Home
ಸುದ್ದಿಜಾಲ

ಫೇಸ್‌ಬುಕ್‌, ಟ್ವಿಟರ್ ಮೇಲೆ ತೆರಿಗೆ ಇಲಾಖೆ ಕಣ್ಣು?..ಅಧಿಕಾರಿಗಳು ಹೇಳಿದ್ದು ಹೀಗೆ!

ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಂಡ ವಿಷಯಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಕಣ್ಣಿಟ್ಟಿಲ್ಲ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ವೈರಲ್ ಸುದ್ದಿಗೆ ಬ್ರೇಕ್ ಬಿದ್ದಿದ್ದು, ಸಾಮಾಜಿಕ ಮಾಧ್ಯಮಗಳಿಂದ ಆದಾಯ ತೆರಿಗೆ ಇಲಾಖೆ ದೂರ ಉಳಿದಿವೆ ಎಂದು ಇದೀಗ ತಿಳಿದುಬಂದಿದೆ.

ಫೇಸ್‌ಬುಕ್‌, ಟ್ವಿಟರ್ ಮೇಲೆ ತೆರಿಗೆ ಇಲಾಖೆ ಕಣ್ಣು?..ಅಧಿಕಾರಿಗಳು ಹೇಳಿದ್ದು ಹೀಗೆ

ಹೌದು, ದುಬಾರಿ ವೆಚ್ಚ ಮಾಡುವವರನ್ನು ಪತ್ತೆ ಹಚ್ಚಲು ತೆರಿಗೆ ಅಧಿಕಾರಿಗಳು ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸಿರುತ್ತಾರೆ ಎನ್ನುವ ವರದಿಗಳು ಹರಿದಾಡಿದ್ದವು. ಆದರೆ, ಇದು ತಪ್ಪು ಮಾಹಿತಿಯಿಂದ ಕೂಡಿವೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಪ್ರಮೋದ್ ಚಂದ್ರ ಮೋದಿ ಅವರು ತಿಳಿಸಿದ್ದಾರೆ.

ಜನರ ವರಮಾನ ಮತ್ತು ಹಣ ವೆಚ್ಚ ಮಾಡುವ ಬಗ್ಗೆ ರಹಸ್ಯ ಮಾಹಿತಿ ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆಯು ವಿವಿಧ ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ಪಡೆಯುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ, ತೆರಿಗೆ ಇಲಾಖೆಗೆ, ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿ ಮತ್ತು ಚಿತ್ರಗಳ ಮೇಲೆ ನಿಗಾ ಇರಿಸುವ ಅಗತ್ಯವೇ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಫೇಸ್‌ಬುಕ್‌, ಟ್ವಿಟರ್ ಮೇಲೆ ತೆರಿಗೆ ಇಲಾಖೆ ಕಣ್ಣು?..ಅಧಿಕಾರಿಗಳು ಹೇಳಿದ್ದು ಹೀಗೆ

ಸಾಮಾಜಿಕ ಜಾಲತಾಣಗಳಿಂದ ಹಣ ವೆಚ್ಚ ಮಾಡುವ ಪ್ರವೃತ್ತಿಯನ್ನು ಪಡೆಯುವುದು ಸಮಂಜಸವಲ್ಲ. ವ್ಯಕ್ತಿಗಳ ದುಬಾರಿ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲು ಇತರ ವಿಧಾನಗಳಿವೆ. ಬಳಕೆದಾರರು ದುಬಾರಿ ವೆಚ್ಚ ಮಾಡಿದ ಸಂದರ್ಭದಲ್ಲಿ ಅದನ್ನು ಇನ್ನಿತರ ಮೂಲಗಳಿಂದ ಪಡೆಯಬಹುದು. ಇದು ಕೇವಲ ಊಹಾಪೋಹ ಅಷ್ಟೇ ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ವಿದೇಶ ಪ್ರವಾಸಕ್ಕೆ 2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವವರು ಐಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾದ ನಂತರ ಇಂತಹ ಸುದ್ದಿ ಹರಿದಾಡಿತ್ತು. ಆದರೆ, ಪ್ರವಾಸದ ವಿವರ ಮತ್ತು ಇತರ ಹಣಕಾಸು ವಹಿವಾಟಿನ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಅಧಿಕಾರಿಗಳಿಗೆ ಮಾಹಿತಿ ದೊರೆಯುತ್ತಿರುವಾಗ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

Best Mobiles in India

English summary
We already get to know actual travel details or other financial transactions of a person from authentic sources. to know more visit to kannada.gizbot.vom
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+