ನಿಮ್ಮ ಸುಂದರ ಸೆಲ್ಫಿ ತೆಗೆಯುವ ಅದ್ಭುತ ಕನ್ನಡಿ
ನೀವೆಲ್ಲಾ ಅಂದುಕೊಂಡಿರುತ್ತೀರಿ ಎಲೆನ್ ಡಿಜನರಸ್ ಆಸ್ಕರ್ ಸೆಲ್ಫಿ ಹಿಂದೆಂದಿಗಿಂತಲೂ ಉತ್ತಮ ಸೆಲ್ಫಿಯಾಗಿದೆ ಎಂದು ಆದರೆ ನೀವೂ ಇದಕ್ಕಿಂತಲೂ ಉತ್ತಮ ಸೆಲ್ಫಿಯನ್ನು ತೆಗೆಯಬಹುದು ಎಂಬುದು ನಿಮಗೆ ಗೊತ್ತೇ?

S.E.L.F.I.E ಅಥವಾ "The Self Enhancing Live Feed Image Engine," ಎಂಬುವ ಒಂದು ಪರಿಕಲ್ಪನೆ ಸೆಲ್ಫಿ ಲೋಕಕ್ಕೆ ಪಾದಾಪರ್ಣೆ ಮಾಡುತ್ತಿದೆ. ಇದು ಎರಡು ಪ್ರಕಾರವುಳ್ಳ ಕನ್ನಡಿಯಾಗಿದ್ದು ನಿಮ್ಮ ಫೋಟೋವನ್ನು ಸ್ವಯಂಚಾಲಿತವಾಗಿ ಇದು ತೆಗೆಯುತ್ತದೆ. ನಿಮ್ಮ ಭುಜದ ಅಳತೆಗೆ ಇದು ಸಮಾನವಾಗಿರುತ್ತದೆ. ಅದೇ ರೀತಿ ಇದು ಸ್ವಯಂಚಾಲಿತವಾಗಿ ಟ್ವಿಟ್ಟರ್‌ನಲ್ಲಿ ಕೂಡ ಇದು ಫೋಟೋ ಅಪ್‌ಲೋಡ್ ಮಾಡುತ್ತದೆ.

ಈ ಕನ್ನಡಿಯ ಹಿಂದೆ ಮ್ಯಾಕ್ ಮಿನಿ ಕಾರ್ಯನಿರ್ವಹಿಸುತ್ತದೆ ಎಂದು S.E.L.F.I.E ಯ ಡಿಜಿಟಲ್ ಏಜೆನ್ಸಿ ತಿಳಿಸಿದೆ. ಈ ಕನ್ನಡಿಯು ಎಲ್‌ಇಡಿ ಲೈಟ್ ಅನ್ನು ಒಳಗೊಂಡಿದ್ದು ಫೋಟೋ ತೆಗೆದಾಗ, ಕನ್ನಡಿಗೆ ಎಂಬೆಡ್ ಮಾಡಿರುವ ವೆಬ್‌ಕ್ಯಾಮ್ ಇದಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಮುಖವನ್ನು ಇದು ಪತ್ತೆಹಚ್ಚಿದೊಡನೆಯೇ 'ಫೇಸ್ ರೆಕಗ್ನಿಶನ್' ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಫೋಟೋ ತೆಗೆಯುತ್ತದೆ.

ಇದನ್ನು ಟ್ವಿಟ್ಟರ್‌ಗೆ ಪೋಸ್ಟ್ ಮಾಡುವ ಮುನ್ನ, ನಿಮ್ಮ ಲೋಗೋವನ್ನು ಫೋಟೋಗೆ ಸೇರಿಸುವಂತೆ ಸಾಫ್ಟ್‌ವೇರ್ ವಿನ್ಯಾಸಪಡಿಸಲಾಗಿದೆ.


Click it and Unblock the Notifications








