ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ

By Shwetha
|

ವೈಫೈ ಬಳಕೆ ಇಂದಿನ ಕಾಲದಲ್ಲಿ ಹೆಚ್ಚು ಜನಪ್ರಿಯ ಎಂದೆನಿಸಿದೆ. ಶಾಲಾ ಕಾಲೇಜು, ನಿವಾಸ, ಬಸ್ ನಿಲ್ದಾಣ ಹೀಗೆ ಎಲ್ಲಾ ಕಡೆಗಳಲ್ಲಿ ಕೂಡ ವೈಫೈ ಬಳಕೆಯನ್ನು ನಿಮಗೆ ಕಂಡುಕೊಳ್ಳಬಹುದು. ಡಿಜಿಟಲ್ ಇಂಡಿಯಾ ಯೋಜನೆಯ ಉದ್ದೇಶವೂ ಇದೇ ಆಗಿದ್ದು ಭಾರತದ ಎಲ್ಲೆಡೆಯೂ ಇಂಟರ್ನೆಟ್ ವ್ಯವಸ್ಥೆ ದೊರಕಬೇಕು ಮತ್ತು ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದೇ ಆಗಿದೆ. ಅದಕ್ಕಾಗಿಯೇ ವೈಫೈ ಬಳಕೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಹೊರತರಲಾಗುತ್ತಿದೆ.

ಇದೀಗ ಬಂದ ಸುದ್ದಿ ಎಂಬಂತೆ ಇನ್ನು ವೈಫೈ ತಂತ್ರಜ್ಞಾನವು 10,000 ಕ್ಕಿಂತ ಕಡಿಮೆ ವಿದ್ಯುತ್‌ಚ್ಛಕ್ತಿಯನ್ನು ಬಳಸಿಕೊಳ್ಳಲಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಇದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಯಲಿದ್ದು ವೈಫೈ ಬಳಸುವ ಇತರ ಡಿವೈಸ್‌ಗಳೂ ಲಾಭವನ್ನು ಪಡೆದುಕೊಳ್ಳಲಿದೆ.

#1

#1

ನಿಮ್ಮ ಕಾರಿನಲ್ಲಿ ನೀವು ಎಫ್‌ಎಮ್ ರೇಡಿಯೊ ಕೇಳುತ್ತಿರುವಾಗ ಅದು ಹಾಡುವವರ ಹೆಸರು ಮತ್ತು ಸ್ಟೇಶನ್ ಹೆಸರನ್ನು ಡಿಸ್‌ಪ್ಲೇನಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಟ್ರಾಫಿಕ್ ಅಥವಾ ಹವಾಮಾನ ಮುನ್ಸೂಚನೆಗಳನ್ನು ಇದು ನಿಮಗೆ ತಿಳಿಸುತ್ತದೆ ಅಲ್ಲವೇ? ಈ ಮಾಹಿತಿ ಡಿಜಿಟಲ್ ಸಿಗ್ನಲ್ ಆದ ರೇಡಿಯೊ ಡೇಟಾ ಸಿಸ್ಟಮ್ ಅಥವಾ ಆರ್‌ಡಿಎಸ್ ವ್ಯವಸ್ಥೆಯಿಂದ ದೊರಕುತ್ತದೆ. ಬ್ರಾಡ್‌ಕಾಸ್ಟ್ ಸಿಗ್ನಲ್‌ನ ಬಲಭಾಗದಲ್ಲಿ ಇದು ಪ್ರಸಾರವಾಗುತ್ತದೆ.

#2

#2

ಆರ್‌ಡಿಎಸ್ ಡೇಟಾವು ಸಿಗ್ನಲ್ ಅಂಶವನ್ನು ಹೊಂದಿದ್ದು, ತನ್ನಷ್ಟಕ್ಕೆ ಆವರ್ತನೆ ಮಾಡುವ ಶಕ್ತಿಯನ್ನು ಇದು ಪಡೆದುಕೊಂಡಿದೆ.

#3

#3

ವೈಫೈ ನೆಟ್‌ವರ್ಕ್‌ಗಳು ಇದೇ ಆರ್‌ಡಿಎಸ್ ಅನ್ನು ಕವರ್ ಮಾಡುತ್ತಿದೆ ಎಂದಾದಲ್ಲಿ ಸಮಯ ಹೇಳುವಿಕೆಗೆ ಕೂಡ ಇದನ್ನು ಬಳಸಬಹುದಾಗಿದೆ. ಹೆಚ್ಚು ಬಲವಾದ ಸಿಗ್ನಲ್‌ನೊಂದಿಗೆ ಕಡಿಮೆ ಆವರ್ತಾನಾ ರೇಡಿಯೊ ಸ್ಟೇಶನ್‌ಗಾಗಿ ಎಫ್‌ಎಮ್ ಡಯಲ್ ಅನ್ನು ಸ್ಕ್ಯಾನ್ ಮಾಡುವುದು.

#4

#4

ನಿರ್ದಿಷ್ಟ ಪುನರಾವರ್ತನಾ ಅಂಶ ಇದೆ ಎಂದಾದಲ್ಲಿ ಡಿವೈಸ್‌ಗಳು ಅದನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಲಿದೆ. ಇಲ್ಲಿ ಪುನರಾವರ್ತನೆಯಾಗುವ ನಿರ್ದಿಷ್ಟ ಆರ್‌ಡಿಎಸ್ ಸಿಗ್ನಲ್ ಸೀಕ್ವೆನ್ಸ್ ಆರಂಭವನ್ನು ಇದು ಕಂಡುಕೊಳ್ಳುತ್ತದೆ.

#5

#5

ಇವುಗಳು ಇಂತಹ ನಿರ್ದಿಷ್ಟ ಪಾಯಿಂಟ್‌ಗೆ ಬಂದಾಗ ಇವುಗಳು ಸಮಯವನ್ನು ನಿರ್ದಿಷ್ಟ ಸಮಯಕ್ಕೆ ವಿಂಗಡಿಸುತ್ತದೆ ಮತ್ತು ಈ ಸಮಯದಲ್ಲಿ ಇತರರ ಕ್ರಿಯೆಯನ್ನು ಇದು ಆಲಿಸುತ್ತದೆ. ಇದು ಡೇಟಾವನ್ನು ಯಾವಾಗ ಕಳುಹಿಸುತ್ತದೆ, ಯಾವಾಗ ಕಳುಹಿಸುವುದಿಲ್ಲ ಎಂಬುದನ್ನು ತಿಳಿಸುತ್ತದೆ.

#6

#6

ಇವುಗಳು ಇಂತಹ ನಿರ್ದಿಷ್ಟ ಪಾಯಿಂಟ್‌ಗೆ ಬಂದಾಗ ಇವುಗಳು ಸಮಯವನ್ನು ನಿರ್ದಿಷ್ಟ ಸಮಯಕ್ಕೆ ವಿಂಗಡಿಸುತ್ತದೆ ಮತ್ತು ಈ ಸಮಯದಲ್ಲಿ ಇತರರ ಕ್ರಿಯೆಯನ್ನು ಇದು ಆಲಿಸುತ್ತದೆ. ಇದು ಡೇಟಾವನ್ನು ಯಾವಾಗ ಕಳುಹಿಸುತ್ತದೆ, ಯಾವಾಗ ಕಳುಹಿಸುವುದಿಲ್ಲ ಎಂಬುದನ್ನು ತಿಳಿಸುತ್ತದೆ.

#7

#7

ಇನ್ನೂ ಸರಳವಾಗಿ ಹೇಳಬೇಕೆಂದಾದಲ್ಲಿ ಆರ್‌ಡಿಎಸ್ ಸಿಗ್ನಲ್ ವೈಫೈ ಡಿವೈಸ್‌ಗಳಿಗೆ ಗಡಿಯಾರದಂತೆ ಕೆಲಸ ಮಾಡುತ್ತವೆ ಮತ್ತು ಇತರರು ಈ ಸಮಯದಲ್ಲಿ ವೈಫೈ ಬಳಸುತ್ತಿದ್ದರೆ ಬಳಸದೇ ಇದ್ದಲ್ಲಿ ಇದು ನಿಮಗೆ ತಿಳಿಸುತ್ತದೆ.

#8

#8

ಈ ಸಂಶೋಧನೆಯನ್ನು ನಡೆಸಿದವರು ಕುಜಮಾನೊವಿಕ್ ಹಾಗೂ ಅವರ ಸಹೋದ್ಯೋಗಿಗಳಾದ ಮಾರ್ಸೆಲ್ ಮತ್ತು ಉರಿ ಕ್ಲಾರ್‌ಮನ್.

#9

#9

ಸಂಶೋಧಕರು ಈ ತಂತ್ರಜ್ಞಾನವನ್ನು ವೈ-ಎಫ್‌ಎಮ್ ಎಂಬುದಾಗಿ ಹೆಸರನ್ನಿಟ್ಟಿದ್ದು, ಇದರ ಮೇಲೆ ಪ್ರಬಂಧವನ್ನು ಮಂಡಿಸಿದ್ದಾರೆ. ಎಫ್‌ಎಮ್ ಸಿಗ್ನಲ್‌ಗಳನ್ನು ಬಳಸಿಕೊಂಡು ವೈಫೈ ಡಿವೈಸ್‌ಗಳನ್ನು ಸಂಯೋಜಿಸುವುದಾಗಿದೆ.

#10

#10

ವೈ-ಎಫ್‌ಎಮ್ ತಂತ್ರಜ್ಞಾನವನ್ನು ತಮ್ಮ ವೈಫೈ ಡಿವೈಸ್‌ಗಳಲ್ಲಿ ಸಾಫ್ಟ್‌ವೇರ್ ಅಳವಡಿಸಿಕೊಂಡಲ್ಲಿ ನಿಜಕ್ಕೂ ಈ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ ಎಂಬುದು ಕುಜಮಾನೊವಿಕೆ ಅವರ ಅಭಿಪ್ರಾಯವಾಗಿದೆ.

Best Mobiles in India

English summary
Scientists, including those of Indian-origin, have demonstrated that it is possible to generate Wi-Fi transmissions using 10,000 times less power than conventional methods, an advance that may help save battery life in smartphones and other devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X