ಸಿಗರೇಟ್‌ ವ್ಯಸನದಿಂದ ಮುಕ್ತಿ ಕೊಡಿಸಲು ಬಂದಿದೆ ತಂತ್ರಜ್ಞಾನ

By Avinash
|

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಜನ ಸಿಗರೇಟ್‌ ಸೇದುವುದು ಬಿಟ್ಟಿಲ್ಲ, ಬೀಡಲ್ಲ. ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಬೇರೆಯವರ ಆರೋಗ್ಯವನ್ನು ಹದಗೆಡಿಸುತ್ತಿದ್ದರು. ಇದಲ್ಲದೇ ಸಿಗರೇಟ್‌ನಲ್ಲಿ ಬಳಸುವ ಫಿಲ್ಟರ್‌ ಬೂಮಿಯಲ್ಲಿ ಬೆರೆಯುವುದಕ್ಕೆ ಅನೇಕ ವರ್ಷಗಳು ಬೇಕಾಗಿದ್ದು, ಇದರಿಂದ ಭೂ ಮಾಲಿನ್ಯವಾಗುತ್ತಿದೆ. ಹೀಗಿಗಂತೂ ಚಿಕ್ಕ ಮಕ್ಕಳಿಂದಿಡಿದು ವೃದ್ಧರವರೆಗೂ ಧೂಮಪಾನ ವ್ಯಸನವಾಗಿಬಿಟ್ಟಿದೆ. ಇದರಿಂದ ಅನೇಕ ಜನ ಕ್ಯಾನ್ಸರ್‌ ಬಂದು ಸಾವಿಗೀಡಾಗಿದ್ದಾರೆ ಮತ್ತು ಬಳಲುತ್ತಿದ್ದಾರೆ. ಟೆಕ್ ವೆಬ್‌ಲ್ಲಿ ಆರೋಗ್ಯದ ಬಗ್ಗೆ ಭಾಷಣ ಮಾಡ್ತಿದಿವಿ ಎಂದುಕೊಂಡಿರಾ. ಇಲ್ಲ, ವಿಷಯ ಇದೆ ಅದಕ್ಕಾಗಿಯೇ ಇಷ್ಟುದ್ದ ಪೀಠಿಕೆ ಹಾಕಿದ್ದು.

ಸಿಗರೇಟ್‌ ವ್ಯಸನದಿಂದ ಮುಕ್ತಿ ಕೊಡಿಸಲು ಬಂದಿದೆ ತಂತ್ರಜ್ಞಾನ

ಹೌದು, ಇಷ್ಟೆಲ್ಲಾ ಅನಾರೋಗ್ಯಕ್ಕೆ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಧೂಮಪಾನಕ್ಕೆ ಸಂಶೋಧಕರು ಮದ್ದನ್ನು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನ ಧೂಮಪಾನ ವ್ಯಸನದಿಂದ ಮುಕ್ತಿ ಕೊಡುವ ವಿಶ್ವಾಸವನ್ನು ಸಂಶೋಧಕರು ಹೊಂದಿದ್ದಾರೆ. ಧರಿಸಬಹುದಾದ ಸಂವೇದಕ ತಂತ್ರಜ್ಞಾನ ಬಳಸಿಕೊಂಡು ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನ ನಿಮ್ಮ ಮೊಬೈಲ್‌ ಫೋನ್‌ಗೆ ವಿಡಿಯೋ ಸಂದೇಶಗಳನ್ನು ಕಳಿಸುವ ಮೂಲಕ ಎಚ್ಚರಿಸುತ್ತದೆ. ಇದರಿಂದ ಧೂಮಪಾನ ವ್ಯಸನಿ ಸಿಗರೇಟ್‌ ವ್ಯಸನವನ್ನು ತೊರಯುವ ಸಾಧ್ಯತೆ ಇದೆ ಎಂಬುದು ಸಂಶೋಧಕರ ವಿಶ್ವಾಸ.

ಆಪ್ ಆಧಾರಿತ ಸಂವೇದಕ ತಂತ್ರಜ್ಞಾನ

ಆಪ್ ಆಧಾರಿತ ಸಂವೇದಕ ತಂತ್ರಜ್ಞಾನ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಆಪ್‌ ಮೂಲಕ ಕಾರ್ಯನಿರ್ವಹಿಸುವ ಈ ಸ್ವಯಂಚಾಲಿತ ಸಂವೇದನಾ ತಂತ್ರಜ್ಞಾನವು ಧೂಮಪಾನಕ್ಕೆ ಸಂಬಂಧಿಸಿದ ಅಂಶಗಳು ವ್ಯಕ್ತಿಯಲ್ಲಿ ಕಂಡು ಬಂದರೆ ತಕ್ಷಣ ಸ್ವಯಂಚಾಲಿತವಾಗಿ 20 ರಿಂದ 120 ಸೆಕೆಂಡ್‌ಗಳ ವಿಡಿಯೋಗಳನ್ನು ಆ ವ್ಯಕ್ತಿಗೆ ಕಳುಹಿಸುತ್ತದೆ. ಈ ಆಪ್ ಸದ್ಯಕ್ಕೆ ಕೇವಲ ಆಂಡ್ರಾಯ್ಡ್‌ಗೆ ಮಾತ್ರ ಸೀಮಿತವಾಗಿದ್ದು, ನಂತರದ ದಿನಗಳಲ್ಲಿ ಐಒಎಸ್‌ ಡಿವೈಸ್‌ಗಳಿಗೂ ಪರಿವಯಿಸುವ ಸಾಧ್ಯತೆಯಿದೆ.

ಚಲನೆಗಳಲ್ಲಿ ಯಾವುದೇ ಗೊಂದಲವಿಲ್ಲ

ಚಲನೆಗಳಲ್ಲಿ ಯಾವುದೇ ಗೊಂದಲವಿಲ್ಲ

ಸಿಗರೇಟ್ ವ್ಯಸನಕ್ಕೆ ಹೊಂದಿಕೆಯಾಗುವ ಚಲನೆಗಳಾದ ತಿನ್ನುವ ಹಾಗೂ ಕುಡಿಯುವ ಕ್ರಿಯೆಗಳನ್ನು ಸಹ ಪ್ರತ್ಯೇಕಿಸಲಾಗಿದ್ದು, ಕೇವಲ ಧೂಮಪಾನ ಮಾಡಿದಾಗ ಮಾತ್ರ ಈ ಸ್ವಯಂಚಾಲಿತ ಸಂವೇದಕ ಕಾರ್ಯನಿರ್ವಹಿಸಿ ವಿಡಿಯೋಗಳನ್ನು ಕಳುಹಿಸುತ್ತದೆ ಎಂದು ಯುಎಸ್‌ನ ಕೇಸ್‌ ವೆಸ್ಟರ್ನ್‌ ರಿಸರ್ವ್‌ ವಿವಿಯ ಸಂಶೋಧಕ ಮಿಂಗ್ ಚುಹಾನ್‌ ಹುವಾಂಗ್ ಹೇಳಿದ್ದಾರೆ. ಸಂಶೋಧಕರು ಹೇಳುವಂತೆ ಪರೀಕ್ಷಾರ್ತ ಮೊಬೈಲ್ ಅಲರ್ಟ್ ವ್ಯವಸ್ಥೆಯು ಆನ್‌ಲೈನ್ ಪ್ಲಾಟ್‌ಫಾರ್ಮ್‌ ಜತೆ ಸಂಯೋಜಿಸಲಾಗಿದ್ದು, ಧೂಮಪಾನವನ್ನು ತೊರೆಯಲು ತರಬೇತಿ ಹಾಗೂ ಕಾರಣವಾಗುತ್ತದೆಯಂತೆ.

ವಿಡಿಯೋ ಸಂದೇಶಗಳಲ್ಲಿ ಏನಿರುತ್ತೆ..?

ವಿಡಿಯೋ ಸಂದೇಶಗಳಲ್ಲಿ ಏನಿರುತ್ತೆ..?

ಆಪ್ ಕಳುಹಿಸುವ ವಿಡಿಯೋಗಳಲ್ಲಿ ಟೆಕ್ಸ್‌ ಮೆಸೇಜ್‌ ಕೂಡ ಇದ್ದು, ವಿಡಿಯೋಗಳು ಆರೋಗ್ಯದ ಕುರಿತು ಕಾಳಜಿಯನ್ನು ಹೊಂದಿರುತ್ತವೆ. ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಆರ್ಥಿಕ ವ್ಯರ್ಥತೆಯನ್ನು ವಿಡಿಯೋಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಇದರಿಂದ ಸಿಗರೇಟ್‌ ವ್ಯಸನಿ ಮನಪರಿವರ್ತನೆ ಹೊಂದಿ ಧೂಮಪಾನ ಬಿಡುತ್ತಾನೆ ಎಂಬುದು ಸಂಶೋಧಕರ ಆಶಯ.

ಸಿಗರೇಟ್‌ನಲ್ಲಿ ಏನೀದೆ..?

ಸಿಗರೇಟ್‌ನಲ್ಲಿ ಏನೀದೆ..?

ಸಿಗರೇಟ್ ಅಥವಾ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಿಗರೇಟ್ ಹೊಗೆಯಲ್ಲಿ ಕಾರ್ಬನ್ ಮೊನಾಕ್ಸೈಡ್, ಹೈಡ್ರೋಜನ್ ಸೈನೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ಸೇರಿ 7,000ಕ್ಕಿಂತ ಹೆಚ್ಚು ರಾಸಾಯನಿಕಗಳು ಇವೆ ಎಂಬುದನ್ನು ಸಂಶೋಧನೆಗಳು ಖಚಿತಪಡಿಸುತ್ತವೆ. ಅದಲ್ಲದೇ ಕ್ಯಾನ್ಸರ್‌ಗೆ ಕಾರಣವಾಗುವ 69 ಹಾನಿಕಾರಕ ರಾಸಾಯನಿಕಗಳಿವೆ ಎಂದು ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ.

ಜರ್ನಲ್ ಆಫ್ ಸ್ಮಾರ್ಟ್‌ ಹೆಲ್ತ್‌ನಲ್ಲಿ ಪ್ರಕಟ

ಜರ್ನಲ್ ಆಫ್ ಸ್ಮಾರ್ಟ್‌ ಹೆಲ್ತ್‌ನಲ್ಲಿ ಪ್ರಕಟ

ಈ ತಂತ್ರಜ್ಞಾನವನ್ನು ಪರೀಕ್ಷಿಸಲು ಸಣ್ಣ ಸಂಖ್ಯೆಯಲ್ಲಿ ಸಂಶೋಧಕರನ್ನು ನೇಮಕ ಮಾಡಲಾಯಿತು. ಅವರೆಲ್ಲ ಈ ಸಿಗರೇಟ್ ವ್ಯಸನದ ವಿರುದ್ಧದ ಹೋರಾಟದಲ್ಲಿ ಜಯಗಳಿಸಿದ್ದಾರೆ. ಹಿಂದಿನ ಬಹಳಷ್ಟು ಅಧ್ಯಯನಗಳು ಧೂಮಪಾನಿಗಳ ಸ್ವಯಂ ನಿಯಂತ್ರಣದ ಆಧಾರದ ಮೇಲೆ ವರದಿಗಳನ್ನು ಅವಲಂಬಿಸಿದ್ದವು. ಆದರೆ, ಕೇಸ್ ವೆಸ್ಟರ್ನ್ ರಿಸರ್ವ್ ವಿವಿಯ ಅಧ್ಯಯನದ ಸಂವೇದಕಗಳ ಆಧಾರದ ಮೇಲೆ ನಡೆದಿದ್ದು, ಧೂಮಪಾನ ಚಟುವಟಿಕೆಯನ್ನು ಹೆಚ್ಚು ನಿಖರವಾಗಿ ಪತ್ತೆಹಚ್ಚಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Best Mobiles in India

English summary
New Wearable Sensor Technology To Help Quit Smoking, Says US Study. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X