OTP ಇಲ್ಲ, ಲಿಂಕ್ ಕ್ಲಿಕ್ ಇಲ್ಲ, ಆದರೂ ಬೆಂಗಳೂರು ಮಹಿಳೆಯ ಅಕೌಂಟ್‌ನಿಂದ ಹಣ ದೋಚಿದ ವಂಚಕರು!
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜನತೆಗೆ ಎಷ್ಟೇ ಜಾಗೃತಿ ಮೂಡಿಸಿದರು ಕೂಡ ವಂಚಕರು ಮಾತ್ರ ಹೊಸ ಹೊಸ ಮಾರ್ಗಗಳ ಮೂಲಕ ವಂಚನೆ ಮಾಡುವುದನ್ನು ಮುಂದುವರೆಸುತ್ತಲೇ ಇದ್ದಾರೆ. ಆದರೆ ಒಟಿಪಿ ಹಂಚಿಕೊಳ್ಳದಿದ್ದರೂ ಕೂಡ ವಂಚಕರು ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಬೆಂಗಳೂರಿನಲ್ಲಿ ಒಟಿಪಿ ನಂಬರ್ ಬಾರದೇ ಇದ್ದರೂ ಸಹ ಫೋನ್‌ಪೇ ವಾಲೆಟ್‌ನಿಂದ ಹಣ ಎಗರಿಸಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಸೈಬರ್ ವಂಚಕನೊಬ್ಬ 43 ವರ್ಷದ ಮಹಿಳೆಗೆ ತಾನು ನಿಮ್ಮ ತಂದೆಯ ಆಪ್ತ ಸ್ನೇಹಿತನೆಂದು ಹೇಳಿಕೊಂಡು ಕರೆ ಮಾಡುವ ಮೂಲಕ ವಂಚನೆ ಮಾಡಿದ್ದಾನೆ. ಹಾಗಾದ್ರೆ ಈ ಪ್ರಕರಣ ನಡೆದಿರುವುದು ಎಲ್ಲಿ? ಒಟಿಪಿ ಹಂಚಿಕೊಳ್ಳದೆ ಇದ್ದರೂ ಸಹ ಡಿಜಿಟಲ್ ಪಾವತಿಯಿಂದ ಹಣ ವಂಚಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾನು ನಿಮ್ಮ ತಂದೆಯ ಸ್ನೇಹಿತ ಎಂದು ಮಹಿಳೆಗೆ ಕರೆ ಮಾಡಿದ ವ್ಯಕ್ತಿ ಆಕೆಯ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗೆ ಹಣ ಕಳುಹಿಸುವ ನೆಪದಲ್ಲಿ ಆಕೆಯ ಖಾತೆಯಿಂದ 1 ಲಕ್ಷ ರೂ. ಹಣ ಎಗರಿಸಿದ್ದಾನೆ. ಹೆಬ್ಬಾಳದ ನಿವಾಸಿಯಾಗಿರುವ ಹಾಗೂ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಮಹಿಳೆಯೆ ಹಣ ಕಳೆದುಕೊಂಡ ಸಂತ್ರಸ್ಥೆ. ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ಸೈಬರ್ ವಂಚಕ ಆಕೆಗೆ ಬುಧವಾರ ಸಂಜೆ 4.45 ರಿಂದ 5 ಗಂಟೆಯ ನಡುವೆ ಕರೆ ಮಾಡಿದ್ದಾನೆ.
ಕರೆ ಮಾಡಿದ ವ್ಯಕ್ತಿಯು ನಾನು ನಿಮ್ಮ ತಂದೆಯ ಸ್ನೇಹಿತ, ನಿಮ್ಮ ಫೋನ್‌ಪೇಗೆ ಹಣ ಕಳುಹಿಸಲು ನಿಮ್ಮ ತಂದೆ ಹೇಳಿದ್ದಾರೆ. ನಿಮ್ಮ ಯುಪಿಐ ಐಡಿಯನ್ನು ನೀಡಿ ಎಂದು ಹೇಳಿದ್ದಾನೆ, ಅದರಂತೆ ಮಹಿಳೆ ಆತನಿಗೆ ಯುಪಿಐ ಐಡಿಯನ್ನು ಶೇರ್ ಮಾಡಿದ್ದಾಳೆ. ನಂತರ ಮಹಿಳೆಗೆ ಫೋನ್‌ಪೇನಲ್ಲಿ ಮೆಸೇಜ್ ಮಾಡಿದ್ದಾರೆ. ಇದರಲ್ಲಿ ನಿಮ್ಮ ಫೋನ್‌ಪೇ ವ್ಯಾಲೆಟ್‌ಗೆ ಹಣ ಕಳುಹಿಸಲಾಗಿದೆ ಎಂದು ಹೇಳಿದ್ದಾನೆ. ಜೊತೆಗೆ ಹಣವನ್ನು ಪರಿಶೀಲಿಸಲು ಕೆಲವು ಸೂಚನೆಗಳನ್ನು ಸಹ ನೀಡಿದ್ದಾನೆ. ವಂಚಕ ನೀಡಿದ ಸೂಚನೆಗಳನ್ನು ಅನುಸರಿಸುವಾಗಲೇ ಮಹಿಳೆಯ ಅಕೌಂಟ್‌ನಿಂದ ಹಣ ವರ್ಗಾವಣೆ ಆಗಿದೆ.

ಒಟಿಪಿ ಸಂಖ್ಯೆಯಿಲ್ಲದೆ ಹಣ ಕಡಿತವಾಗಿದ್ದು ಹೇಗೆ?
ಅಂದರೆ ಆತ ನೀಡಿದ ಸೂಚನೆಗಳನ್ನು ಅನುಸರಿಸುವಾಗ ಮಹಿಳೆಯ ಅಕೌಂಟ್‌ನಿಂದ 25,000 ರೂಪಾಯಿಗಳನ್ನು ಎರಡು ಬಾರಿ ಮತ್ತು ಒಮ್ಮೆ 50,000 ರೂಪಾಯಿಗಳನ್ನು ದೋಚಲಾಗಿದೆ. ಆದರೆ ಇಲ್ಲಿ ಇಂಟ್ರೆಸ್ಟಿಂಗ್ ವಿಚಾರವೆಂದರೆ ಈ ಹಣ ವರ್ಗಾವಣೆಗಾಗಿ ಯಾವುದೇ OTP ಸಂಖ್ಯೆಯು ಕೂಡ ಮಹಿಳೆಗೆ ಬಂದಿಲ್ಲ, ಆಕೆಯು ಕೂಡ ಯಾವುದೇ ಒಟಿಪಿ ನಂಬರ್ ಅನ್ನು ವಂಚಕನೊಂದಿಗೆ ಶೇರ್ ಮಾಡಿಲ್ಲ. ಹೀಗಿದ್ದರೂ ಸಹ ಹಣ ಕಡಿತವಾಗಿದ್ದು ಹೇಗೆ ಅನ್ನೊದು ಮಹಿಳೆಯ ಯಕ್ಷಪ್ರಶ್ನೆಯಾಗಿದೆ.
ಇನ್ನು ಮಹಿಳೆಯು ವಂಚಕ ಕಳುಹಿಸಿರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಿಲ್ಲ ಅಥವಾ ಯಾವುದೇ ಒಟಿಪಿಯನ್ನು ಸ್ವೀಕರಿಸಲಿಲ್ಲ. ಇಂತಹ ಪ್ರಕರಣಗಳು ವಿರಳಾತಿ ವಿರಳವಾಗಿವೆ ಎಂದು ನಗರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ ಹಣ ಎಗರಿಸುವುದಕ್ಕೆ ಅವಕಾಶ ನೀಡುವ ಕೋಡ್‌ನೊಂದಿಗೆ ಟೆಕ್ಸ್ಟ್ ಮೆಸೇಜ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಸೈಬರ್ ಕ್ರೈಮ್ ತಜ್ಞರು ಹೇಳಿದ್ದಾರೆ.

ನಿಜಕ್ಕೂ ಕೂಡ ಈ ಪ್ರಕರಣ ಎಲ್ಲರನ್ನೂ ದಂಗಾಗಿಸಿದೆ. ಯಾರಿಗೂ ಒಟಿಪಿ ಶೇರ್ ಮಾಡದೇ ಹೋದರೂ ನಮ್ಮ ಹಣ ಕಡಿತವಾಗುವುದು ಹೇಗೆ ಸಾಧ್ಯ ಅನ್ನೋ ಡೌಟ್ ಬರಲಿದೆ. ಆದರೆ ಇಲ್ಲಿ ವಂಚಕರು ತಮ್ಮ ಅಸಾಧಾರಣ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಮಹಿಳೆಗೆ ಫೋನ್‌ಪೇ ಅಲ್ಲಿ ಕಳುಹಿಸಿದ್ದ ಸಾಮಾನ್ಯ ಸಂದೇಶದಲ್ಲಿ ಅವರಿಗೆ ಅನುಕೂಲವಾಗುವ ಕೋಡ್‌ಗಳನ್ನು ಎಕ್‌ಕ್ರಿಪ್ಟ್ ಮಾಡಿದ್ದಾರೆ. ಈ ಮೂಲಕ ಮಹಿಳೆಗೆ ತಿಳಿಯದಂತೆ ಅವಳ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.


Click it and Unblock the Notifications








