ಭಾರತಕ್ಕೆ ಎಂಟ್ರಿ ಕೊಟ್ಟ Nikon Z9 ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ!

|

ಇಂದಿನ ಕ್ಯಾಮೆರಾ ಮಾರುಕಟ್ಟೆ ಸಾಕಷ್ಟು ಕಲರ್‌ಪುಲ್‌ ಆಗಿದೆ. ಕ್ಯಾಮೆರಾ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕ್ಯಾಮೆರಾಗಳನ್ನು ನಾವಿಂದು ಕಾಣಬಹುದಾಗಿದೆ. ಆದರೂ ಬ್ರಾಂಡ್‌ ಕಂಪೆನಿಗಳ ಕ್ಯಾಮೆರಾಗಳಿಗೆ ಬಹು ಬೇಡಿಕೆ ಇದೆ. ಇದರಲ್ಲಿ ನಿಕಾನ್‌ ಕಂಪೆನಿ ಕೂಡ ಸೇರಿದೆ. ನಿಕಾನ್‌ ಕಂಪೆನಿಯ ಕ್ಯಾಮೆರಾಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕ ಇದೆ. ಸದ್ಯ ನಿಕಾನ್‌ ಕಂಪೆನಿ ಹೊಸ ನಿಕಾನ್‌ Z9 ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ನಿಕಾನ್‌ Z9

ಹೌದು, ನಿಕಾನ್‌ ಕಂಪೆನಿ ಭಾರತದಲ್ಲಿ ಹೊಸ ನಿಕಾನ್‌ Z9 ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಲಾಂಚ್‌ ಮಾಡಿದೆ. Z- ಸರಣಿಯ ಈ ಕ್ಯಾಮೆರಾ 45.7-ಮೆಗಾಪಿಕ್ಸೆಲ್ ಸ್ಟ್ಯಾಕ್ಡ್ CMOS ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಈ ಕ್ಯಾಮೆರಾ 3.2-ಇಂಚಿನ ಟಚ್‌ಸ್ಕ್ರೀನ್ ಮಾನಿಟರ್ ಮತ್ತು ಎಲೆಕ್ಟ್ರಾನಿಕ್ ವ್ಯೂಫೈಂಡರ್ ಅನ್ನು ಒಳಗೊಂಡಿದೆ. ಇನ್ನು ಈ ಕ್ಯಾಮೆರಾ ಫ್ಲ್ಯಾಷ್ ಕಂಟ್ರೋಲ್‌ಗಾಗಿ i-TTL ಸಮತೋಲಿತ ಫಿಲ್-ಫ್ಲಾಶ್ ಅನ್ನು ಬಳಸುತ್ತದೆ. ಇನ್ನುಳಿದಂತೆ ಈ ಹೊಸ ನಿಕಾನ್ ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಕಾನ್‌ Z9 ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ

ಇನ್ನು ನಿಕಾನ್‌ Z9 ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ 45.7-ಮೆಗಾಪಿಕ್ಸೆಲ್ ಸ್ಟ್ಯಾಕ್ಡ್ CMOS ಸೆನ್ಸಾರ್ ಅನ್ನು ಹೊಂದಿದೆ. ಈ ಕ್ಯಾಮೆರಾ 8K 30p ವೀಡಿಯೋ ಸೆರೆಹಿಡಿಯುವಿಕೆಯನ್ನು ಬೆಂಬಲಿಸುತ್ತದೆ. 125 ನಿಮಿಷಗಳವರೆಗೆ ನಿರಂತರ ರೆಕಾರ್ಡಿಂಗ್ ಸಮಯವನ್ನು ನೀಡಲಿದೆ. ನಿಕಾನ್‌ Z9 ಕ್ಯಾಮೆರಾ ಸಬ್ಜೆಕ್ಟ್ ಡಿಟೆಕ್ಷನ್ ಅಲ್ಗಾರಿದಮ್ ಸ್ಟಿಲ್‌ಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವಾಗ ಒಂಬತ್ತು ರೀತಿಯ ವಿಷಯಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ನಿಕಾನ್‌ ಹೇಳಿಕೊಂಡಿದೆ. ಇನ್ನು ಈ ಕ್ಯಾಮೆರಾ ಮೆಕ್ಯಾನಿಕಲ್ ಶಟರ್ ಇಲ್ಲದೆ ನಿರ್ಮಿಸಲಾದ ಕಂಪನಿಯ ಮೊದಲ ಪೂರ್ಣ-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಎನಿಸಿಕೊಂಡಿದೆ.

ನಿಕಾನ್‌ Z9

ನಿಕಾನ್‌ Z9 3.2-ಇಂಚಿನ ಕರ್ಣೀಯ ಮಾನಿಟರ್ ಮತ್ತು ಡ್ಯುಯಲ್-ಸ್ಟ್ರೀಮ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಎಕ್ಸ್‌ಪೀಡ್ 7 ಇಮೇಜ್-ಪ್ರೊಸೆಸಿಂಗ್ ಎಂಜಿನ್‌ನೊಂದಿಗೆ ಬರುತ್ತದೆ. ಇನ್ನು ಈ ಕ್ಯಾಮೆರಾ TFT LCD ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, 70-ಡಿಗ್ರಿ ವ್ಯೂವ್‌ ಆಂಗಲ್‌ ಅನ್ನು ಹೊಂದಿದೆ. ಇದು 11-ಹಂತದ ಹಸ್ತಚಾಲಿತ ಬ್ರೈಟ್‌ನೆಸ್‌ ಕಂಟ್ರೋಲ್‌ ಒಳಗೊಂಡಿದೆ. ಈ ಕ್ಯಾಮೆರಾ ISO ಶ್ರೇಣಿಯನ್ನು 64 ರಿಂದ 24,600 ವರೆಗೆ ನೀಡುತ್ತದೆ. ಇದಲ್ಲದೆ ಈ ಕ್ಯಾಮೆರಾದಲ್ಲಿ 125 ನಿಮಿಷಗಳ ಕಾಲ 8K 30p ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 120p ವರೆಗೆ 4K UHD ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಅನುಮತಿಸುತ್ತದೆ.

ಕ್ಯಾಮೆರಾ

ಈ ಕ್ಯಾಮೆರಾ ಸೆಕೆಂಡಿಗೆ 120 ಫ್ರೇಮ್‌ಗಳನ್ನು ಸೆರೆಹಿಡಿಯುತ್ತದೆ ಎಂದು ಹೇಳಲಾಗಿದೆ. 94 ನಿಕ್ಕೋರ್ ಎಫ್-ಸರಣಿ ಲೆನ್ಸ್‌ಗಳನ್ನು ಎಎಫ್‌ನೊಂದಿಗೆ ಸೆರೆಹಿಡಿಯುತ್ತದೆ. ಈ ಡಿವೈಸ್‌ ಮಾನವನ ಕಣ್ಣು ನೋಡುವುದಕ್ಕಿಂತ ವೇಗವಾಗಿ ಚಲನೆಯನ್ನು ಸೆರೆಹಿಡಿಯಲು ಅನುಮತಿಸುತ್ತದೆ ಎಂದು ನಿಕಾನ್ ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಇದರಲ್ಲಿ ಫ್ಲಿಕ್ಕರ್ ಕಡಿತವನ್ನು ಆನ್ ಮಾಡಿದಾಗಲೂ ಸಹ JPEG ಅಥವಾ RAW ಫಾರ್ಮ್ಯಾಟ್‌ಗಳಲ್ಲಿ 1,000 ಕ್ಕೂ ಹೆಚ್ಚು ಫ್ರೇಮ್‌ಗಳನ್ನು ಸೆರೆಹಿಡಿಯಲು Z9 20fps ನಲ್ಲಿ ನಿರಂತರವಾಗಿ ಶೂಟ್ ಮಾಡುತ್ತದೆ ಎಂದು ಹೇಳಲಾಗುತ್ತದೆ.

ನಿಕಾನ್‌ Z9

ನಿಕಾನ್‌ Z9 ಕ್ಯಾಮೆರಾದಲ್ಲಿ ಸಬ್ಜೆಕ್ಟ್ ಡಿಟೆಕ್ಷನ್ ಅಲ್ಗಾರಿದಮ್ ಸಾಕಷ್ಟು ವಿಶೇಷವಾಗಿದೆ. ಇದರಲ್ಲಿ ಜನರು, ಬೆಕ್ಕುಗಳು, ನಾಯಿಗಳು, ಪಕ್ಷಿಗಳು, ಕಾರುಗಳು, ಮೋಟಾರ್‌ಬೈಕ್‌ಗಳು, ಬೈಸಿಕಲ್‌ಗಳು, ವಿಮಾನಗಳು ಮತ್ತು ರೈಲುಗಳು ಸೇರಿದಂತೆ ಒಂಬತ್ತು ವಿಧದ ವಸ್ತುಗಳನ್ನು ಒಂದೇ ಸಮಯದಲ್ಲಿ ಗುರುತಿಸಲಿದೆ. ಇದಲ್ಲದೆ ನಿಕಾನ್‌ನ ಹೊಸ ಕ್ವಾಡ್-ವಿಜಿಎ ​​ಪ್ಯಾನೆಲ್ ವಿಭಿನ್ನ ಬೆಳಕಿನ ಪರಿಸ್ಥಿತಿಗಳಿಗೆ ತಕ್ಕಂತೆ 3000cd/m2 ವರೆಗೆ ವ್ಯೂಫೈಂಡರ್ ಬ್ರೈಟ್‌ನೆಸ್‌ ಸೆಟ್‌ಮಾಡಲಿದೆ. ಇದರಲ್ಲಿ 3D ಟ್ರ್ಯಾಕಿಂಗ್ ಅನ್ನು ಕೂಡ ಸೇರಿಸಲಾಗಿದೆ. ವಿವಿಧ ಪೋರ್ಟ್‌ಗಳ ಹೊರತಾಗಿ, ಕ್ಯಾಮೆರಾ ಮೈಕ್ರೊಫೋನ್ ಮತ್ತು ಹೆಡ್‌ಫೋನ್ ಪೋರ್ಟ್‌ಗಳು, ಬ್ಲೂಟೂತ್ v5 ಮತ್ತು ವೈ-ಫೈ ಬೆಂಬಲವನ್ನು ಹೊಂದಿದೆ. Nikon Z9 ಡೇಟಾ ವರ್ಗಾವಣೆಗಾಗಿ CFexpress ಮತ್ತು XQD ಗಾಗಿ ಡ್ಯುಯಲ್ ಕಾರ್ಡ್ ಸ್ಲಾಟ್‌ಗಳನ್ನು ನೀಡುತ್ತದೆ. ಸದ್ಯ ಸಾಕಷ್ಟು ವಿಶೇಷತೆಗಳೊಂದಿಗೆ ಭಾರತಕ್ಕೆ ಎಂಟ್ರಿ ನೀಡಿರುವ ನಿಕಾನ್‌ Z9 ಕ್ಯಾಮೆರಾ ಬೆಲೆ 4,75,995 ರೂ.ಆಗಿದ್ದು, ನವೆಂಬರ್‌ನಿಂದ ಭಾರತದಲ್ಲಿ ನಿಕಾನ್ ಅಧಿಕೃತ ಮಳಿಗೆಗಳಲ್ಲಿ ಮಾರಾಟವಾಗಲಿದೆ.

Best Mobiles in India

English summary
nikon-z9-full-frame-mirrorless-camera-with-8k-video-recording-launched-in-india.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X