Home
ಸುದ್ದಿಜಾಲ

ಮೀನುಗಾರಿಕೆಯಲ್ಲಿ ಹೊಸ ತಂತ್ರಜ್ಞಾನ..! ರೈತರಿಗೆ ಹೊಸ ಆಶಾಕಿರಣ..!

By Gizbot Bureau

ಕೃಷಿಯಲ್ಲಿ ತಂತ್ರಜ್ಞಾನದ ಪ್ರಭಾವ ಹೆಚ್ಚಾಗುತ್ತಿರುವಾಗ ಸರ್ಕಾರವು ಕೂಡ ವ್ಯವಸಾಯದಲ್ಲಿ ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡುತ್ತಿದೆ. ಭಾರತೀಯ ರೈತರ ಆದಾಯವನ್ನು ದ್ವಿಗುಣಗೊಳಿಸಲು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಎನ್‌ಐಆರ್‌ಡಿಪಿಆರ್) ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಹೌದು, ಎನ್‌ಐಆರ್‌ಡಿಪಿಆರ್ ಸಂಸ್ಥೆಯು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ 'ಬ್ಯಾಕ್ಯಾರ್ಡ್ ರೀ-ಸರ್ಕ್ಯುಲೇಟರಿ ಅಕ್ವಾಕಲ್ಚರ್ ಸಿಸ್ಟಮ್' ಅನ್ನು ಸ್ಥಾಪಿಸಿದೆ. ಹೊಸ ತಂತ್ರಜ್ಞಾನ ಹೇಗಿರುತ್ತೆ ಎಂಬುದು ಮುಂದೆ ಓದಿ..

ಏನೀದು ತಂತ್ರಜ್ಞಾನ..?

ಏನೀದು ತಂತ್ರಜ್ಞಾನ..?

ಈ ವ್ಯವಸ್ಥೆ ಪಂಜರಗಳಲ್ಲಿ ಹೆಚ್ಚಿನ ಸಾಂದ್ರತೆಯ ಮೀನುಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಕೊಳದಲ್ಲಿರುವ ವಿವಿಧ ಬಗೆಯ ಹಾಗೂ ಗಾತ್ರದ ಮೀನುಗಳನ್ನು ಸಣ್ಣ ಪಂಜರಗಳಲ್ಲಿ ಸಂಗ್ರಹಿಸುವ ಮೂಲಕ ಹೊರೆಯನ್ನು ತಗ್ಗಿಸಲು ಈ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ ಎಂದು ಸಂಸ್ಥೆ ಹೇಳಿದೆ. ಈ ತಂತ್ರಜ್ಞಾನವು ನೀರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬೇಡುತ್ತದೆ. ಅದಲ್ಲದೇ, ವಿವಿಧ ಪಂಜರಗಳಲ್ಲಿ ಹೆಚ್ಚಿನ ಸಾಂದ್ರತೆಯ ಮೀನು ಸಂಗ್ರಹವು ಫಿಶ್‌ಪಾಂಡ್‌ನ ನಿರ್ವಹಣೆಯಲ್ಲಿ ನಮ್ಯತೆಯ ಶಕ್ತಿಯನ್ನು ಅಧಿಕಗೊಳಿಸುತ್ತದೆ.

ಸಮಗ್ರ ಕೃಷಿ ಪದ್ಧತಿ

ಸಮಗ್ರ ಕೃಷಿ ಪದ್ಧತಿ

ಸಮಗ್ರ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಮೂಲಕ ನಾವು ರೈತರ ಆದಾಯ ದ್ವಿಗುಣಗೊಳಿಸಬಹುದು. ಇಂತಹ ತಂತ್ರಜ್ಞಾನ ಬೆಂಬಲಿತ ವ್ಯವಸಾಯದ ಸ್ಮಾರ್ಟ್ ಪರಿಹಾರಗಳು ಯುವಜನರನ್ನು ಕೃಷಿಯ ಕಡೆ ಸಸೆಳೆಯುತ್ತವೆ ಎಂದು ಎನ್ಐಆರ್‌ಡಿಪಿಆರ್ ಮಹಾನಿರ್ದೇಶಕ ಡಬ್ಲ್ಯೂ.ಆರ್. ರೆಡ್ಡಿ ಹೇಳುತ್ತಾರೆ. ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಧನಸಹಾಯದೊಂದಿಗೆ ಎನ್ಐಆರ್‌ಡಿಪಿಆರ್‌ನ ರೂರಲ್ ಟೆಕ್ನಾಲಜಿ ಪಾರ್ಕ್‌ನಲ್ಲಿ ಈ ತಂತ್ರಜ್ಞಾನ ವ್ಯವಸ್ಥೆಯನ್ನು ಉದ್ಘಾಟನೆ ಮಾಡಲಾಗಿದೆ.

ಯಾವ್ಯಾವ ಮೀನು ಪ್ರಭೇದಗಳು

ಯಾವ್ಯಾವ ಮೀನು ಪ್ರಭೇದಗಳು

ಈ ತಂತ್ರಜ್ಞಾನದಲ್ಲಿ ಟಿಲಾಪಿಯಾ, ಪಂಗಾಸಿಯಸ್, ಮುರ್ರೆಲ್ ಮತ್ತು ಪರ್ಲ್‌ಸ್ಪಾಟ್ ಮೀನು ಪ್ರಭೇದಗಳನ್ನು ಬೆಳೆಯಬಹುದಾಗಿದೆ. 120 ದಿನಗಳ ಸಂಗ್ರಹದ ಅವಧಿಯಲ್ಲಿ ವರ್ಷಕ್ಕೆ ಮೂರು ಬಾರಿ ಕೊಳದಲ್ಲಿ ಆನುವಂಶಿಕವಾಗಿ ಸುಧಾರಿತ ಫಾರ್ಮ್ ಟಿಲಾಪಿಯಾ ಬೆಳೆಯಬಹುದಾಗಿದೆ.

ಆದಾಯ ಹೇಗೆ..?

ಆದಾಯ ಹೇಗೆ..?

ಈ ರೀತಿಯ ಮೀನುಗಾರಿಕೆಯಿಂದ ತಿಂಗಳಿಗೆ ಸರಾಸರಿ 25,750 ರೂ. ಆದಾಯ ಗಳಿಸಬಹುದಾಗಿದೆ. ಅಕ್ವಾಕಲ್ಚರ್ ವ್ಯವಸ್ಥೆಯು ನೀರಿನ ಕಡಿಮೆ ಲಭ್ಯತೆಯಿರುವ ಪ್ರದೇಶಗಳ ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿ ಕಾರ್ಯನಿರ್ವಹಿಸುತ್ತಾ, ಆದಾಯ ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ನಿಯಮಿತವಾಗಿ ಕೊಳದಿಂದ ಹೊರಹಾಕಲ್ಪಟ್ಟ ಕೆಸರನ್ನು ರಾಸಾಯನಿಕ ಗೊಬ್ಬರ ಸೇರಿಸದೆ ಕೃಷಿ ಬೆಳೆ ಬೆಳೆಯಲು ಬಳಸಿಕೊಳ್ಳಬಹುದಾಗಿದೆ.

ಎಲ್ಲಾದರೂ ಬಳಸಬಹುದು..!

ಎಲ್ಲಾದರೂ ಬಳಸಬಹುದು..!

ಈ ತಂತ್ರಜ್ಞಾನ ವ್ಯವಸ್ಥೆಯನ್ನು ಕರಾವಳಿ ಪ್ರದೇಶಗಳಷ್ಟೇ ಅಲ್ಲದೇ, ಒಳನಾಡಿನ ಪ್ರದೇಶಗಳಲ್ಲಿಯೂ ಬಳಸಬಹುದು. ಈ ಅಂಶ ತಂತ್ರಜ್ಞಾನದ ಹೊಸತನವನ್ನು ಮತ್ತಷ್ಟು ದೃಢಪಡಿಸುತ್ತದೆ. ಎನ್‌ಐಆರ್‌ಡಿಪಿಆರ್‌ನಲ್ಲಿರುವ ರೂರಲ್ ಟೆಕ್ನಾಲಜಿ ಪಾರ್ಕ್‌ ಹೊಸ ವ್ಯವಸ್ಥೆಯ ಕಾರ್ಯವಿಧಾನವನ್ನು ತಿಳಿಸುತ್ತದೆ. ಹಾಗೂ ರೈತರು, ಸ್ವ ಸಹಾಯ ಗುಂಪುಗಳು ಮತ್ತು ಯುವಜನರಿಗೆ ತರಬೇತಿ ನೀಡುವ ಮೂಲಕ ಮೀನುಗಾರಿಕೆಯಿಂದ ಆದಾಯ ಹೆಚ್ಚಿಸಲು ಮೀನುಗಾರಿಕೆ ಕೈಗೊಳ್ಳಲು ಸಂಸ್ಥೆ ಉತ್ಸುಕವಾಗಿದೆ.

Best Mobiles in India

English summary
NIRDPR Is Working On A Technology, That Is Likely To Double Farmer's Income
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+