ಹಣಕಾಸು ಮಾಹಿತಿ ಕದಿಯುತ್ತಿವೆ ಮಾಲ್ ವೇರ್ ಗಳು...ಹೊಸ ಆಪ್ ಗಳ ಬಗ್ಗೆ ಹುಷಾರಾಗಿರಿ..!
ಇತ್ತೀಚಿನ ದಿನಗಳಲ್ಲಿ ಇ-ಕಳ್ಳತನ ಹೆಚ್ಚಾಗುತ್ತಿದೆ. ಇ-ಸ್ಟೋಲಿಂಗ್ ಸಂತ್ರಸ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇವೆಲ್ಲಕ್ಕೂ ಸ್ಮಾರ್ಟ್ ಪೋನ್ ಮತ್ತು ಇಂಟರ್ ನೆಟ್ ರಹದಾರಿಯಾಗಿದ್ದು, ಆನ್ ಲೈನ್ ಜಗತ್ತಲ್ಲಿ ದಿನ ನಿತ್ಯ ಸಾವಿರಾರು ಜನರು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರ ಜೊತೆ ಈಗ ಭಾರತದ ಸ್ಮಾರ್ಟ್ ಪೋನ್ ಜಗತ್ತಿನಲ್ಲಿ ಹೊಸ ಮಾಲ್ ವೇರ್ ಗಳು ದಾಳಿ ನಡೆಸಿ ಹಣಕಾಸು ಸಂಬಂಧಿತ ಮಾಹಿತಿ ಕದಿಯುತ್ತಿವೆ.
ಹೌದು, ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭದ್ರತಾ ಉದ್ಯಮ ನಡೆಸುತ್ತಿರುವ ಕ್ವಿಕ್ ಹೀಲ್ ಸೆಕ್ಯೂರಿಟಿಸ್ ಭಾರತದ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಬಳಕೆದಾರರಿಗೆ ಎಚ್ಚರಿಸಿದ್ದು, ಹೊಸ 2 ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಗಳು ಭಾರತದ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಕ್ಷೇತ್ರ ಪ್ರವೇಶಿಸಿದ್ದು, ಬಳಕೆದಾರರ ಕಾನ್ಫಿಡೆನ್ಸಿಯಲ್ ಮಾಹಿತಿಯನ್ನು ಕದಿಯುತ್ತಿವೆ ಎಂದಿದೆ.


ಆಂಡ್ರಾಯ್ಡ್ ಹೆಸರಿನಲ್ಲಿವೆ ಹೊಸ ಟ್ರೋಜನ್ಸ್
ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್ ನ ಭದ್ರತಾ ತಜ್ಞರು ಗುರುತಿಸಿರುವಂತೆ 2 ಹೊಸ ಟ್ರೋಜನ್ಸ್ ಆಂಡ್ರಾಯ್ಡ್ ಹೆಸರನ್ನು ಹೊಂದಿದ್ದು, ನೊಟಿಫೀಕೆಷನ್ ರೂಪದಲ್ಲಿ ನಿಮ್ಮ ಮೊಬೈಲ್ ಗೆ ಲಗ್ಗೆ ಇಡಲಿವೆ. "Android.Marcher.C" ಮತ್ತು "Android.Asacub.T" ಕ್ವಿಕ್ ಹೀಲ್ ಗುರುತಿಸಿದ ಟ್ರೋಜನ್ ಗಳಾಗಿವೆ. ಇವೇರಡು ನಿಮ್ಮ ಮೊಬೈಲ್ ನಲ್ಲಿ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಸೋಷಿಯಲ್ ಮೀಡಿಯಾ ನೊಟಿಫೀಕೆಷನ್ ರೀತಿ ಬರ್ತಿದೆ ವೈರಸ್
ಕ್ವಿಕ್ ಹೀಲ್ ಗುರುತಿಸಿದ ಹೊಸ ಟ್ರೋಜನ್ ಗಳು ವಾಟ್ಸ್ ಆಪ್, ಫೇಸ್ ಬುಕ್, ಸ್ಕೈಪ್, ಇನ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳು ಮತ್ತು ಲೀಡಿಂಗ್ ಬ್ಯಾಂಕಿಂಗ್ ಆಪ್ ಗಳ ನೊಟಿಫೀಕೆಷನ್ ರೀತಿಯಲ್ಲಿ ಬಂದು ಸ್ಮಾರ್ಟ್ ಪೋನ್ ಸೇರುತ್ತಿವೆ ಎಂದು ಕ್ವಿಕ್ ಹೀಲ್ ಹೇಳಿದೆ.

ಒಟಿಪಿಯನ್ನು ಹ್ಯಾಕರ್ ಗಳು ಆಕ್ಸೆಸ್ ಮಾಡಬಹುದು
ಹೊಸ ಟ್ರೋಜನ್ ಗಳು ಅಡ್ಮಿನಿಸ್ಟ್ರೇಟಿವ್ ಸೌಲಭ್ಯ ಪಡೆದು ಇನ್ ಕಮಿಂಗ್ ಸಂದೇಶಗಳ ಆಕ್ಸೆಸ್ ಪಡೆದಿವೆ. ಇದಲ್ಲದೇ ಮಾಲ್ ವೇರ್ ಗಳು ಭಾರತದಲ್ಲಿ ಆನ್ ಲೈನ್ ಟ್ರಾನ್ಸ್ ಆಕ್ಷನ್ ಗಳಿಗೆ ಬಳಸುವ two-factor OTP ಆಕ್ಸೇಸ್ ಮಾಡಲು ಹ್ಯಾಕರ್ ಗಳಿಗೆ ಅನುವು ಮಾಡಿಕೊಡುತ್ತದೆ.

ಗೊತ್ತಿರದ ಆಪ್ಸ್ ನಿಂದ ಮಾಹಿತಿ ಸ್ಟೀಲ್..!
ಎಸ್ಎಮ್ಎಸ್ ಹಾಗೂ ಇಮೇಲ್ ಗಳಿಂದ ಬರುವ ಲಿಂಕ್ ಗಳಿಂದ ಭಾರತೀಯ ಬಳಕೆದಾರು ಥರ್ಡ್ ಪಾರ್ಟಿ ಆಪ್ ಸ್ಟೋರ್ ಗಳಿಂದ ಪರಿಶೀಲಿಸದ ಆಪ್ ಗಳನ್ನು ಡೌನ್ ಲೋಡ್ ಮಾಡುತ್ತಿರುವುದು ಹ್ಯಾಕರ್ ಗಳಿಗೆ ಕಾನ್ಫಿಡೆನ್ಸಿಯಲ್ ಮಾಹಿತಿ ಕದಿಯಲು ಉತ್ತಮ ಮಾರ್ಗವಾಗಿದೆ ಎಂದು ಕ್ವಿಕ ಹೀಲ್ ಟೆಕ್ನಾಲಜೀಸ್ ಲಿಮಿಟೆಡ್ ನ ಸಹ ಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಸಂಜಯ್ ಕತ್ಕಾರ್ ಹೇಳಿದ್ದಾರೆ.

ಮೊಬೈಲ್ ಬಳಕೆದಾರರೇ ಹ್ಯಾಕರ್ ಗಳ ಟಾರ್ಗೆಟ್
ಕಳೆದ 6 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಇಂತಹ ಮೂರು ಮಾಲ್ ವೇರ್ ಗಳನ್ನು ಪತ್ತೆ ಹಚ್ಚಿದ್ದು, ಹ್ಯಾಕರ್ ಗಳು ಮಾಲ್ ವೇರ್ ಗಳ ಮೂಲಕ ಮೊಬೈಲ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಸಂಜಯ್ ಕತ್ಕಾರ್ ಹೇಳಿದ್ದಾರೆ.

ಅಡೋಬ್ ಫ್ಲಾಷ್ ಪ್ಲೇಯರ್ ಐಕಾನ್ ಹೊಂದಿದೆ ವೈರಸ್
ಕ್ವಿಕ್ ಹೀಲ್ ಶೋಧಿಸಿರುವ ಹೊಸ "Android.Marcher.C" ಟ್ರೋಜನ್ ಅಡೋಬ್ ಫ್ಲಾಷ್ ಪ್ಲೇಯರ್ ಚಿಹ್ನೆ ಹೊಂದಿದ್ದು, ಉತ್ತಮ ಆಪ್ ಎಂದು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ "Android.Asacub.T" ಆಂಡ್ರಾಯ್ಡ್ ಅಪ್ ಡೇಟ್ ಚಿಹ್ನೆ ಹೊಂದಿರುವುದು ಬಳಕೆದಾರರಿಗೆ ಯಾವುದೇ ಸಂಶಯ ಬರದಂತೆ ಸ್ಮಾರ್ಟ್ ಪೋನ್ ಸೇರುತ್ತಿವೆ.

ಬ್ಯಾಂಕಿಂಗ್ ಡಿಟೇಲ್ಸ್ ಪಕ್ಕಾ ಹ್ಯಾಕರ್ ಪಾಲು
ಈ ಟ್ರೋಜನ್ ಗಳಿಗೆ ಆಕ್ಸೆಸ್ ನೀಡಿದರೆ, ಬಹಳ ಸೂಕ್ಷ್ಮ ಮಾಹಿತಿಗಳಾದ ಬ್ಯಾಂಕಿಂಗ್ ಮಾಹಿತಿ, ಕಾರ್ಡ್ ವಿವರ, ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಗಳು ಹ್ಯಾಕರ್ ಗಳ ಪಾಲಾಗುವುದಂತೂ ಖಂಡಿತ.

ಜನವರಿಯಲ್ಲೊಂದು ಸಿಕ್ಕಿತ್ತು
ಕ್ವಿಕ್ ಹೀಲ್ ಸೆಕ್ಯೂರಿಟಿ ಲ್ಯಾಬ್ಸ್ ಹೇಳುವಂತೆ ಜನವರಿಯಲ್ಲೂ ಇಂತದ್ದೇ ಮಾಲ್ ವೇರ್ ಕಂಡು ಬಂದಿತ್ತು. "Android.banker.A2f8a" ಎಂಬ ಮಾಲ್ ವೇರ್ ಫ್ಲಾಷ್ ಪ್ಲೇಯರ್ ನ ನಕಲು ಆವೃತ್ತಿಯಾಗಿ ಥರ್ಡ್ ಪಾರ್ಟಿ ಆಪ್ ಸ್ಟೋರ್ ನಿಂದ ವಿತರಣೆಯಾಗುತ್ತಿತ್ತು. ಮತ್ತು 232 ಬ್ಯಾಂಕಿಂಗ್ ಮತ್ತು ಕ್ರಿಪ್ಟೋಕರೆನ್ಸಿ ಆಪ್ ಗಳ ಮಾಹಿತಿ ಕದ್ದಿತ್ತು.


ಥರ್ಡ್ ಪಾರ್ಟಿ ಆಪ್ಸ್ ಬಳಸದಿರಿ
ಭದ್ರತಾ ತಜ್ಞರು ಆಂಡ್ರಾಯ್ಡ್ ಬಳಕೆದಾರರು ಎಸ್ಎಮ್ಎಸ್ ಮತ್ತು ಇಮೇಲ್ ಮೂಲಕ ಬರುವ ಲಿಂಕ್ ಗಳಿಂದ ಥರ್ಡ್ ಪಾರ್ಟಿ ಆಪ್ ಗಳನ್ನು ಬಳಸಬಾರದೆಂದು ಸಲಹೆ ನೀಡಿದ್ದಾರೆ. ಅದರ ಜೊತೆ ಯಾವಾಗಲೂ ಅನ್ ಸೋರ್ಸ್ ಆಯ್ಕೆಯನ್ನು ಡಿಸೇಬಲ್ ಮಾಡಿಟ್ಟಿರಿ. ಆಪ್ ಇನ್ಸ್ಟಾಲ್ ಮಾಡುವ ಮುಂಚೆ ಆಪ್ ಪರ್ಮಿಷನ್ಸ್ ಅನ್ನು ಪರಿಶೀಲಿಸಿ, ಹಾಗೂ ಗೂಗಲ್ ಪ್ಲೇ ಪ್ರೋಟೆಕ್ಟ್ ಸೇವೆಯನ್ನು ಆನ್ ನಲ್ಲಿಡಲು ಭದ್ರತಾ ತಜ್ಞರು ಸೂಚಿಸಿದ್ದಾರೆ.


Click it and Unblock the Notifications








