Subscribe to Gizbot

ಇಂಟರ್ನೆಟ್ ಬಳಕೆದಾರರೇ ಎಚ್ಚರ: ಬಿಬಿಸಿ ವರದಿ ಮಾಡಿದೆ ನಿಮ್ಮ ಕಂಪ್ಯೂಟರ್ ಮೇಲೆಯೂ ದಾಳಿ ನಡೆಯಬಹುದು..!!!

Written By:

ವಿಶ್ವದ ಬಹುತೇಕ ದೇಶಗಳ ಪ್ರಮುಖ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸಿ, ತಮ್ಮ ಹತೋಟಿಗೆ ತೆಗೆದುಕೊಂಡಿರುವ ಹ್ಯಾಕರ್ಸ್‌ಗಳು ಇಂದು ಮತ್ತೊಂದು ಸುತ್ತಿನ ದಾಳಿಯನ್ನು ನಡೆಸಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ ಎನ್ನಲಾಗಿದೆ.

ಬಿಬಿಸಿ ವರದಿ ಮಾಡಿದೆ ನಿಮ್ಮ ಕಂಪ್ಯೂಟರ್ ಮೇಲೆಯೂ ದಾಳಿ ನಡೆಯಬಹುದು..!!!

ಭಾರತ ಸೇರಿದಂತೆ ವಿಶ್ವದ 150 ದೇಶಗಳ ಎರಡು ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದ ಹ್ಯಾಕರ್ಸ್‌ಗಳ ತಂಡ ಇದೇ ಮಾದರಿಯಲ್ಲಿ ಮತ್ತೊಂದು ದಾಳಿಯನ್ನು ಸೋಮವಾರ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವೂ ರವಾನೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
‘ವನ್ನಾಕ್ರೈ’ ವೈರಸ್‌:

‘ವನ್ನಾಕ್ರೈ’ ವೈರಸ್‌:

ಸದ್ಯ ಕಂಪ್ಯೂಟರ್ ಲೋಕದಲ್ಲೇ ಸದ್ದು ಮಾಡುತ್ತಿರುವ ವನ್ನಾಕ್ರೈ ವೈರಸ್ ಅನ್ನು ಮತ್ತಷ್ಟು ಪ್ರಮಾಣದಲ್ಲಿ ದಾಳಿಗೆ ಕಳುಹಿಸಲು ಸೈಬರ್ ಹ್ಯಾಕರ್ಸ್‌ಗಳು ಮುಂದಾಗಿದ್ದಾರೆ. ಇದನ್ನು ನಿಯಂತ್ರಿಸುವುದು ಕಸ್ಟ ಸಾಧ್ಯ ಎನ್ನಲಾಗಿದೆ.

ಹೊಸ ಮಾದರಿಯ ವೈರಸ್:

ಹೊಸ ಮಾದರಿಯ ವೈರಸ್:

ಸದ್ಯ ತಮ್ಮ ದಾಳಿಗೆ ಹ್ಯಾಕರ್ಸ್ ಹೊಸ ಮಾದರಿಯ ವೈರಸ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಈ ದಾಳಿಗೆ ತುತ್ತಾದ ಕಂಪ್ಯೂಟರ್‌ಗಳನ್ನು ಹ್ಯಾಕರ್ಸ್ ಮಾತ್ರವೇ ತರೆಯಲು ಸಾಧ್ಯವಿದ್ದು, ಕಂಪ್ಯೂಟರ್ ಮಾಲೀಕರು ಯಾವುದೇ ರೀತಿಯಲ್ಲಿ ಅದನ್ನು ತೆರೆಯಲು ಸಾಧ್ಯವಾಗುವುದಿಲ್ಲ.

ಡೇಟಾ-ಮಾಹಿತಿ ಲೂಟಿ:

ಡೇಟಾ-ಮಾಹಿತಿ ಲೂಟಿ:

ನಿಮ್ಮ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿದ ನಂತರದಲ್ಲಿ ಕಂಪ್ಯೂಟರ್‌ನ ಸಂಪೂರ್ಣ ನಿಯಂತ್ರಣವೂ ಹ್ಯಾಕರ್ಸ್ ಪಾಲಾಗಲಿದೆ. ಅವರು ತಮ್ಮ ವೈರಸ್ ಮೂಲಕ ಮಾಹಿತಿಗಳನ್ನು ಅಳಿಸುವ ಮತ್ತು ಕಾಪಿ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಇಂಟರ್ನೆಟ್ ಬಳಕೆದಾರು ಎಚ್ಚರದಿಂದ ಇರಬೇಕು.

ಹಣ ಬೇಡಿಕೆ ಇಟ್ಟಿದ್ದಾರೆ:

ಹಣ ಬೇಡಿಕೆ ಇಟ್ಟಿದ್ದಾರೆ:

ಸದ್ಯ ವಿಶ್ವದ 2 ಲಕ್ಷಕ್ಕೂ ಹೆಚ್ಚಿನ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿರುವ ಹ್ಯಾಕರ್ಸ್‌ಗಳು ಮತ್ತೆ ಇಂದು ಲಕ್ಷಾಂತರ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಅಧಿಕವಾಗಿದೆ. ಈಗ ದಾಳಿಗೆ ತುತ್ತಾಗಿರುವ ಕಂಪ್ಯೂಟರ್‌ಗಳ ಸರಿ ಮಾಡಲು 300 ಅಮೆರಿಕ ಡಾಲರ್ ನೀಡುವಂತೆ ಮನವಿ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Ransomware is a program that gets into your computer, either by clicking on the wrong thing or downloading the wrong thing, and then it holds something you need to ransom. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot