TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಡಿಜಿಟಲ್ ಕ್ಷೇತ್ರಕ್ಕೆ ಪೂರಕವಾದ ದೂರಸಂಪರ್ಕ ಕ್ಷೇತ್ರದ ಪುನಶ್ಚೇತನ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು 'ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ 2018'ಯನ್ನು ಅನಾವರಣಗೊಳಿಸಿದೆ. 7.8 ಲಕ್ಷ ಕೋಟಿಗಳಷ್ಟು ಸಾಲದ ಸುಳಿಗೆ ಸಿಲುಕಿರುವ ದೂರಸಂಪರ್ಕ ಕ್ಷೇತ್ರದ ಪುನಶ್ಚೇತನಕ್ಕಾಗಿ ಟೆಲಿಕಾಂ ಕಂಪೆನಿಗಳು ಮತ್ತು ಗ್ರಾಹಕರಿಗೂ ಹೊರೆಯಾಗದಂತೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.!
2022ರ ವೇಳೆಗೆ ದೇಶದಲ್ಲಿನ ಎಲ್ಲರಿಗೂ 50 ಎಂಬಿಪಿಎಸ್‌ವೇಗದ ಬ್ರಾಡ್‌ಬ್ಯಾಂಡ್ ಸೇವೆ ಮತ್ತು '5ಜಿ' ಸೌಲಭ್ಯ ಸೇರಿದಂತೆ 50 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇನ್ನು ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರುವಂತಹ ಹಲವು ಯೋಜನೆಗಳಿಗೆ ಸರ್ಕಾರ ಮುಂದಾಗಿದ್ದು, ಹಾಗಾಗಿ, 'ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯಲ್ಲಿ ತರಲಾಗುತ್ತಿರುವ ಯೋಜನೆಗಳು ಯಾವುವು? ಟೆಲಿಕಾಂನಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದನ್ನು ಮುಂದೆ ತಿಳಿಯಿರಿ.
ಮತ್ತಷ್ಟು ಕಡಿಮೆ ಬೆಲೆಗೆ ಸೇವೆಗಳು!!
ದೇಶದ ಜನರಿಗೆ ಡಿಜಿಟಲ್ ಸಂಪರ್ಕ ವ್ಯವಸ್ಥೆಯು ಕೈಗೆಟುಕುವ ಬೆಲೆಗೆ ದೊರೆಯಲು ತರಂಗಾಂತರಗಳನ್ನು ಕಡಿಮೆ ಬೆಲೆಗೆ ಒದಗಿಸುವ ನೀತಿ ಅಳವಡಿಸಿಕೊಳ್ಳಲಾಗುವುದು ಎಂದು ಸಂವಹನ ನೀತಿಯಲ್ಲಿ ತಿಳಿಸಲಾಗಿದೆ. ಇದರಿಂದ ಟೆಲಿಕಾಂ ಕಂಪೆನಿಗಳು ಮತ್ತಷ್ಟು ಕಡಿಮೆ ಬೆಲೆಗೆ ಜನರಿಗೆ ಸೇವೆ ಒದಗಿಸುವುದು ಪಕ್ಕಾ ಎಂದು ವರದಿಗಳು ತಿಳಿಸಿವೆ.
40 ಲಕ್ಷದಷ್ಟು ಹೆಚ್ಚುವರಿ ಉದ್ಯೋಗ!!
ದೂರಸಂಪರ್ಕ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣಾ ಕ್ರಮಗಳ ಮೂಲಕ ಭಾರೀ ಬಂಡವಾಳ ಹೂಡಿಕೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, 40 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಹೊಸ ದೂರ ಸಂಪರ್ಕ ಕರಡು ನೀತಿಯಲ್ಲಿ ಗುರಿ ನಿಗದಿಪಡಿಸಲಾಗಿದ್ದು, 50 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
50 ಎಂಬಿಪಿಎಸ್ ಬ್ರಾಡ್‌ಬ್ಯಾಂಡ್!!
ಹೊಸ ನೀತಿಯಡಿ, ದೇಶದಲ್ಲಿನ ಶೇ 50ರಷ್ಟು ಮನೆಗಳಿಗೆ ಬ್ರಾಡ್‌ಬ್ಯಾಂಡ್ ಸೇವೆ ಮತ್ತು ಸ್ಥಿರ ದೂರವಾಣಿ ಪೋರ್ಟೆಬಿಲಿಟಿ ಸೌಲಭ್ಯ ಕಲ್ಪಿಸಲು ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ದೇಶದ ಪ್ರತಿಯೊಬ್ಬರಿಗೂ 50 ಎಂಬಿಪಿಎಸ್ ಬ್ರಾಡ್‌ಬ್ಯಾಂಡ್ ಸೌಲಭ್ಯ ನೀಡಲು ಸರ್ಕಾರ ಪಣತೊಟ್ಟಿದೆ.
ಗ್ರಾಹಕರ ಹಿತಾಸಕ್ತಿಗೆ ಪೂರಕ!
ಬಂಡವಾಳ ಹೂಡಿಕೆ, ಸಂಶೋಧನೆಗಳಿಗೆ ಅಡಚಣೆ ಒಡ್ಡಿರುವ ಮತ್ತು ಗ್ರಾಹಕರ ಹಿತಾಸಕ್ತಿಗೆ ಪೂರಕವಲ್ಲದ ನಿಯಂತ್ರಣ ಕ್ರಮಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ಡಿಜಿಟಲ್ ಸಂಪರ್ಕದ ಸಾಧನ, ಮೂಲಸೌಕರ್ಯ ಮತ್ತು ಸೇವೆಗಳ ಮೇಲಿನ ತೆರಿಗೆಗಳನ್ನು ಸರಳೀಕರಣಗೊಳಿಸಲು ಡಿಜಿಟಲ್ ಸಂವಹನ ನೀತಿ(2018)ಯಲ್ಲಿ ನಿರ್ಧರಿಸಲಾಗಿದೆ.
ಸಮಸ್ಯೆಗಳ ಬಗೆಹರಿವು ಉದ್ದೇಶ!
ಪ್ರಸ್ತುತ ಟೆಲಿಕಾಂ ವಲಯವು ಎದುರಿಸುತ್ತಿರುವ ಲೈಸನ್ಸ್ ಶುಲ್ಕ, ತರಂಗಾಂತರ ಬಳಕೆ ಶುಲ್ಕ ಮತ್ತು ದೂರಸಂಪರ್ಕ ಸೇವಾ ವೆಚ್ಚ ಹೆಚ್ಚಿಸುವ ಇತರ ಶುಲ್ಕಗಳ ಸಮಸ್ಯೆಗಳನ್ನೂ ಬಗೆಹರಿಸಲು ಉದ್ದೇಶಿಸಲಾಗಿದೆ. ಇದರಿಂದ ಟೆಲಿಕಾಂ ಕಂಪೆನಿಗಳ ಮೇಲಿರುವ ಒತ್ತಡ ಕಡಿಮೆಯಾಗುವುದು ಎಂದು ಸರ್ಕಾರ ಅಂದಾಜಿಸಿದೆ.