'ರೆಡ್‌ಮಿ ನೋಟ್ 5' ಖರೀದಿಗೆ "ಕ್ಯಾಶ್ ಆನ್ ಡೆಲಿವರಿ'' ಇಲ್ಲ!!..ಏಕೆ ಗೊತ್ತಾ?
ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಶಿಯೋಮಿಯ ರೆಡ್ ಮಿ ನೋಟ್ 5 ಮತ್ತು ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಖರೀದಿಸುವವರಿನ್ನು ಪೂರ್ತಿ ಹಣವನ್ನು ಆನ್‌ಲೈನಿನಲ್ಲಿಯೇ ಪೇಮೆಂಟ್ ಮಾಡಬೇಕಿದೆ.
ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಶಿಯೋಮಿಯ ರೆಡ್ ಮಿ ನೋಟ್ 5 ಮತ್ತು ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಖರೀದಿಸುವವರಿನ್ನು ಪೂರ್ತಿ ಹಣವನ್ನು ಆನ್‌ಲೈನಿನಲ್ಲಿಯೇ ಪೇಮೆಂಟ್ ಮಾಡಬೇಕಿದೆ. ಸ್ಮಾರ್ಟ್‌ಪೋನ್ ಖರೀದಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಶಿಯೋಮಿ ಕಂಪೆನಿ ತೆಗೆದುಹಾಕಿದೆ.!!
ಪ್ರತಿ ಫ್ಲಾಶ್‌ಸೇಲ್‌ನಲ್ಲಿಯೂ ಬಿಸಿತುಪ್ಪದಂತೆ ಖರ್ಚಾಗುತ್ತಿರುವ ರೆಡ್ ಮಿ ನೋಟ್ 5 ಮತ್ತು ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದೆ. ಫೆಬ್ರವರಿ 22 ನೇ ತಾರೀಖಿಂದ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಪ್ರತಿ ಫ್ಲಾಶ್‌ಸೇಲ್‌ಗಳಲ್ಲಿಯೂ ಇದೇ ರೀತಿ ಪ್ರತಿಕ್ರಿಯೆಸಿಕ್ಕಿರುವುದರಿಂದ ಶಿಯೋಮಿ ಸ್ಟಾಕ್ ಕೊರತೆ ಎದುರಿಸುತ್ತಿದೆ.!!

ಇವುಗಳ ಶಿಯೋಮಿ ಕಂಪೆನಿ ರೆಡ್ ಮಿ ನೋಟ್ 5 ಮತ್ತು ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ತೆಗೆಯುವ ನಿರ್ಧಾರವನ್ನು ತೆಗೆದುಕೊಂಡಿದೆ.!! ಹಾಗಾದರೆ, ಕ್ಯಾಶ್ ಆನ್ ಡೆಲಿವರಿ ಆಯ್ಕೆ ತೆಗೆಯಲು ಕಾರಣವೇನು? ಶಿಯೋಮಿ ಈ ಬಗ್ಗೆ ಹೇಳಿರುವುದೇನು ಎಂಬುದನ್ನು ಮುಂದೆ ತಿಳಿಯಿರಿ.!!

ಕ್ಯಾಶ್ ಆನ್ ಡೆಲಿವರಿ ಇಲ್ಲ!!
ರೆಡ್ ಮಿ ನೋಡ್ 5 ಮತ್ತು ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಾರಣ ಕೆಲವು ಅಕ್ರಮವಾಗಿ ಸ್ಮಾರ್ಟ್‌ಫೋನುಗಳನ್ನು ಸಂಗ್ರಹಿಸುತ್ತಿದ್ದಾರೆ. ನಂತರ ಅದೇ ಫೋನ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹಾಗಾಗಿ, ಶಿಯೋಮಿ ಕಂಪೆನಿ ಕ್ಯಾಶ್ ಆನ್ ಡೆಲಿವರಿ ತೆಗೆದಿರುವುದಾಗಿ ತಿಳಿಸಿದೆ.!!

ಪಾವತಿ ವಿವರಗಳನ್ನು ಮುಂಚಿತವಾಗಿ ಉಳಿಸಬಹುದು!!
ರೆಡ್ ಮಿ ನೋಡ್ 5 ಮತ್ತು ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮಾರಾಟಕ್ಕೆ ಇನ್ಮುಂದೆ ನಡೆಯುವ ಯಾವುದೇ ಫ್ಲಾಶ್‌ಸೇಲ್‌ನಲ್ಲಿ ಗ್ರಾಹಕರು ಪಾವತಿ ವಿವರಗಳನ್ನು ಮುಂಚಿತವಾಗಿ ಉಳಿಸಬಹುದು ಎಂದು ಶಿಯೋಮಿ ಕಂಪೆನಿ ತಿಳಿಸಿದೆ. ಇದರಿಂದ ತ್ವರಿತವಾಗಿ ಫೋನ್ ಖರೀದಿಸಬಹುದು ಎಂದು ಹೇಳಿದೆ.!!

ಗ್ರಾಹಕರಿಗೆ ಲಾಭ!!
ಸ್ಮಾರ್ಟ್‌ಪೋನ್‌ಗಳ ಖರೀದಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ತಂದಿರುವುದು ಗ್ರಾಹಕರಿಗೆ ಲಾಭವಾಗಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಶಿಯೋಮಿ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲಿಯೂ ಪಾವತಿ ವಿವರಗಳನ್ನು ಮುಂಚಿತವಾಗಿ ಉಳಿಸಬಹುದಾದ್ದರಿಂದ ಅರ್ಹರಿಗೆ ಫೋನ್ ಬುಕ್ ಮಾಡಲು ಸಾಧ್ಯವಿದೆ ಎಂದು ತಿಳಿಸಿದೆ.!!

ಶಿಯೋಮಿ ಗೇಮ್‌ಪ್ಲಾನ್?
ಸ್ಮಾರ್ಟ್‌ಪೋನ್ ಖರೀದಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ತೆಗೆದುಹಾಕಿರುವುದು ಶಿಯೋಮಿ ಕಂಪೆನಿಯ ಗೇಮ್‌ಪ್ಲಾನ್ ಎಂದು ಅಭಿಪ್ರಾಯಪಡಬಹುದಾಗಿದೆ. ಫ್ಲಾಶ್‌ಸೇಲ್‌ನಲ್ಲಿ ಬುಕ್ ಮಾಡಿದ ಸ್ಮಾರ್ಟ್‌ಫೋನ್‌ಗಳನ್ನು ಕೆಲವರು ಹಣ ನೀಡದೇ ವಾಪಸ್ ಕಳುಹಿಸುತ್ತಿರುವುದರಿಂದ ಶಿಯೋಮಿ ಈ ಗೇಮ್‌ಪ್ಲಾನ್ ಮಾಡಿರಬಹುದು.!!


''ರೆಡ್‌ಮಿ ನೋಟ್ 5 ಪ್ರೊ'' ರಿವ್ಯೂವ್!!..ಭಾರತದ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನಬಹುದೇ?
ಭಾರತದಲ್ಲಿ ಮತ್ತೆ ತಾನೇ ಸ್ಮಾರ್ಟ್‌ಫೋನ್ ದಿಗ್ಗಜ ಎಂದು ತೋರಿಸಿಕೊಳ್ಳುವ ಹಂಬಲದಲ್ಲಿರುವ ಶಿಯೋಮಿ ಕಂಪೆನಿ ಭಾರತದಲ್ಲಿ ರೆಡ್‌ಮಿ ನೋಟ್ 5 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.! ದೇಶದಲ್ಲಿಯೇ ಅತ್ಯಂತ ಹೆಚ್ಚು ಮಾರಾಟವಾದ ರೆಡ್‌ಮಿ ನೋಟ್ 4 ಯಶಸ್ಸನ್ನು ಶಿಯೋಮಿ ಮತ್ತೆ ಎದುರು ನೋಡುತ್ತಿದೆ. !!
ಎರಡು ದಿನಗಳ ಹಿಂದಷ್ಟೆ ಶಿಯೋಮಿ ಕಂಪೆನಿ ಆಯೋಜಿಸಿದ್ದ ಫಸ್ಟ್ ಸೇಲ್‌ನಲ್ಲಿ ಮೂರು ನಿಮಿಷಕ್ಕೆ 3 ಲಕ್ಷಕ್ಕೂ ಹೆಚ್ಚು ಜನರು ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ಗಳನ್ನು ಬುಕ್ ಮಾಡಿದ್ದಾರೆ. ಇವರಲ್ಲಿ ಬುಕ್ ಮಾಡಿದ್ದ ಕೆಲವರಿಗೆ ಈಗಾಗಲೇ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನುಗಳು ಕೈಗೆ ಸಿಕ್ಕಿವೆ.!!
ಕಡಿಮೆ ಬೆಲೆಗೆ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿರುವ ರೆಡ್‌ಮಿ ನೋಟ್ 5 ಪ್ರೊ ಈಗಾಗಲೇ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಹಾಗಾದರೆ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಹೇಗಿದೆ? ಖರೀದಸಲು ಇರುವ ಕಾರಣಗಳೇನು? ಭಾರತದಲ್ಲಿಯೇ ಬೆಸ್ಟ್ ಬಜೆಟ್ ಫೋನ್ ಇದಾಗಬಹುದೇ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ರೆಡ್‌ಮಿ ನೋಟ್ 5 ಪ್ರೊ ವಿನ್ಯಾಸ!!
ರೆಡ್‌ಮಿ ನೋಟ್ 5 ಪ್ರೊ ಪ್ರಿಮಿಯಮ್ ಡಿಸೈನ್ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. 18:9 ಅನುಪಾತದಲ್ಲಿರುವ 5.99 ಇಂಚ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಮತ್ತು ಗೇಮಿಂಗಾಗಿ ಸ್ಮಾರ್ಟ್‌ಫೋನ್ ಹೇಳಿ ಮಾಡಿಸಿದಂತಿದೆ.! ಸ್ಕ್ರೀನ್ ದೊಡ್ಡದಾಗಿರುವ ಕಾರಣ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಬಾಗದಲ್ಲಿ ನೀಡಲಾಗಿದೆ.!!

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636!!
ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 cpu ಪ್ರೋಸೆಸರ್, ಕರಿಯೋ 260 CPU ವಿಶೇಷತೆಗಳನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.! ಅತ್ಯಂತ ವೇಗದ ಕಾರ್ಯಚರಣೆಯನ್ನು ಹೊಂದಿರುವ ಈ ಫೋನ್ ಒಂದೇ ಸಮಯದಲ್ಲಿ ಮಲ್ಟಿ ಟಾಸ್ಕ್ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.!!

RAM ಮತ್ತು ಮೆಮೊರಿ!!
4GB ಮತ್ತು 6GB RAM ಇರುವ ಎರಡು ವೆರಿಯಂಟ್‌ಗಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ಎರಡೂ ವೆರಿಯಂಟ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿಯೂ 64GB ಆಂತರಿಕ ಮೆಮೊರಿ ಯನ್ನು ನೀಡಲಾಗಿದೆ. ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ಮೆಮೊರಿ ವಿಸ್ತರಣೆ ಮಾಡಿಕೊಳ್ಳಬಹುದಾದ ಆಯ್ಕೆ ಎರಡೂ ಫೋನಿನಲ್ಲಿದೆ.!!

20MP ಸೆಲ್ಫಿ ಕ್ಯಾಮೆರಾ!!
ಭಾರತೀಯರ ಸೆಲ್ಫಿ ಪ್ರೀತಿಯನ್ನು ನೋಡಿ ಶಿಯೋಮಿ 20MP ಸೆಲ್ಫಿ ಕ್ಯಾಮೆರಾವನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ನೀಡಿದೆ. ಕೃತಕ ಬುದ್ದಿ ಮತ್ತೆಯ ಮೂಲಕ ಕಾರ್ಯನಿರ್ವಹಿಸಲಿರುವ ಈ ಸೆಲ್ಫಿ ಕ್ಯಾಮೆರಾ ಬ್ಯೂಟಿಫೈ 4.0 ಮೂಡ್ ಆಯ್ಕೆಯನ್ನು ಸಹ ಹೊಂದಿರುವುದರಿಂದ ಅತ್ಯುತ್ತಮ ಸೆಲ್ಫಿ ಚಿತ್ರಗಳಿಗೆ ಹೇಳಿಮಾಡಿಸಿದಂತಿದೆ.!!

ಬೆಸ್ಟ್ ಡ್ಯುಯಲ್ ರಿಯರ್ ಕ್ಯಾಮೆರಾ!!
12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಅನ್ನು ರೆಡ್‌ಮಿ ನೋಟ್ 5 ಪ್ರೊ ಫೋನಿನಲ್ಲಿ ಕಾಣಹುದಾಗಿದೆ. AI (ಕೃತಕ ಬುದ್ದಿಮತ್ತೆ) ಮತ್ತು EIS ಟೆಕ್ನಾಲಜಿ ಸಹಾಯದಿಂದ ಕಾರ್ಯನಿರ್ವಹಿಸುವ ಈ ಫೋನಿನ ಕ್ಯಾಮೆರಾಗಳಿಂದ ಅತ್ಯುತ್ತಮ ಬೊಕ್ಕೆ ಚಿತ್ರಗಳನ್ನು ಸೆರೆಹಿಡಿಯುವ ವಿಶೇಷತಗಳಿವೆ ಎಂದು ಹೇಳಬಹುದು.!!

ಸ್ಮಾರ್ಟ್‌ಫೋನ್ ಮಿತಿಗಳೇನು?
ರೆಡ್‌ಮಿ ನೋಟ್ 5 ಪ್ರೊ ಒಮ್ಮೊಮ್ಮೆ ಹಳೆಯ ಪುನರಾವರ್ತಿತ ವಿನ್ಯಾಸವನ್ನೇ ಹೊಂದಿದೆ ಎನಿಸುತ್ತದೆ. ಜತೆಗೆ ಮೀಸಲಾದ ಮೈಕ್ರೊ ಕಾರ್ಡ್ ಸ್ಲಾಟ್ ಇಲ್ಲ. ಇವೆಲ್ಲವಕ್ಕಿಂತ ಮುಖ್ಯವಾಗಿ ಆಂಡ್ರಾಯ್ಡ್ ಓರಿಯೊ ಅಪ್‌ಡೇಟ್ ಇಲ್ಲದೆ ರೆಡ್‌ಮಿ ನೋಟ್ 5 ಪ್ರೊ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಸ್ಮಾರ್ಟ್‌ಫೋನಿನ ಮಿತಿಯಾಗಿದೆ.! ಆದರೂ. ಬಜೆಟ್ ಫೋನ್‌ಗಳಲ್ಲಿ ಇದು ಭಾರತದ ನಂಬರ್ ಒನ್ ಫೋನ್ ಎನ್ನಬಹುದು.!!


Click it and Unblock the Notifications








