ಮತ್ತೊಂದು ಭೂಮಿ ಹುಡುಕುವುದು 'ಹುಚ್ಚು ಆಲೋಚನೆ': ಪ್ರಖ್ಯಾತ ವಿಜ್ಞಾನಿಯ ಎಚ್ಚರಿಕೆ!

|

ನಮ್ಮ ಭೂಮಿಯಾಚೆಗೆ, ಕ್ಷೀರಪಥದಾಚೆಗೆ ಸೌರಮಂಡಲದಂತಹ ವ್ಯವಸ್ಥೆ ಇರಬಹುದು. ಅಲ್ಲೆಲ್ಲಾದರೂ ಭೂಮಿಯನ್ನು ಹೋಲುವ ಗ್ರಹ ಸಿಗಬಹುದು. ಅಲ್ಲಿ ನಮ್ಮಂತೆಯೇ ಜೀವಿಗಳು ವಾಸಿಸುತ್ತಿರಬಹುದು ಎಂದು ಹುಡುಕುತ್ತಿರುವ ಮನುಷ್ಯನ ಮಹತ್ವಾಕಾಂಕ್ಷೆಯ ಕನಸಿಗೆ ವಿಜ್ಞಾನಿಯೋರ್ವರು 'ಹುಚ್ಚು ಆಲೋಚನೆ' ಎಂದಿದ್ದಾರೆ. ಸೌರವ್ಯೂದಾಚೆಗೆ ಮೊದಲ ಗ್ರಹವನ್ನು ಗುರುತಿಸಿ, ಇತ್ತೀಚೆಗೆ ಭೌತಶಾಸ್ತ್ರದ ನೊಬೆಲ್‌ ಪುರಸ್ಕಾರ ಪಡೆದ ಮೈಕೆಲ್ ಮೇಯರ್ ಅವರು ಹಾಗೆಲ್ಲಾ ಆಗಲು ಸಾಧ್ಯವೇ ಇಲ್ಲ. ಅದೊಂದು ಹುಚ್ಚು ಆಲೋಚನೆ ಎಂದಿದ್ದಾರೆ!

ಮತ್ತೊಂದು ಭೂಮಿ ಹುಡುಕುವುದು 'ಹುಚ್ಚು ಆಲೋಚನೆ': ಪ್ರಖ್ಯಾತ ವಿಜ್ಞಾನಿಯ ಎಚ್ಚರಿಕೆ!

ಹೌದು, ಈ ಅನಂತ ವಿಶ್ವದಲ್ಲಿ ಎಲ್ಲಿಯಾದರೂ ಭೂಮಿಯಂತಹ ಗ್ರಹ ಇರಬಹುದು. ಅಲ್ಲಿ ಜೀವಿ ಇರಬಹುದು ಎಂದು ಮಾನವ ನಂಬಿದ್ದಾನೆ. ಆದರೆ, ಮನುಷ್ಯ ಭೂಮಿಯಾಚೆಗೆ ಹೋಗಿ ವಲಸೆ ಹೋಗುವುದೇ ಅವಾಸ್ತಾವಿಕದ ಕಲ್ಪನೆ ಎಂದು ಮೈಕೆಲ್ ಮೇಯರ್ ಅವರು ಹೇಳಿದ್ದಾರೆ. ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿದ್ದ ವಿಜ್ಞಾನ ಸಮಾವೇಶವೊಂದರಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೈಕೆಲ್ ಅವರು ಇದಕ್ಕೆ ತಮ್ಮದೇ ಆದ ತರ್ಕವನ್ನು ತೆರೆದಿಟ್ಟು ಮನುಷ್ಯ ಭೂಮಿಯಾಚೆಗೆ ಹೋಗಿ ವಲಸೆ ಹೋಗುವುದೇ ಅವಾಸ್ತಾವಿಕದ ಕಲ್ಪನೆ ಎಂದು ಹೇಳಿರುವುದು ವರದಿಯಾಗಿದೆ.

ಸೌರವ್ಯೂಹದಾಚೆಗೆ ಮನುಷ್ಯ ವಲಸೆ ಹೋಗಬೇಕೆಂದಾದರೆ ಲಕ್ಷಾಂತರ ವರ್ಷ ಪ್ರಯಾಣ ಮಾಡಬೇಕಾಗುತ್ತದೆ. ಇದು ಸಾಧ್ಯವೇ?. ನಾವು ಕಂಡುಕೊಂಡಿರುವ ಈ ಗ್ರಹಗಳು ನಮ್ಮ ಕಲ್ಪನೆಗೂ ನಿಲುಕದಷ್ಟೂ ದೂರ ಇವೆ. ಒಂದು ವೇಳೆ ಈ ವಿಷಯದಲ್ಲಿ ಆಶಾವಾದಿಗಳಾಗಿದ್ದರೆ, ಹಾಗೇ ಮನುಷ್ಯ ಜೀವಿಸಬಹುದಾದ ಗ್ರಹಗಳು ಹತ್ತು ಹನ್ನೆರಡು ಜ್ಯೋತಿರ್ವರ್ಷಗಳಷ್ಟು ದೂರವಿದ್ದರೆ, ಅದೂ ಅತಿ ದೂರವಲ್ಲವೆಂದು ಭಾವಿಸಬಹುದು. ಹಾಗಾಗಿ, ಈಗಿರುವ ಭೂಮಿಯನ್ನೇ ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ನಮ್ಮ ಆದ್ಯತೆಯಾಗಬೇಕು ಎಂದು ಅವರು ಎಚ್ಚರಿಸಿದ್ದಾರೆ.

ಮತ್ತೊಂದು ಭೂಮಿ ಹುಡುಕುವುದು 'ಹುಚ್ಚು ಆಲೋಚನೆ': ಪ್ರಖ್ಯಾತ ವಿಜ್ಞಾನಿಯ ಎಚ್ಚರಿಕೆ!

ಭೂಮಿಯ ಮೇಲೆ ಇನ್ನು ಬದುಕಲು ಸಾಧ್ಯವಿಲ್ಲ, ನಾವು ವಾಸಿಸಬಹುದಾದ ಇನ್ನೊಂದು ಗ್ರಹಕ್ಕೆ ಹೋಗೋಣ ಎಂಬ ಹೇಳಿಕೆಯನ್ನೇ ನಾವು ಅಳಿಸಿ ಹಾಕಬೇಕಾಗಿದೆ.ನ ಮ್ಮ ಭೂಮಿಯನ್ನು ಜೋಪಾನ ಮಾಡಿಕೊಳ್ಳಬೇಕಾಗಿದೆ. ಇದು ಸುಂದರವೂ ಇಂದಿಗೂ ಮನುಷ್ಯನ ಸುಗಮವಾಗಿ ಜೀವಿಸಬಹುದಾಗಿದೆ. ಇದನ್ನು ಕಾಪಾಡಿಕೊಳ್ಳುವತ್ತ ನಮ್ಮ ಪ್ರಯತ್ನವಿರಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಂದು, ಮತ್ತೊಂದು ಭೂಮಿ ಹುಡುಕುವುದು ಅಸಾಧ್ಯವಲ್ಲ. ಆದರೆ, ಪ್ರಸ್ತುತ ಅದು ಯೋಗ್ಯಕರ ವಿಷಯವಲ್ಲ ಎಂದು ಅವರು ಹೇಳುತ್ತಿದ್ದಾರೆ.

ಕಳೆದ 24 ದಿನಗಳಲ್ಲಿ ಮಾರಾಟವಾದ ಶಿಯೋಮಿ 'ಮಿ ಟಿವಿ'ಗಳು ಎಷ್ಟು ಗೊತ್ತಾ?ಕಳೆದ 24 ದಿನಗಳಲ್ಲಿ ಮಾರಾಟವಾದ ಶಿಯೋಮಿ 'ಮಿ ಟಿವಿ'ಗಳು ಎಷ್ಟು ಗೊತ್ತಾ?

ಹಾಗೆಂದು ಅವರು ಮಾನವನ ಭವಿಷ್ಯದ ಮಹತ್ವಾಂಕಾಕ್ಷೆಯಾಯನ್ನು ಅಲ್ಲಗಳೆದಿಲ್ಲ. ಬದಲಾಗಿ, ಕೋಟ್ಯಂತರ ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹಗಳಲ್ಲಿ ಜೀವವಿದೆಯೇ ಎಂಬುದನ್ನು ಕಂಡುಕೊಳ್ಳಬೇಕಾದ್ದು ಮುಂಬರುವ ತಲೆಮಾರಿನ ಜವಾಬ್ದಾರಿ. ಇದು ಸಾಧ್ಯವಾಗುವುದು ಜೀವವಿದೆಯೇ ಎಂದು ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಮೂಲಕ ಸಾಧ್ಯ ಎಂದು ಮೇಯರ್ ಹೇಳಿದ್ದಾರೆ. ಒಟ್ಟಿನಲ್ಲಿ ಇರುವ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ಮನುಕುಲ ಪ್ರಯತ್ನಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
"If we are talking about exoplanets, things should be clear: we will not migrate there," Mayor told AFP near Madrid on the sidelines of a conference when asked about the possibility of humans moving to other planets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X