ಏಲಿಯನ್‌ ಪತ್ತೆಗೆ ಹೊಸ ಮಾರ್ಗ ಕಂಡುಹಿಡಿದ ವಿಜ್ಞಾನಿಗಳು

Written By:

ಏಲಿಯನ್‌ಗಳು ಇರುವ ಬಗ್ಗೆ ತಿಳಿಯಲು ಮೊದಲು ಭೂಮಿಯಂತಹ ಯಾವುದಾದರೂ ಗ್ರಹ ಸೌರ ವ್ಯವಸ್ಥೆಯಲ್ಲಿ ಇದೆಯೇ? ಎಂಬುದನ್ನು ಮೊದಲು ತಿಳಿಯಬೇಕು. ಆ ಕಾರಣದಿಂದ ಸೌರವ್ಯೂಹದಲ್ಲಿ ಇತರೆ ಗ್ರಹಗಳು ಇರುವ ಬಗ್ಗೆ ತಿಳಿಯಲು ಖಗೋಳಶಾಸ್ತ್ರಜ್ಞರು ಹೊಸ ಮಾರ್ಗವನ್ನು ಹುಡುಕಿದ್ದಾರೆ. ಅಲ್ಲದೇ ಗ್ರಹವನ್ನು ಕಂಡುಹಿಡಿಯಲು ಹೊಸ ಟೆಕ್ನಾಲಜಿಯನ್ನು ಸಹ ಬಳಸಿಕೊಳ್ಳುತ್ತಿದ್ದಾರೆ. ಅದು ಏನು ಎಂಬುದನ್ನು ಈ ಲೇಖನ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಲಿಯನ್‌ ಪತ್ತೆಗೆ ಹೊಸ ಮಾರ್ಗ

ಏಲಿಯನ್‌ ಪತ್ತೆಗೆ ಹೊಸ ಮಾರ್ಗ

ಜಾಗತಿಕ ಖಗೋಳಶಾಸ್ತ್ರಜ್ಞರ ತಂಡವೊಂದು ದೂರದ ನಕ್ಷತ್ರಗಳಲ್ಲಿ ಜೀವಿಗಳಿರುವ ಬಗ್ಗೆ ಪತ್ತೆ ಹಚ್ಚಲು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ. ದೂರದ ಗ್ರಹಗಳು ಗುರುತ್ವಾಕರ್ಷಣೆಯನ್ನು ಹೊಂದಿರುವ ಆಧಾರದಲ್ಲಿ ಆ ಗ್ರಹಗಳಲ್ಲಿ ಜೀವಿಗಳು ಇರುವ ಬಗ್ಗೆ ಹಾಗೂ ಇಲ್ಲದಿರುವ ಬಗ್ಗೆ ತಿಳಿಯಬಹುದು ಎನ್ನಲಾಗಿದೆ.

ನಕ್ಷತ್ರದ ಗುರುತ್ವಾಕರ್ಷಣೆ

ನಕ್ಷತ್ರದ ಗುರುತ್ವಾಕರ್ಷಣೆ

ಒಂದು ನಕ್ಷತ್ರದ ಅಥವಾ ಗ್ರಹದ ಮೇಲ್ಮೈನ ಗುರುತ್ವಾಕರ್ಷಣೆ ತಿಳಿಯಲು ಆ ಗ್ರಹದ ಮೇಲೆ ವ್ಯಕ್ತಿಯೊಬ್ಬನ ತೂಕ ಎಷ್ಟಿದೆ ಎಂದು ತಿಳಿಯುವುದು ಅಗತ್ಯವಾಗಿದೆ. ವ್ಯಕ್ತಿ ನಿಂತಿರುವ ಗ್ರಹ ಘನ ಮೇಲ್ಮೈ ಹೊಂದಿದ್ದರೆ ವ್ಯಕ್ತಿಯ ತೂಕ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ತೂಕ ಬದಲಾಗುತ್ತದೆ ಎಂದಿದ್ದಾರೆ.

ವಿಜ್ಞಾನಿಗಳಿಗೆ ಗುರುತ್ವಾಕರ್ಷಣೆ ತಿಳಿಯಲು ಸಹಾಯವಾಗುವ ಅಂಶಗಳು

ವಿಜ್ಞಾನಿಗಳಿಗೆ ಗುರುತ್ವಾಕರ್ಷಣೆ ತಿಳಿಯಲು ಸಹಾಯವಾಗುವ ಅಂಶಗಳು

ಹೊಸ ವಿಧಾನವು ವಿಜ್ಞಾನಿಗಳಿಗೆ ಮೇಲ್ಮೈನ ಗುರುತ್ವಾಕರ್ಷಣೆಯನ್ನು ನಿಖರವಾಗಿ ಶೇಕಡ ನಾಲ್ಕುರಷ್ಟು ಕಂಡುಹಿಡಿಯುವಲ್ಲಿ ಸಹಾಯಮಾಡುತ್ತದೆ. ಗ್ರಹಗಳ ಅತಿದೂರ, ಅತಿಯಾದ ಮಸುಕು ಇದ್ದರೆ ಪ್ರಸ್ತುತ ಟೆಕ್ನಾಲಜಿಯನ್ನು ಬಳಸಬಹುದಾಗಿದೆ.

ನಕ್ಷತ್ರ ಗುಂಪುಗಳೇ ಗುರುತ್ವಾಕರ್ಷಣೆಯ ಆಧಾರ

ನಕ್ಷತ್ರ ಗುಂಪುಗಳೇ ಗುರುತ್ವಾಕರ್ಷಣೆಯ ಆಧಾರ

ಮೇಲ್ಮೈ ಗುರುತ್ವಾಕರ್ಷಣೆಯು ನಕ್ಷತ್ರ ಗುಂಪುಗಳು ಮತ್ತು ರೇಡಿಯಸ್‌ ಅನ್ನು ಆಧರಿಸಿದೆ. (ಭೂಮಿಯ ಮೇಲೆ ಒಬ್ಬ ವ್ಯಕ್ತಿಯ ತೂಕದಂತೆ) ಈ ನಿಯಮವು ಖಗೋಳಶಾಸ್ತ್ರಜ್ಞರಿಗೆ ದೂರದ ನಕ್ಷತ್ರಗಳ ಗುಂಪಿನ ತೂಕ ಮತ್ತು ಗಾತ್ರವನ್ನು ಅಳೆಯಲು ಸಹಾಯಕವಾಗಿದೆ ಎಂದಿದ್ದಾರೆ.

ಆಟೋಕೋರಿಲೇಷನ್‌ ಫಂಕ್ಶನ್‌ ಟೈಮ್‌ಸ್ಕೇಲ್‌ ತಂತ್ರಜ್ಞಾನ

ಆಟೋಕೋರಿಲೇಷನ್‌ ಫಂಕ್ಶನ್‌ ಟೈಮ್‌ಸ್ಕೇಲ್‌ ತಂತ್ರಜ್ಞಾನ

ಖಗೋಳ ವಿಜ್ಞಾನಿಗಳು ದೂರದ ಗ್ರಹವನ್ನು ಕಂಡುಹಿಡಿಯಲು "ಟೈಮ್‌ಸ್ಕೇಲ್‌ ತಂತ್ರಜ್ಞಾನ" ಎಂಬ ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದು, ಉಪಗ್ರಹಗಳಿಂದ ದೂರದ ನಕ್ಷತ್ರಗಳ ಹೊಳೆಯುವಿಕೆಯನ್ನು ರೆಕಾರ್ಡ್‌ ಮಾಡುತ್ತದೆ. ನಕ್ಷತ್ರಗಳು ಎಷ್ಟು ದೊಡ್ಡದಾಗಿರುತ್ತವೆ ಮತ್ತು ಹೇಗೆ ಹೊಳೆಯುತ್ತವೆ ಎಂಬುದನ್ನು ಸಹ ಹೇಳುತ್ತದೆ. ನಕ್ಷತ್ರಗಳ ಮಧ್ಯದಲ್ಲಿ ಗ್ರಹ ಏನಾದರೂ ಕಾಣಿಸಿಕೊಂಡರೆ ಅದರ ಗಾತ್ರ, ಉಷ್ಣತೆ ಮತ್ತು ನೀರನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡುತ್ತಿದೆ.

ಸೌರವ್ಯೂಹ ವ್ಯವಸ್ಥೆಯ ಅಧ್ಯಯನಕ್ಕೆ ಉತ್ತಮ ತಂತ್ರಜ್ಞಾನ

ಸೌರವ್ಯೂಹ ವ್ಯವಸ್ಥೆಯ ಅಧ್ಯಯನಕ್ಕೆ ಉತ್ತಮ ತಂತ್ರಜ್ಞಾನ

ಅವುಗಳು ನಾಸಾ ಕೆಪ್ಲರ್‌ ಮಿಷಿನ್‌ ಅಥವಾ ಕೆನಡಾದ ಮೋಸ್ಟ್‌ ಉಪಗ್ರಹವಾಗಿರಬಹುದು. ಈ ತಂತ್ರಜ್ಞಾನ ಸರಳವಾಗಿದ್ದು ಹೆಚ್ಚು ಪ್ರಭಾವ ಶಾಲಿ ಎಂದು ವಿಯೆನ್ನಾ ವಿಶ್ವವಿದ್ಯಾನಿಲಯದ ಪ್ರಮುಖ ಲೇಖಕ ಥಾಮಸ್ ಕಲ್ಲಿಂಗರ್‌ ಹೇಳಿದ್ದಾರೆ.
ಸೌರವ್ಯೂಹದಲ್ಲಿ ಸೂರ್ಯ, ಭೂಮಿಯಂತಹ ಇತರ ಗ್ರಹಗಳನ್ನು ಕಂಡುಹಿಡಿಯಲು ಈ ತಂತ್ರಜ್ಞಾನ ಸಹಾಯಕವಾಗಲಿದೆ.

ಏಲಿಯನ್‌ ಕುರಿತ ಲೇಖನಗಳು

ಗಿಜ್‌ಬಾಟ್‌

ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಏಲಿಯನ್ ಅನ್ವೇಷಣೆಗೆ ವಿಶ್ವದ ಬೃಹತ್ ಟೆಲಿಸ್ಕೋಪ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
New way to measure gravity can spot alien life. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot