ಆಧಾರ್ ದೃಢೀಕರಿಸಿದ ಸಿಮ್ ಸ್ಥಗಿತ?..ಆಧಾರ್ ಪ್ರಾಧಿಕಾರದಿಂದ ಸ್ಪಷ್ಟನೆ!!
ಖಾಸಗಿ ಕಂಪೆನಿಗಳು ಆಧಾರ್ ಅನ್ನು ದೃಢೀಕರಣಕ್ಕಾಗಿ ಬಳಸುವುದನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರ ಹಿನ್ನೆಲೆಯಲ್ಲಿ 50 ಕೋಟಿಗೂ ಹೆಚ್ಚು ಸಿಮ್‌ಗಳು ನಿಷ್ಕ್ರಿಯವಾಗಲಿವೆ ಎಂಬ ಹತ್ತು ಹಲವು ಸುದ್ದಿಗಳು ಸಾರ್ವಜನಿಕರ ಕಿವಿಗೆ ಬಿದ್ದಿದ್ದವು. ಆದರೆ, ಇದಕ್ಕೆ ಆಧಾರ್ ಪ್ರಾಧಿಕಾರ ಸ್ಪಷ್ಟನೆ ನಿಡಿದ್ದು, ಗ್ರಾಹಕರ ಚಿಂತೆಯನ್ನು ಹೋಗಲಾಡಿಸಿದೆ.
ಈ ಮೊದಲ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ವಿಶಿಷ್ಟ ಗುರುತಿನ ಪ್ರಾಧಿಕಾರದ ಆದೇಶಗಳನ್ನು ಅನುಸರಿಸಿದ್ದರು. ಆದರೆ, ಈಗ ಆಧಾರ್ ಕಾರ್ಡ್ ಆಧಾರಿತ ಸಿಮ್ ದೃಢೀಕರಣವನ್ನು ನಿಲ್ಲಿಸುವ ನಿರ್ಧಾರವನ್ನು ಟೆಲಿಕಾಂ ಕಂಪೆನಿಗಳು ಕೈಗೊಂಡಿವೆ. ಹಾಗೆಂದು ಆಧಾರ್ ಮೂಲಕ ದೃಢೀಕರಿಸಿದ ಸಿಮ್‌ಗಳು ಸ್ಥಗಿತಗೊಳ್ಳುವ ಭಯ ಬೇಡ ಎಂದು ಯುಐಡಿಎಐ ತಿಳಿಸಿದೆ.

ಆಧಾರ್ ಮೂಲಕ ದರಢೀಕರಣ ಮಾಡಿಕೊಂಡವರು ಮರು ದೃಢೀಕರಣ ಮಾಡಬೇಕಿಲ್ಲ ಮತ್ತು ಪರ್ಯಾಯ ವಿಳಾಸ ದಾಖಲೆಗಳನ್ನು ಸಹ ನೀಡುವ ಅಗತ್ಯತೆ ಕೂಡ ಇಲ್ಲ ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಹಾಗಾದರೆ, ಟೆಲಿಕಾಂ ಸಂಸ್ಥೆಗಳು ಪರ್ಯಾಯ ದೃಢೀಕರಣವನ್ನು ಮಾಡಲು ಏರನು ಮಾಡಲಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಬಯೋಮೆಟ್ರಿಕ್‌ಗೆ ಪರ್ಯಾಯ!
ಖಾಸಗಿ ಕಂಪೆನಿಗಳು ದೃಢೀಕರಣಕ್ಕಾಗಿ ಆಧಾರ್ ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಬಯೋಮೆಟ್ರಿಕ್ ಭಾರತದ ಟೆಲಿಕಾಂ ಸಲಹಾ ಮಂಡಳಿ ಅದರಲ್ಲಿ COAI ಅಂದರೆ ಸೆಲ್ಯುಲರ್ ಆಪರೇಟರ್ಸ್ ಆಫ್ ಇಂಡಿಯಾ ದೃಢೀಕರಣಕ್ಕಾಗಿ ಪರ್ಯಾಯ ವ್ಯವಸ್ಥೆ ಏನು ಮಾಡಬಹುದು ಎಂದು ಚರ್ಚೆ ನಡೆಸಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ.

ದೃಢೀಕರಣ ಮಾಡಬೇಕಿಲ್ಲ.
ಆಧಾರ್ ಮೂಲಕ ದರಢೀಕರಣ ಮಾಡಿಕೊಂಡವರು ಮರು ದೃಢೀಕರಣ ಮಾಡಬೇಕಿಲ್ಲ ಮತ್ತು ಪರ್ಯಾಯ ವಿಳಾಸ ದಾಖಲೆಗಳನ್ನು ಸಹ ನೀಡುವ ಅಗತ್ಯತೆ ಕೂಡ ಇಲ್ಲ ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಒಂದು ವೇಳೆ ನಮ್ಮ ಆಧಾರ್ ಮಾಹಿತಿ ಟೆಲಿಕಾಂ ಕಂಪೆನಿಗಳ ಬಳಿ ಇರುವುದು ಬೇಡ ಎಂದಾದಲ್ಲಿ ಮಾತ್ರ ಬೇರೆ ದೃಢೀಕರಣವನ್ನು ನೀಡಬಹುದು.

ಬೇರೆ ದಾಖಲೆ ನೀಡಿ ಪರಿಹರಿಸಿ.
ಮೊಬೈಲ್ ನಂಬರ್‌ಗೆ ಆಧಾರ್ ಜೋಡಿಸಿದವರಿಗೆ ಅದನ್ನು ರದ್ದುಪಡಿಸಿಬೇಕು ಎಂದಿದ್ದರೆ ಬೇರೆ ದಾಖಲೆಗಳನ್ನು ನೀಡಬಹುದು ಎಂದು ಸರ್ಕಾರ ತಿಳಿಸಿದೆ. ಟೆಲಿಕಾಂ ಸಂಸ್ಥೆಗಳು ಬೇರೆ ರೀತಿಯ ಅಥವಾ ಪರ್ಯಾಯ ದೃಢೀಕರಣವನ್ನು ಮಾಡಲು ಟೆಲಿಕಾಂ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು ಎಂದು ಹೇಳಿವೆ.

ರೆಗ್ಯುಲೇಟರಿ ಬಾಡಿ ಹೇಳಿದ್ದೇನು?
ಬಯೋಮೆಟ್ರಿಕ್ ರೆಗ್ಯುಲೇಟರಿ ಬಾಡಿಯು ಹೇಳಿರುವಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಸಹ ಮೊಬೈಲ್ ನಂಬರ್ ನಿಂದ ಆಧಾರ್ ಡಿಲೀಂಕ್ ಮಾಡುವ ಬಗೆಗಿನ ಎಲ್ಲಾ ವಿನಂತಿಗಳನ್ನು ಸ್ವೀಕರಿಸಬೇಕು ಮತ್ತು ಹೊಸ ಕೆವೈಸಿಯನ್ನು 6 ತಿಂಗಳ ಅವಧಿಯೊಳಗೆ ಮಾಡಬೇಕು ಎಂದಿದೆ. ಹಾಗಾಗಿ, ಶೀಘ್ರದಲ್ಲೇ ಪರ್ಯಾಯ ದೃಢೀಕರಣ ಜಾರಿಯಾಗುವ ನಿರೀಕ್ಷೆ ಇದೆ.

ಪರ್ಯಾಯ ದೃಢೀಕರಣ ಯಾವುದು?
ಬಯೋಮೆಟ್ರಿಕ್ ವ್ಯವಸ್ಥೆಯ ಬದಲಾಗಿ ಪರ್ಯಾಯ ದೃಢೀಕರಣ ಯಾವುದು ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ. ಈಗಿರುವ ವದಂತಿಗಳಂತೆ, ಈ ಮೊದಲು ಟೆಲಿಕಾಂ ಕಂಪೆನಿಗಳು ಸಂಗ್ರಹಸಿಸುತ್ತಿದ್ದ ಹಳೆಯ ಮಾದರಿಯಲ್ಲೇ, ಫೋಟೊ ಜೊತೆಗೆ ಅರ್ಜಿಯನ್ನು ತುಂಬಿ ಪರ್ಯಾಯ ದೃಢೀಕರಣ ನೀಡಬಹುದು ಎಂದು ಹೇಳಲಾಗುತ್ತಿದೆ.

ಸಂಕಷ್ಟದಲ್ಲಿ ಕಂಪೆನಿಗಳು
ಕೆವೈಸಿಗಾಗಿ ಯುಐಡಿಎಐಗೆ ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಲಾಗಿತ್ತು. ಟೆಲಿಕಾಂ ಆಪರೇಟರ್‌ಗಳು ಬಯೋಮೆಟ್ರಿಕ್ ಡಿವೈಸ್‌ಗಳಿಗಾಗಿ ಮತ್ತು ವರ್ಕ್ ಫೋರ್ಸ್ ಟ್ರೈನಿಂಗಾಗಾಗಿ ದೊಡ್ಡ ಮೊತ್ತದಲ್ಲಿ ಹೂಡಿಕೆಯನ್ನು ಮಾಡಿದ್ದರು. ಅವರು ಈಗಾಗಲೇ ಆರ್ಥಿಕ ಒತ್ತಡದಲ್ಲಿದ್ದಾರೆ ಮತ್ತು ಹಾಗಾಗಿ ಇದು ಅವರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ.


Click it and Unblock the Notifications








