ಬ್ಲಾಕ್ ಅಂಡ್ ಗೋಲ್ಡ್ ಆವೃತ್ತಿಯಲ್ಲಿ ವಿವೋ X20 ಮತ್ತು X20 ಪ್ಲಸ್ ಸ್ಮಾರ್ಟ್ ಫೋನ್..!!

Written By: Lekhaka

ಮಧ್ಯಮ ಬೆಲೆಯಲ್ಲಿ ವಿವೋ X20 ಮತ್ತು X20 ಪ್ಲಸ್ ಸ್ಮಾರ್ಟ್ ಫೋನ್ ಗಳನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ ಫೋನ್ ಉತ್ತಮ ವಿಶೇಷತೆಗಳೊಂದಿಗೆ ಕಾಣಿಸಿಕೊಂಡಿತ್ತು. ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಸೃಷ್ಟಿಸಿಕೊಂಡಿತ್ತು.

ಬ್ಲಾಕ್ ಅಂಡ್ ಗೋಲ್ಡ್ ಆವೃತ್ತಿಯಲ್ಲಿ ವಿವೋ X20 ಮತ್ತು X20 ಪ್ಲಸ್..!!

ಇದೇ ಮಾದರಿಯಲ್ಲಿ ವಿವೋ ಈ ಎರಡು ಸ್ಮಾರ್ಟ್ ಫೋನ್ ಗಳನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರವೇ ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ನಂತರದಲ್ಲಿ ಈ ಸ್ಮಾರ್ಟ್ ಫೋನ್ ಭಾರತದಲ್ಲಿಯೂ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬ್ಲಾಕ್ ಮತ್ತು ಗೋಲ್ಡ್ ಮಿಕ್ಸ್ ಕಲರ್ಸ್ ನಲ್ಲಿ ಕಾಣಿಸಿಕೊಂಡಿದ್ದು, ನೋಡಲು ಮನಮೋಹಕವಾಗಿದೆ. ರೂ. 33,500ಕ್ಕೆ ಈ ಆವೃತ್ತಿಯ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಅಲ್ಲದೇ ಗೋಲ್ಡ್, ರೋಸ್ ಗೋಲ್ಡ್, ಮತ್ತು ಬ್ಲಾಕ್ ಬಣ್ಣದಲ್ಲಿ ಈಗಾಗಗಲೇ ಈ ಸ್ಮಾರ್ಟ್ ಫೋನ್ ದೊರೆಯುತ್ತಿದೆ.

ಬ್ಲಾಕ್ ಅಂಡ್ ಗೋಲ್ಡ್ ಆವೃತ್ತಿಯಲ್ಲಿ ವಿವೋ X20 ಮತ್ತು X20 ಪ್ಲಸ್..!!

ಈ ಹೊಸ ಆವೃತ್ತಿಯ ಬಗ್ಗೆ ಮಾತನಾಡುವುದಾದರೆ ಇದು ಸ್ಪೋಡ್ಸ್ ಬ್ಲಾಕ್ ಕಲರ್ ನಲ್ಲಿ ಕಾಣಿಸಿಕೊಂಡಿದ್ದು, ಕೇಲವು ಭಾಗದಲ್ಲಿ ಮಾತ್ರವೇ ಗೋಲ್ಡ್ ಬಣ್ಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ವಿವೋ ಬ್ರಾಂಡ್ ನೇಮ್ ಕ್ಯಾಮೆರಾ ಪ್ಯಾನಲ್, ಫೀಂಗರ್ ಪ್ರಿಂಟ್ ಸ್ಕ್ಯಾನರ್ ಹೊರಭಾಗದಲ್ಲಿ ಗೋಲ್ಡ್ ಬಣ್ಣವನ್ನು ಕಾಣಬಹುದು ಎನ್ನಲಾಗಿದೆ.

ವಿಂಡೋಸ್ 10ನಲ್ಲಿ ಭಾಷೆ ಬದಲಾವಣೆ ಮಾಡುವುದು ಹೇಗೆ?

ಈ ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ 12+5 MP ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಅಲ್ಲದೇ 6.01 ಇಂಚಿನ FHD ಪರದೆ, ಅಮೊಲೈಡ್ ಡಿಸ್ ಪ್ಲೇ, ಸ್ನಾಪ್ ಡ್ರಾಗನ್ 660 ಪ್ರೋಸೆಸರ್, ಆಡ್ರಿನೋ 512 GPU ಜೊತೆಗೆ 4GB RAM ಮತ್ತು 64GB/128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ViaRead more about:
English summary
The Vivo X20 features a 12MP+5MP rear dual camera setup.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot