Home
ಸುದ್ದಿಜಾಲ

ಅಂಗಾಂಗ ರವಾನೆಗೆ ಐಐಎಸ್ಸಿಯಿಂದ ಡ್ರೋನ್ ಸಾಧನ ಆವಿಷ್ಕಾರ..!

By Avinash

ಬೆಂಗಳೂರಿನಲ್ಲಿರುವ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆ ಅಂಗಾಂಗ ರವಾನೆಗೆ ಹೊಸ ಲೈಫ್ ಬಾಕ್ಸ್ ಎಂಬ ಡ್ರೋನ್ ಸಾಧನ ಆವಿಷ್ಕರಿಸಿದ್ದು, ಡ್ರೋನ್ ಮೂಲಕ ಅಂಗಾಂಗ ರವಾನಿಸಬಹುದಾಗಿದೆ. ಭಾರತದಲ್ಲಿ ಇತ್ತೀಚೆಗೆ ಅಂಗಾಗ ದಾನ ಕುರಿತು ನಿಧಾನವಾಗಿ ಜಾಗೃತಿ ಮೂಡುತ್ತಿದೆ.

ಹೊಸ ಸಾಧನದ ಆವಿಷ್ಕಾರದಿಂದ ಅಂಗಾಂಗ ದಾನದ ಪ್ರಕ್ರಿಯೆಗೆ ವೇಗ ದೊರೆಯುವ ಸಾಧ್ಯತೆಯಿದ್ದು, ಅಂಗಾಂಗ ಪಡೆಯುವವರಿಗೆ ಸಮಯಕ್ಕೆ ಸರಿಯಾಗಿ ಅಂಗಾಂಗ ರವಾನಿಸುವ ವ್ಯವಸ್ಥೆಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಅಂಗಾಂಗ ರವಾನೆಗೆ ಐಐಎಸ್ಸಿಯಿಂದ ಡ್ರೋನ್ ಸಾಧನ ಆವಿಷ್ಕಾರ..!

ಅಂಗಾಂಗ ರವಾನೆಗೆ ಟ್ರಾಫಿಕ್ಕೇ ದೊಡ್ಡ ಸಮಸ್ಯೆ

ಅಂಗಾಂಗ ರವಾನೆಗೆ ಟ್ರಾಫಿಕ್ಕೇ ದೊಡ್ಡ ಸಮಸ್ಯೆ

ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಂದ ಅಂಗಾಂಗ ದಾನ ಪಡೆದು ರೋಗಿಯಿರುವ ಸ್ಥಳಕ್ಕೆ ರವಾನಿಸುವುದಕ್ಕೆ ಟ್ರಾಫಿಕ್ ಕಿರಿಕಿರಿಯುಂಟು ಮಾಡುತ್ತದೆ. ಗ್ರೀನ್ ಕಾರಿಡಾರ್ ನಿಂದಲೂ ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಭಾರತೀಯ ವಿಜ್ಞಾನ ಸಂಸ್ಥೆ ಅಂಗಾಂಗವನ್ನು ತ್ವರಿತ ಮತ್ತು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ರವಾನಿಸುವ ರೀತಿ ಸಾಧನ ಆವಿಷ್ಕರಿಸಿದೆ.

ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ

ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ

ಭಾರತೀಯ ವಿಜ್ಞಾನ ಸಂಸ್ಥೆ ಕಂಡುಹಿಡಿದಿರುವ ಹೊಸ ಡ್ರೋನ್ ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ. ಅಲ್ಲದೇ ಯಾವುದೇ ಹವಾಮಾನದಲ್ಲಿ ವಾಯುಮಾರ್ಗದ ಮೂಲಕ ದೂರದೂರಿಗೂ ಹೋಗಬಹುದಾದ ರೀತಿಯಲ್ಲಿ ಡ್ರೋನ್ ರೂಪಿಸಲಾಗಿದೆ.

ಹೃದಯ ಸಾಗಿಸುವುದಕ್ಕೆ ಸಾಧನ ಆವಿಷ್ಕಾರ

ಹೃದಯ ಸಾಗಿಸುವುದಕ್ಕೆ ಸಾಧನ ಆವಿಷ್ಕಾರ

ಭಾರತೀಯ ವಿಜ್ಞಾನ ಸಂಸ್ಥೆ ಸದ್ಯ ಹೃದಯ ರವಾನಿಸುವ ಸಾಧನವನ್ನು ಆವಿಷ್ಕರಿಸಿದ್ದು, ಮುಂದಿನ ದಿನಗಳಲ್ಲಿ ಇತರ ಅಂಗಾಂಗಗಳನ್ನು ರವಾನಿಸಲು ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತದೆಯಂತೆ.

ಸಮಯ ಮತ್ತು ಹಣ ಉಳಿತಾಯ

ಸಮಯ ಮತ್ತು ಹಣ ಉಳಿತಾಯ

ಒಂದು ಅಂಗಾಂಗವನ್ನು ವಿಮಾನದಲ್ಲಿ ರವಾನಿಸಲು ಸುಮಾರು 2 ಲಕ್ಷ ರೂ. ಖರ್ಚಾಗುತ್ತದೆ. ದೂರದ ಸ್ಥಳವಾದರೆ ಇನ್ನಷ್ಟು ಖರ್ಚಾಗಲಿರುವುದಂತು ಸತ್ಯ. ಆದರೆ, ಹೊಸ ಸಾಧನದಿಂದ ಅರ್ಧದಷ್ಟು ಮಾತ್ರ ಹಣ ಖರ್ಚಾಗಲಿದೆ. ಇನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲು ಟ್ರಾಫಿಕ್ ಪೊಲೀಸರ ಶ್ರಮ ಮತ್ತು ಸಾರ್ವಜನಿಕರ ಸಮಯವನ್ನು ಸಹ ಉಳಿಸಬಹುದಾಗಿದೆ.

ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೊಸ ಡ್ರೋನ್ ಸಾಧನ ಆವಿಷ್ಕರಿಸಿರುವ ಐಐಎಸ್ಸಿಯ ವಿಜ್ಞಾನಿ ತಂಡದಲ್ಲಿರುವ ಪ್ರೊ. ಬಿ.ಗುರುಮೂರ್ತಿ, ಪ್ರೊ. ಎ.ಗೋಸ್ವಾಲ್, ವಿದ್ಯಾರ್ಥಿಗಳಾದ ರೋಹಿತ್ ನಂಬಿಯಾರ್ ಹಾಗೂ ದೇವಲ್ ಕರಿಯಾ ಅವರು ಹೀಗಾಗಲೇ ಹೊಸ ಸಾಧನದ ಪರೀಕ್ಷಾರ್ಥ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು, ವಾಯುಮಾರ್ಗದಲ್ಲಿ ಯಾವುದೇ ಕಿರಿಕಿರಿಯಿಲ್ಲದೇ ಅಂಗಾಂಗವನ್ನು ನಿಗದಿತ ಸ್ಥಳಕ್ಕೆ ತಲುಪಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

How To Link Aadhaar With EPF Account Without Login (KANNADA)
4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವುಳ್ಳ ಪೆಟ್ಟಿಗೆ ಬಳಕೆ

4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವುಳ್ಳ ಪೆಟ್ಟಿಗೆ ಬಳಕೆ

ಹೃದಯ ಮತ್ತು ಶ್ವಾಸಕೋಶವನ್ನು 6 ಗಂಟೆಯೊಳಗೆ ರವಾನಿಸಿ ಕಸಿ ಮಾಡಬೇಕು. ಯಕೃತ್ ಮತ್ತು ಮೇದೋಜಿರಕ ಅಂಗವನ್ನು 12 ರಿಂದ 24 ಗಂಟೆಯೊಳಗೆ ರವಾನಿಸಿ ಕಸಿ ಮಾಡಬೇಕಿರುವುದು ಅಗತ್ಯ. ಅಂಗಾಂಗಗಳನ್ನು ಕೊಂಡೊಯ್ಯುವ ಸಮಯದಲ್ಲಿ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವುಳ್ಳ ಪೆಟ್ಟಿಗೆಯಲ್ಲಿ ಅಂಗಾಂಗವನ್ನು ರವಾನಿಸಬೇಕಾಗುತ್ತದೆ. ಈ ಅಂಶವನ್ನು ಹೊಸ ಸಾಧನದಲ್ಲಿ ಅಳವಿಡಿಸಲಾಗಿದೆ.

Best Mobiles in India

English summary
New invention from IISc, Organ transfer by drone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+