Subscribe to Gizbot

ಮತ್ತೆ ಇನ್ಫೊಸಿಸ್ ಅಧ್ಯಕ್ಷರಾದ ನಂದನ್ ನಿಲೇಕಣಿ ಸಂಬಳ ಎಷ್ಟು ಗೊತ್ತಾ?

Written By:

ವಿಶಾಲ್ ಸಿಕ್ಕಾ ತೆರವಿನ ನಂತರ ಮತ್ತೆ ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಅವರು ಸಂಸ್ಥೆಯಿಂದ ಯಾವುದೇ ವೇತನ ಪಡೆಯದಿರಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.!! ಸಂಸ್ಥೆಯನ್ನು ಮನ್ನೆಡೆಸಲು ಭತ್ಯೆಯ ಅವಶ್ಯಕತೆಯಿಲ್ಲ ಎಂದು ನಿಲೇಕಣಿ ಹೇಳಿದ್ದಾರೆ ಎನ್ನಲಾಗಿದೆ.!!

ಇನ್ಫೊಸಿಸ್ ಕಂಪೆನಿಯ ಸಹಸಂಸ್ಥಾಪಕರು ಮತ್ತು ಕಂಪೆನಿಯಲ್ಲಿ 2.7ರಷ್ಟು ಶೇರುದಾರರು ಆಗಿರುವ ನಿಲೇಕಣಿ ಅವರು ತಮ್ಮ ಭತ್ಯೆಯನ್ನು ಪಡೆಯದಿರುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಎನ್‌ಆರ್‌ಸಿ (ನಾಮಕರಣ ಮತ್ತು ಸಂಭಾವನೆ) ಸಮೀತಿಗೆ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿರುವ ಕಿರಣ್ ಮಜುಂದಾರ್ ಷಾ ಅವರು ಹೇಳಿದ್ದಾರೆ.!!

ಮತ್ತೆ ಇನ್ಫೊಸಿಸ್ ಅಧ್ಯಕ್ಷರಾದ ನಂದನ್ ನಿಲೇಕಣಿ ಸಂಬಳ ಎಷ್ಟು ಗೊತ್ತಾ?

ಈ ಹಿಂದೆ ಸಂಸ್ಥೆಯ ಸಿಇಒ ಹುದ್ದೆಯಲ್ಲಿದ್ದ ನಿಲೇಕಣಿ ಅವರು ವರ್ಷಕ್ಕೆ 51.35 ಲಕ್ಷ ರೂ ವೇತನ ಮತ್ತು ಭತ್ಯೆ ಪಡೆಯುತ್ತಿದ್ದರು. ಆದರೆ, ಈಗ ಯಾವುದೇ ಭತ್ಯೆಯನ್ನು ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.!! ಹಾಗಾಗಿ, ಮೊದಲಭಾರಿಗೆ ಸಂಸ್ಥೆಯಲ್ಲಿ ವೇತನವನ್ನೇ ಪಡೆಯದ ಸಹಸಂಸ್ಥಾಪಕರು ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.!!

ಮತ್ತೆ ಇನ್ಫೊಸಿಸ್ ಅಧ್ಯಕ್ಷರಾದ ನಂದನ್ ನಿಲೇಕಣಿ ಸಂಬಳ ಎಷ್ಟು ಗೊತ್ತಾ?

ವಿಚಿತ್ರ ಎಂದರೆ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು ಅಧ್ಯಕ್ಷರಾಗಿದ್ದಾಗ ವರ್ಷಕ್ಕೆ ಕೇವಲ 1.ರೂ ಮಾತ್ರ ವೇತನ ಪಡೆಯುತ್ತಿದ್ದರು.ಇನ್ನು ಇನ್ಫೊಸಿಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಸಿಇಒ ವಿಶಾಲ್‌ ಸಿಕ್ಕಾ ಅವರು 2015-16ರಲ್ಲಿ 48.73 ಕೋಟಿ ವೇತನ ಪಡೆದಿದ್ದರೆ 2016-17ರಲ್ಲಿ 16.01 ಕೋಟಿ ರೂ. ವೇತನ ಪಡೆದಿದ್ದರು.

Read more about:
English summary
Nandan Nilekani will be the first chairman of Infosys to decline remuneration.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot