ಐಪಾಡ್ ಅನ್ನು ದೇಹಕ್ಕೆ ಅಂಟಿಸಿಕೊಂಡ ಪ್ರೇಮಿ

Posted By: Varun
ಐಪಾಡ್ ಅನ್ನು ದೇಹಕ್ಕೆ ಅಂಟಿಸಿಕೊಂಡ ಪ್ರೇಮಿ
ಇಮೇಜ್ ಕೃಪೆ :ರಾಯ್ಟರ್ಸ್

ವಿಶ್ವದಾದ್ಯಂತ ಆಪಲ್ ಕಂಪನಿಯ ಉತ್ಪನ್ನಗಳಿಗೆ ಕ್ರೇಜಿಯಾದ ಅಭಿಮಾನಿಗಳಿದ್ದಾರೆ. ಹ್ಯಾರಿ ಪಾಟರ್ ಪುಸ್ತಕ ಬಿಡುಗಡೆಗೆ ಹೇಗೆ ಜನ ಕುತೂಹಲದಿಂದ ಕಾಯುತ್ತಾರೋಹಾಗೆಯೇ ವಿದೇಶದಲ್ಲೂ ಆಪಲ್ ನ ಐಪ್ಯಾಡ್, ಐ ಫೋನ್ ಇರಲಿ, ತಾನೇ ಮೊದಲು ಆ ಸಾಧನವನ್ನು ಕೊಳ್ಳಬೇಕು ಎಂದು ಹಂಬಲಿಸುತ್ತಾನೆ.

ಹಾಗೆಯೇ ತಮ್ಮ ತಮ್ಮ ಐಪಾಡ್, ಐಫೋನ್, ಐಫೋನ್ ಅನ್ನು ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳೂ ಇದ್ದಾರೆ. ಆಪಲ್ ಅನ್ನು 10 ಸಾವಿರ ಅಡಿಯಿಂದ ಪರೀಕ್ಷಿಸಿ ನೋಡುವ ಕಂಪನಿ, ಜ್ವಾಲಾಮುಖಿಯ ಲಾವಾರಸದಲ್ಲಿ ಐಪ್ಯಾಡ್ ಅನ್ನು ಹಾಕಿ ಅದರ ವೀಡಿಯೋ ತೆಗೆದು ತನ್ನ ಕಂಪನಿಯ ಪ್ರಚಾರಕ್ಕೆ ಬಳಸಿಕೊಳ್ಳುವ ಓರ್ವ CEO, ಈ ರೀತಿ ಹಲವಾರು ವಿಚಿತ್ರ ಸುದ್ದಿಗಳನ್ನು ನಮ್ಮ ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ.

ಈಗ ಅದೇ ರೀತಿಯ ವಿಚಿತ್ರ ಅಭಿಮಾನಿಯೊಬ್ಬನ ಸುದ್ದಿಯೊಂದು ಬಂದಿದೆ. ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಡೇವ್ ಹರ್ಬನ್ ಎಂಬ 21 ವರ್ಷದ ಬಾಡಿ ಪಿಯರ್ಸಿಂಗ್ ಆರ್ಟಿಸ್ಟ್ ಗೆ ತನ್ನ ಐಪಾಡ್ ಎಂದರೆ ವಿಪರೀತ ಹುಚ್ಚು. ಟ್ಯಾಟೂ ಪಾರ್ಲರ್ ಒಂದರಲ್ಲಿ ಕೆಲಸ ಮಾಡುವ ಈತನಿಗೆ ಮೈಪೂರಾ ಟ್ಯಾಟೂ ಇದೆ. ಅದೇ ರೀತಿಯಲ್ಲಿ ತನ್ನ ಮೈಗೆ ಅಂಟಿಕೊಂಡಿರುವ ಟ್ಯಾಟೂ ರೀತಿಯಲ್ಲೇ ಐಪಾಡ್ ಅನ್ನೂ ಮೈಗೆ ಅಂಟಿಸಿಕೊಂಡರೆ ಹೇಗೆ ಎಂಬ ಐಡಿಯಾ ಹೊಳೆಯಿತು.

ಸ್ವತಃ ತಾನೇ ಬಾಡಿ ಪಿಯರ್ಸಿಂಗ್ ಆರ್ಟಿಸ್ಟ್ ಆಗಿರುವುದರಿಂದ ಟ್ಯಾಟೂ ಹಾಗು ಪಿಯರ್ಸಿಂಗ್ ನ ನೋವನ್ನೂ ಲೆಕ್ಕಿಸದೆ ಟೈಟಾನಿಯಂ ಲೋಹದ ಸ್ಟಡ್ ಗಳನ್ನು ತನ್ನ ಎಡಗೈ ನ ವಾಚ್ ಕಟ್ಟುವ ಜಾಗದಲ್ಲಿ implant ಮಾಡಿಕೊಂಡೇ ಬಿಟ್ಟ. ಸಿಕ್ಕಾಪಟ್ಟೆ ಗಾಯವಾಗಿ, ರಕ್ತ ಹೋದರೂ, ಗಾಯ ಒಣಗುವವರೆಗೂ ಕಾದು, ತನ್ನ ಫೇವರಿಟ್ ಐಪಾಡ್ ಅನ್ನು ಆಯಸ್ಕಾಂತೀಯವಾಗಿ ಕೆಲಸ ಮಾಡುವ ಟೈಟಾನಿಯಂ ಸ್ಟಡ್ ನಿಂದ ವಾಚ್ ರೀತಿಯಲ್ಲಿ ಕೈಗೆ ಅಂಟಿಸಿಕೊಂಡಿದ್ದಾನೆ. ಇದರ ವೀಡಿಯೋ ಯೂಟ್ಯೂಬ್ ನಲ್ಲಿ ಅಪ್ಲೋಡ್ ಕೂಡ ಆಗಿದ್ದು ಆಗಲೇ 9 ಲಕ್ಷ ಹಿಟ್ಸ್ ಕಂಡಿದೆ.

ಮುಂದೊಂದು ದಿನ ಈತ ಐ ಫೋನ್ ಅನ್ನೂ ದೇಹಕ್ಕೆ ಅಂಟಿಸಿಕೊಂಡರೆ ಏನೂ ಆಶ್ಚರ್ಯವಿಲ್ಲ. ಅಲ್ಲವೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot