ಸ್ಮಾರ್ಟ್ ಟಿವಿ; 2020ರ ಹೊಸ ಆವಿಷ್ಕಾರಗಳು

By Gizbot Bureau
|

ಟಿವಿ ಇಲ್ಲದ ಮನೆ ಬಹುಶಃ ಇಲ್ಲವೇ ಇಲ್ಲ ಎನ್ನಬಹುದು. ಮನರಂಜನೆ, ಸುದ್ದಿ, ಇತರೆ ಮಾಹಿತಿಗಳನ್ನು ಮನೆಯ ಕೋಣೆಗೆ ತಲುಪಿಸುವ ಟಿವಿ ಸಮೂಹ ಸಂವಹನದ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ. ಮೊದಲಿಗೆ ಆ್ಯಂಟೆನಾ ಬಳಸಿ ಟಿವಿ ತರಂಗಾಂತರಗಳನ್ನು ಪಡೆಯಲಾಗುತ್ತಿತ್ತು. ನಂತರ ಬಂದಿದ್ದು ಕೇಬಲ್ ಟಿವಿ. ಆದರೆ ಈಗ ಕೇಬಲ್ ಟಿವಿ ಹಾಗೂ ಅದಕ್ಕೆ ಬಳಸುವ ಸೆಟ್ ಬಾಕ್ಸ್ಗಳು ಕೂಡ ನೇಪಥ್ಯಕ್ಕೆ ಸರಿಯುತ್ತಿವೆ. ಆಧುನಿಕ ಜಗತ್ತಿನ ಸ್ಮಾರ್ಟ್ ಟಿವಿಗಳು ಅತಿ ವೇಗವಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಹೀಗಾಗಿ ಈಗೇನಿದ್ದರೂ ಇಂಟರ್ನೆಟ್ ಆಧರಿತ ಸ್ಮಾರ್ಟ್ ಟಿವಿಗಳದ್ದೇ ಎಲ್ಲೆಲ್ಲೂ ಕಾರುಬಾರು.

ಎಲ್ಲರಿಗೂ ಅಚ್ಚುಮೆಚ್ಚು ಸ್ಮಾರ್ಟ್ ಟಿವಿ

ಎಲ್ಲರಿಗೂ ಅಚ್ಚುಮೆಚ್ಚು ಸ್ಮಾರ್ಟ್ ಟಿವಿ

ಸ್ಮಾರ್ಟ್ ಟಿವಿ ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಎಲ್ಲರಿಗೂ ಅಚ್ಚುಮೆಚ್ಚಿನ ಸ್ಮಾರ್ಟ್ ಟಿವಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ತಂತ್ರಜ್ಞಾನದ ಮೂಲಕ ಹೊಸ ಆವಿಷ್ಕಾರಗಳನ್ನು ಮನೆಯ ಕೋಣೆಗೆ ತರುತ್ತಿವೆ. ವಿಡಿಯೋ ನೋಡಲು ಅಥವಾ ರೋಚಕ ವಿಡಿಯೋ ಗೇಮ್ ಆಡಲು ಸ್ಮಾರ್ಟ್ ಟಿವಿಗಳು ಅತಿ ಸೂಕ್ತವಾಗಿವೆ. ಅದರಲ್ಲೂ ಕೋವಿಡ್-19 ನ ಸಂಕಷ್ಟದ ಸಮಯದಲ್ಲಿ ಈ ಸ್ಮಾರ್ಟ್ ಟಿವಿಗಳು ಮನರಂಜನೆ ಸೇರಿದಂತೆ ಇನ್ನೂ ಹಲವಾರು ವಿಷಯಗಳನ್ನು ಜನರಿಗೆ ತಲುಪಿಸುವ ಮೂಲಕ ಏಕತಾನತೆಯ ಭಾವ ಕಾಡದಂತೆ ಮಾಡುವಲ್ಲಿ ಸಾಕಷ್ಟು ಸಹಕಾರಿಯಾಗಿವೆ. ಈ ವರ್ಷ ಅಂದರೆ 2020 ರಲ್ಲಿ ಹಲವಾರು ಕಂಪನಿಗಳು ವಿನೂತನ ಮಾದರಿಯ ಸ್ಮಾರ್ಟ್ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಅದರಲ್ಲಿ ಅತಿ ವಿಶಿಷ್ಟವಾದ, 5 ಅತ್ಯಾಧುನಿಕ ತಂತ್ರಜ್ಞಾನದ ಮಾದರಿಗಳನ್ನು ನಾವಿಲ್ಲಿ ನಿಮಗಾಗಿ ಪರಿಚಯಿಸುತ್ತಿದ್ದೇವೆ. ಹೊಸ ಟಿವಿ ಕೊಳ್ಳಬಯಸುವವರಾದರೆ ಮಿಸ್ ಮಾಡದೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.

ಡಾಲ್ಬಿ ವಿಷನ್ ಐಕ್ಯೂ (Dolby Vision IQ)

ಡಾಲ್ಬಿ ವಿಷನ್ ಐಕ್ಯೂ (Dolby Vision IQ)

ಕೆಲ ಬಾರಿ ಹೆಚ್ಚು ಕತ್ತಲೆಯ ಸೀನ್ಗಳನ್ನು ನೋಡುವಾಗ ಏನು ನಡೆಯುತ್ತಿದೆ ಎಂಬುದು ಸ್ಕ್ರೀನ್ ಮೇಲೆ ಸ್ಪಷ್ಟವಾಗಿ ಕಾಣಿಸದೆ ಗೊಂದಲವಾಗುವುದುಂಟು. ಉದಾಹರಣೆಗೆ ಗೇಮ್ ಆಫ್ ಥ್ರೋನ್ ನ ಫೈನಲ್ ಹಂತದ ಆಟದ ಹಂತದಲ್ಲಿ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಆದರೆ ಈಗ ಆಧುನಿಕ Dolby Vision IQ ತಂತ್ರಜ್ಞಾನವು ಇಂಥ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಸ್ಪಷ್ಟ ಚಿತ್ರಗಳನ್ನು ಸಹ ಈ ತಂತ್ರಜ್ಞಾನವು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಎಚ್ಡಿಆರ್ ನಂತರದ ಟೆಕ್ನಾಲಜಿ (Beyond HDR) ಎಂದೇ ಇದು ಹೆಸರಾಗಿದೆ. ಡಾರ್ಕ್ ಅಥವಾ ಕತ್ತಲೆಯಲ್ಲಿನ ಮಬ್ಬಾದ ಚಿತ್ರಗಳನ್ನು ಸ್ಪಷ್ಟವಾಗಿ ತೋರಿಸಲು ಎಚ್ಡಿಆರ್ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಿದೆ. ಆದರೂ ಹೆಚ್ಚು ಬೆಳಕಿರುವ ಕೋಣೆಯಲ್ಲಿ ಟಿವಿ ನೋಡುವಾಗ ಮಬ್ಬಾದ ಚಿತ್ರಗಳು ಸ್ಪಷ್ಟವಾಗಿ ಕಾಣಲಾರವು. ಆದರೆ Dolby Vision IQ ತಂತ್ರಜ್ಞಾನವು ಕೋಣೆಯ ಬೆಳಕಿಗೆ ತಕ್ಕಂತೆ ಟಿವಿ ಪರದೆಯ ಬ್ರೈಟ್ನೆಸ್ ಅನ್ನು ಮಾರ್ಪಡಿಸಿ ಚಿತ್ರಗಳು ಸುಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಲೈಟ್ ಸೆನ್ಸರ್ಗಳ ಆಧಾರದಲ್ಲಿ Dolby Vision IQ ಕೆಲಸ ಮಾಡುತ್ತದೆ.

ಸದ್ಯ ಪ್ಯಾನಾಸೋನಿಕ್ ಮತ್ತು ಎಲ್ಜಿ 2020 OLED ಟಿವಿಗಳು ಈ ತಂತ್ರಜ್ಞಾನ ಹೊಂದಿರುವ ಟಿವಿಗಳಾಗಿವೆ. 2021 ರ ಹೊತ್ತಿಗೆ ಮತ್ತಷ್ಟು Dolby Vision IQ ತಂತ್ರಜ್ಞಾನದ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎನ್ನಲಾಗಿದೆ.

ಎಚ್ಡಿಎಂಐ 2.1 (HDMI 2.1)

ಎಚ್ಡಿಎಂಐ 2.1 (HDMI 2.1)

ಎಚ್ಡಿಎಂಐ ಎಂಬುದು ಹೈ ಡೆಫಿನಿಷನ್ ಮಲ್ಟಿಮೀಡಿಯಾ ಇಂಟರ್ ಫೇಸ್ (HDMI - High Definition Multimedia Interface) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಚಿಕ್ಕ ಕೇಬಲ್ ಒಂದರ ಮೂಲಕ ಬಳಕೆದಾರರು ಎಚ್ಡಿಎಂಐ ಗುಣಮಟ್ಟದ ವಿಡಿಯೋ ನೋಡಬಹುದಾಗಿದ್ದು, ಹೆಚ್ಚು ಜಾಗ ಕಬಳಿಸುವ SCART connector ಗಳು ಇನ್ನು ಬೇಕಿಲ್ಲ. ಸದ್ಯ HDMI 2.1 ತಂತ್ರಜ್ಞಾನವು ಆವಿಷ್ಕರಿಸಲ್ಪಟ್ಟಿದ್ದು, ಇದು ಸೆಕೆಂಡಿಗೆ 60 ಫ್ರೇಮ್ಗಳಲ್ಲಿ 8K ವರೆಗೆ ರೆಸಲ್ಯೂಷನ್ ಮತ್ತು ಸೆಕೆಂಡಿಗೆ 120 ಫ್ರೇಮ್ಗಳಲ್ಲಿ 4K ರೆಸಲ್ಯೂಷನ್ವರೆಗೆ ವಿಡಿಯೋ ಗುಣಮಟ್ಟವನ್ನು ನೀಡುತ್ತದೆ. ಈಗಿನ HDMI 2.1 ಟೆಕ್ನಾಲಜಿಯು ಅತಿ ಸುಸ್ಪಷ್ಟವಾದ ಟಿವಿ ದೃಶ್ಯಾವಳಿಗಳ ಅನುಭವವನ್ನು ನೀಡುವ ಸಾಮರ್ಥ್ಯ ಹೊಂದಿದೆ.

ಎಲ್ಜಿ ಕಂಪನಿಯು ಈಗಾಗಲೇ HDMI 2.1 ತಂತ್ರಜ್ಞಾನದ ಟಿವಿ ಬಿಡುಗಡೆ ಮಾಡಿದ್ದು, ಇದರಲ್ಲಿ ನಾಲ್ಕು HDMI 2.1 ಪೋರ್ಟ್ಗಳಿರುವುದು ವಿಶೇಷವಾಗಿದೆ. ಇನ್ನು ಸ್ಯಾಮ್ಸಂಗ್ ಸಹ ಈ ಮಾದರಿಯ ಟಿವಿ ಹೊರತಂದಿದೆ.

ಎನ್ವಿಡಿಯಾ ಜಿ ಸಿಂಕ್ (NVIDIA G-Sync)

ಎನ್ವಿಡಿಯಾ ಜಿ ಸಿಂಕ್ (NVIDIA G-Sync)

ಗೇಮಿಂಗ್ಗಾಗಿ ಕಂಪ್ಯೂಟರ್ ಸ್ಕ್ರೀನ್ಗಿಂತ ಟಿವಿ ಸ್ಕ್ರೀನ್ಗಳನ್ನು ಬಳಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಟಿವಿಯ ದೊಡ್ಡ ಪರದೆಯ ಅನುಕೂಲತೆ ಹಾಗೂ ಇನ್ನೂ ಹಲವಾರು ಕಾರಣಗಳಿಗಾಗಿ ಗೇಮಿಂಗ್ ಪ್ರಿಯರು ಟಿವಿ ಸ್ಕ್ರೀನ್ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಜಿ ಕಂಪನಿಯು NVIDIA G-Sync ತಂತ್ರಜ್ಞಾನವನ್ನು ಆವಿಷ್ಕರಿಸಿದೆ. ತೀವ್ರವಾಗಿ ಬದಲಾಗುವ ರಿಫ್ರೆಶ್ ರೇಟ್ ನಲ್ಲಿ ಈ ತಂತ್ರಜ್ಞಾನ ಬಹಳೇ ಅನುಕೂಲಕರವಾಗಿದೆ. ಟಿವಿಯ ರಿಫ್ರೆಶ್ ರೇಟ್ ಮತ್ತು ಗೇಮ್ನ ಫ್ರೇಮ್ ರೇಟ್ಗಳನ್ನು ಸಮೀಕರಿಸಲು NVIDIA GPU ಅಗತ್ಯವಾಗಿದೆ. ಇದಕ್ಕೆ ಸರಿಹೊಂದುವ ಎಲ್ಜಿ ಟಿವಿಗೆ ಈ ತಂತ್ರಜ್ಞಾನವನ್ನು ಅಳವಡಿಸಿದಲ್ಲಿ 120Hz ವರೆಗೂ ರಿಫ್ರೆಶ್ ರೇಟ್ ಅನ್ನು ಹೆಚ್ಚಿಸಬಹುದಾಗಿದ್ದು ಈ ತಂತ್ರಜ್ಞಾನದ ಹೆಗ್ಗಳಿಕೆಯಾಗಿದೆ.

ಎಲ್ಜಿ ಕಂಪನಿಯು ತನ್ನ C9, B9 ಮತ್ತು E9 ಸರಣಿಯ ಸ್ಮಾರ್ಟ್ ಟಿವಿಗಳಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿದೆ. ಜೊತೆಗೆ ಎಲ್ಜಿ ಯ 2020 ರ ಸಂಪೂರ್ಣ OLED ಸರಣಿಯ ಟಿವಿಗಳಲ್ಲಿ ಈ ತಂತ್ರಜ್ಞಾನ ಇರುವುದು ವಿಶೇಷವಾಗಿದೆ.

ಫಿಲ್ಮಮೇಕರ್ ಮೋಡ್ (Filmmaker Mode)

ಫಿಲ್ಮಮೇಕರ್ ಮೋಡ್ (Filmmaker Mode)

ನೋಡಲು ರೋಚಕವಾದ ವಿಶಿಷ್ಟ ವಿಶುವಲ್ ಎಫೆಕ್ಟ್ಗಳನ್ನು ತಯಾರಿಸಲು ಚಿತ್ರ ನಿರ್ಮಾಪಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಆದರೆ ನಿಮ್ಮ ಕಡಿಮೆ ಗುಣಮಟ್ಟದ ಟಿವಿಯ ಕಾರಣದಿಂದ ಈ ಎಫೆಕ್ಟ್ಗಳನ್ನು ಆಸ್ವಾದಿಸಲು ಸಾಧ್ಯವಾಗದೇ ಇರಬಹುದು. ಸೋಪ್ ಓಪೆರಾ ಎಫೆಕ್ಟ್ಗಾಗಿ ಹೆಚ್ಚುವರಿ ಫ್ರೇಮ್ಗಳನ್ನು ಚಲನಚಿತ್ರದಲ್ಲಿ ಅಳವಡಿಸಲಾಗುತ್ತದೆ. ಆದರೂ ಟಿವಿಯಲ್ಲಿ ಈ ಎಫೆಕ್ಟ್ ಕಾಣದೆ ಇರಬಹುದು. ಈ ಸಮಸ್ಯೆಯ ನಿವಾರಣೆಗಾಗಿಯೇ ಫಿಲ್ಮಮೇಕರ್ ಮೋಡ್ ಈಗ ಬಂದಿದೆ.

ಚಲನಚಿತ್ರ ನಿರ್ಮಾಣ ಸಂಸ್ಥೆಗಳ ಸಹಕಾರದಲ್ಲಿ ಈಗ UHD Alliance (ಡಾಲ್ಬಿ, ಎಲ್ಜಿ, ನೆಟ್ಫ್ಲಿಕ್ಸ್ ಮತ್ತು ಸ್ಯಾಮ್ಸಂಗ್ ಇತ್ಯಾದಿ) ಎಂಬ ವೇದಿಕೆಯನ್ನು ರಚಿಸಲಾಗಿದೆ. ಈಗ ಈ Filmmaker Mode ಬಳಸುವ ಮೂಲಕ ನಿಜವಾದ ಥಿಯೇಟರ್ ಸಿನಿಮಾ ಅನುಭವವನ್ನು ಟಿವಿ ಪರದೆಯ ಮೇಲೆಯೇ ಅನುಭವಿಸಬಹುದು.

ಸದ್ಯ ಸ್ಯಾಮ್ಸಂಗ್, ಪ್ಯಾನಾಸೋನಿಕ್, ಎಲ್ಜಿ, ಫಿಲಿಪ್ಸ್ ಸೇರಿದಂತೆ ಇನ್ನೂ ಹಲವಾರು ಕಂಪನಿಗಳು ತಮ್ಮ ಟಿವಿಗಳಲ್ಲಿ ಫಿಲ್ಮಮೇಕರ್ ಮೋಡ್ ಅಳವಡಿಸಿವೆ.

ಸ್ಯಾಮ್ಸಂಗ್ ಟ್ಯಾಪ್ ವ್ಯೂ (Samsung Tap View)

ಸ್ಯಾಮ್ಸಂಗ್ ಟ್ಯಾಪ್ ವ್ಯೂ (Samsung Tap View)

ಈಗ ನಿಮ್ಮ ಸ್ಮಾರ್ಟ್ ಫೋನ್ನಿಂದ ಕಂಟೆಂಟ್ ಅನ್ನು ಟಿವಿಗೆ ಕಾಸ್ಟ್ ಮಾಡಲು ಬಯಸಿದಲ್ಲಿ ಅದಕ್ಕಾಗಿ Samsung Tap View ನಿಮಗೆ ಮತ್ತಷ್ಟು ಅನುಕೂಲ ಮಾಡಿಕೊಡುತ್ತಿದೆ. ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಮಾತ್ರ ಈ ಫೀಚರ್ ಲಭ್ಯವಿದೆ ಎಂಬುದು ಗೊತ್ತಿರಲಿ. ಇದು ಆ್ಯಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಮಾದರಿಗಳನ್ನು ಸಪೋರ್ಟ್ ಮಾಡುತ್ತಿದ್ದು, ಎನ್ಎಫ್ಸಿ ಮೋಡ್ ಮೂಲಕ ಕೆಲಸ ಮಾಡುತ್ತದೆ. ಟಿವಿಯ ಎನ್ಎಫ್ಸಿ ಮೋಡ್ ಆನ್ ಮಾಡಿ ನಿಮ್ಮ ಫೋನಿನೊಂದಿಗೆ ಸಂಪರ್ಕ ಸಾಧಿಸುವ ತಂತ್ರಜ್ಞಾನ ಇದಾಗಿದೆ.

ಇತರ ಕಾಸ್ಟಿಂಗ್ ತಂತ್ರಜ್ಞಾನಗಳಾದ ಮಿರಾಕಾಸ್ಟ್ ಮತ್ತು ಗೂಗಲ್ ಕ್ರೋಮ್ಕಾಸ್ಟ್ಗಳಿಗಿಂತ ಈ ತಂತ್ರಜ್ಞಾನ ವಿಭಿನ್ನವಾಗಿದೆ.

Best Mobiles in India

Read more about:
English summary
Having said that, here we have curated a list of five new smart TV technologies that have started making the way into the market but yet to go mainstream.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X