ಸ್ಟೀವ್ ಜಾಬ್ ಪ್ರಕಾರ ನಾಯಕನಿಗಿರಬೇಕಾದ 6 ಗುಣಗಳು

  By Shwetha
  |

  ಆಪಲ್ ಮಾಜಿ ಸಿಇಒ ಅಂತೆಯೇ ಸಹಸ್ಥಾಪಕರಾಗಿರುವ ದಿವಂಗತ ಸ್ಟೀವ್ ಜಾಬ್ಸ್ ಮುನ್ನಡೆಯನ್ನು ಸಾಧಿಸಲು ಅವರ ನಾಯಕತ್ವ ಗುಣ ಕಾರಣವಾಗಿದೆ ಎಂಬ ಅಂಶವನ್ನು ನೀವು ಮನಗಂಡಿರುವಿರಾ? ಹೌದು ಒಬ್ಬ ಉತ್ತಮ ನಾಯಕನೆಂದರೆ ಅವನಲ್ಲಿ ಇರಬೇಕಾದ ಅತಿ ಮುಖ್ಯ ಗುಣ ನಾಯಕತ್ವವಾಗಿದೆ.

  ಹಂತಹಂತವಾಗಿ ಪ್ರಗತಿಯ ಮೆಟ್ಟಲೇರುತ್ತಾ ಇಂದು ಯಶಸ್ಸಿನ ತುತ್ತ ತುದಿಯನ್ನು ಏರಿರುವ ಆಪಲ್ ಎಂಬ ಕ್ಯುಪರ್ಟಿನೋ ದೈತ್ಯ ಮುಟ್ಟಿದ್ದೆಲ್ಲಾ ಚಿನ್ನವಾಗಲು ಕಾರಣ ಅದರ ಹಿಂದಿರುವ ನಾಯಕರುಗಳದ್ದಾಗಿದೆ. ಇಂದು ಆ ನಾಯಕರಲ್ಲಿ ಒಬ್ಬರಾದ ಸ್ಟೀವ್ ಜಾಬ್ಸ್ ನಾಯಕತ್ವ ಗುಣಗಳು ಹೇಗಿತ್ತು ಎಂಬುದನ್ನು ಅರಿತುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನಾಯಕನಿಗಿರಬೇಕಾದ 6 ಗುಣಗಳು

  ಸ್ಟೀವ್ ಪ್ರಕಾರ ಉತ್ತಮ ನಾಯಕತ್ವದಲ್ಲಿ ವೀಕ್ಷಣೆ ಮತ್ತು ನೇರಮಾತು ಅತ್ಯವಶ್ಯಕವಾಗಿದೆ. ನೀವು ವೀಕ್ಷಿಸುತ್ತೀರಿ ಎಂದಾದಲ್ಲಿ ಅದನ್ನು ನೇರವಾಗಿ ವ್ಯಕ್ತಪಡಿಸುವ ತಾಕತ್ತೂ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರಿಗೆ ಏನಾದರೂ ಹೊಸ ಯೋಜನೆ ಮನದಲ್ಲಿ ಮೂಡಿತು ಎಂದೊಡನೇ ಅದನ್ನು ಕೂಡಲೇ ತಮ್ಮ ತಂಡದ ಸದಸ್ಯರಲ್ಲಿ ಚರ್ಚಿಸುತ್ತಿದ್ದರಂತೆ.

  ನಾಯಕನಿಗಿರಬೇಕಾದ 6 ಗುಣಗಳು

  ಆಪಲ್ ಸಿಬ್ಬಂದಿಯೋರ್ವರು ಹೇಳುವಂತೆ ಸ್ಟೀವ್ ಜಾಬ್ಸ್ ಕಂಪೆನಿಗೆ ಪಿತೃ ಸ್ಥಾನದಲ್ಲಿದ್ದರು. ಅಂದರೆ ಅವರ ನಿರ್ಧಾರಗಳು ಒಬ್ಬ ತಂದೆ ಮಗಳನ್ನು ನೋಡಿಕೊಳ್ಳುವ ರೀತಿ ಇತ್ತು. ಒಳಿತು ಕೆಡುಕುಗಳ ಬಗ್ಗೆ ಅವರು ಆಲೋಚಿಸಿ ನಂತರವೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರು.

  ನಾಯಕನಿಗಿರಬೇಕಾದ 6 ಗುಣಗಳು

  ತಂಡದ ಸದಸ್ಯರು ಸಣ್ಣ ಸಾಧನೆಯನ್ನು ಮಾಡಿದರೂ ಅದನ್ನು ಕೊಂಡಾಡುವ ಮನಸ್ಸು ಸ್ಟೀವ್ ಜಾಬ್‌ರದ್ದಾಗಿತ್ತು.

  ನಾಯಕನಿಗಿರಬೇಕಾದ 6 ಗುಣಗಳು

  ವೃತ್ತಿಗೆ ಸ್ಟೀವ್ ಎಷ್ಟು ಗಮನವನ್ನು ನೀಡುತ್ತಿದ್ದರೂ ಅಂತೆಯೇ ತಮ್ಮ ಕುಟುಂಬಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ಅವರು ನೀಡುತ್ತಿದ್ದರು. ವೃತ್ತಿ ಮತ್ತು ಕುಟುಂಬಕ್ಕೆ ಸಮಾನ ನ್ಯಾಯವನ್ನು ಅವರು ಒದಗಿಸುತ್ತಿದ್ದರು.

  ನಾಯಕನಿಗಿರಬೇಕಾದ 6 ಗುಣಗಳು

  ಅವಿರತವಾಗಿ ದುಡಿಯುವರು ನೀವಾಗಿದ್ದಲ್ಲಿ ಧ್ಯಾನ ಮತ್ತು ಯೋಗವನ್ನು ನೀವು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಸ್ಟೀವ್ ಹೇಳುತ್ತಾರೆ. ತಮ್ಮ ವ್ಯವಹಾರ ಗುರಿಯೊಂದಿಗೆ ಆಧ್ಯಾತ್ಮಿಕ ಜ್ಞಾನವನ್ನು ಹೇಗೆ ಸಮತೋಲನ ಮಾಡುವುದು ಎಂಬುದನ್ನು ತಿಳಿದುಕೊಳ್ಳುತ್ತಿದ್ದರು.

  ನಾಯಕನಿಗಿರಬೇಕಾದ 6 ಗುಣಗಳು

  2004 ರಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ನಂತರ ಸ್ಟೀವ್ ಜಾಬ್ಸ್ ಮರುಜನ್ಮ ಪಡೆದುಕೊಂಡಂತೆ ತಮ್ಮ ಕೆಲಸದಲ್ಲಿ ನಿರತರಾದರು. ಇನ್ನಷ್ಟು ಹೆಚ್ಚು ಶಕ್ತಿಯೊಂದಿಗೆ ತಮ್ಮ ಕೆಲಸದಲ್ಲಿ ಸ್ಟೀವ್ ಜಾಬ್ಸ್ ತೊಡಗಿಕೊಂಡಿದ್ದರು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  New book reveals how Apple's Steve Jobs struggled to become a better leader.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more