ಟೆಕ್ ನ್ಯೂಸ್: ವಾಟ್ಸ್‌ಆಪ್‌ಗೆ ಶೀಘ್ರವೇ ಭಾರತೀಯ ಮುಖ್ಯಸ್ಥ..?

|

ಟೆಕ್ ಲೋಕದಲ್ಲಿ ಭಾರತೀಯರು ಮೇಲುಗೈ ಸಾಧಿಸುತ್ತಿದ್ದು, ಸರ್ಚ್ ಇಂಜಿನ್ ದೈತ್ಯ ಗೂಗಲ್ CEO ಹುದ್ದೆಯನ್ನು ಭಾರತೀಯ ಮೂಲದ ಸುಂದರ್ ಪಿಚ್ಚೈ ಅಲಂಕರಿಸಿರುವ ಮಾದರಿಯಲ್ಲಿಯೇ ಮತ್ತೊಂದು ದೈತ್ಯ ಟೆಕ್ ಕಂಪನಿಯ ಮುಖ್ಯಸ್ಥರಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ನೇಮಕವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಈ ಕುರಿತು ಮಾಹಿತಿಯೂ ದೊರೆತಿದೆ.

ಟೆಕ್ ನ್ಯೂಸ್: ವಾಟ್ಸ್‌ಆಪ್‌ಗೆ ಶೀಘ್ರವೇ ಭಾರತೀಯ ಮುಖ್ಯಸ್ಥ..?

ಮೂಲಗಳ ಪ್ರಕಾರ ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಒಡೆತನದ, ಜಾಗತಿಕವಾಗಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೇಸೆಂಜಿಗ್ ತಾಣ ವಾಟ್ಸ್‌ಆಪ್ ಕಾರ್ಯ ನಿರ್ವಹಣಾಧಿಕಾರಿ ಸ್ಥಾನಕ್ಕೆ ಜಾನ್​ ಕೋಮ್ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ, ಆ ಹುದ್ದೆಗೆ ಭಾರತೀಯರೊಬ್ಬರ ಆಯ್ಕೆ ಮಾಡಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.

ಭಾರತೀಯರಿಗಾಗಿ ಹುಡುಕಾಟ:

ಭಾರತೀಯರಿಗಾಗಿ ಹುಡುಕಾಟ:

ಸದ್ಯ ಭಾರತೀಯರು ಮುನ್ನಡೆಸುತ್ತಿರುವ ಟೆಕ್ ಕಂಪನಿಗಳು ಹೆಚ್ಚಿನ ಲಾಭದಲ್ಲಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಕಾರ್ಯ ನಿರ್ವಹಣಾಧಿಕಾರಿ ಸ್ಥಾನಕ್ಕೆ ಭಾರತೀಯರ ಹುಡುಕಾಟ ಆರಂಭವಾಗಿದ್ದು, ಮೂಲಗಳ ಪ್ರಕಾರ ವಾಟ್ಸ್‌ಆಪ್ CEO ಹುದ್ದೆಗೆ ಭಾರತೀಯ ಮೂಲದವರನ್ನೇ ನೇಮಿಸುವ ಸಾಧ್ಯತೆ ಇದೆ.

ನೀರಜ್ ಸಿಇಒ..?

ನೀರಜ್ ಸಿಇಒ..?

ವಿಶ್ವದಲ್ಲಿ ಒಂದು ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್ ನಲ್ಲಿ ಸದ್ಯ COO ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ ನೀರಜ್​ ಅವರನ್ನೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿದೆ.

How to Send a WhatsApp Message Without Saving the Contact in Your Phone - GIZBOT KANNADA
 ಪಟ್ಟಿಯಲ್ಲಿ ನಾಲ್ಕನೇ ಸ್ಥಾನ:

ಪಟ್ಟಿಯಲ್ಲಿ ನಾಲ್ಕನೇ ಸ್ಥಾನ:

ಈಗಾಗಲೇ ವಾಟ್ಸ್‌ಆಪ್ CEO ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳ ಹುಡುಕಾಟವು ನಡೆದಿದ್ದು, ಸದ್ಯದ ಮಾಹಿತಿಗಳ ಪ್ರಕಾರ ವಾಟ್ಸಾಪ್​ ಸಿಇಒಗಳ ಸಂಭವನೀಯ ಪಟ್ಟಿಯಲ್ಲಿ ನೀರಜ್​ ನಾಲ್ಕನೇ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.

ಐಐಟಿ ವಿಧ್ಯಾರ್ಥಿ:

ಐಐಟಿ ವಿಧ್ಯಾರ್ಥಿ:

ಹಲಿಯ ಐಐಟಿಯಲ್ಲಿ ವಿದ್ಯಾಭ್ಯಾಸ ನಡೆಸಿದರುವ ನೀರಜ್ ಅವರು, ಗೂಗಲ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವನ್ನು ಹೊಂದಿದ್ದಾರೆ. 2011ರಿಂದ ವಾಟ್ಸ್‌ಆಪ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಇವರನ್ನೇ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.

Best Mobiles in India

English summary
Next WhatsApp CEO to be an Indian?. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X