Home
ಸುದ್ದಿಜಾಲ

ಅಗ್ಗದ ಬೆಲೆಯ ನಾಯ್ಸ್‌ ಏರ್‌ ಇಯರ್‌ಬಡ್ಸ್‌ ಬಿಡುಗಡೆ!

ಇಯರ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನ ವೈವಿಧ್ಯಮಯ ಇಯರ್‌ಫೋನ್‌ಗಳಿಗೆ ನಾಯ್ಸ್‌ ಕಂಪೆನಿ ಪ್ರಸಿದ್ದಿಪಡೆದುಕೊಂಡಿದೆ. ಈಗಾಗಲೇ ಹಲವು ಮಾದರಿಯ ಇಯರ್‌ ಬಡ್ಸ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಟ್ರೂಲಿ ವಾಯರ್‌ಲೆಸ್‌ ನಾಯ್ಸ್‌ ಏರ್ ಬಡ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಈ ಏರ್ ಪಾಡ್ಸ್ ಕಾಂಡ ಮಾದಿರಯ ವಿನ್ಯಾಸವನ್ನು ಹೊಂದಿದ್ದು, ಟಚ್‌ ಕಂಟ್ರೋಲ್‌, ವಾಯ್ಸ್‌ ಅಸಿಸ್ಟೆಂಟ್‌ ಪ್ರವೇಶ, ವಾಟರ್‌ ರೆಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ.

ನಾಯ್ಸ್‌ ಏರ್‌ ಬಡ್ಸ್

ಹೌದು, ನಾಯ್ಸ್‌ ಸಂಸ್ಥೆ ತನ್ನ ಹೊಸ ನಾಯ್ಸ್‌ ಏರ್‌ ಬಡ್ಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಮಾಡುವುದನ್ನು ಈ ಕೇಸ್ ಬೆಂಬಲಿಸುತ್ತದೆ. ಇನ್ನು ಈ ಟ್ರೂಲಿ ವಾಯರ್‌ ಲೆಸ್‌ ಇಯರ್‌ಬಡ್ಸ್‌ 20-ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಈ ಇಯರ್‌ಬಡ್ಸ್‌ ಬೆಲೆ 2,499 ರೂ ಆಗಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾಯ್ಸ್‌ ಏರ್ ಬಡ್ಸ್

ನಾಯ್ಸ್‌ ಏರ್ ಬಡ್ಸ್ 13mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಇದು ಸಮತೋಲಿತ ಧ್ವನಿಯನ್ನು ನೀಡುತ್ತದೆ. ಇನ್ನು ಈ ಇಯರ್‌ಬಡ್ಸ್‌ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಬೆಂಬಲಿಸಲಿದ್ದು, 10 ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಎಸ್‌ಬಿಸಿ ಮತ್ತು ಎಎಸಿ ಆಡಿಯೊ ಪ್ರೊಫೈಲ್‌ಗಳನ್ನು ಸಹ ಬೆಂಬಲಿಸಲಿದೆ. ಅಲ್ಲದೆ ನಾಯ್ಸ್‌ ಏರ್ ಬಡ್ಸ್ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ನೀವು ಹ್ಯಾಂಡ್ಸ್ ಫ್ರೀ ಕರೆ, ಟಚ್‌ ಕಂಟ್ರೋಲ್‌ ಮತ್ತು ನಾಯ್ಸ್‌ ಏರ್ ಬಡ್ಸ್‌ನೊಂದಿಗೆ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ಕಾಂಡದ ಮಾದರಿಯ ವಿನ್ಯಾಸವನ್ನು ಹೊಂದಿರುವುದರಿಂದ ಬಲಕೆದಾರರ ಕಿವಿಗೆ ಹೊಂದಿಕೊಳ್ಳಲಿದೆ. ಇದರಲ್ಲಿ ಟಚ್‌ ಕಂಟ್ರೋಲ್‌ ಅನ್ನು ಮಾಡುವ ಅವಕಾಸವನ್ನು ನೀಡಿರುವುದರಿಂದ ಮ್ಯೂಸಿಕ್‌ ಅನ್ನು ಪ್ಲೇ ಮಾಡುವುದು ಹಾಗೂ ಸ್ಟಾಪ್‌ ಮಾಡುವುದು ಸುಲಭ ಎನಿಸಲಿದೆ. ಅಲ್ಲದೆ ಕರೆ ಸ್ವೀಕಾರ ಹಾಗೂ ಕರೆ ಕಡಿತ ಮಾಡುವಾಗಲು ಟಚ್‌ ಕಂಟ್ರೋಲ್‌ ಅನ್ನು ಬಳಸಬಹುದಾಗಿದೆ. ಅಲ್ಲದೆ ಈ ಇಯರ್‌ಬಡ್ಸ್‌ ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಐಪಿಎಕ್ಸ್ 4 ಬೆವರು ನಿರೋಧಕ ರೇಟಿಂಗ್‌ನೊಂದಿಗೆ ಬರುತ್ತದೆ.

ಇಯರ್‌ಬಡ್ಸ್‌

ಇದಲ್ಲದೆ ಈ ಇಯರ್‌ಬಡ್ಸ್‌ನ ಎರಡು ಇಯರ್‌ಬಡ್‌ಗಳು ಸ್ಪಷ್ಟ ಧ್ವನಿ ಕರೆಗಳಿಗಾಗಿ ಪ್ರತ್ಯೇಕ ಮೈಕ್‌ಗಳನ್ನು ಹೊಂದಿವೆ. ಜೊತೆಗೆ ಈ ಇಯರ್‌ಬಡ್ಸ್‌ ಸ್ವತಃ 45mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರುವುದರಿಂದ ಇದು ನಾಲ್ಕು ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ. ಸುಮಾರು 1.2 ಗಂಟೆಗಳ ಅವಧಿಯಲ್ಲಿ ಇವುಗಳನ್ನು ಚಾರ್ಜ್‌ ಮಾಡಬಹುದಾಗಿದೆ. ಇದಲ್ಲದೆ ಚಾರ್ಜಿಂಗ್‌ ಕೇಸ್‌ 500mAh ಬ್ಯಾಟರಿಯನ್ನು ಹೊಂದಿದೆ ಮತ್ತು ಹೆಚ್ಚುವರಿ 16 ಗಂಟೆಗಳ ಪ್ಲೇ ಟೈಂ ಅನ್ನು ಒದಗಿಸುತ್ತದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಮಾಡಲು ಈ ಕೇಸ್‌ ಎರಡು ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ.

Best Mobiles in India

English summary
Noise Air Buds have a stem design and boast of 4 hours of playtime which is extended to 20 hours with the charging case.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+