ಮೋಟೋ ಜಿ ಯಿಂದ ಮೋಟೋ ಜಿ2 ಹ್ಯಾಂಡ್‌ಸೆಟ್
ಮೋಟೋರೋಲಾ ಮೋಟೋ ಜಿಯನ್ನು ಕಳೆದ ವರ್ಷ ಪ್ರಸ್ತುತಪಡಿಸಿದಾಗ, ಈ ಫೋನ್ ಜಾದೂವನ್ನೇ ಮಾಡಬಹುದೆಂಬ ಕಲ್ಪನೆ ಅವರಿಗೇ ಇರಲಿಲ್ಲ. ಇದು ಹೆಚ್ಚು ಖ್ಯಾತಿಯನ್ನು ಪಡೆದದ್ದು ಮಾತ್ರವಲ್ಲ ಭಾರತೀಯ ಮಾರುಕಟ್ಟೆಯಲ್ಲಿ ಹೊಸದೊಂದು ಮುನ್ನುಡಿಯನ್ನೇ ಬರೆಯಿತು.
ಹೆಚ್ಚು ಖ್ಯಾತಿಯನ್ನು ಗಳಸಿರುವ ಮತ್ತು ಮಾರಾಟವಾಗು ಹ್ಯಾಂಡ್‌ಸೆಟ್ ಆಗಿ ಇದು ದೇಶದಲ್ಲಿ ಚಾಲ್ತಿಯಲ್ಲಿದೆ. ಆದರೀಗ ಮೋಟೋ ಜಿ ಯ ಇನ್ನೊಬ್ಬ ಯಶಸ್ವಿದಾರ ಬಂದಾಯಿತು. ವದಂತಿಗಳು ನಿಜವಾದರೆ ಮೋಟೋ ಜಿ 2 ಕಡಿಮೆ ಬೆಲೆಯಲ್ಲಿ ಬರಲಿದೆ. ಹೌದು ಇದು ನಿಜವಾದ ಸುದ್ದಿಯಾಗಿದೆ.

ಗ್ರಾಹಕರ ಮನಸ್ಸನ್ನು ಇನ್ನೊಮ್ಮೆ ಗೆಲ್ಲುವಂತಹ ಸುವರ್ಣ ಅವಕಾಶಕ್ಕೆ ಕಂಪೆನಿ ಕಾಯುತ್ತಿದೆ. ಸ್ಪಾನಿಶ್ ವೆಬ್‌ಸೈಟ್ Mellando no Android ಹೇಳುವಂತೆ ಇದು ಮುಂಬರಲಿರುವ ಮೋಟೋ ಜಿ2 ಆಗಿರಬಹುದು ಅಥವಾ ಮೋಟೋ ಜಿಯ ದ್ವಿತೀಯ ಜನರೇಶನ್. ಈ ಹ್ಯಾಂಡ್‌ಸೆಟ್ ಚಿತ್ರವನ್ನೂ ಕೂಡ ಆನ್‌ಲೈನ್‌ನಲ್ಲಿ ಕಂಡುಬಂದಿದೆ.
ಈ ಮೋಟೋ ಜಿ2 ಹ್ಯಾಂಡ್‌ಸೆಟ್ ತನ್ನ ಚಿಕ್ಕ ಸಹೋದರ ಮೋಟೋ ಇ ಯಂತೆ ಕಂಡುಬರುತ್ತಿರುವುದನ್ನು ನಿಮಗೆ ಚಿತ್ರದಲ್ಲಿ ಗಮನಿಸಬಹುದು. ಇದು ತನ್ನದೇ ಆದ ವಿನ್ಯಾಸ ಭಾಷೆಯನ್ನು ಹೊಂದಿದ್ದು, ಮುಂಭಾಗದಲ್ಲಿ ಫ್ರಂಟ್ ಫೇಸಿಂಗ್ ಸ್ಪೀಕರ್ ಮತ್ತು ಇಯರ್ ಪೀಸ್ ಅನ್ನು ಒಳಗೊಂಡಿದೆ. ಕೆಲವೊಂದು ಲೀಕ್ ಆಗಿರುವ ವೈಶಿಷ್ಟ್ಯತೆಗಳ ಮೇಲೂ ವರದಿ ಬೆಳಕು ಚೆಲ್ಲಿದೆ.
ಈ ಡಿವೈಸ್ 720p HD ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಡ್ ಕೋರ್ ARM V7 ಪ್ರೊಸೆಸರ್ ಅನ್ನು ಒಳಗೊಂಡಿದೆ. ಮೋಟೋ ಜಿ2 8 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಒಳಗೊಂಡಿದ್ದು, ಡ್ಯುಯೆಲ್ ಸಿಮ್ ಕಾರ್ಡ್ ಅನ್ನು ಹೊಂದಿದೆ. ಇದರ RAM, ಆಂತರಿಕ ಮೆಮೊರಿ, ಬ್ಯಾಟರಿ ಬಗ್ಗೆ ಇದುವರೆಗೆ ಯಾವ ಮಾಹಿತಿ ಕೂಡ ದೊರಕಿಲ್ಲ. ಮೋಟೋರೋಲಾ ಕೆಲವೊಂದು ಮುಖ್ಯ ಪ್ರದೇಶಗಳಲ್ಲಿ ಮೋಟೋ ಜಿ2 ಅನ್ನು ಲಾಂಚ್ ಮಾಡಲಿದೆ. ಹೆಚ್ಚಿನ ನವೀಕರಣಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ!


Click it and Unblock the Notifications








