ಟ್ವಿಟ್ಟರ್‌ನಲ್ಲಿ ಮತ್ತೊಂದು ಮಾಹಿತಿ ಸೋರಿಕೆ..! 17 ಮಿಲಿಯನ್ ಫೋನ್ ಸಂಖ್ಯೆ ಬಹಿರಂಗ..!
ಇನ್ನೇನು, ಕೆಲವೇ ದಿನ 2019ಕ್ಕೆ ಗುಡ್‌ಬೈ ಹೇಳುವ ಸಮಯ ಬಂದಿದೆ. ಈ ವರ್ಷವಂತೂ ಭದ್ರತೆಯ ವಿಷಯದಲ್ಲಿ ಟ್ವಿಟ್ಟರ್‌ಗೆ ಕೆಟ್ಟ ವರ್ಷವಾಗಿದೆ. ಹೌದು, ಟ್ವಿಟ್ಟರ್ ವೇದಿಕೆಯ ಮತ್ತೊಂದು ಮಾಹಿತಿ ಸೋರಿಕೆ ಹಗರಣ ವರದಿಯಾಗಿದ್ದು, ಟ್ವಿಟ್ಟರ್‌ನ್ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿನ ದುರ್ಬಲತೆಯನ್ನು ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ. ಉನ್ನತ ಮಟ್ಟದ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡು 17 ಮಿಲಿಯನ್ ಫೋನ್ ಸಂಖ್ಯೆಯನ್ನು ಬಳಕೆದಾರರ ಖಾತೆಗಳಿಗೆ ಹೊಂದಿಸಲಾಗಿದೆ ಎಂದು ಆ ಸಂಶೋಧಕರು ಹೇಳಿದ್ದಾರೆ.

ಬಾಲಿಕ್ರಿಂದ ಬಹಿರಂಗ
ಭದ್ರತಾ ಸಂಶೋಧಕ ಇಬ್ರಾಹಿಂ ಬಾಲಿಕ್ ಅವರು ಟ್ವಿಟರ್‌ನ ಸಂಪರ್ಕಗಳ ಅಪ್‌ಲೋಡ್ ಫೀಚರ್ ಮೂಲಕ ರಚಿತವಾದ ಫೋನ್ ಸಂಖ್ಯೆಗಳ ಸಂಪೂರ್ಣ ಪಟ್ಟಿಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿದೆ ಎಂದಿದ್ದಾರೆ. ನಿಮ್ಮ ಫೋನ್ ಸಂಖ್ಯೆಯನ್ನು ನೀವು ಅಪ್‌ಲೋಡ್ ಮಾಡಿದರೆ, ಅದು ಬಳಕೆದಾರರ ಡೇಟಾವನ್ನು ಪ್ರತಿಯಾಗಿ ಪಡೆಯುತ್ತದೆ ಎಂದು ಬಾಲಿಕ್ ಉಲ್ಲೇಖಿಸಿದ್ದಾರೆ.

ವಾಟ್ಸ್‌ಆಪ್ ಗ್ರೂಪ್
ಮಾಹಿತಿ ಸೋರಿಕೆಯಾದ ಹೆಚ್ಚಿನ ಬಳಕೆದಾರರು ಇಸ್ರೇಲ್, ಟರ್ಕಿ, ಇರಾನ್, ಗ್ರೀಸ್, ಅರ್ಮೇನಿಯಾ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳ ನಾಗರಿಕರಾಗಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ, ಬಳಕೆದಾರರನ್ನು ನೇರವಾಗಿ ಎಚ್ಚರಿಸಲು ಬಾಲಿಕ್ ಪ್ರಾರಂಭಿಸಿದ್ದಾರೆ. ಆದರೆ, ಈ ಬಗ್ಗೆ ಟ್ವಿಟ್ಟರ್‌ಗೆ ಗೊತ್ತಾದಾಗ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಿಂದ ಡಿಸೆಂಬರ್ 20ರಂದು ಅವರನ್ನು ನಿರ್ಬಂಧಿಸಿತು. ನಂತರ, ಬಳಕೆದಾರರನ್ನು ಎಚ್ಚರಿಸಲು ಬಾಲಿಕ್ ವಾಟ್ಸ್‌ಆಪ್ ಗುಂಪನ್ನು ರಚಿಸಿದ್ದಾರೆ.

ವೆಬ್‌ನಲ್ಲಿ ಈ ದೋಷವಿಲ್ಲ
ವೆಬ್ ಆಧಾರಿತ ಅಪ್‌ಲೋಡ್ ವೈಶಿಷ್ಟ್ಯದಲ್ಲಿ ಈ ದೋಷ ಅಸ್ತಿತ್ವದಲ್ಲಿಲ್ಲ ಎಂದು ಟ್ವಿಟ್ಟರ್ ಖಚಿತಡಪಡಿಸಿದೆ. ದುಷ್ಕರ್ಮಿಗಳು ದುರುದ್ದೇಶಪೂರಿತ ಕೋಡ್‌ನ್ನು ತನ್ನ ಅಪ್ಲಿಕೇಶನ್‌ಗೆ ಸೇರಿಸಿದ್ದಾರೆ ಎಂದು ಟ್ವಿಟ್ಟರ್ ಒಪ್ಪಿಕೊಂಡಿದ್ದು, ಅದರಿಂದ ಭಾರತ ಸೇರಿ ವಿಶ್ವದಾದ್ಯಂತ ಹಲವಾರು ಆಂಡ್ರಾಯ್ಡ್ ಬಳಕೆದಾರರ ಮಾಹಿತಿಯನ್ನು ಹೊಂದಾಣಿಕೆ ಮಾಡಬಹುದಿತ್ತು. ಈ ದುರ್ಬಲತೆ ಹ್ಯಾಕರ್‌ಗಳಿಗೆ ಸಾರ್ವಜನಿಕರಲ್ಲದ ಖಾತೆ ಮಾಹಿತಿಯನ್ನು ನೋಡಲು ಅಥವಾ ನಿಮ್ಮ ಖಾತೆಯನ್ನು ನಿಯಂತ್ರಿಸಲು ಅನುಮತಿಸುತ್ತದೆ.

ಆಪಲ್ ದೋಷ ಗುರುತಿಸಿದ್ದ ಬಾಲಿಕ್
2013ರಲ್ಲಿ ಆಪಲ್‌ನ ಡೆವಲಪರ್ ಕೇಂದ್ರದ ಮೇಲೆ ಭದ್ರತಾ ನ್ಯೂನತೆಯ ಉಲ್ಲಂಘನೆಯನ್ನು ಗುರುತಿಸಿ ಬಾಲಿಕ್ ಪ್ರಸಿದ್ಧರಾಗಿದ್ದರು. ಕಂಪನಿಯು ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ದೋಷ ಮತ್ತೆ ಬರದಿರಲು ಸಕ್ರಿಯವಾಗಿ ತನಿಖೆ ನಡೆಸುತ್ತಿದೆ ಎಂದು ಟ್ವಿಟ್ಟರ್ ವಕ್ತಾರರು ಹೇಳಿದ್ದಾರೆ.

ಹಲವು ಪ್ರಕರಣಗಳು
ಮೇ ತಿಂಗಳಲ್ಲಿ, ಟ್ವಿಟ್ಟರ್ ಕೆಲವು ಐಒಎಸ್ ಬಳಕೆದಾರರ ಡೇಟಾವನ್ನು ಹೆಸರಿಸದ ಪಾಲುದಾರರೊಂದಿಗೆ ಹಂಚಿಕೊಂಡಿರುವ ದೋಷವನ್ನು ಬಹಿರಂಗಪಡಿಸಿದೆ, ಬಳಕೆದಾರರು ಡೇಟಾವನ್ನು ಹಂಚಿಕೊಳ್ಳಲು ಆಯ್ಕೆ ಮಾಡದಿದ್ದರೂ ಸಹ ಆ ದೋಷ ಟ್ವಿಟರ್‌ನ ಐಒಎಸ್ ಬಳಕೆದಾರರ ಸಂಖ್ಯೆಯ ಮೇಲೆ ಪರಿಣಾಮ ಬೀರಿತ್ತು. ಇದಲ್ಲದೇ, ಫೆಬ್ರವರಿಯಲ್ಲಿ, ಕೆಲವು ಆಂಡ್ರಾಯ್ಡ್ ಬಳಕೆದಾರರು ತಮ್ಮ ಖಾತೆಗಳಿಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸವನ್ನು ಬದಲಾಯಿಸಿದಾಗ ಅವರ ಖಾಸಗಿ ಟ್ವೀಟ್‌ಗಳು ಬಹಿರಂಗವಾಗಿತ್ತು.. ಕಳೆದ ವರ್ಷ ಭಾರೀ ಪ್ರಮಾಣದ ಮಾಹಿತಿ ಸೋರಿಕೆಯಾಗಿದ್ದರಿಂದ ತನ್ನ ಎಲ್ಲಾ ಬಳಕೆದಾರರಿಗೆ ಪಾಸ್‌ವರ್ಡ್ ಬದಲಾಯಿಸುವಂತೆ ಟ್ವಿಟ್ಟರ್ ಎಚ್ಚರಿಸಿತ್ತು.


Click it and Unblock the Notifications








