Home
ಸುದ್ದಿಜಾಲ

ವೊಡಾಫೋನಿನ 299 ರೂ. ರೀಚಾರ್ಜ್ ಮಾಡಿಸಿ ಮೋಸಹೋಗಬೇಡಿ!

ದೀರ್ಘಕಾಲಿನ ಯೋಜನೆಯನ್ನು ಹುಡುಕುತ್ತಿರುವ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ವೊಡಾಫೋನ್ 299ರೂ.ಗಳ ಹೊಸ ಪ್ರಿಪೇಯ್ಡ್ ರೀಚಾರ್ಜ್ ಅನ್ನು ತಂದಿದೆ. ಈ 299 ರೂ. ಪ್ರಿಪೇಯ್ಡ್ ಯೋಜನೆ 70 ದಿನಗಳ ಮಾನ್ಯತೆಯನ್ನು ನೀಡುತ್ತದೆ. 70 ದಿನಗಳ ಮಾನ್ಯತೆಯೊಂದಗೆ 3GB ಡೇಟಾ ನೀಡುತ್ತಿದೆ ಎಂಬ ಸುದ್ದಿಯು ನಿಜ. ಆದರೆ, ಗ್ರಾಹಕರಿಗೆ ಇದು ಉತ್ತಮ ಯೋಜನೆಯಲ್ಲ. ಅಂದರೆ , ಈ ಯೋಜನೆಯ ಪ್ರಯೋಜನಗಳು ವ್ಯವಹಾರದಲ್ಲಿ ಉತ್ತಮವಾಗಿಲ್ಲ.

ವೊಡಾಫೋನಿನ 299 ರೂ. ರೀಚಾರ್ಜ್ ಮಾಡಿಸಿ ಮೋಸಹೋಗಬೇಡಿ!

ಹೌದು, ಬಹುತೇಕ ಮಾಧ್ಯಮಗಳು ವೊಡಾಫೋನ್‌ನ ಹೊಸ 299 ರೂ. ರೀಚಾರ್ಜ್‌ ಮೇಲೆ 3 ಜಿಬಿ 2 ಜಿ / 3 ಜಿ / 4 ಜಿ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 1000 ಎಸ್‌ಎಂಎಸ್‌ಗಳನ್ನು ಸಂಪೂರ್ಣ 70 ದಿನಗಳ ಮಾನ್ಯತೆಯ ಅವಧಿಗೆ ನಿಡುತ್ತಿದೆ ಎಂದು ವರದಿ ಮಾಡಿವೆ. ಆದರೆ, ಗ್ರಾಹಕರು ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, 3 ಜಿಬಿ ಡೇಟಾ ಪ್ರತಿದಿನಕ್ಕೆ ಅಲ್ಲ. ಬದಲಾಗಿ, ಚಂದಾದಾರರು ಕೇವಲ 3 ಜಿಬಿ ಡೇಟಾವನ್ನು ಸಂಪೂರ್ಣ 70 ದಿನಗಳ ಅವಧಿಗೆ ಪಡೆಯುತ್ತಾರೆ.

ನಾವು ವೊಡಾಫೋನ್ 299 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ನೋಡಿದ್ದೇವೆ, ಇದು ವೊಡಾಫೋನ್‌ನಿಂದ ಬೋನಸ್ ಕಾರ್ಡ್ ಕೊಡುಗೆಯಾಗಿದೆ. ವೊಡಾಫೋನ್‌ನ ಈ ಯೋಜನೆಯು 70 ದಿನಗಳ ಸಿಂಧುತ್ವದೊಂದಿಗೆ ಬರುತ್ತದೆ, ಮತ್ತು ಈ ಅವಧಿಯಲ್ಲಿ, ಚಂದಾದಾರರು ಉಚಿತ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಆನಂದಿಸುತ್ತಾರೆ. ಡೇಟಾಗೆ ಸಂಬಂಧಿಸಿದಂತೆ, ಚಂದಾದಾರರು ಕೇವಲ 3 ಜಿಬಿ ಡೇಟಾವನ್ನು ಸಂಪೂರ್ಣ ಸಿಂಧುತ್ವ ಅವಧಿ 70 ದಿನಗಳವರೆಗೆ ಪಡೆಯುತ್ತಾರೆ.

ವೊಡಾಫೋನಿನ 299 ರೂ. ರೀಚಾರ್ಜ್ ಮಾಡಿಸಿ ಮೋಸಹೋಗಬೇಡಿ!

ಇತ್ತೀಚೆಗೆ, ವೊಡಾಫೋನ್ ತನ್ನ ಚಂದಾದಾರರಿಗಾಗಿ 229 ರೂ.ಗಳ ಮತ್ತೊಂದು ಪ್ರಿಪೇಯ್ಡ್ ಯೋಜನೆಯನ್ನು ಸಹ ಬಿಡುಗಡೆ ಮಾಡಿದೆ ಮತ್ತು ಈ ಯೋಜನೆಯು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಡೇಟಾಗೆ ಸಂಬಂಧಿಸಿದಂತೆ, ಈ ಯೋಜನೆಯು 299 ರೂಗಳ ಪ್ರಿಪೇಯ್ಡ್ ಯೋಜನೆಗೆ ಹೋಲಿಸಿದರೆ ಹೆಚ್ಚಿನ ಡೇಟಾವನ್ನು ನೀಡುತ್ತದೆ. ಸಂಪೂರ್ಣ ಮಾನ್ಯತೆಯ ಅವಧಿಯಲ್ಲಿ ಬಳಕೆದಾರರು ಈ ಯೋಜನೆಯು ಒಟ್ಟು 56 ಜಿಬಿ ಡೇಟಾ ನೀಡುತ್ತದೆ.

ಹಾಗಾಗಿ, ವೊಡಾಫೋನ್ ಡೇಟಾ ಬಳಕೆ ಗ್ರಾಹಕರು 229 ರೂ.ಗಳ ರೀಚಾರ್ಜ್ ಅನ್ನು ಮಾಡಿಸದೇ ಇರುವುದು ಒಳ್ಳೆಯದು. 70 ದಿನಗಳ ಮಾನ್ಯತೆ ಮತ್ತು 3GB ಡೇಟಾ ಸಿಗುತ್ತದೆ ಎಂದು ಯಾಮಾರಿದರೆ ಪ್ರತಿದಿನ ಹೆಚ್ಚುವರಿ ಡೇಟಾ ದೊರೆಯುವುದಿಲ್ಲ. ಇದರ ಬದಲಾಗಿ, 229 ಪ್ರಿಪೇಯ್ಡ್ ಯೋಜನೆಯಲ್ಲಿ ದಿನಕ್ಕೆ 2 ಜಿಬಿ ಡೇಟಾವನ್ನು ಪಡೆಯಬಹುದು. ಈ ಪ್ರಿಪೇಯ್ಡ್ ಯೋಜನೆಯ 28 ದಿನಗಳಲ್ಲಿ ಒಟ್ಟು 56 ಜಿಬಿ ಡೇಟಾವನ್ನು ಗ್ರಾಹಕರಿಗೆ ಒದಗಿಸಲಿದೆ.

Best Mobiles in India

English summary
Vodafone has introduced a new Rs 299 prepaid recharge that ships with a validity of 70 days, but the actual benefits of the plan are underwhelming, compared to those of Airtel's Rs 299 plan. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+