ಜಿಯೋ ಮಾನ್ಸೂನ್ ಆಫರ್: ವೆಚ್ಚವಿಲ್ಲದೇ 90 GB ಡೇಟಾ ಪಡೆದುಕೊಳ್ಳುವುದು ಹೇಗೆ..?
ಮತ್ತೇ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ ಸಲುವಾಗಿ ಜಿಯೋ ಫೋನ್ 2 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಇದರೊಂದಿಗೆ ತನ್ನ ಹಳೇಯ ಜಿಯೋ ಪೋನ್ ಬೇಡಿಕೆಯನ್ನು ಹಾಗೆ ಉಳಿಸಿಕೊಳ್ಳುವ ಸಲುವಾಗಿ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ. ಹಳೇಯ ಸ್ಮಾರ್ಟ್‌ಫೋನ್‌ವೊಂದಿಗೆ ಎಕ್ಸ್‌ಚೇಂಚ್ ಅನ್ನು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಇದರೊಂದಿಗೆ ಜಿಯೋ ಫೋನ್ ಬಳಕೆದಾರರಿಗೆ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ನೀಡಲು ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ. ಯಾವುದೇ ಹೆಚ್ಚಿನ ವೆಚ್ಚವನ್ನು ಇಲ್ಲದೇ 90GB ಡೇಟಾವನ್ನು ಬಳಕೆಗೆ ನೀಡಲಿದೆ. ಈ ಹಿನ್ನಲೆಯಲ್ಲಿ ನೀವು ಹೇಗೆ ಉಚಿತವಾಗಿ 90GB ಡೇಟಾವನ್ನು ಪಡೆದುಕೊಳ್ಳುವುದು ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಮಾನ್ಸೂನ್ ಹಂಗಾಮ:
ಹೊಸದಾಗಿ ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿರುವ ಈ ಆಫರ್ ನಲ್ಲಿ ಬಳಕೆದಾರರು ಒಮ್ಮೆ ಆರು ತಿಂಗಳ ರಿಚಾರ್ಜ್ ಅನ್ನು ಮಾಡಿಕೊಂಡಲ್ಲಿ 90GB ಡೇಟಾವನ್ನು ಹೆಚ್ಚವರಿಯಾಗಿ ಜಿಯೋ ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ರೂ.594 ನೀಡಬೇಕಾಗಿದೆ.

ಸ್ಪೇಷಲ್ ಎಕ್ಸ್‌ಚೇಂಜ್ ಬೋನಸ್:
ಇದಲ್ಲದೇ ಹೆಚ್ಚುವರಿ ಡೇಟಾಗಾಗಿಯೇ ಹೊಸದೊಂದು ಆಫರ್ ನೀಡುತ್ತಿದೆ. ಇದಕ್ಕಾಗಿ ಸ್ಪೇಷಲ್ ಎಕ್ಸ್‌ಚೇಂಜ್ ಬೋನಸ್ ಆಫರ್ ಅನ್ನು ಲಾಂಚ್ ಮಾಡಿದೆ. ಇದರಲ್ಲ ಬಳಕೆದಾರರಿಗೆ ರೂ.101 ಬೆಲೆಯ 6GB ಡೇಟಾ ವೋಚರ್ ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹಚ್ಚುವರಿ ಲಾಭವಾಗಲಿದೆ.

ಆರು ತಿಂಗಳಿಗೆ 90 GB ಡೇಟಾ;
ಈ ಹೊಸ ಪ್ಲಾನ್ ನಲ್ಲಿ ಆರು ತಿಂಗಳಿಗೆ ಒಮ್ಮೆ ರಿಚಾರ್ಜ್ ಮಾಡಿಸಿಕೊಂಡ ನಂತರದಲ್ಲಿ ಬಳಕೆದಾರರು ತಮಗೆ ದೊರೆಯುವ ಹೆಚ್ಚರಿ ಡೇಟಾ ಬೋಸನ್ ಅನ್ನು ಪಡೆಯುವ ಮೂಲಕ ಆರು ತಿಂಗಳಿನಲ್ಲಿ 90GB ಡೇಟಾವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ತಮ್ಮ ಜಿಯೋ ಪೋನಿನಲ್ಲಿಯೇ ಸಾಕಷ್ಟು ಡೇಟಾವನ್ನು ಬ್ರೌಸ್ ಮಾಡಬಹುದಾಗಿದೆ.

ಜಿಯೋ ಫೋನ್ ಪ್ಲಾನ್:
ಜಿಯೋ ಪೋನ್ ಬಳಕೆದಾರರಿಗೆ ಮಾತ್ರವೇ ಸಿಮೀತವಾಗಿರುವ ಹಲವು ಆಫರ್ ಗಳು ಲಭ್ಯವಿದೆ. ರೂ.49 ಮತ್ತು ರೂ.153ರ ಪ್ಲಾನ್‌ಗಳು ಲಭ್ಯವಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದ ಆಫರ್ ಗಳು ದೊರೆಯುತ್ತಿದೆ. ಈ ಎರಡು ಪ್ಲಾನ್‌ಗಳು 28 ದಿನಗಳಿಗೆ ಸಿಮೀತವಾಗಿದೆ.

ರೂ.49 ಪ್ಲಾನ್:
ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿರುವ ರೂ.49 ಪ್ಲಾನ್‌ನಲ್ಲಿ ಬಳಕೆದಾರರಿಗೆ ತಿಂಗಳಿಗೆ 1GB ಡೇಟಾ ಬಳಕೆಗೆ ಲಭ್ಯವಿರಲಿದೆ. ಇದರೊಂದಿಗೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಇದರಲ್ಲಿ ಉಚಿತ SMS ಕಳುಹಿಸುವ ಅವಕಾಶವು ಇದೆ.

ರೂ.153 ಪ್ಲಾನ್:
ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಹೆಚ್ಚು ಲಾಭಗಳು ದೊರೆಯಲಿದೆ. ಇದರಲ್ಲಿ ನಿತ್ಯ ಬಳಕೆದಾರರಿಗೆ 1.5GB ಡೇಟಾ ಬಳಕೆಗೆ ದೊರೆಯುತ್ತಿದೆ ಎನ್ನಲಾಗಿದೆ. ಇದಲ್ಲದೇ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಇದರಲ್ಲಿ ಉಚಿತ SMS ಕಳುಹಿಸುವ ಅವಕಾಶವು ಇದೆ.

ಇನ್ನೊಂದು ಪ್ಲಾನ್ ಸಾಧ್ಯತೆ:
ಇದಲ್ಲದೇ ಇದರೊಂದಿಗೆ ಹೊಸದಾಗಿ ಹೊಸದೊಂದು ಪ್ಲಾನ್ ಅನ್ನು ಲಾಂಚ್ ಮಾಡುವ ಸಾಧ್ಯತೆ ಬಗ್ಗೆ ಮಾತುಕತೆಯೂ ನಡೆಯುತ್ತಿದೆ. ಇದರಲ್ಲಿ ರೂ.99ಕ್ಕೆ ಬಳಕೆದಾರರಿಗೆ ನಿತ್ಯ 0.5GB ಡೇಟಾ ನಿತ್ಯ ಬಳಕೆದೊರೆಯಲಿದೆ ಎನ್ನಲಾಗಿದೆ. ಇದರೊಂದಿಗೆ ಕರೆ ಮಾಡುವ ಅವಕಾಶವು ಲಭ್ಯವಿರಲಿದೆ. ಅದರೊಂದಿಗೆ 28 ದಿನ ಗಳ ವ್ಯಾಲಿಡಿಟಿಯೂ ಲಭ್ಯವಿರಲಿದೆ.


Click it and Unblock the Notifications








