Noise: ಭಾರತಕ್ಕೆ ಎಂಟ್ರಿ ಕೊಟ್ಟ ನಾಯ್ಸ್ ಏರ್‌ವೇವ್ ಇಯರ್‌ಫೋನ್:..50 ಗಂಟೆಗಳ ಪ್ಲೇ ಬ್ಯಾಕ್ ಟೈಂ!
ನಾಯ್ಸ್ ಕಂಪೆನಿಯ ಇಯರ್‌ಫೋನ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್‌ಫೋನ್‌ಗಳಿಂದಾಗಿ ನಾಯ್ಸ್ ಸಂಸ್ಥೆ ಯುವಜನರನ್ನು ಸೆಳೆದಿದೆ. ಇದೀಗ ತನ್ನ ಮತ್ತೊಂದು ಹೊಸ ನಾಯ್ಸ್ ಏರ್‌ವೇವ್ ವಾಯರ್‌ಲೆಸ್ ಇಯರ್‌ಫೋನ್ ಬಿಡುಗಡೆ ಮಾಡಿದೆ. ಇದು ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಆಗಿದೆ.
ಹೌದು, ನಾಯ್ಸ್ ಸಂಸ್ಥೆ ಹೊಸ ನಾಯ್ಸ್ ಏರ್‌ವೇವ್ ವಾಯರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್ ಪರಿಚಯಿಸಿದೆ. ಇನ್ನು ನಾಯ್ಸ್ ಏರ್‌ವೇವ್ ಇಯರ್‌ಫೋನ್ 10 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಧ್ವನಿ ಅನುಭವವನ್ನು ಒದಗಿಸಲಿದೆ. ಜೊತೆಗೆ Environmental Noise Cancellation ಟೆಕ್ನಾಲಜಿಯನ್ನು ಒಳಗೊಂಡಿದೆ. ಹಾಗಾದ್ರೆ ನಾಯ್ಸ್ ಏರ್‌ವೇವ್ ವಾಯರ್‌ಲೆಸ್ ಇಯರ್‌ಫೋನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಏರ್‌ವೇವ್ ಇಯರ್‌ಪೋನ್ ಫೀಚರ್ಸ್ ಹೇಗಿದೆ?
ನಾಯ್ಸ್ ಏರ್‌ವೇವ್ ವಾಯರ್‌ಲೆಸ್ ಇಯರ್‌ಫೋನ್‌ನ ಮೇನ್ ಹೈಲೈಟ್ ಎಂದರೆ Environmental Noise Cancellation ಟೆಕ್ನಾಲಜಿಯನ್ನು ಹೊಂದಿರುವುದು. ಇದು ಕರೆಯ ಸ್ಪಷ್ಟತೆಯನ್ನು ಸುದಾರಿಸಲಿದ್ದು, ಆಧುನಿಕ ಸಂವಹನ ಅಗತ್ಯಗಳಿಗೆ ಅತ್ಯಗತ್ಯವಾಗಿದೆ. ಇದಲ್ಲದೆ ಈ ಇಯರ್‌ಪೋನ್‌ನ ವಿನ್ಯಾಸವ ಪ್ರೀಮಿಯಂ ಫಿನಿಶ್‌ನೊಂದಿಗೆ ಮ್ಯಾಗ್ನೆಟಿಕ್ ಬಡ್ಸ್‌ಗಳನ್ನು ಒಳಗೊಂಡಿದೆ.
ನಾಯ್ಸ್ ಏರ್‌ವೇವ್ ವಾಯರ್‌ಲೆಸ್ ಇಯರ್‌ಫೋನ್ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ. ಇದು ಸ್ಮಾರ್ಟ್‌ಫೋನ್ ನೊಂದಿಗೆ ವಿಶ್ವಾಸಾರ್ಹ ಮತ್ತು ತ್ವರಿತ ಜೋಡಣೆಯನ್ನು ಖಚಿತಪಡಿಸಲಿದೆ. ಹೆಚ್ಚುವರಿಯಾಗಿ, 50ms ವರೆಗಿನ ಅಲ್ಟ್ರಾ-ಕಡಿಮೆ-ಲೇಟೆನ್ಸಿ ಮೋಡ್ ಅನ್ನು ಸಹ ನೀಡಲಿದೆ. ಜೊತೆಗೆ ಆಡಿಯೊ ಸಿಂಕ್ ನಿರ್ಣಾಯಕವಾಗಿರುವ ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದಲ್ಲದೆ ಇಯರ್‌ಫೋನ್ IPX5 ನೀರಿನ ಪ್ರತಿರೋಧದ ರೇಟಿಂಗ್ ಅನ್ನು ಸಹ ಪಡೆದಿದೆ.

ಇನ್ನು ಈ ಇಯರ್‌ಫೋನ್ 50 ಗಂಟೆಗಳ ಒಟ್ಟು ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಈ ಇಯರ್‌ಫೋನ್ ಮೂರು ಇಂಟರ್‌ಬಿಲ್ಟ್ EQ ಮೋಡ್‌ಗಳನ್ನು ಒಳಗೊಂಡಿದೆ. ಇದು ವೈಯಕ್ತೀಕರಿಸಿದ ಆಡಿಯೊ ಸೆಟ್ಟಿಂಗ್‌ಗಳನ್ನು ಅನುಮತಿಸಲಿದೆ. ಪ್ರಸ್ತುತ ಇಯರ್‌ಬಡ್ಸ್ 999ರೂ ಬೆಲೆಯನ್ನು ಪಡೆದುಕೊಂಡಿದ್ದು, ಐಸ್ ಬ್ಲೂ, ಆಲಿವ್ ಗ್ರೀನ್, ಮಿಡ್ನೈಟ್ ಬ್ಲೂ ಮತ್ತು ಜೆಟ್ ಬ್ಲ್ಯಾಕ್ ಅನ್ನು ಒಳಗೊಂಡಿದೆ. ಇದನ್ನು Noise ವೆಬ್‌ಸೈಟ್ ಮತ್ತು Flipkart ಮೂಲಕ ಖರೀದಿಸಬಹುದಾಗಿದೆ.
ಇದಲ್ಲದೆ ನಾಯ್ಸ್ ಕಂಪೆನಿ ಇತ್ತಿಚಿಗೆ NoiseFit Vortex Plus ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 1.46 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಪಷ್ಟ ಮತ್ತು ಪ್ರಕಾಶಮಾನವಾದ ಯೂಸರ್ ಇಂಟರ್‌ಫೇಸ್ ಅನ್ನು ಒದಗಿಸಲಿದೆ. ಇದಲ್ಲದೆ ನಾಯ್ಸ್ ಟ್ರೂ ಸಿಂಕ್ ಟೆಕ್ನಾಲಜಿಯನ್ನು ಹೊಂದಿರುವುದರಿಂದ ಬ್ಲೂಟೂತ್ ಕಾಲ್ ಅನ್ನು ಸುಗಮಗೊಳಿಸಲಿದೆ. ಇದು ತ್ವರಿತ ಜೋಡಣೆ ಮತ್ತು ಸಮರ್ಥ ವಿದ್ಯುತ್ ನಿರ್ವಹಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ಅನಿಮೇಟೆಡ್ ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ.
ಇದು ಸ್ಟೈಲಿಶ್ ಲುಕ್‌ನಿಂದ ಮಾತ್ರವಲ್ಲ ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಅಂದರೆ ಬರೋಬ್ಬರಿ 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ನಾಯ್ಸ್ ಕಂಪೆನಿ ಹೇಳಿಕೊಂಡಿದೆ. ಇದರಿಂದ ನೀವು ಪದೇ ಪದೇ ಚಾರ್ಜ್ ಮಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ 24×7 ಹೃದಯ ಬಡಿತ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್ ವಾಚ್‌ನಲ್ಲಿ ವಿವಿಧ ರೀತಿಯ ಸ್ಪೋರ್ಟ್ಸ್ ಮೋಡ್‌ಗಳನ್ನು ಸಹ ನೀಡಲಾಗಿದೆ. ಇವುಗಳು ಫೀಟ್ನೆಸ್ ಪ್ರಿಯರಿಗೆ ಸಾಕಷ್ಟು ಉಪಯುಕ್ತತೆ ನೀಡಲಿದೆ.


Click it and Unblock the Notifications








