2000 ರೂಪಾಯಿವರೆಗಿನ ಡೆಬಿಟ್, ಕ್ರೆಡಿಟ್ ವ್ಯವಹಾರಕ್ಕೆ ಟ್ಯಾಕ್ಸ್ ಇಲ್ಲ!!

Written By:

ನೋಟು ಬ್ಯಾನ್ ನಂತರ ಆನ್‌ಲೈನ್ ವ್ಯವಹಾರ ಹೆಚ್ಚಾಗಿದ್ದು, ಆನ್‌ಲೈನ್ ವ್ಯವಹಾರಕ್ಕೆ ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2000 ರೂಪಾಯಿ ವರೆಗಿನ ಯಾವುದೇ ಆನ್‌ಲೈನ್ ವ್ಯವಹಾರಕ್ಕೆ ಇನ್ನು ಸರ್ವಿಸ್ ಟ್ಯಾಕ್ಸ್ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ!

2000 ರೂಪಾಯಿವರೆಗಿನ ಡೆಬಿಟ್, ಕ್ರೆಡಿಟ್ ವ್ಯವಹಾರಕ್ಕೆ ಟ್ಯಾಕ್ಸ್ ಇಲ್ಲ!!

ಈ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕ್‌ಗಳಿಗೂ ನಿರ್ದೇಶನ ನೀಡಿದ್ದು, 2000 ರೂಪಾಯಿ ಒಳಗಿನ ಯಾವುದೇ ಆನ್‌ಲೈನ್ ವ್ಯವಹಾರಕ್ಕೆ ಸರ್ವಿಸ್‌ ಟ್ಯಾಕ್ಸ್‌ ವಿಧಿಸದಂತೆ ಆದೇಶ ನೀಡಲಾಗಿದೆ. ಈ ಮೂಲಕ ಕ್ಯಾಶ್‌ಲೆಸ್‌ ಸಮಾಜದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ಪಾರ್ಲಿಮೆಂಟ್‌ನಲ್ಲಿ ಹೇಳಿದರು.

2000 ರೂಪಾಯಿವರೆಗಿನ ಡೆಬಿಟ್, ಕ್ರೆಡಿಟ್ ವ್ಯವಹಾರಕ್ಕೆ ಟ್ಯಾಕ್ಸ್ ಇಲ್ಲ!!

ಡಿಜಿಟಲ್ ಭಾರತದ ನಿರ್ಮಾಣಕ್ಕಾಗಿ ಕ್ಯಾಶ್‌ಲೆಸ್ ಸಮಾಜ ಮೊದಲು ನಿರ್ಮಾಣವಾಗಬೇಕಿದೆ. ಹಾಗಾಗಿ ಅಂತರ್ಜಾಲ ವ್ಯವಹಾರ ನಡೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, ನಗದು ರಹಿತ ವ್ಯವಹಾರ ಬೆಳವಣಿಗೆಗೆ ಇದು ಸಹಾಯವಾಗಲಿದೆ ಎನ್ನಲಾಗಿದೆ.

2000 ರೂಪಾಯಿವರೆಗಿನ ಡೆಬಿಟ್, ಕ್ರೆಡಿಟ್ ವ್ಯವಹಾರಕ್ಕೆ ಟ್ಯಾಕ್ಸ್ ಇಲ್ಲ!!

ಆದರೆ, ಇದನ್ನು ಪ್ರತಿಪಕ್ಷಗಳು ವಿರೋಧಿಸಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಸಾಮಾನ್ಯ ರಸ್ತೆ ಬದಿ ವ್ಯಾಪಾರಿಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಸೂಪರ್‌ ಮಾರ್ಕೆಟ್‌ಗಳಲ್ಲಿ ಎಲ್ಲವೂ ದೊರೆಯುತ್ತದೆ. ಹಾಗಾದರೆ ಬೀದಿ ವರ್ತಕರು ಏನು ಮಾಡಬೇಕು ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Government taking steps to promote debit card cashless or digital transactions. To know more visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot