್ ಮಾಡಲೇಬೇಡಿ!!
ಸ್ಮಾರ್ಟ್‌ಫೋನ್ ಬಿಸಿಯಾಗುವುದಕ್ಕೆ ಇರುವ ಕಾರಣಗಳ ಬಗ್ಗೆ ನೀವು ಸರಿಯಾದ ಜಾಗೃತೆ ವಹಿಸಿದರೆ ಅದರಿಂದಾಗುವ ಸಮಸ್ಯೆಯನ್ನು ತಪ್ಪಿಸಿಕೊಂಡು ನಿಮ್ಮ ಡಿವೈಸ್ ಅನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು. ನೀವೀಗಾಗಲೇ ಈ ಬಗ್ಗೆ ಗ್ಯಾಜೆಟ್ ಬಳಕೆ ಮಾಡಿ ನೋಡಿದ್ದಾರೆ ನಾವಿದನ್ನು ನಿಮಗೆ ಹೆಳಬೇಕಿಲ್ಲ. ಆದರೂ, ಇಂದು ಯಾವೆಲ್ಲ ಅಂಶಗಳು ಸ್ಮಾರ್ಟ್‌ಫೋನ್ ಬಿಸಿಯಾಗುವುದಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರಿಯುವುದು ಬಹಳ ಮುಖ್ಯ ಸಂಗತಿಯಾಗಿದೆ.

ಹೌದು, ಸ್ಮಾರ್ಟ್‌ಫೋನಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಲೇ ಇರುತ್ತೇವೆ ಮತ್ತು ಮಲ್ಟಿಟಾಸ್ಕಿಂಗ್ ಕೂಡ ಮಾಡುತ್ತೇವೆ. ಇದರಿಂದಲೂ ಕೂಡ ಆಂಡ್ರಾಯ್ಡ್ ಡಿವೈಸ್ ಬಿಸಿಯಾಗುತ್ತದೆ. ಸಿಪಿಯು ಸ್ಪೀಡ್ ಅನ್ನು ಒವರ್ ಕ್ಲಾಕಿಂಗ್ ಮಾಡುವುದರಿಂದಲೂ ಕೂಡ ಡಿವೈಸ್ ಬಿಸಿಯಾಗಿ ಅದು ಪ್ರೊಸೆಸರ್ ಅನ್ನು ಶಾಶ್ವತವಾಗಿ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬಿಸಿಯಾದರಷ್ಟು ಅದರ ಆಯಸ್ಸು ಕಡಿಮೆಯಾಗುತ್ತಾ ಬರುತ್ತದೆ.
ಹೀಗೆ ಒಮ್ಮೆ ನೀವು ಡಿವೈಸ್ ಬಿಸಿಯಾಗುವುದಕ್ಕೆ ಕಾರಣಗಳೇನು ಎಂಬುದನ್ನು ಅರಿತರೆ ಖಂಡಿತ ಕೂಡಲೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುಳ್ಳಬಹುದು ಹಾಗಾದರೆ, ಸ್ಮಾರ್ಟ್‌ಫೋನ್ ಅತಿಯಾಗಿ ಬಿಸಿಯಾಗುವುದನ್ನು ತಡೆಯುವುದು ಹೇಗೆ? ಯಾವೆಲ್ಲ ಪ್ರಮುಖ ಕಾರಣಗಳು ಸ್ಮಾರ್ಟ್‌ಫೋನ್ ಡಿವೈಸ್ ಅನ್ನು ಬಿಸಿ ಮಾಡಿ ಸಮಸ್ಯೆಗೆ ತಂದೊಡ್ಡುತ್ತವೆ ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳಿ ಮತ್ತು ಅದಕ್ಕೆ ಪರಿಹಾರವನ್ನು ಸಹ ಪಡೆಯಿರಿ.

#1 ಫೋನಿನ ಒರಿಜಿನಲ್ ಚಾರ್ಜರ್ ಅನ್ನು ಬಳಸಿ
ನೀವು ಯಾವತ್ತಾದ್ರೂ ನಿಮ್ಮ ಫೋನಿನ ಜೊತೆಗೆ ಬರುವ ಮ್ಯಾನುವಲ್ ನ್ನು ಓದಿದ್ದೀರಾ? ಪ್ರತಿಯೊಂದು ಫೋನ್ ತಯಾರಿಕಾ ಸಂಸ್ಥೆಯು ಡುಪ್ಲಿಕೇಟ್ ಚಾರ್ಜರ್ ನ್ನು ಬಳಕೆ ಮಾಡದಂತೆ ಸೂಚಿಸಿರುತ್ತದೆ ಮತ್ತು ಇದು ನಿಮ್ಮ ಫೋನಿನ ಬ್ಯಾಟರಿಯನ್ನು ಹಾಳು ಮಾಡುತ್ತದೆ ಎಂದು ಹೇಳಿರುತ್ತದೆ. ನಮ್ಮ ಫೋನ್ ಗಳು ಬಿಸಿಯಾಗುವುದಕ್ಕೆ ಪ್ರಮುಖ ಕಾರಣವೇ ಬ್ಯಾಟರಿ. ಹಾಗಾಗಿ ನಿಮ್ಮ ಫೋನಿನ ಒರಿಜಿನಲ್ ಚಾರ್ಜರ್ ಅನ್ನೇ ಫೋನ್ ಚಾರ್ಜ್ ಮಾಡುವುದಕ್ಕೆ ಬಳಸಿ.

#2 ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡಿ
ಬೆಳಗಿನ ಸಮಯದಲ್ಲಿ ಫೋನ್ ಅನ್ನು ಅತಿಯಾಗಿ ಚಾರ್ಜ್ ಮಾಡಬೇಡಿ. ಹೀಗೆ ಮಾಡಿದರೆ ಫೋನ್ ಬಿಸಿಯಾಗುವುದಲ್ಲದೇ, ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ. ಬೆಳಗಿನ ಸಮಯದಲ್ಲಿ 70 ರಿಂದ 80 % ಚಾರ್ಜ್ ಮಾಡಿ ಮತ್ತು ರಾತ್ರಿಯ ವೇಳೆ 100% ಚಾರ್ಜ್ ಮಾಡುವುದು ಒಳ್ಳೆಯದು. ಇನ್ನು ಯಾವುದೇ ಕಾರಣಕ್ಕೂ ಹಾಸಿಗೆ ಅಥವಾ ಸೋಫಾ ಮೇಲೆ ಸ್ಮಾರ್ಟ್‌ಫೋನನ್ನು ಚಾರ್ಜ್ ಮಾಡಬೇಡಿ. ಹೀಗೆ ಮಾಡುವುದರಿಂದ ಸ್ಮಾರ್ಟ್‌ಪೋನ್ ಮತ್ತಷ್ಟು ಬಿಸಿಯಾಗಿ ಸ್ಮಾರ್ಟ್‌ಫೋನ್ ಸ್ಪೋಟಗೊಳ್ಳುತ್ತದೆ.

#3 ನಿಮ್ಮ ವೈ-ಫೈ ಯನ್ನು ಪರೀಕ್ಷಿಸಿ
ವೈ-ಫೈ ಮಾತ್ರವೇ ನಿಮ್ಮ ಫೋನ್ ನ್ನು ಬಿಸಿ ಮಾಡುವುದಲ್ಲ. ಆದರೆ ವೈ-ಫೈ ನೆಟ್ ವರ್ಕ್ ಗೆ ನಿಮ್ಮ ಫೋನ್ ಕನೆಕ್ಟ್ ಆಗಿದ್ದಾಗ ಬ್ಯಾಕ್ ಗ್ರೌಂಡ್ ನಲ್ಲಿ ಟ್ರಿಗ್ಗರ್ ಆಗುವ ಆಪ್ ಗಳು ನಿಮ್ಮ ಫೋನ್ ಅನ್ನು ಬಿಸಿ ಮಾಡುತ್ತದೆ. ಹಾಗಾಗಿ ನೀವು ವೈ-ಫೈ ಗೆ ಕನೆಕ್ಟ್ ಆದಾಗ ನಿಮ್ಮ ಫೋನಿನ ಎಲ್ಲಾ ಬ್ಯಾಕ್ ಗ್ರೌಂಡ್ ಅಪ್ ಡೇಟ್ ಅನ್ನು ಚೆಕ್ ಮಾಡಿ.

#4 ಬ್ಲೂಟೂತ್ ಮತ್ತು ಜಿಪಿಎಸ್ ಆಫ್ ಮಾಡಿ
ಬ್ಲೂಟೂತ್ ಮತ್ತು ಜಿಪಿಎಸ್ ನಿರಂತರವಾಗಿ ಲಭ್ಯವಿರುವ ನೆಟ್ ವರ್ಕ್ ಗಾಗಿ ಬ್ಯಾಕ್ ಗ್ರೌಂಡ್ ನಲ್ಲಿ ಸ್ಕ್ಯಾನ್ ಮಾಡುತ್ತಿರುತ್ತದೆ. ಒಂದು ವೇಳೆ ನೀವು ಆಂಡ್ರಾಯ್ಡ್ ಗೇಮ್ಸ್ ಗಳನ್ನು ರನ್ ಮಾಡುತ್ತಿದ್ದರೆ ಮತ್ತು ಬ್ಲೂಟೂತ್, ಜಿಪಿಎಸ್ ಫೀಚರ್ ಗಳು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅನೇಬಲ್ ಆಗಿದ್ದಲ್ಲಿ ಫೋನ್ ಅತಿಯಾಗಿ ಬಿಸಿಯಾಗುವ ಸಾಧ್ಯತೆ ಇದೆ. ಹಾಗಾಗಿ ಬ್ಲೂಟೂತ್ ಮತ್ತು ಜಿಪಿಎಸ್ ನಿಮಗೆ ಅಗತ್ಯವಿಲ್ಲದೇ ಇದ್ದಾಗ ಆಫ್ ಆಗಿರುವಂತೆ ನೋಡಿಕೊಳ್ಳಿ.

#5 ಅತಿಯಾಗಿ ಬಳಕೆ ಮಾಡಬೇಡಿ
ಖಂಡಿತವಾಗಲೂ ಫೋನ್ ಬಿಸಿಯಾದರೆ ಈ ಫೋನ್ ಸರಿಇಲ್ಲ ಅಂತ ಬೈದುಕೊಳ್ಳುತ್ತೇವೆ.ಆದರೆ ನಾವು ಅದನ್ನು ಎಷ್ಟು ಬಳಸುತ್ತಿದ್ದೇವೆ ಎಂಬುದನ್ನು ಪರೀಕ್ಷಿಸುವುದಕ್ಕೆ ಮರೆತು ಬಿಡುತ್ತೇವೆ.ಸ್ಮಾರ್ಟ್ ಫೋನ್ ಗಳು ಅತ್ಯಂತ ಪವರ್ ಫುಲ್ ಆಗಿರುತ್ತದೆ ಆದರೆ ಅವುಗಳನ್ನು ನಿರಂತರವಾಗಿ ಬಳಕೆ ಮಾಡುವುದಕ್ಕಾಗಿ ತಯಾರಿಸಿರುವುದಿಲ್ಲ.ಕಂಪ್ಯೂಟರ್ ಗಳಿಗಿಂತ ಹೆಚ್ಚಾಗಿ ಇಂದಿನ ಜಮಾನದಲ್ಲಿ ಫೋನ್ ನ್ನು ಬಳಕೆ ಮಾಡುತ್ತಿದ್ದೇವೆ. ಕಂಪ್ಯೂಟರ್ ನಲ್ಲಿ ಇರುವಂತೆ ಫೋನಿನಲ್ಲಿ ಯಾವುದೇ ಕೂಲಿಂಗಿ ಸಿಸ್ಟಮ್ ಇರುವುದಿಲ್ಲ. ಹಾಗಾಗಿ ಅತಿಯಾಗಿ ಫೋನ್ ಬಳಸುವುದನ್ನು ಕಡಿಮೆ ಮಾಡಬೇಕಾಗುತ್ತದೆ.

#6 ಅತಿಯಾಗಿ ಸ್ಟ್ರೀಮ್ ಮಾಡುವುದು
ವೀಡಿಯೋಗಳನ್ನು ಮತ್ತು ಚಲನಚಿತ್ರಗಳನ್ನು ನೋಡುವುದು ನಿಮ್ಮ ಫೋನ್ ಬಿಸಿಯಾಗುವುದಕ್ಕೆ ಇರುವ ಮತ್ತೊಂದು ಕಾರಣವಾಗಿದೆ. ನಾವು ಮೂವಿಗಳನ್ನು ನೋಡುವುದಕ್ಕೆ ಹೆಚ್ಚಾಗಿ ಆಂಡ್ರಾಯ್ಡ್ ಡಿವೈಸ್ ಗಳನ್ನೇ ಬಳಸುತ್ತೇವೆ ಅದರಲ್ಲೂ ಪ್ರಮುಖವಾಗಿ ಎಲ್ಲಾದರೂ ಪ್ರಯಾಣ ಕೈಗೊಂಡ ಸಂದರ್ಬದಲ್ಲಿ ಹೆಚ್ಚಾಗಿ ಬಳಸುತ್ತೇವೆ,ಇದು ಪ್ರೊಸೆಸರ್ ಗೆ ಹೆಚ್ಚಿನ ಕೆಲಸ ಕೊಡುತ್ತದೆ ಮತ್ತು ಅತ್ಯಂತ ಹೆಚ್ಚು ಪವರ್ ಕೂಡ ಬೇಕಾಗುತ್ತದೆ ಹಾಗಾಗಿ ಫೋನ್ ಬಿಸಿಯಾಗುತ್ತದೆ.

#7 ಅತಿಯಾಗಿ ಗೇಮ್ ಆಡುವುದು
ನಿಮ್ಮ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಿಮಗೆ ಸಾಕಷ್ಟು ಗೇಮ್ಸ್ ಮತ್ತು ಅಪ್ಲಿಕೇಷನ್ ಗಳನ್ನು ಪ್ರತಿದಿನ ನೀಡುತ್ತಲೇ ಇರುತ್ತದೆ. ಕೆಲವು ಗೇಮ್ ಗಳು ಹೆಚ್ಚಿನ ಪ್ರೊಸೆಸಿಂಗ್ ಪವರ್ ನ್ನು ಬೇಡುತ್ತದೆ, ಖಂಡಿತವಾಗಲೂ ಇದು ಆ ಆಪ್ ನ ಕಾಂಪ್ಲೆಕ್ಸಿಟಿ ಮೇಲೆ ನಿರ್ಧರಿತವಾಗಿರುವ ಅಂಶ. ಆದರೂ ಇದೆರಡು ಮರ್ಜ್ ಆದಾಗ ಮೊಬೈಲ್ ಬಿಸಿಯಾಗುತ್ತದೆ. ಗೇಮ್ ಗಳು ಇಂದಿನ ದಿನಗಳಲ್ಲಿ ಹೆಚ್ಚು RAM ನ್ನು ಮಾತ್ರವೇ ಬೇಡುವುದಿಲ್ಲ ಬದಲಾಗಿ ಉತ್ತಮ ಪ್ರೊಸೆಸರ್ ಗಾಗಿ ಡಾಟಾ ಕನೆಕ್ಷನ್ ನ್ನು ಕೂಡ ಬೇಡುತ್ತದೆ. ಹೆವಿ ಗೇಮ್ ಗಳನ್ನು ಆಡುವಾಗ ಬ್ಯಾಕ್ ಗ್ರೌಂಡ್ ಟಾಸ್ಕ್ ಗಳನ್ನು ಕ್ಲಿಯರ್ ಮಾಡಿಕೊಳ್ಳಿ.

#8 ಪ್ಲಾಸ್ಟಿಕ್ ಮತ್ತು ಲೆದರ್ ಕೇಸ್ ಹಾಕುವುದು
ಹೊಸದಾಗಿ ಮೊಬೈಲ್ ಕವರ್ ಹಾಕಿದಾಗ ನೀವು ಮೊಬೈಲ್ ಓವರ್ ಹೀಟ್ ಆಗುವ ಸಮಸ್ಯೆಯನ್ನು ಎದುರಿಸುತ್ತಿದ್ದೀರಾದರೆ ಆಗ ಕೇಸಿನ ಮೆಟೀರಿಯಲ್ ಯಾವುದು ಎಂಬುದನ್ನು ಪರೀಕ್ಷೆ ಮಾಡಿ. ಪ್ಲಾಸ್ಟಿಕ್ ಮತ್ತು ಲೆದರ್ ನ ಕೇಸ್ ಗಳು ಒಳಗೆ ಬಿಸಿಯಾಗಿರುತ್ತದೆ ಮತ್ತು ಹೊರಗೆ ತಣ್ಣಗಿರುತ್ತದೆ. ಇದು ಫೋನ್ ಅನ್ನು ಓವರ್ ಹೀಟ್ ಆಗುವಂಂತೆ ಮಾಡುತ್ತದೆ. ಈ ಎಲ್ಲಾ ಕಾರಣಗಳು ಸ್ಮಾರ್ಟ್‌ಫೋನ್ ಡಿವೈಸ್ ಅನ್ನು ಬಿಸಿ ಮಾಡಿ ಸಮಸ್ಯೆಗೆ ತಂದೊಡ್ಡುತ್ತವೆ ಎಂಬುದನ್ನು ತಿಳಿದಿರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470