ಮೇ1 ರಿಂದ 'ಸಿಮ್' ಖರೀದಿ ನಿಯಮ ಬದಲು!..ಇಲ್ಲಿದೆ ಫುಲ್ ಡೀಟೇಲ್ಸ್!!

|

ಬ್ಯಾಂಕ್ ಖಾತೆ ಹಾಗೂ ಸಿಮ್ ಕಾರ್ಡ್ ಗೆ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಇದೇ ಮೊದಲ ಬಾರಿಗೆ ಮೊಬೈಲ್ 'ಸಿಮ್' ಖರೀದಿಯ ನಿಯಮಗಳು ಬದಲಾಗಿವೆ. ಇದೇ ಮೇ 1 ರಿಂದ ಸಿಮ್ ಖರೀದಿ ನಿಯಮ ಬದಲಾಗಲಿದ್ದು, ಹೊಸ ಸಿಮ್ ಕಾರ್ಡ್ ಖರೀದಿಸಿದಾಗ ಗ್ರಾಹಕರು ಆಧಾರ್ ನೀಡುವ ಅಗತ್ಯವಿಲ್ಲ, ಆದರೆ, ಹೊಸ ಸಿಮ್ ಪಡೆಯುವ ಗ್ರಾಹಕರು ಈಗಲೂ ಡಿಜಿಟಲ್ ಆಗಿಯೇ ಸಿಮ್ ಅನ್ನು ಪಡೆಯಬಹುದಾಗಿದೆ.

ಹೌದು, ಟೆಲಿಕಾಂ ಕಂಪೆನಿಗಳು ಹೊಸದಾಗಿ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು, ಹೊಸ ಸಿಮ್ ಕೋರಿ ಅರ್ಜಿ ಸಲ್ಲಿಸುವವರು ಹೊಸ ನಿಯಮದ ಪ್ರಕಾರ ಡಿಜಿಟಲ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಎಲ್ಲಾ ಟೆಲಿಕಾಂ ಕಂಪನಿಗಳು 'ಸಿಮ್' ಖರೀದಿಗೆ ಅದರ ನೋಂದಾಯಿತ ಅಂಗಡಿಯವರಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ನೀಡಬೇಕಾಗುತ್ತದೆ. ಈ ಅಪ್ಲಿಕೇಶನ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಮೂಲಕ ರನ್ ಆಗಲಿದೆ ಎಂದು ತಿಳಿದುಬಂದಿದೆ.

ಮೇ1 ರಿಂದ 'ಸಿಮ್' ಖರೀದಿ ನಿಯಮ ಬದಲು!..ಇಲ್ಲಿದೆ ಫುಲ್ ಡೀಟೇಲ್ಸ್!!

ಟೆಲಿಕಾಂ ಕಂಪನಿಗಳು ಡಿಜಿಟಲ್ ಕೆವೈಸಿ ಸಿಸ್ಟಂ ಅಭಿವೃದ್ಧಿಪಡಿಸಿದ್ದು, ಡಿಜಿಟಲ್ ಕೆವೈಸಿ ಸಹಾಯದಿಂದ ಗಂಟೆಯೊಳಗೆ ಗ್ರಾಹಕರ ದಾಖಲೆ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹೊಸ ನಿಯಮದ ಪ್ರಕಾರ, ಗ್ರಾಹಕರು ಪಡೆದ ಸಿಮ್ ಕಾರ್ಡ್ ನ್ನು ಡಿಜಿಟಲ್ ವೆರಿಫಿಕೆಶನ್ ಮಾಡಬೇಕಾಗುತ್ತದೆ. ನಂತರ ಎರಡು ಗಂಟೆ ಒಳಗಾಗಿ ಸಿಮ್ ಕಾರ್ಡ್ ಕೆಲಸ ಶುರು ಮಾಡಲಿದೆ.

ಸಿಮ್ ಒದಗಿಸುವವರು ಮಳಿಗೆಯಲ್ಲೇ ಗ್ರಾಹಕರ ಫೋಟೋ ಕ್ಲಿಕ್ಕಿಸಲಿದ್ದಾರೆ. ನಂತರ ಡಿಜಿಟಲ್ ಫಾರ್ಮ್ ತುಂಬಿ ಸಿಮ್ ಕಾರ್ಡ್ ನೀಡಲಾಗುತ್ತದೆ. ಇಕೆವೈಸಿ ದೃಢಿಕರಣವಾದ ಬಳಿಕ ಕೂಡಾ ಲೈವ್ ಫೋಟೋವನ್ನು ಸಿಮ್ ಆಕ್ಟಿವೇಟ್ ಮಾಡಲು, ದೃಢೀಕರಣಕ್ಕಾಗಿ ಬಳಸಲಾಗುತ್ತದೆ. ಮುಖ್ಯ ಸಂಗತಿ ಎಂದರೆ, ಹೊಸ ಸಿಮ್ ನೀಡುವ ವೇಳೆ ಬೆರಳಚ್ಚಿನ ಜೊತೆ ಮುಖದ ದೃಢೀಕರಣ ಪಡೆಯಬೇಕಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಮೇ1 ರಿಂದ 'ಸಿಮ್' ಖರೀದಿ ನಿಯಮ ಬದಲು!..ಇಲ್ಲಿದೆ ಫುಲ್ ಡೀಟೇಲ್ಸ್!!

ಇನ್ನು ಪ್ರಸ್ತುತ ಒಂದು ವಿಳಾಸ ದೃಢೀಕೃತ ಐಡಿ ನೀಡಿ ಒಟ್ಟು 9 ಸಿಮ್ ಪಡೆಯಬಹುದಾಗಿದ್ದು, ಒಂದು ದಿನದಲ್ಲಿ ಎರಡು ಸಿಮ್ ಕಾರ್ಡ್ ಖರೀದಿ ಮಾಡಬಹುದಾಗಿದೆ. ಇದಕ್ಕೆ ಗ್ರಾಹಕರು ವಿಳಾಸ ಇರುವ ಮಾನ್ಯ ಗುರುತಿನ ದಾಖಲಾತಿಯನ್ನು ಒದಗಿಸಬೇಕಾಗುತ್ತದೆ. ದೃಢೀಕರಣಕ್ಕಾಗಿ ಗ್ರಾಹಕರ ಭಾವಚಿತ್ರದೊಂದಿಗೆ, ಜನ್ಮ ಸ್ಥಳ, ID ಸಂಖ್ಯೆ, ದಿನ, ಸಮಯ, ದಿನಾಂಕ ಮುಂತಾದವುಗಳನ್ನೂ ಒಳಗೊಂಡಂತೆ ಇತರ ವಿವರಗಳು ಸಹ ಆಪ್‌ನಲ್ಲಿ ಅಪ್ಲೋಡ್ ಆಗುತ್ತವೆ.

ಹೀಗೆ ಮಾಡಿ ವಾಟ್ಸಪ್‌ನಿಂದ ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಿರಿ!

ಹೀಗೆ ಮಾಡಿ ವಾಟ್ಸಪ್‌ನಿಂದ ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಿರಿ!

ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಪ್ರತಿ ಸ್ಮಾರ್ಟ್‌ಫೋನಿನಲ್ಲೂ ವಾಟ್ಸಪ್‌ ಕಾಣಬಹುದಾಗಿದೆ. ಹೀಗಾಗಿ ಸಾಮಾನ್ಯ ಆಪ್‌ ಎಂಬಂತಾಗಿದೆ. ವಾಟ್ಸಪ್‌ ಟೆಕ್ಸ್ಟ್ ಮೆಸೆಜ್ ಜೊತೆಗೆ ಫೋಟೋ ಮತ್ತು ವಿಡಿಯೊ ಶೇರ್‌ ಮಾಡುವ ಆಯ್ಕೆ ಬಳಕೆದಾರರಿಗೆ ಬೆಸ್ಟ್ ಅನಿಸಿದ್ದು, ಹೆಚ್ಚಾಗಿ ವಾಟ್ಸಪ್ ಬಳಕೆಯನ್ನು ಹೆಚ್ಚಿಸಿದೆ. ಆದರೆ ನಿಮಗೆ ಗೊತ್ತಾ ವಾಟ್ಸಪ್ ನಿಮ್ಮ ಫೋನ್ ಮೆಮೊರಿ ಕಬಳಿಸುತ್ತದೆ.

ಹೌದು, ವಾಟ್ಸಪ್‌ ಬಳಕೆದಾರರು ಆಪ್‌ನಲ್ಲಿ ವೈಯಕ್ತಿಕ ಮೆಸೆಜ್‌ಗಳೊಂದಿಗೆ, ಅನೇಕ ಗ್ರೂಪ್‌ಗಳನ್ನು ಹೊಂದಿರುತ್ತಾರೆ. ತಮ್ಮ ಸ್ನೇಹಿತರೊಂದಿಗೆ ಫೋಟೋ, ವಿಡಿಯೊ ಸೇರಿದಂತೆ ಮಲ್ಟಿಮೀಡಿಯಾ ಫೈಲ್‌ಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಪೋಟೋ, ವಿಡಿಯೊಗಳು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವುದರಿಂದ ಸ್ಮಾರ್ಟ್‌ಫೋನ್‌ ಆಂತರಿಕ ಸ್ಟೋರೇಜ್ ಅನಗತ್ಯವಾಗಿ ತುಂಬಿ ಹೋಗುತ್ತದೆ.

ಕೆಲವೊಮ್ಮೆ ಒಂದೇ ಪೋಟೋ ಅಥವಾ ವಿಡಿಯೊ ಹಲವು ಬಾರಿ ಡೌನ್‌ಲೋಡ್ ಆಗಿರುತ್ತವೆ ಪೋನ್‌ ಮೆಮೊರಿ ತುಂಬಿಕೊಳ್ಳುತ್ತದೆ. ಆದರೆ ಕೇಲವು ಕ್ರಮಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ ಮೆಮೊರಿ ಅನಗತ್ಯ ತುಂಬುವುದನ್ನು ತಡೆಯಬಹುದು. ಹಾಗಾದರೇ ವಾಟ್ಸಪ್‌ ಆಪ್‌ನಿಂದ ಸ್ಮಾರ್ಟ್‌ಫೋನ್ ಮೆಮೊರಿ ಫುಲ್‌ ಆಗುವುದನ್ನು ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ ಬನ್ನಿರಿ.

ವಾಟ್ಸಪ್ ಕಂಟ್ರೋಲ್

ವಾಟ್ಸಪ್ ಕಂಟ್ರೋಲ್

ವಾಟ್ಸಪ್‌ ಆಪ್‌ನಲ್ಲಿ ಬರುವ ಫೋಟೊ ಮತ್ತು ವಿಡಿಯೊಗಳಿಂದ ಫೋನ್‌ ಮೆಮೊರಿ ಫುಲ್‌ ಆಗುವುದೆಂದು ವಾಟ್ಸಪ್‌ ಆಪ್‌ ಬಳಸುವುದನ್ನು ಬಿಡಲಂತು ಆಗದು. ಆದರೆ ಅನಗತ್ಯ ಡೇಟಾಗಳಿಂದ ಸ್ಮಾರ್ಟ್‌ಫೋನ್‌ ಗ್ಯಾಲರಿ ತುಂಬುವುದನ್ನು ತಡೆಯಬಹುದು. ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿದ ಮೇಲೂ ವಾಟ್ಸಪ್‌ನಲ್ಲಿ ಬರುವ ಎಲ್ಲ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ ಅಗತ್ಯವಿರುವ ಫೋಟೋಗಳನ್ನು ಮಾತ್ರ ಡೌನ್‌ಲೋಡ್ ಮಾಡಿ.

ಈ ಹಂತಗಳನ್ನು ಅನುಸರಿಸಿ.

ಈ ಹಂತಗಳನ್ನು ಅನುಸರಿಸಿ.

* ವಾಟ್ಸಪ್ ಆಪ್‌ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಅಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣಿಸುತ್ತದೆ
* ಅದನ್ನು ಆಫ್‌ ಮಾಡಿರಿ.

ಆಯ್ದ ನಂಬರ್‌ಗಳ ಅನಗತ್ಯ ಡೌನ್‌ಲೊಡ್ ತಡೆಯಲು

ಆಯ್ದ ನಂಬರ್‌ಗಳ ಅನಗತ್ಯ ಡೌನ್‌ಲೊಡ್ ತಡೆಯಲು

* ವಾಟ್ಸಪ್ ಆಪ್‌ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಅಲ್ಲಿ 'ಶೋ ನ್ಯೂಲಿ ಡೌನ್‌ಲೊಡೆಡ್ ಮೀಡಿಯಾ ಫ್ರಾಮ್‌ ದಿಸ್ ಚಾಟ್‌ ಇನ್ ಯೂವರ್ ಪೋನ್‌ ಗ್ಯಾಲರಿ' ಕಾಣಿಸುತ್ತದೆ?
* ನಂಬರ್ ಆಯ್ಕೆ ಮಾಡಿ.

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ.

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ.

* ವಾಟ್ಸಪ್ ಆಪ್‌ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಲುಕ್‌ ಫಾರ್ ಸೇವ್ ಟು ಕ್ಯಾಮೆರಾ ರೋಲ್
* ಅದನ್ನು ಆಫ್‌ ಮಾಡಿರಿ.

Best Mobiles in India

English summary
No Aadhaar card needed! Soon, get SIM card under new system.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X