ಕ್ಯಾಲರಿ ಬರ್ನ್ ಫ್ಯುಯೆಲ್‌ಬಾಂಡ್ ಆಪಲ್ ಐವಾಚ್‌ನೊಂದಿಗೆ ಮಾರುಕಟ್ಟೆಗೆ

Written By:

ಕ್ಯಾಲರಿ ಬರ್ನ್ ಮಾಡುವ ವಿಶೇಷತೆಯನ್ನೊಳಗೊಂಡ ಫ್ಯುಯೆಲ್ ಬಾಂಡ್ ಇನ್ನೇನು ಮಾರುಕಟ್ಟೆಗೆ ಬರುವ ಸಮಯ ಹತ್ತಿರವಾಗುತ್ತಿದೆ. ನೈಕ್ ಕಂಪೆನಿ ಈ ಫ್ಯುಯೆಲ್ ಬಾಂಡ್ ಆಪಲ್ ಐವಾಚ್‌ನೊಂದಿಗೆ ಸಮ್ಮಿಲನಗೊಂಡು ನಿಮ್ಮ ಕೈ ಸೇರಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಫ್ಯುಯೆಲ್ ಬಾಂಡ್ ಆಪಲ್ ಅಭಿಮಾನಿಗಳಿಂದ ಖ್ಯಾತಿ ಹೊಂದುತ್ತದೆ ಎಂಬುದು ಖಂಡಿತ ಸತ್ಯ.

ನೈಕ್ ಅಧ್ಯಕ್ಷ ಸಿಇಒ ಮಾರ್ಕ್ ಪಾರ್ಕರ್ ಹೇಳುವ ಪ್ರಕಾರ ಕಂಪೆನಿಗೆ ಈ ಪಾಲುದಾರಿಕೆ ಒಂದು ಯಶಸ್ವಿ ಭಾಗವಾಗಿದ್ದು ಮುಂದಿನ ವ್ಯವಹಾರಕ್ಕೆ ಉತ್ತಮ ವೇದಿಕೆಯನ್ನು ಸಿದ್ಧೊಪಡಿಸಲಿದೆ ಎಂದಾಗಿದೆ. ಇದರಿಂದ ನೈಕ್ ಕಂಪೆನಿಯ ಉತ್ಪನ್ನಗಳು ಆಪಲ್‌ನೊಂದಿಗೆ ಸೇರಿ ಮಾರುಕಟ್ಟೆಯಲ್ಲಿ ಪವಾಡವನ್ನೇ ಸೃಷ್ಟಿಸಬಹುದೆಂಬುದನ್ನು ಕಾದು ನೋಡಬಹುದು.

ಕ್ಯಾಲರಿ ಬರ್ನ್ ಫ್ಯುಯೆಲ್‌ಬಾಂಡ್ ಆಪಲ್ ಐವಾಚ್‌ನೊಂದಿಗೆ ಮಾರುಕಟ್ಟೆಗೆ

ನೈಕ್ ಹಾಗೂ ಫ್ಯುಯೆಲ್ ಬಾಂಡ್ ಸಾಫ್ಟ್‌ವೇರ್‌ನೊಂದಿಗೆ ಆಪಲ್‌ನ ಫಿಟ್‌ನೆಸ್ ಇಕೋ ಸಿಸ್ಟಮ್ ಐವಾಚ್‌ನಲ್ಲಿ ಕಂಡುಬರಲಿದೆ. ನೈಕ್ ಫ್ಯುಯೆಲ್ ಸಾಫ್ಟ್‌ವೇರ್ ಮತ್ತು ಸಿಸ್ಟಮ್‌ನಿಂದ ಬಳಕೆದಾರರಿಗೆ ಸಹಾಯವಾಗಲಿ ಎಂಬುದೇ ಕಂಪೆನಿಯ ಸದುದ್ದೇಶವಾಗಿದೆ. ಇಂದು ನಾವು 30 ಮಿಲಿಯನ್ ಫ್ಯುಯೆಲ್ ಬಾಂಡ್ ಬಳಕೆದಾರರನ್ನು ಹೊಂದಿದ್ದು ಇದನ್ನು 100 ಮಿಲಿಯನ್‌ಗೆ ಕೊಂಡೊಯ್ಯುವ ಸದಾಶಯ ಕಂಪೆನಿಯದ್ದು ಎಂದು ಮಾರ್ಕ್ ಪಾರ್ಕರ್ ತಿಳಿಸಿದ್ದಾರೆ.

ಫ್ಯುಯೆಲ್‌ಬಾಂಡ್ ನಲ್ಲಿ ಕೆಲವೊಂದು ವಿಶಿಷ್ಟ ಅಂಶಗಳಿದ್ದು ಅದು ನಿಜಕ್ಕೂ ಬಳಸುವವರಿಗೆ ಅದರ ಪ್ರಯೋಜನವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ನವೀನ ಸಾಫ್ಟ್‌ವೇರ್‌ಗಳಿಂದ ಸಂಪೂರ್ಣಗೊಂಡಿರುವ ಇದು ಬಳಕೆದಾರರ ಮೆಚ್ಚುಗೆಯನ್ನು ಇನ್ನೂ ಹೆಚ್ಚು ಪಡೆಯುತ್ತದೆ ಎಂಬುದು ನಮ್ಮ ಆಶಯವಾಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot