ಫೋನ್ ಬ್ಯಾಟರಿಯನ್ನು ದ್ವಿಗುಣಗೊಳಿಸಲು ಬರಲಿದೆ ಹೊಸ ಗ್ಲಾಸ್!

By Shwetha
|

ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ದ್ವಿಗುಣಗೊಳಿಸುವುದಕ್ಕಾಗಿ ಗ್ಲಾಸ್ ಪ್ರಕಾರದ ವಸ್ತವೊಂದನ್ನು ಸಂಶೋಧಕರು ಕಂಡುಹುಡುಕಿದ್ದು ಇದು ಎಲೆಕ್ಟ್ರೋಡ್ ಆಗಿ ಕಾರ್ಯನಿರ್ವಹಿಸಿ ಫೋನ್ ಬ್ಯಾಟರಿಯನ್ನು ಇಮ್ಮಡಿಗೊಳಿಸಲಿದೆ ಎಂಬುದು ತಿಳಿದು ಬಂದಿದೆ.

ಫೋನ್ ಬ್ಯಾಟರಿಯನ್ನು ದ್ವಿಗುಣಗೊಳಿಸಲು ಬರಲಿದೆ ಹೊಸ ಗ್ಲಾಸ್!

ಡಾ. ಸೆಮಿಯಾ ಅಫೋನ್ ಹಾಗೂ ರೇನ್‌ಹಾರ್ಡ್ ನೇಸ್ಪರ್ ನೇತೃತ್ವದ ಇಟಿಎಚ್ ಸಂಶೋಧಕರು ಈ ಗ್ಲಾಸ್ ಸಾಮಾಗ್ರಿಯನ್ನು ಕಂಡುಹುಡುಕಿದ್ದು ಇದು ಬ್ಯಾಟರಿ ಶಕ್ತಿಯನ್ನು ದ್ವಿಗುಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ಈ ಗ್ಲಾಸ್ ಅನ್ನು ವನಾಡಿಯಮ್ ಆಕ್ಸೈಡ್ ಮತ್ತು ಲಿಥಿಯಮ್ ಬೊರೇಟ್ ಬಳಸಿ ತಯಾರುಪಡಿಸಲಾಗಿದ್ದು, ಇದನ್ನು ಗ್ರಾಫೈಟ್ ಆಕ್ಸೈಡ್ ಬಳಸಿ ಕೋಟ್ ಮಾಡಲಾಗಿದೆ. ಇದು ಗ್ಲಾಸ್‌ನ ಎಲೆಕ್ಟ್ರೋಡ್ ಅಂಶವನ್ನು ವರ್ಧಿಸುತ್ತದೆ.

ವಿಜ್ಞಾನಿಗಳು ಪುಡಿಯನ್ನು 900 ಡಿಗ್ರಿ ಸೆಲ್ಶಿಯಸ್‌ಗೆ ಕರಗಿಸಿದ್ದು ಇದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತಣ್ಣಗಾಗಿಸಿ ಗ್ಲಾಸ್ ಅನ್ನು ತಯಾರುಪಡಿಸಿದ್ದಾರೆ. ಪೇಪರ್ ಅನ್ನು ಹುಡಿಮಾಡಿ ಪೌಡರ್‌ನಂತೆ ತಯಾರುಪಡಿಸಿದ್ದು ಇದನ್ನು ಬಳಸಿ ಗ್ಲಾಸ್ ನಿರ್ಮಿಸಲಾಗಿದೆ. ಸಾಕಷ್ಟು ಎಲೆಕ್ಟ್ರೋಡ್ ಅನ್ನು ಸಿದ್ಧಪಡಿಸಲು ವಾಂಡೇಟ್ ಮತ್ತು ಬೋರೇಟ್ ಪೌಡರ್ ಅನ್ನು ಮಿಶ್ರಮಾಡಿದ್ದಾರೆ. ಇದು ಮೊಬೈಲ್ ಫೋನ್ ಅನ್ನು 1.5 ಮತ್ತು ಎರಡು ಗಂಟೆಗಳ ಒಳಗಾಗಿ ಚಾರ್ಜ್ ಮಾಡಲಿದ್ದು ಇಂದಿನ ಲಿಥಿಯಮ್ ಐಓನ್ ಬ್ಯಾಟರಿಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರಲಿದೆ.

Best Mobiles in India

English summary
New type of glass has potential to double your smartphone’s battery life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X