ಯುವಕರ ಮಾನಸಿಕ ಸಮಸ್ಯೆ ಮತ್ತು ಫೋನ್‌ಗೂ ಯಾವುದೇ ಸಂಬಂಧ ಇಲ್ಲವಂತೆ!

By Gizbot Bureau
|

ಆಧುನಿಕ ಯುಗದಲ್ಲಿ ತಂತ್ರಜ್ಞಾನವೇ ಎಲ್ಲ ಆಗಿದ್ದು, ಯುವ ಜನಾಂಗವಂತೂ ಟೆಕ್ನಾಲಜಿಯಿಲ್ಲದೇ ಜೀವಿಸಲು ಆಗಲ್ಲ ಎಂಬಂತಾಗಿದ್ದಾರೆ. ಯುವಕರ ತಂತ್ರಜ್ಞಾನ ಬಳಕೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಡಿಮೆ ಸಂಬಂಧ ಇದೆ ಎಂದು ಆಕ್ಸ್‌ಪರ್ಡ್‌ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ. ಮೇ 4ರಂದು ಪ್ರಕಟವಾಗಿರುವ ಅಧ್ಯಯನದಲ್ಲಿ ಯುವಕರ ಮಾನಸಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಬಳಕೆ ಕಾರಣವಾಗುತ್ತದೆ ಎಂಬುದಕ್ಕೆ ಕಡಿಮೆ ಪ್ರಮಾಣದ ಪುರಾವೆಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.

ಯುವಕರ ಮಾನಸಿಕ ಸಮಸ್ಯೆ ಮತ್ತು ಫೋನ್‌ಗೂ ಯಾವುದೇ ಸಂಬಂಧ ಇಲ್ಲವಂತೆ!

ಆಕ್ಸ್‌ಫರ್ಡ್ ಇಂಟರ್ನೆಟ್ ಸಂಸ್ಥೆ ಟಿವಿ ವೀಕ್ಷಣೆ, ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಬಳಕೆಯನ್ನು ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಮತ್ತು ನಡವಳಿಕೆಯ ಸಮಸ್ಯೆಗಳೊಂದಿಗೆ ಹೋಲಿಸಿ ಅಧ್ಯಯನ ನಡೆಸಿದೆ. ಇಂಗ್ಲೆಂಡ್‌ ಮತ್ತು ಅಮೆರಿಕದಿಂದ 4,30,000 ಹದಿಹರೆಯದವರು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಯನಕ್ಕೆ 1991ರ ಹಿಂದಿನ ಪ್ರಶ್ನಾವಳಿಗಳನ್ನು ಸಂಸ್ಥೆ ಬಳಸಿತ್ತು.

ಈ ಅವಧಿಯಲ್ಲಿ ಭಾವನಾತ್ಮಕ ಸಮಸ್ಯೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯ ನಡುವಿನ ಒಡನಾಟದಲ್ಲಿ ಸಣ್ಣ ಏರಿಕೆ ಕಂಡುಬಂದಿದೆ. ಆದರೆ, ಆಗಿರುವ ಬದಲಾವಣೆ ಸ್ವಲ್ಪವೇ ಎಂದು ಸಂಶೋಧಕರ ವಾದವಾಗಿದೆ. ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳು ಯುವಕರಿಗೆ ಹಾನಿಕಾರಕ ಎಂದು ಸಾಮಾನ್ಯವಾಗಿ ಮಾಡುವ ವಾದ ನಮ್ಮ ಸಂಶೋಧನೆಯಿಂದ ರುಜುವಾತು ಆಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

Best Mobiles in India

Read more about:
English summary
No relationship between using smartphones and mental health issues confirmed by a study

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X