Home
ಸುದ್ದಿಜಾಲ

ಮೋಟೋರೋಲಾ ವರ್ಸಸ್ ಶ್ಯೋಮಿ ಪೈಪೋಟಿ

By Shwetha

ಕಡಿಮೆ ಬಜೆಟ್‌ನಲ್ಲಿ ಹೆಚ್ಚು ವೈಶಿಷ್ಟ್ಯಗಳಿರುವ ಫೋನ್‌ಗಳು ದಿನದಿಂದ ದಿನಕ್ಕೆ ಪ್ರಖ್ಯಾತಿಯನ್ನು ಪಡೆಯುತ್ತಿದೆ. ಅದರಲ್ಲೂ ಮೋಟೋರೋಲಾ ಮೋಟೋ ಇ ಮತ್ತು ಶ್ಯೋಮಿ ರೆಡ್ಮೀ 2 ಫೋನ್‌ಗಳು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿವೆ.

ಮೋಟೋರೋಲಾ ವರ್ಸಸ್ ಶ್ಯೋಮಿ ಪೈಪೋಟಿ

ಈ ಎರಡೂ ಹ್ಯಾಂಡ್‌ಸೆಟ್‌ಗಳು ಇತ್ತೀಚೆಗೆ ತಾನೇ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಜನಪ್ರಿಯತೆಯ ಕಿರೀಟವನ್ನು ಎರಡೂ ತೊಟ್ಟುಕೊಂಡಿವೆ. ಮೊದಲೆಲ್ಲಾ ಹೆಚ್ಚು ಫೀಚರ್
ಉಳ್ಳ ಫೋನ್‌ಗಳು ಹೆಚ್ಚಿನ ದರದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದವು. ಆದರೆ ಮೋಟೋ ಇ ಜನರೇಶನ್ ನಂತರದ ಶ್ಯೋಮಿ ರೆಡ್ಮೀ 1 ಎಸ್ ಆಗಮನ ಈ ಸಿದ್ಧಾಂತವನ್ನು ತಲೆಕೆಳಗೆ ಮಾಡಿದೆ.

ಇದನ್ನೂ ಓದಿ: ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ!

ಒಂದೇ ಬೆಲೆಯಲ್ಲಿ ಬಂದಿರುವ ಈ ಎರಡೂ ಸೆಟ್‌ಗಳು ದೊಡ್ಡ ಬಜೆಟ್ ಫೋನ್‌ಗಳು ನಿರ್ವಹಿಸುವ ಅದೇ ಕಾರ್ಯವನ್ನು ನಿರ್ವಹಿಸಲಿದೆ. ರೆಡ್ಮೀ 2, 4.7 ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಮೋಟೋ ಇ, 4.5 ಇಂಚುಗಳ ಡಿಸ್‌ಪ್ಲೇಯನ್ನು ಹೊಂದಿದೆ. ಎರಡೂ ಸೆಟ್‌ಗಳು 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಮೋಟೋರೋಲಾ ವರ್ಸಸ್ ಶ್ಯೋಮಿ ಪೈಪೋಟಿ

ಇನ್ನು ಮೋಟೋರೋಲಾ ಅಧಿಕೃತ ಮೂಲಗಳು ತಿಳಿಸುವಂತೆ ಶ್ಯೋಮಿ ಮಾಡಿರುವ ಮಾರುಕಟ್ಟೆ ತಂತ್ರವನ್ನು ಇದು ಮಾಡುವುದಿಲ್ಲ. ನೇರ ಮುಖಾಮುಖಿಯನ್ನೇ ನೀಡುವ ಇಚ್ಛೆ ಮೋಟೋರೋಲಾದ್ದಾಗಿದೆ. ಭಾರತದಲ್ಲಿ ಆಫ್‌ಲೈನ್ ಮಾರಾಟವನ್ನು ಮೋಟೋ ಮಾಡುವುದಿಲ್ಲ ಅಲ್ಲದೆ ಸಂಸ್ಥೆ ಫ್ಲಿಪ್‌ಕಾರ್ಟ್ ಪಾಲುದಾರಿಕೆಯನ್ನು ಫೋನ್ ಮಾರಾಟಕ್ಕಾಗಿ ಸಂಸ್ಥೆ ಮಾಡಿಕೊಂಡಿದೆ.

Best Mobiles in India

English summary
Affordable smartphones are getting better and better with every passing day. two handsets that seem to be the best of the best in the entry level segment include Motorola’s Moto E and Chinese smartphone maker Xiaomi’s Redmi 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+