ಇನ್ಮುಂದೆ ಕಳ್ಳಾಟ ನಡೆಯಲ್ಲ..! ಮೊಬೈಲ್ ನಂಬರ್ ಪೋರ್ಟಿಂಗ್ಗೆ ಹೊಸ ನಿಯಮ
ಇನ್ಮುಂದೆ ಕಳ್ಳಾಟ ನಡೆಯಲ್ಲ..! ಮೊಬೈಲ್ ನಂಬರ್ ಪೋರ್ಟಿಂಗ್ಗೆ ಬಂದೇ ಬಿಡ್ತು ಹೊಸ ನಿಯಮ. ಹೌದು, ಎಲ್ಲರೂ ಮೊಬೈಲ್ ಬಳಸುತ್ತಾರೆ. ನೀವು ಮೊಬೈಲ್ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ. ಇಂದಿನಿಂದ (ಜುಲೈ 1, 2024) ದೇಶಾದ್ಯಂತ ಸಿಮ್ ಕಾರ್ಡ್ ಹೊಸ ನಿಯಮಗಳು ಜಾರಿಗೆ ಬರಲಿವೆ. ಆನ್‌ಲೈನ್ ವಂಚನೆ ಮತ್ತು ಹ್ಯಾಕಿಂಗ್ ಮಾಡುವವರನ್ನು ತಡೆಯುವುದು ಇದರ ಉದ್ದೇಶವಾಗಿದೆ. ಮೊಬೈಲ್ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ನೀಡಲಾಗಿದೆ. SIM ಕಾರ್ಡ್‌ನ ಹೊಸ ನಿಯಮಗಳು ದೇಶಾದ್ಯಂತ ಅನ್ವಯಿಸುತ್ತವೆ. ಯಾಕೆ ಈ ಕ್ರಮ? ಸಿಮ್ ಕಾರ್ಡ್ ಪೋರ್ಟ್‌ಗೆ ಎಷ್ಟು ದಿನ ಕಾಯಬೇಕು? ಎಂಬ ಬಗ್ಗೆ ತಿಳಿಯೋಣ ಬನ್ನಿ.
ಹೌದು, ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್ (TRAI) ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಸಿಮ್ ಕಾರ್ಡ್ಗೆ ನಂಬರ್ ಪೋರ್ಟ್ ಮಾಡಲು ಇರುವ ನಿಯಮವನ್ನು ಬದಲಾಯಿಸಲಾಗಿದೆ. ಅದರಂತೆ ಹೊಸ ಸಿಮ್ಗೆ ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಲು ಏಳು ದಿನವಾದರೂ ಕಾಯಬೇಕಾಗುತ್ತದೆ. ಇಂದಿನಿಂದ (ಜುಲೈ 1ರಿಂದ) ಅಧಿಕೃತವಾಗಿ ಹೊಸ ನಿಯಮಗಳು ಜಾರಿಗೆ ಬಂದಿವೆ. ಒಂದುವೇಳೆ ಸಿಮ್ ಕಾರ್ಡ್ ಕಳೆದುಹೋದ್ರೆ ಏನು ಮಾಡಬೇಕು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಹೊಸ ನಿಯಮ ಜಾರಿಗೆ ಕಾರಣ ಏನು?
ದೇಶಾದ್ಯಂತ ಸಿಮ್ ಸ್ವ್ಯಾಪಿಂಗ್ ಹಗರಣಗಳು, ಮೊಬೈಲ್ ನಂಬರ್ ದುರುಪಯೋಗಡಿಸಿಕೊಳ್ಳುವುದು ಇತ್ಯಾದಿ ವಂಚನೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಟ್ರಾಯ್ ಈ ನಿಯಮಗಳನ್ನು ರೂಪಿಸಿರಬಹುದು ಎನ್ನಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧಿಕೃತವಾಗಿ ಕಾರಣ ನೀಡಿಲ್ಲ. ದೂರಸಂಪರ್ಕ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೊಸ ನಿಯಮಗಳನ್ನು ತರಲಾಗಿದೆ ಎಂದು ಅದು ಹೇಳಿದೆ.
ಸಿಮ್ ಕಾರ್ಡ್ ಬದಲಾಯಿಸುವ ಕೆಲಸ ಕಷ್ಟ
ಸಿಮ್ ಕಾರ್ಡ್ ಬದಲಾವಣೆ ಮತ್ತು ಮೊಬೈಲ್ ನಂಬರ್ ಪೋರ್ಟ್ ಮಾಡುವ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್, ಹೆಚ್ಚುತ್ತಿರುವ ಸಿಮ್ ಕಾರ್ಡ್ ಹಗರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಈ ಪ್ರಕಾರ ಇಂದಿನಿಂದ (ಜುಲೈ 1ರ ಬಳಿಕ) ವಂಚಕರು ಸಿಮ್ ಕಾರ್ಡ್ ಬದಲಾಯಿಸುವ ಕೆಲಸವಾಗಲೀ ಅಥವಾ ಮೊಬೈಲ್ ನಂಬರ್ ಪೋರ್ಟ್ ಮಾಡುವ ಕೆಲಸವಾಗಲೀ ಕಷ್ಟವಾಗಲಿದೆ.
ಸಿಮ್ ಕಾರ್ಡ್ ಕಳೆದುಹೋದರೆ, ಮುಂದೇನು..?
ಹೊಸ ಸಿಮ್ ಪಡೆದು ಅದಕ್ಕೆ ಹಿಂದಿನ ಸಿಮ್ ನಂಬರ್ ಅನ್ನು ಪೋರ್ಟ್ ಮಾಡಲು ಕನಿಷ್ಠ ಏಳು ದಿನವಾದರೂ ಕಾಯಬೇಕಾಗುತ್ತದೆ. ಈಗಿರುವ ನಿಯಮದ ಪ್ರಕಾರ ಸಿಮ್ ಕಾರ್ಡ್ ಕಳೆದುಹೋದರೆ ಕೂಡಲೇ ಸಿಮ್ ಬ್ಲಾಕ್ ಮಾಡಿಸಿ. ಬಳಿಕ, ಹೊಸ ಸಿಮ್ ಅನ್ನು ಪಡೆದು ಆ್ಯಕ್ಟಿವೇಟ್ ಮಾಡಿಸಬಹುದು. ಅಥವಾ ಹೊಸ ಸಿಮ್ ಖರೀದಿಸಿದ ಬಳಿಕ ಹಳೆಯ ಸಿಮ್ ಮರಳಿಸಿ ಹೊಸದಕ್ಕೆ ನಂಬರ್ ಆ್ಯಕ್ಟಿವೇಟ್ ಮಾಡಿಸಬಹುದು. ಈಗ ಈ ನಿಯಮದಲ್ಲಿ ಟ್ರಾಯ್ ಬದಲಾವಣೆ ಮಾಡಿದೆ.

ಸಿಮ್ ಬದಲಾವಣೆಗೆ ಯೂನಿಕ್ ಪೋರ್ಟಿಂಗ್ ಕೋಡ್
ಹೊಸ ನಿಯಮದ ಪ್ರಕಾರ ಸಿಮ್ ನಿಷ್ಕ್ರಿಯಗೊಂಡು ಏಳು ದಿನಗಳವರೆಗೆ ಟೆಲಿಕಾಂ ಆಪರೇಟರ್ಗಳು ಯುಪಿಸಿ ಕೋಡ್ ಅನ್ನು ಒದಗಿಸುವಂತಿಲ್ಲ ಎಂಬ ನಿಯಮವನ್ನು ಟ್ರಾಯ್ ಸೇರಿಸಿದೆ. ಇನ್ನೂ, ಸಿಮ್ ಕಾರ್ಡ್ ಬದಲಾಯಿಸುವಾಗ ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಯೂನಿಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಕೋಡ್ ಅನ್ನು ನೀಡುತ್ತವೆ. ಇದು ಮೊಬೈಲ್ ನಂಬರ್ ಅನ್ನು ಬೇರೆ ಸಿಮ್ಗೆ ವರ್ಗಾಯಿಸುವ ಕಾರ್ಯದ ಮೊದಲ ಹಂತವಾಗಿರುತ್ತದೆ. ಈ ಎಂಟು ಅಂಕಿಗಳ ಕೋಡ್ ಅನ್ನು ಹಾಕಿದ ಬಳಿಕ ಮೊಬೈಲ್ ನಂಬರ್ ಅನ್ನು ಬೇರೆ ಸಿಮ್ಗೆ ಪೋರ್ಟ್ ಮಾಡಬಹುದು.
ಹೊಸ ನಿಯಮದಿಂದಾಗುವ ಪ್ರಯೋಜನಗಳೇನು?
ವಂಚನೆಯ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಇಂತಹ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು TRAI ಹೇಳುತ್ತದೆ. ವಂಚಕರು ಸಿಮ್ ಸ್ವಾಪಿಂಗ್ ಅಥವಾ ಮೊಬೈಲ್ ಸಂಪರ್ಕವನ್ನು ಬದಲಾಯಿಸಿದ ತಕ್ಷಣ ಪೋರ್ಟ್ ಮಾಡುವುದನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಸಿಮ್ ಕಾರ್ಡ್ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇನ್ಮುಂದೆ ಬಳಕೆದಾರರು ತಮ್ಮ ಸಿಮ್ ಅನ್ನು ಸ್ವ್ಯಾಪ್ ಮಾಡಿದ ನಂತರ 7 ದಿನಗಳವರೆಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡುವಂತಿಲ್ಲ.
SIM Swap ಎಂದರೇನು? ವಂಚನೆ ಹೇಗೆ ನಡೆಯುತ್ತೆ?
ಸಿಮ್ ವಿನಿಮಯವನ್ನು ಸಿಮ್ ಸ್ವಾಪಿಂಗ್ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಿಮ್ ವಿನಿಮಯದ ವಂಚನೆಗಳು ಹೆಚ್ಚಾಗಿದೆ. ಇದರಲ್ಲಿ ವಂಚಕರು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಫೋಟೋವನ್ನು ಸುಲಭವಾಗಿ ಸೆರೆಹಿಡಿಯುತ್ತಾರೆ. ಬಳಿಕ ಮೊಬೈಲ್ ಕಳೆದುಹೋದ ಅಥವಾ ಡ್ಯಾಮೇಜ್ ನೆಪದಲ್ಲಿ ಅವರು ಹೊಸ ಸಿಮ್ ಪಡೆಯುತ್ತಾರೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ ಓಟಿಪಿ ವಂಚಕರಿಗೆ ತಲುಪುತ್ತದೆ. ಹೀಗಾಗಿ, ಹೊಸ ಸೇವೆಯನ್ನು ಪ್ರಾರಂಭಿಸಲು ದೂರಸಂಪರ್ಕ ಇಲಾಖೆಗೆ TRAI ಶಿಫಾರಸು ಮಾಡಿದೆ.
ಒಟ್ನಲ್ಲಿ, ಮಾರ್ಚ್ 15, 2024 ರಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೊಸ ನಿಯಮಗಳನ್ನು ಹೊರಡಿಸಿತ್ತು. ಹೊಸ ನಿಯಮಗಳ ಪ್ರಕಾರ ಇತ್ತೀಚೆಗೆ ತಮ್ಮ ಸಿಮ್ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಂಡ ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಇವು ಇಂದಿನಿಂದಲೇ (1ನೇ ಜುಲೈ 2024) ದೇಶಾದ್ಯಂತ ಅನ್ವಯವಾಗಲಿದೆ.


Click it and Unblock the Notifications








