ಭಾರತದಲ್ಲಿ ನಿಕಾನ್Z50 APS-C ಮಿರರ್ ಲೆಸ್ ಕ್ಯಾಮೆರಾ ಬಿಡುಗಡೆ!
ಇಂದಿನ ಜಮಾನದಲ್ಲಿ ಫೋಟೊಗ್ರಫಿ ಅಂದರೆ ಎಲ್ಲರೂ ಇಷ್ಟ ಪಡುತ್ತಾರೆ. ಎಲ್ಲರೂ ಕೂಡ ತಮ್ಮದೇ ಶೈಲಿಯಲ್ಲಿ ಭಿನ್ನ ವಿಭಿನ್ನ ಫೋಟೋಗಳನ್ನ ಸೆರೆಹಿಡಿಯಲು ಬಯಸುತ್ತಾರೆ. ಸದ್ಯ ತಂತ್ರಜ್ಞಾನ ಮುಂದುವರೆದಂತೆ ಮಾರುಕಟ್ಟೆಯಲ್ಲಿ ಸಾಕಷ್ಟು ವೈವಿಧ್ಯಮಯ ಕ್ಯಾಮೆರಾಗಳು ಲಭ್ಯವಿವೆ. ಇನ್ನು ಕ್ಯಾಮೆರಾ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪೆನಿಗಳು ಇದ್ದು, ಅದರಲ್ಲಿ ನಿಕಾನ್ ಸಂಸ್ಥೆ ಕೂಡ ಜನಪ್ರಿಯ ಕ್ಯಾಮೆರಾ ಕಂಪೆನಿಯಾಗಿದೆ.

ಹೌದು, ಜನಪ್ರಿಯ ಕ್ಯಾಮೆರಾ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿರುವ ನಿಕಾನ್ ಕಂಪೆನಿ ಈಗಾಗ್ಲೆ ಹಲವು ವಿಭಿನ್ನ ಕ್ಯಾಮೆರಾಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ನಿಕಾನ್ ಕಂಪೆನಿ ಕಳೆದ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದ Z50 APS-C ಮಿರರ್‌ಲೆಸ್ ಕ್ಯಾಮೆರಾವನ್ನ ಭಾರತದಲ್ಲಿ ಪರಿಚಯಿಸಿದ್ದು, ಇದರ ಬೆಲೆ 72,995 ರೂ.ಆಗಿದೆ. ಈ ಕ್ಯಾಮೆರಾ ಎರಡು ವಿಭಿನ್ನ ಆಯ್ಕೆಗಳಲ್ಲಿ ಲಾಂಚ್ ಆಗಿದ್ದು, ಒಂದು 16-50mm f/ 3.5-6.3 ಲೆನ್ಸ್ ಹೊಂದಿದ್ದರೆ, ಇನ್ನೊಂದು 50-250mm f/ 4.5-6.3 ಲೆನ್ಸ್ ಹೊಂದಿದೆ.

ಕ್ಯಾಮೆರಾ ವಿಶೇಷತೆಯೇನು?
ನಿಕಾನ್ ಕಂಪೆನಿ ಈ ಹಿಂದೆ ಭಾರತದಲ್ಲಿ Z6 ಮತ್ತು Z7 ಫುಲ್-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾಗಳನ್ನು ಬಿಡುಗಡೆ ಮಾಡಿತು. ಇದೀಗ ಬಿಡುಗಡೆ ನಿಕಾನ್ Z50 APS-C ಮಿರರ್‌ಲೆಸ್ ಕ್ಯಾಮೆರಾ APS-C ಸೆನ್ಸಾರ್ ಅನ್ನು ಒಳಗೊಂಡಿರುವ ನಿಕಾನ್‌ನ ಮೊದಲ ಕ್ಯಾಮೆರಾ ಆಗಿದೆ. ನಿಕಾನ್ Z50 ಕ್ಯಾಮೆರಾ D7500 ಸೆನ್ಸಾರ್‌ಅನ್ನು ಆಧರಿಸಿದ 20.9 ಮೆಗಾಪಿಕ್ಸೆಲ್ APS-C ಸೆನ್ಸಾರ್‌ಅನ್ನು ಹೊಂದಿದೆ.

ಕಾರ್ಯವಿಧಾನ ಹೇಗೆ
ಈ ಕ್ಯಾಮೆರಾ ನಿಕಾನ್ ಎಕ್ಸ್‌ಪೀಡ್ 6 ಇಮೇಜ್ ಪ್ರೊಸೆಸರ್ ಹೊಂದಿದ್ದು, ಆಟೋ ಫೋಕಸ್ ಕಾರ್ಯವಿಧಾನದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಕ್ಯಾಮೆರಾದಲ್ಲಿ ವಿಡಿಯೋಗ್ರಫಿಗೆ ಸಹಾಯ ಮಾಡಲಿ ಫೇಸ್ ಆಂಡ್ ಐ ಡಿಟೇಕ್ಷನ್ ಮೋಡ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಕ್ಯಾಮೆರಾ 100 ರಿಂದ 51,200 ಐಎಸ್ಒ ರೇಂಜ್ ಅನ್ನು ಹೊಂದಿದೆ. ಜೊತೆಗೆ ಇದು ಇನ್-ಕ್ಯಾಮೆರಾ ರಾ ಫೈಲ್ ಫೈಲ್ ಕನ್ವರ್ಟರ್ ಅನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೇನು
ನಿಕಾನ್ Z50 APS-C ಮಿರರ್‌ಲೆಸ್ ಕ್ಯಾಮೆರಾ ವೃತ್ತಪರ ಫೋಟೋಗ್ರಾಫರ್‌ಗಳಿಗೆ ಮಾತ್ರವಲ್ಲದೆ ಉತ್ಸಾಹಿ ಕ್ಯಾಮೆರಾ ಬಳಕೆದಾರರಿಗೂ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಕ್ಯಾಮೆರಾ ಹೊಸದಾಗಿ ಎರಡು ಕ್ರಿಯೆಟಿವ್ ಪ್ರಿಸೆಟ್ ಮೋಡ್‌ಗಳನ್ನ ಹೊಂದಿದ್ದು, ಫೋಟೋ ಶೂಟ್ ಮಾಡಲು ಸುಲಭವಾಗಿದೆ. ಇದಲ್ಲದೆ 30fps ನಲ್ಲಿ 4K UHD ವರೆಗೆ ವಿಡಿಯೋ ಚಿತ್ರೀಕರಣ ಮಾಡುವ ಸಾಮರ್ಥ್ಯವನ್ನು ನೀಡಲಾಗಿದೆ. ಅಲ್ಲದೆ 120fps ನಲ್ಲಿ 1080p ಫೂಟೇಜ್ ಅನ್ನು ಶೂಟ್ ಮಾಡುವ ಅವಕಾಶ ಸಹ ಇದರಲ್ಲಿ ಕಲ್ಪಿಸಲಾಗಿದೆ. ಇದಲ್ಲದೆ ಇದು ಒಎಲ್ಇಡಿ ವ್ಯೂಫೈಂಡರ್ 2.36 ಮಿಲಿಯನ್ ಡಾಟ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ ಕ್ಯಾಮೆರಾ ಕಾರ್ಡ್ ಸ್ಲಾಟ್ ಅನ್ನು ಹೊಂದಿದ್ದು ಅದು ಯುಹೆಚ್ಎಸ್- II ವೇಗವನ್ನು ಬೆಂಬಲಿಸುತ್ತದೆ. ಇದು ಪಾಪ್-ಅಪ್ ಫ್ಲ್ಯಾಷ್ ಅನ್ನು ಸಹ ಹೊಂದಿದೆ.

ಕ್ಯಾಮೆರಾ ವಿನ್ಯಾಸ
ಈ ಕ್ಯಾಮೆರಾ ಎರಡು ಲೆನ್ಸ್‌ಗಳನ್ನ ಹೊಂದಿರುವ ಆಪ್ಟಿಕಲ್ ಸ್ಥಿರೀಕರಣವನ್ನು ಹೊಂದಿದ್ದು, ಇತರೆ ಪ್ರತಿಸ್ಫರ್ಧಿ ಕ್ಯಾಮೆರಾ ಕಂಪೆನಿಗಳಂತೆ ನಿರ್ದಿಷ್ಟ ಬಾಡಿ ವಿನ್ಯಾಸವನ್ನು ಹೊಂದಿಲ್ಲ. ಸದ್ಯ ಈ ಕ್ಯಾಮೆರಾದಲ್ಲಿ ಎರಡು ಪ್ರತ್ಯೇಕ ಲೆನ್ಸ್ ಇದ್ದು, ಲೆನ್ಸ್‌ಗಳನ್ನ ಪ್ರತ್ಯೇಕವಾಗಿ ಕೊಂಡರೆ 16-50mm ಲೆನ್ಸ್ ಗೆ 26,450 ರೂ. ಮತ್ತು 50-250mm ಟೆಲಿಫೋಟೋ ಜೂಮ್ ಲೆನ್ಸ್‌ಗೆ 31,450 ರೂ. ನೀಡಿ ಖರೀದಿಸಬೇಕಾಗುತ್ತದೆ. ಇನ್ನು ನಿಕಾನ್ ಕ್ಯಾಮೆರಾ ಅಡಾಪ್ಟರ್ ಅನ್ನು ಸಹ ಹೊಂದಿದೆ.


Click it and Unblock the Notifications








