ಭಾರತೀಯರು ಯಾವ ವರ್ಗದ ಆಪ್‌ಗಳನ್ನು ಹೆಚ್ಚು ಬಳಸುತ್ತಿದ್ದಾರೆ ಗೊತ್ತಾ?

|

ನಿಮ್ಮ ಫೋನಿನಲ್ಲಿ ಯಾವೆಲ್ಲಾ ಆಪ್‌ಗಳಿವೆ ಎಂಬುದು ನಿಮಗೆ ಗೊತ್ತು. ಆದರೆ, ಬಹುತೇಕರು ಯಾವ ಯಾವ ಆಪ್‌ಗಳನ್ನು ಬಳಸುತ್ತಿದ್ದಾರೆ ಎಂಬ ಕುತೋಹಲ ನಿಮಗೆ ಇದ್ದರೆ ಅದಕ್ಕಿಂದು ಉತ್ತರ ದೊರೆತಿದೆ. ಹೌದು, ಇಷ್ಟು ಜಾಲತಾಣಗಳ ಆಪ್‌ಗಳನ್ನೇ ಹೆಚ್ಚು ಬಳಸುತ್ತಿದ್ದ ಮೊಬೈಲ್ ಪ್ರಿಯರ ದೃಷ್ಟಿ ಇತರೆ ಕೆಲವು ವರ್ಗಗಳ ಆಪ್‌ಗಳತ್ತ ಬಿದ್ದಿದೆ ಎಂದು ವರದಿಯೊಂದು ಹೇಳಿದೆ.

ಮೆಸೇಂಜಿಂಗ್ ಮತ್ತು ಜಾಲತಾಣಗಳ ಆಪ್‌ಗಳನ್ನೇ ಹೆಚ್ಚು ಬಳಸುತ್ತಿದ್ದ ಮೊಬೈಲ್ ಪ್ರಿಯರು, ಈಗ ಷಾಪಿಂಗ್, ವಿಡಿಯೊ ಮತ್ತು ಗೇಮಿಂಗ್‌ ಆಪ್‌ಗಳ ಹಿಂದೆ ಬಿದ್ದಿದ್ದಾರೆ. ದಿನಚರಿ ದಾಖಲಿಸಲು, ಷಾಪಿಂಗ್, ವಿಡಿಯೊ, ಗೇಮ್‌ಗಳು ಮೊಬೈಲ್‌ನಲ್ಲಿರುವ ಬಹುತೇಕ ಅರ್ಧದಷ್ಟು ಜಾಗವನ್ನು ಈ ಆಪ್‌ಗಳೇ ಆವರಿಸಿಕೊಂಡಿರುತ್ತವೆ ಎಂದು ಆಪ್‌ಗಳ ವಿತರಣಾ ಸಂಸ್ಥೆ ಮೊಮ್ಯಾಜಿಕ್ ಹೇಳಿದೆ.

ಭಾರತೀಯರು ಯಾವ ವರ್ಗದ ಆಪ್‌ಗಳನ್ನು ಹೆಚ್ಚು ಬಳಸುತ್ತಿದ್ದಾರೆ ಗೊತ್ತಾ?

ದಿನಕ್ಕೊಂದು ಹೊಸ ಆಪ್‌ ಹುಟ್ಟಿಕೊಳ್ಳುತ್ತಿರುವ ಈ ದಿನಗಳಲ್ಲಿ ಬಳಕೆದಾರರ ಆಸಕ್ತಿ, ಹವ್ಯಾಸಗಳ ಬಗ್ಗೆ ಅಧ್ಯಯನ ನಡೆಸಿ ಹೊಸ ಆಪ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಆದರೂ, ದೇಶದಲ್ಲಿ ನಿರೀಕ್ಷೆಯಂತೆ ಕೆಲವು ಆಪ್‌ಗಳು ಮಾತ್ರ ಹೆಚ್ಚು ಬಳಕೆಯಲ್ಲಿವೆ ಎಂದು ಹೇಳಲಾಗಿದೆ. ಹಾಗಾದರೆ, ಮೊಮ್ಯಾಜಿಕ್ ನೀಡಿರುವ ವರದಿಯಲ್ಲಿ ಏನೇನಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

 ಆಪ್‌ಗಳು ಹೆಚ್ಚು ಡೌನ್‌ಲೋಡ್ ಆಪ್‌ ವರ್ಗಗಳು!

ಆಪ್‌ಗಳು ಹೆಚ್ಚು ಡೌನ್‌ಲೋಡ್ ಆಪ್‌ ವರ್ಗಗಳು!

ದಿನಕ್ಕೊಂದು ಹೊಸ ಆಪ್‌ ಹುಟ್ಟಿಕೊಳ್ಳುತ್ತಿರುವ ಈ ದಿನಗಳಲ್ಲಿ ಬಳಕೆದಾರರ ಆಸಕ್ತಿ, ಹವ್ಯಾಸಗಳ ಬಗ್ಗೆ ಅಧ್ಯಯನ ನಡೆಸಿ ಹೊಸ ಆಪ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಆದರೂ, ಭಾರತದಲ್ಲಿ ನಿರೀಕ್ಷೆಯಂತೆಯೇ ಮೆಸೇಂಜಿಂಗ್, ಸಾಮಾಜಿಕ ಜಾಲತಾಣಗಳು, ಗೇಮಿಂಗ್ ಮತ್ತು ನ್ಯೂಸ್ ಆಪ್‌ಗಳು ಹೆಚ್ಚು ಡೌನ್‌ಲೋಡ್ ಆಗಿವೆ ಎಂದು ಮೊಮ್ಯಾಜಿಕ್ ತನ್ನ ವರದಿಯಲ್ಲಿ ತಿಳಿಸಿದೆ.

ಹೆಚ್ಚು ಬೇಡಿಕೆಯ ಆಪ್‌ ವರ್ಗಗಳು ಇವು

ಹೆಚ್ಚು ಬೇಡಿಕೆಯ ಆಪ್‌ ವರ್ಗಗಳು ಇವು

ಇನ್ನು ಹೊಸದಾಗಿ ಮೊಬೈಲ್‌ ಬಳಸುವವರು ಆಹಾರ, ಪಾನೀಯ, ಆರೋಗ್ಯ, ಫಿಟ್‌ನೆಸ್, ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಹೆಚ್ಚು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದಾರೆ. ಭಾರತವು ಪ್ರಮುಖ 10 ಭಾಷೆಗಳಲ್ಲಿ ನ್ಯೂಸ್‌ ಕಂಟೆಂಟ್‌ಗಳನ್ನು ಸೃಷ್ಟಿಸುವ ದೇಶವಾಗಿರುವುದರಿಂದ ಎಲ್ಲರೂ ನ್ಯೂಸ್‌ ರಿಲೇಟೆಡ್ ಆಪ್‌ಗಳನ್ನು ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಹೆಚ್ಚು ಪೂರಕವಾದ ಆಪ್‌ಗಳು ಇವು

ಹೆಚ್ಚು ಪೂರಕವಾದ ಆಪ್‌ಗಳು ಇವು

ಸಾಮಾಜಿಕ ತಾಣಗಳನ್ನು ಬಳಸುತ್ತಿರುವವರು ಜಿಪಿಎಸ್, ಪಾರ್ಕಿಂಗ್, ಹೈವೇ ಹೆಲ್ಪರ್‌ ತರಹದ ಹಲವು ಚಾಲನೆಗೆ ಪೂರಕವಾದ ಆಪ್‌ಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ ಒಂದು ತಂಡ ರಚಿಸಿಕೊಂಡಿರುವವರು ಹೊಸ ಸ್ಥಳಗಳ ಅನ್ವೇಷಣೆ ಮತ್ತು ಪ್ರವಾಸಕ್ಕಾಗಿ ಹವಾಮಾನ ಮುನ್ಸೂಚನೆ, ಗಾಳಿಯ ಗುಣಮಟ್ಟವನ್ನು ತಿಳಿಸುವ ಆಪ್‌ಗಳನ್ನೂ ಸಹ ಹೊಂದಿದ್ದಾರೆ ಎಂದು ಹೇಳಿದೆ.

ಭವಿಷ್ಯದ ಬೇಡಿಕೆಯ ಆಪ್‌ಗಳು!

ಭವಿಷ್ಯದ ಬೇಡಿಕೆಯ ಆಪ್‌ಗಳು!

ಪ್ರಸ್ತುತ ಮೆಸೇಂಜಿಂಗ್, ಸಾಮಾಜಿಕ ಜಾಲತಾಣಗಳು, ಗೇಮಿಂಗ್ ಮತ್ತು ನ್ಯೂಸ್ ಆಪ್‌ಗಳು ಹೆಚ್ಚು ಡೌನ್‌ಲೋಡ್ ಆಗಿದ್ದರೆ, 2019ರಲ್ಲಿ, ಅಂದರೆ ಮುಂದಿನ ವರ್ಷದಲ್ಲಿ ಇವುಗಳ ಜೊತೆಗೆ ಷಾಪಿಂಗ್, ವಿಡಿಯೊ ಮತ್ತು ಗೇಮಿಂಗ್‌ ಆಪ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚಲಿದೆಯಂತೆ. ಇವುಗಳ ಶೇ 60ರಷ್ಟು ಹೆಚ್ಚಾಗಲಿದೆ ಎಂದು ಮೊಮ್ಯಾಜಿಕ್ ಸಂಸ್ಥೆ ಭವಿಷ್ಯವನ್ನು ಸಹ ನುಡಿದಿದೆ.

 ಆಪ್‌ಗಳ ಬಳಕೆ ಹೆಚ್ಚಲು ಕಾರಣ!

ಆಪ್‌ಗಳ ಬಳಕೆ ಹೆಚ್ಚಲು ಕಾರಣ!

ಮೊಬೈಲ್ ಡೇಟಾ ದರದಲ್ಲಿನ ಇಳಿಕೆ ಹಾಗೂ ಡೇಟಾ ವೇಗ ಹೆಚ್ಚಾಗುತ್ತಿರುವುದು ಆಪ್‌ಗಳ ಬಳಕೆಯಲ್ಲಿ ಗಣನೀಯ ಪ್ರಗತಿಗೆ ಕಾರಣವಾಗಿದೆ ಎಂದು ಮೊಮ್ಯಾಜಿಕ್ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿರುವುದು ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಳು ಕಾರಣವಾದರೆ, ಕಡಿಮೆ ಬೆಲೆಗೆ ಡೇಟಾ ಸಿಗುತ್ತಿರುವುದು ಆಪ್‌ ಬಳಕೆ ಹೆಚ್ಚಾಗಲು ಕಾರಣವಾಗಿದೆ.

Best Mobiles in India

English summary
From 2017 to 2018, there was a 94 per cent jump in installations of news-related apps, followed by an 80 per cent increase in social media-related apps and lastly gaming apps at 52 per cent. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X